POLICE BHAVAN KALABURAGI

POLICE BHAVAN KALABURAGI

21 April 2013

GULBARGA DISTRICT REPORTED CRIMES


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ದಿನಾಂಕ: 11.06.2011 ರಂದು 5 ಲಕ್ಷ ರೂಪಾಯಿಗಳು, 11 ತೋಲೆ ಬಂಗಾರ ಮತ್ತು ಸಾಮಾನುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮದುವೆಯು ಅಶ್ಪಾಕ ಹುಸೇನನೊಂದಿಗೆ ರಂದು ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ 6 ತಿಂಗಳವರೆಗೆ ನನ್ನ ಗಂಡ ನನ್ನೊಂದಿಗೆ ಚೆನ್ನಾಗಿದ್ದು, ನಂತರ ತವರು ಮನೆಯಿಂದ ಟಿ.ವಿ ಫ್ರೀಜ್ ಹಣ ಪ್ಲಾಟ ತೆಗೆದುಕೊಂಡು ಬಾ ಅಂತಾ ಮಾನಸಿಕ ದೈಹಿಕ ಹಿಂಸೆ ಕೊಡುತ್ತಾ ಬಂದಿರುತ್ತಾನೆ.  ಹಾಗೂ ಅವರ ಮನೆಯವರು ಸಹ ಮಾನಸಿಕ ಹಿಂಸೆ ಕೊಡುತ್ತಾ ಬಂದಿರುತ್ತಾರೆ. ದಿನಾಂಕ:28.04.2002 ರಂದು ತನ್ನ ತವರು ಮನೆಗೆ ಬಂದು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತೆನೆ. ಆ ಮಗುವಿಗೆ ನೋಡಲು ಸಹ ಅಶಫಾಕ ಹುಸೇನ ಬಂದಿರುವುದಿಲ್ಲಾ. 2003 ರಲ್ಲಿ ಜಾಮಾ ಮಜೀದ ವಾಡಿ ಕಮೀಟಿ ಹತ್ತಿರ ಹೋಗಿ ಪಂಚಾಯಿತಿ ಮಾಡಿಸಿ ನನ್ನ ಗಂಡನಿಗೆ ಸರಿಯಾಗಿ ಇರಲು ತಿಳುವಳಿಕೆ ಹೇಳಲಾಗಿತ್ತು. ಆದರೂ ಸಹ ನನಗೆ ಸರಿಯಾಗಿ ನೋಡಿಕೊಳ್ಳದೇ ತವರು ಮನೆಯಿಂದ ಹಣ ಮತ್ತು ಬಂಗಾರ ತಗೆದುಕೊಂಡು ಬರುವಂತೆ ಆತನು ಮತ್ತು ಆತನ ಮನೆಯವರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಶ್ರೀಮತಿ ಫರಜಾನಾ  ಬೇಗಂ ಗಂಡ ಅಶಫಾಕ ಹುಸೇನ ಸಾ:ಏಶೀಯನ್ ರೇಸಿಡೇಸ್ಸಿ ಎದುರುಗಡೆ  ಜಿ.ಡಿ.ಎ ಆಫೀಸ  ಗುಲಬರ್ಗಾರವರು ಮಾನ್ಯ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಆದೇಶದಂತೆ ಠಾಣೆ ಗುನ್ನೆ ನಂ:23/2013 ಕಲಂ 498(ಎ).323.504.506 ಸಂಗಡ 149 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ, ಸುಮಯ್ಯಾ ಅಪ್ರೀನ ಗಂಡ ಸೈಯ್ಯದ ಅಲಿಮ ಸಾ:ನೂರಬಾಗ ಎರಿಯಾ ಗುಲಬರ್ಗಾ ರವರು ನನ್ನ ಮದುವೆ  ಸೈಯ್ಯದ ಅಲಿಮ ಇತನ್ನೊಂದಿಗೆ ದಿನಾಂಕ:11-2-2010 ರಂದು ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆಯ ಕಾಲಕ್ಕೆ 21 ಸಾವಿರ ರೂಪಾಯಿಗಳು, 4 ತೊಲೆ ಬಂಗಾರ ಮತ್ತು ಗೃಹಬಳಕೆಯ ಸಾಮಾನುಗಳು ಕೊಟ್ಟು  ಮದುವೆ ಮಾಡಿರುತ್ತಾರೆ. ನನ್ನ ಗಂಡನು ನಿನ್ನ ತವರು ಮನೆಯಿಂದ 2 ಲಕ್ಷ ತೆಗೆದುಕೊಂಡು ಬರಬೇಕು ಅಂತಾ ದಿನಾಲು ಜಗಳ ತೆಗೆದು  ಕೈಯಿಂದ ಹೊಡೆಬಡೆ ಮಾಡುತ್ತಿದ್ದನು. ನನ್ನ ಅತ್ತೆ ಖೂತೆಜಾಬಿ ಮೈದುನ ಜಾವೀದ ಕೂಡಾ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿಗಳು  ತರದೆ ಇದ್ದರೆ, ನನ್ನ ಗಂಡನಿಗೆ ಮತ್ತೊಂದು ಮದುವೆ ಮಾಡುವುದಾಗಿ ಹೇಳಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಿದ್ದರು. ದಿನಾಂಕ:02-06-2012 ರಂದು 10-00 ಗಂಟೆಯ ಸುಮಾರಿಗೆ ನನ್ನ ಗಂಡ ಕೆಲಸ ಮುಗಿಸಿಕೊಂಡು ಬಂದವನೇ ಹೊಡೆ ಬಡೆ ಮಾಡಿರುತ್ತಾನೆ. ನನ್ನ ಅತ್ತೆ ಖೂತೆಜಾಬಿ ಮೈದುನ ಜಾವೀದ ಇವರು ಸಹ ಅಂತಾ ಅವಾಚ್ಯ ಶಬ್ದಗಳಿಂದ ಬೈದ್ದು ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:24/2013 ಕಲಂ 498(ಎ).323.504.506 ಸಂಗಡ 34 ಐ.ಪಿ.ಸಿ ಮತ್ತು 3&4 ಡಿ.ಪಿ.ಎಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ದಿನಾಂಕ 20-04-2013 ರಂದು ಸಾಯಂಕಾಲ 7-00 ಗಂಟೆಗೆ ಮಲ್ಲಿಕಾರ್ಜುನ ಇತನು ಚಲಾಯಿಸುತ್ತಿರುವ ಮೋಟಾರ ಸೈಕಲ ನಂಬರ ಕೆಎ-32 ವಾಯ-4709 ನೇದ್ದರ ಮೇಲೆ ಶರಣಬಸವೇಶ್ವರ ದೇವಸ್ಥಾನದಿಂದ ಗೋವಾ ಹೋಟೆಲ ಮುಖಾಂತರ ಮನೆಯ ಕಡೆಗೆ ಬರುತ್ತಿರುವಾಗ ಕಲ್ಯಾಣಿ ಪೆಟ್ರೋಲ ಪಂಪ ಹತ್ತಿರ ಜಗತ ಸರ್ಕಲ ಕಡೆಯಿಂದ ಅಟೋರಿಕ್ಷಾ ನಂಬರ ಕೆಎ-32 ಎ-8576 ರ ಚಾಲಕ ರಾಜು ಇತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿರುತ್ತಾನೆ ಅಂತಾ ಶ್ರೀ ವಿಜಯಕುಮಾರ ತಂದೆ ಪ್ರಭುಗೌಡ   ಸಾ:ಮನೆ ನಂ 45(ಎ) ಡಿಎಆರ ಹೆಡ  ಕ್ವಾಟರ್ಸ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2013  ಕಲಂ: 279,337  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.