POLICE BHAVAN KALABURAGI

POLICE BHAVAN KALABURAGI

01 November 2016

KALABURAGI DISTRICT REPORTED CRIMES

ಫರಹತಾಬಾದ ಪೊಲೀಸ್ ಠಾಣೆ:
ಹಾವು ಕಚ್ಚಿ ಸಾವು: ದಿನಾಂಕ 30/10/2016 ರಂದು ಶ್ರೀ ಮಲ್ಲಪ್ಪಾ ತಂದೆ ಪವಾಡೆಪ್ಪಾ ಕರಗರ ಸಾ: ಹಸನಪೂರ ಇವರು ಠಾಣೆಗೆ ಹಾಜರಾಗಿ ತನ್ನ ಮಗಳು ಮಹಾದೇವಿಯ ಮಗಳಾದ ವಿಜಯಲಕ್ಷ್ಮೀ ವ:14 ವರ್ಷ ಇವಳಿಗೆ ತಮ್ಮ ಮನೆಯಲ್ಲಿ ಇಟ್ಟುಕೊಂಡು ಸಾಕುತ್ತಿದ್ದು. ನಿನ್ನೆ ದಿನಾಂಕ 29/10/2016 ರಂದು ಸಾಯಂಕಾಲ 4 ಗಂಟೆಯ ಸುಮಾರಿಗೆ ನನ್ನ ಮೊಮ್ಮಗಳು ವಿಜಯಲಕ್ಷ್ಮೀ ತಂದೆ ಶಿವಪ್ಪಾ ಪೂಜಾರಿ ಇವಳು ನಮ್ಮ ನೆಯಲ್ಲಿ ಇಟ್ಟಿದ್ದ  ಗೋಬ್ಬರದ ಚೀಲದ ಸಂದಿಯಲ್ಲಿ ಇಟ್ಟಿದ್ದ ಕಸಬಾರಿಗೆ ತೆಗೆದುಕೊಳ್ಳುತ್ತಿದ್ದಾಗ ಗೊಬ್ಬರದ ಚೀಲಿನ ಸಂದಿಯಲ್ಲಿ ಕುಳಿತಿದ್ದ ಹಾವು ಕಚ್ಚಿದ್ದರಿಂದ ಕೋಡಲೆ ನನ್ನ ಮಗ ಸುಭಾಷ ಹಾಗೂ ನಮ್ಮೂರಿನ ಸಕ್ಕಪ್ಪ,ನಂದಪ್ಪಾ ಇವರು ವಿಜಯಲಕ್ಷ್ಮೀಯನ್ನು ನದಿ ಶಿನ್ನೂರ ಗ್ರಾಮಕ್ಕೆ ಕರೆದುಕೊಂಡು ಹೋಗಿ  ಅಲ್ಲಿ ನಾಟಿ ಔಷದೋಪಚಾರ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ  ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿರುವಾಗ  ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ  ಇದೊಂದು ಆಕಸ್ಮಿಕವಾಗಿ ನಡೆದ ಘಟನೆ ಯಾಗಿದ್ದು  ನನ್ನ ಮೋಮ್ಮಗಳ ಸಾವಿನಲ್ಲಿ ಸಂಶಯ ಇತ್ಯಾದಿ ಇರುವದಿಲ್ಲಾ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ,
ಫರಹತಾಬಾದ ಪೊಲೀಸ್ ಠಾಣೆ:
ಸರ್ಕಾರಿ ಕರ್ತವ್ಯಕ್ಕೆ ಅಡೆ ತಡೆ ಪ್ರಕರಣ: ದಿನಾಂಕ 30/10/2016 ಶ್ರೀ ಶ್ರೀಪಾದ ನಾಲತವಾಡಕರ್‌‌‌ ಕಂದಾಯ ನಿರೀಕ್ಷಕರು ಪಟ್ಟಣ ಹೋಬಳಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶವೇನೆಂದರೆ ಕಲಬುರಗಿ ತಾಲ್ಲೂಕಿನ ಮೇಳಕುಂದಾ (ಬಿ) ಗ್ರಾಮದ ವಿವಾದಿತ ಸಿದ್ದೇಶ್ವರ ದೇವಸ್ಥಾನದ ಜಾತ್ರೆಯ ನಿಮಿತ್ಯ ಗ್ರಾಮದ ಸಿದ್ದೇಶ್ವರ ದೇವಸ್ಥಾನ ಕಮಿಟಿ ಮತ್ತು ಮಾಳಿಂಗರಾಯ ದೇವಸ್ಥಾನ ಕಮಿಟಿ ಎರಡು ಗುಂಪಿನಲ್ಲಿ ವಿವಾದ ಉಂಟಾಗಿರುವ ನಿಮಿತ್ಯ ಇಂದು ದಿನಾಂಕ 30/10/16 ರಂದು ದೇವಸ್ಥಾನದ ಜಾತ್ರಾ ಪಲ್ಲಕ್ಕಿ ಹಾಗೂ ಯಾವುದೇ ಕಾರ್ಯಾಕ್ರಮ ನಡೆಸಕೂಡದು ಎಂದು ತಿಳಿಸಿ ಕಲಂ 145 ಸಿಆರ್‌ಪಿಸಿ ರಂತೆ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಆದರೆ ಇಂದು ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ಗ್ರಾಮದ ದೇವಸ್ಥಾನ ಕಮಿಟಿ ಸದಸ್ಯರು ಮತ್ತು ಗ್ರಾಮಸ್ಥರಾದ ಭೀಮರಾಯ ಕೊಳ್ಳುರ, ಬಾಬುರಾವ, ವಿದ್ಯಾಸಾಗರ ಕಲಬುರಗಿ ಸಿದ್ದಣ್ಣಗೌಡ ಪಾಟೀಲ ಮತ್ತು ನೂರಾರು ಸ್ತ್ರೀ ಪುರುಷರೊಂದಿಗೆ ಏಕಕಾಲಕ್ಕೆ ದೇವಸ್ಥಾನದ ಒಳಗೆ ಬಂದು ನಮ್ಮ ಹಾಗೂ ಪೊಲೀಸ ಬಂದೋಬಸ್ತ ನಡುವೆ ನಮ್ಮ ಆದೇಶವನ್ನು ದಿಕ್ಕರಿಸಿ ಕರ್ತವ್ಯಕ್ಕೆ ಅಡ್ಡಿ ಪಡೆಯಿಸಿ ಕರ್ತವ್ಯ ನಿರಿತ ಸಿಬ್ಬಂದಿಯವರನ್ನು ತಳ್ಳುತ್ತಾ ದೇವಸ್ಥಾನದ ಪಲ್ಲಕ್ಕಿಗಳನ್ನು ತೆಗೆದುಕೊಂಡು ಹೋಗಿರುತ್ತಾರೆ. ಆದ್ದರಿಂದ ವಿವಾದಿತ ಸಿದ್ದೇಶ್ವರ ದೇವಸ್ಥಾನದ ಕಮಿಟಿ ಸದಸ್ಯರು ಮತ್ತು ಮಾಳಿಂಗರಾಯ ದೇವ ಸ್ಥಾನ ಕಮಿಟಿ ಸದಸ್ಯರು ಅಲ್ಲದೇ ಗ್ರಾಮಸ್ಥರಾದ ಬಾಬುರಾವ, ಭೀಮರಾಯ ಕೊಳ್ಳುರ, ಸಿದ್ದಣ್ಣಗೌಡ ಪಾಟೀಲ ವಿದ್ಯಾಸಾಗರ ಕಲಬುರಗಿ ಹಾಗೂ ಗ್ರಾಮಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಫರಹತಾಬಾದ ಪೊಲೀಸ್ ಠಾಣೆ:
ಸಮಾಧಿಯಿಂಧ ಶವದ ಅವಯವ ಕಳವು ಪ್ರಕರಣ:  ಇಂದು ದಿನಾಂಕ 30/10/2016 ರಂದು ಶ್ರೀ ಚನ್ನಬಸಪ್ಪಾ ತಂದೆ ದಿ: ವೀರುಪಾಕ್ಷಪ್ಪಾ ಸಜ್ಜನ ಸಾ: ಫರಹತಾಬಾದ ಇವರು ಠಾಣೆಗೆ ಹಾಜರಾಗಿ ನನ್ನ ತಂದೆ ದಿ. ವೀರುಪಾಕ್ಷಪ್ಪಾ ತಂದೆ ಶರಣಪ್ಪಾ ಸಜ್ಜನ ಇವರು 7 ತಿಂಗಳ ಹಿಂದೆ  ಮೃತಪಟ್ಟಿದ್ದು ಅವರ ದೇಹವನ್ನು ನಮ್ಮ ಸ್ವಂತ ಹೊಲ (ಸರ್ವೆ ನಂ .225 ರಲ್ಲಿ  ಸುಮಾರು 7 ತಿಂಗಳ ಹಿಂದೆಯೇ  ಶವ ಸಂಸ್ಕಾರ ಮಾಡಿದ್ದು ಆ ಸಮಾಧಿಯನ್ನು ನಿನ್ನೆ ರಾತ್ರಿ ಯಾರೊ ಅಗೆದು  ಶವದ ರುಂಡವನ್ನು ಕಳವು ಮಾಡಿರುತ್ತಾರೆ.  ಈ ಅಪರಾಧದ ಕೃತ್ಯ ಮಾಡಿದ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಳ್ಳಬೆಕೆಂದು ವಿನಂತಿಸುತ್ತೇನೆ ಅಂತಾ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.