POLICE BHAVAN KALABURAGI

POLICE BHAVAN KALABURAGI

28 June 2015

Kalaburagi District Reported Crimes

ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ಬಸಲಿಂಗಮ್ಮ ತಂದೆ ಶಿವಲಿಂಗಪ್ಪಾ ಸಾ; ಪ್ಲಾಟ ನಂ 5 ವಿರೇಶ ನಗರ ಮೆಡಿಕಲ್ ಕಾಲೇಜ ಹತ್ತಿರ ಕಲಬುರಗಿ ರವರು ದಿನಾಂಕ 31-05-2015 ರಂದು 7-00 ಎ.ಎಮ್ ಕ್ಕೆ ಚಿರಾಯು ಆಸ್ಪತ್ರೆಗೆ ಅವರ ಸಂಬಂಧಿಕರಿಗೆ ಭೇಟಿಯಾಗಲು ಹೋದಾಗ 1)ಅನಂತ ರಾಜ ತಂದೆ ಗುರಣ್ಣಾ 2) ಭಾಗೀರಥಿ ಗಂಡ  ಅನಂತ ರಾಜ ಸಾ:ಗುಂದೇಗುಡಿ ಲೇಔಟ ಶಹಾಬಜಾರ ಕಲಬುರಗಿ ನೀನು ಈ ಮೊದಲು ನನ್ನ ಮೇಲೆ ಅನೈತಿಕ ಸಂಬಂಧದ ವಿಷಯದಲ್ಲಿ ಕೇಸು ಕೊಟ್ಟು ನನಗೆ ತ್ರಾಸ ಕೊಟ್ಟಿದ್ದೀ ಈಗ ನಾನು ನಿನ್ನ ಜೋತೆ ಮತ್ತೆ ಸಂಪರ್ಕ ಮಾಡುತ್ತೇನೆ ನಡೆ ಅಂತಾ ಕೈ ಹಿಡಿದು ಕೈಯಲ್ಲಿದ್ದ ಬಳೆಗಳನ್ನು ಒಡೆದು ಹಾಕಿದನು. ಆರೋಪಿ ನಂ;2ನೇದ್ದವಳು ವಿನಾಃ ಕಾರಣ ನನ್ನ ಹೆಸರು ಕೇಸಿನಲ್ಲಿ ಸೇರಿಸಿದ್ದೀ ಮಾದಿಗ ರಂಡಿ ಕಮ್ಮಜಾತಿ ಎಂದು ತನ್ನ ಗಂಡನಿಗೆ ಈ ರಂಡಿಗೆ ಬಿಡಬೇಡ ಇವಳಿಗೆ ಬಹಳ ಸೊಕ್ಕು ಇದೆ. ಬಿಡು ಇನ್ನೊಮ್ಮೆ ನಮ್ಮ ಗೂಡವಿಗೆ ಬರದಂತೆ ಸೇಡು ತಿರಿಸಿಕೊ ಅಂತಾ ನನ್ನ ಕೂದಲು ಹಿಡಿದು ಎಳೆದಾಡಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಕುರಕುಂಟಾ ಠಾಣೆ : ಶ್ರೀ ತುಳಿಸಿರಾಮ  ತಂದೆ ನಾರಾಯಣ ಪವಾರ ಸಾ|| ವೆಂಕಟೇಶ ನಗರ ಕುರಕುಂಟಾ ತಾ|| ಸೇಡಂ ಇವರ ತಂದೆಯವರಾದ ನಾರಾಯಣ ತಂದೆ ಅಂಬ್ರು ಪವಾರ ಇವರು 3 ವರ್ಷದ ಹಿಂದೆ ರೆಬ್ಬನಪಲ್ಲಿ ಗ್ರಾಮದಲ್ಲಿ ನಮ್ಮ ಪರಿಚಯದವರಾದ  ಶ್ರೀನಿವಾಸ ತಂದೆ ಲಕ್ಷ್ಮಾರೆಡ್ಡಿ ಇವರ ಹತ್ತಿರ ಟ್ಯಾಕ್ಟರ ನಂ ಎ.ಪಿ-07/ಟಿ.ಬಿ 8346 ಮತ್ತು 8347 ನೇದ್ದನ್ನು ಖರೀದಿಸಿದ್ದು ಟ್ಯಾಕ್ಟರ ನನ್ನ ತಂದೆಯವರ ಹೆಸರಿನ ಮೇಲೆ ಇರುತ್ತದೆ. ನಮ್ಮ ತಂದೆಯವರು ಖರೀದಿ ಮಾಡಿದ ಟ್ಯಾಕ್ಟರ ಉಸ್ತುವಾರಿಯನ್ನು ನಾನು ನೋಡಿಕೊಂಡು ಬಂದಿರುತ್ತದೆ. ನಾನು ಒಂದು ಸ್ವಂತ ಟೆಂಟ್ ಹೌಸ ಹೊಂದಿದ್ದು ಟೆಂಟ್ ಹೌಸ ಸಾಮಾನುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ನಮ್ಮ ತಂದೆಯವರು ಖರೀದಿ ಮಾಡಿದ  ಟ್ಯಾಕ್ಟರ ಅನ್ನು ಉಪಯೋಗಿಸುತ್ತಾ ಬಂದಿರುತ್ತನೆ . ಸದರಿ ಟ್ಯಾಕ್ಟರನ ಚಾಲಕನಾಗಿ ರಾಜು ತಂದೆ ರಾಮಸ್ವಾಮಿ ಸಾ|| ಕುರಕುಂಟಾ ಇವನನ್ನು ನೇಮಕ ಮಾಡಿಕೊಂಡಿದ್ದು ಒಂದು ತಿಂಗಳಲ್ಲಿಯೇ ಅವನು ಕೆಲಸ ಬಿಟ್ಟು ಹೋದ ನಂತರ ಸಂತೋಷ ತಂದೆ ಗುಂಡಪ್ಪ ಸಾ|| ಉದನೂರು ಇವನನ್ನು ನೇಮಕ ಮಾಡಿಕೊಂಡಿದ್ದು ಇವನು ದಿನಾಲು ನನ್ನ ಟೆಂಟ್ ಹೌಸಿನ ಸಾಮಾನುಗಳನ್ನು ಮನೆಯ ಮುಂದೆ ಇಳಿಸಿ ನಮ್ಮ ಮನೆಯ ಮುಂದೆ  ಟ್ಯಾಕ್ಟರ ನಿಲ್ಲಿಸಲು ಸ್ಥಳದ ಕೊರತೆ ಇದ್ದ ಕಾರಣ ನಮ್ಮ ಮನೆಯ ಹಿಂದೆ ಇರುವ ವಿಜಯಕುಮಾರ ಸೂರ್ಯವಂಶಿ ಇವರ ಮನೆಯ ಪಕ್ಕದಲ್ಲಿರುವ ಸಿ.ಸಿ ರಸ್ತೆಯ ಮೇಲೆ ನಿಲ್ಲಿಸಿ ಕೀಲಿ ಹಾಕಿ ಕೊಂಡು ಮನೆಗೆ ಬರುತ್ತಿದ್ದನು. ಹೀಗಿರುವಾಗ ದಿನಾಂಕ:- 14-04-2015 ರಂದು ರಾತ್ರಿ 8.00 ಗಂಟೆ ಸುಮಾರಿಗೆ ನನ್ನ ಟ್ಯಾಕ್ಟರನ ಚಾಲಕನಾದ ಸಂತೋಷ ತಂದೆ ಗುಂಡಪ್ಪ ಸಾ|| ಉದನೂರು ಇವರು ಟೆಂಟ್ ಹೌಸಿನ ಸಾಮಾನುಗಳನ್ನು ಮನೆಯ ಮುಂದೆ ಇಳಿಸಿ ನಮ್ಮ ಟ್ಯಾಕ್ಟರ ಅನ್ನು ಎಂದಿನಂತೆ ವಿಜಯಕುಮಾರ ಸೂರ್ಯವಂಶಿ ಇವರ ಮನೆಯ ಪಕ್ಕದಲ್ಲಿರುವ ಸಿ.ಸಿ ರಸ್ತೆಯ ಮೇಲೆ ನಿಲ್ಲಿಸಿ ಕೀಲಿ ಹಾಕಿ ಕೊಂಡು ಮನೆಗೆ ಬಂದಿದ್ದು ಮುಂಜಾನೆ 6.00 ಗಂಟೆಗೆ ಹೋಗಿ ನೋಡಲಾಗಿ ಸ್ಥಳದಲ್ಲಿ ಟ್ಯಾಕ್ಟರ ಇರಲ್ಲಿಲ್ಲ. ಆಗ ನನ್ನ ಡ್ರೈವರ ಗಾಬರಿಯಾಗಿ ನನಗೆ ಪೋನ ಮಾಡಿ ತಿಳಿಸಿದ್ದು ಆಗ ನಾನು ವಿಜಯಕುಮಾರ ಸೂರ್ಯವಂಶಿ ಇವರ ಮನೆಯ ಪಕ್ಕದಲ್ಲಿರುವ ಸಿ.ಸಿ ರಸ್ತೆಯ ಮೇಲೆ ಹೋಗಿ ನೋಡಲಾಗಿ ಸದರಿ ಸ್ಥಳದಲ್ಲಿ ನನ್ನ ಟ್ಯಾಕ್ಟರ ಇರಲ್ಲಿಲ್ಲ. ಅಂದಿನಿಂದ ಇಲ್ಲಿಯವರೆಗೆ ತಾಂಡೂರು, ಮಲ್ಕಾಪೂರ , ಕರನಕೋಟ, ಕೊಂಚಾವರಂ, ಹೈದ್ರಾಬಾದ ,ಮಹಬೂಬನಗರ, ಬೀದರ, ಚಿಂಚೋಳಿ ,ಮುಧೋಳ, ರೆಬ್ಬನಪಲ್ಲಿ , ಸೇಡಂ ,ಕಲಬುರಗಿ ,ಇತ್ಯಾದಿ ಪಟ್ಟಣಗಳನ್ನು ತಿರುಗಾಡಿ ಹುಡುಕಲಾಗಿ ನನ್ನ ಟ್ಯಾಕ್ಟರ ಸಿಕ್ಕಿರುವುದಿಲ್ಲಾ ನನ್ನ ಟ್ಯಾಕ್ಟರಿನ ಕಂಪನಿಯ ಹೆಸರು ಮಹೇಂದ್ರ 575 ಡಿ.ಐ ಇದ್ದು ಟ್ಯಾಕ್ಟರ ಇಂಜಿನಿನ ಬಣ್ಣ ಕೆಂಪು ಕಲರ ಇದ್ದು ಅದರ ಟ್ರಾಲಿ ನೀಲಿ ಮತ್ತು ಅರಿಸಿಣ  ಬಣ್ಣದ್ದು ಇದ್ದು ಅದರ ಕಿಮತ್ತು 5,00,000=00 ರೂಪಾಯಿ ಆಗುತ್ತಿದ್ದು ದ ನನ್ನ ಟ್ಯಾಕ್ಟರ ನಂ ಎ.ಪಿ-07/ಟಿ.ಬಿ 8346 ಮತ್ತು 8347 ನೇದ್ದನ್ನು ಪತ್ತೆ ಹಚ್ಚಿಕೊಡಲು ಸಾಹೇಬರಲ್ಲಿ ವಿನಂತಿ ಅದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.