POLICE BHAVAN KALABURAGI

POLICE BHAVAN KALABURAGI

21 April 2014

Gulbarga District Reported Crimes

ಕೊಲೆ ಆರೋಪಿತರ ಬಂಧನ
ಚೌಕ ಪೊಲೀಸ್ ಠಾಣೆ :  ಗುನ್ನೆ ನಂ. 56/2014 ಕಲಂ 143,147,148,341,504,302 ಸಂ 149 ಐಪಿಸಿ ಮತ್ತು 25 ಆಯುಧ ಕಾಯ್ದೆ 1969 ನೇದ್ದರಲ್ಲಿಯ ಆರೋಪಿತರಾದ 1. ಪ್ರಕಾಶ ತಂದೆ ಮಹಾದೇವಪ್ಪ ವಟಾರೆ ಸಾಃ ಕೇರಿಬೊಸಗಾ ತಾಃಜಿಃ ಗುಲಬರ್ಗಾ  2. ಈಶ್ವರ ತಂದೆ ಶಿವಶರಣಪ್ಪ ಮುಡಬಿ ಸಾಃ ಸಂಜೀವ ನಗರ ಗುಲಬರ್ಗಾ 3. ಆನಂದ ತಂದೆ ಬಸವರಾಜ ಬಿಜಾಪೂರ ಸಾಃ ಸಂಜೀವ ನಗರ ಗುಲಬರ್ಗಾ  4. ಪ್ರಿತೇಶ ತಂದೆ ಮಾರುತಿ ನೂಲಕರ ಸಾಃ ಸಂಜೀವ ನಗರ ಗುಲಬರ್ಗಾ 5. ಸುದೀರ ತಂದೆ ರವಿ ಹಳ್ಳಿಖೇಡ ಸಾಃ ಸಂಜೀವ ನಗರ ಗುಲಬರ್ಗಾ 6. ಶರಣು @ ದೇವಿಂದ್ರ @ ದೇವ್ರು ತಂದೆ ಆನಂದ ಪೂಜಾರಿ ಸಾಃ ಕನಕನಗರ ಗುಲಬರ್ಗಾ  ಹಾಗೂ ಚೌಕ ಠಾಣೆಯ ಗುನ್ನೆ ನಂ. 57/2014 ಕಲಂ 143,147,148,341,504,307 ಸಂಗಡ 149 ಐಪಿಸಿ ಮತ್ತು 25 ಆಯುಧ ಕಾಯ್ದೆ 1969 ಹಾಗೂ 3(1)(10) ಎಸ್ಸಿ/ಎಸ್ ಟಿ ಪಿಎ ಅಕ್ಟ ನೇದ್ದರಲ್ಲಿ ಆರೋಪಿತರಾದ 1. ಶ್ರೀಶೈಲ ತಂದೆ ಸೂರ್ಯಕಾಂತ ಚರಪಳ್ಳಿ ಸಾಃ ಗಂಗಾನಗರ ಗುಲಬರ್ಗಾ 2. ದೇವು @ ದೇವಿಂದ್ರಪ್ಪ ತಂದೆ ಸಿಕ್ಕಿಂದ್ರಪ್ಪ ಕ್ಯಾಡಗಿ ಸಾಃ ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾ ರವರಿಗೆ ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ, ಅಪರ ಎಸ್.ಪಿ ಸಾಹೇಬ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮಾನ್ಯ ಉದಯಕುಮಾರ ಎಂ. ಬೆವಿನಗಿಡ ಡಿ.ಎಸ್.ಪಿ ಬಿ ಉಪವಿಭಾಗ ಗುಲಬರ್ಗಾ, ಶ್ರೀ ಎಸ್.ಕೆ ಮಾರಿಹಾಳ  ಪಿ.ಐ ಚೌಕಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಅಧಿಕಾರಿಯವರಾದ ಎನ್. ಸತೀಶಕುಮಾರ ಪಿ.ಐ ಬ್ರಹ್ಮಪೂರ ಹಾಗೂ ಪ್ರದೀಪಕೊಳ್ಳಾ ಪಿ.ಎಸ್.ಐ(ಕಾಸು) ಚೌಕ ಠಾಣೆ, ಹೆಮಂತಕುಮಾರ ಪಿ.ಎಸ್.ಐ ಆರ್.ಜಿ ನಗರ, ಶಾಮರಾವ ಎ.ಎಸ್.ಐ ಚೌಕ ಠಾಣೆ ಸಿಬ್ಬಂದಿಯವರಾದ 1] ಮಹಾಂತೇಶ ಪಿಸಿ 716 2] ಬಾಬು ಶೇರಿಕಾರ ಪಿಸಿ 333 3] ಮಹೇಬೂಬ ಪಿಸಿ 953 4] ಗೋಪಾಲ ಪಿಸಿ 953 5] ಅಲೋಕ ಪಿಸಿ 1008 6] ಪ್ರಶಾಂತ ಪಿಸಿ 920 7] ಪ್ರಕಾಶ ಪಿಸಿ 1132 8] ಮಕ್ತುಮಸಾಬ ಪಿಸಿ 499 9] ಕೇಶವ ಪಿಸಿ 1211 ಗ್ರಾಮೀಣ  10] ಸಂಜೀವರಡ್ಡಿ ಹೆಚ್.ಸಿ 85 ಗ್ರಾಮೀಣ 11] ಆಸೀಫ ಪಿಸಿ 535 12] ಬಂದೇನವಾಜ ಪಿಸಿ 429 13] ಶಿವಾನಂದ ಯಡ್ರಾಮಿ ಪಿಸಿ 992 14] ಶರಣಬಸವ ಪಿಸಿ 699 ರವರು ಕೂಡಿಕೊಂಡು ದಿನಾಂಕ 20.04.2014 ರಂದು ಬೆಳಗಿನ ಜಾವ 4-30 ಗಂಟೆಯಿಂದ 5 ಗಂಟೆಯ ಮದ್ಯದಲ್ಲಿ  ಗುಲಬರ್ಗಾ ರೈಲು ನಿಲ್ದಾಣ ಮತ್ತು ಕೇಂದ್ರ ಬಸ್ ನಿಲ್ದಾಣದಲ್ಲಿ ತಲೆ ಮರೆಸಿಕೊಂಡು ಓಡಿಹೋಗಲು ಪ್ರಯತ್ನದಲ್ಲಿದ್ದ ಆರೋಪಿತರನ್ನು ದಸ್ತಗಿರಿ ಮಾಡಿ   ನ್ಯಾಯಾಂಗ ಬಂಧನ ಕುರಿತು ಕಳಿಸಿದ್ದು ಇರುತ್ತದೆ.  ಸದರಿ ಆರೋಪಿತರಲ್ಲಿ ಕೆಲವು ಆರೋಪಿತರು ಹಲವಾರು ಅಪರಾಧ ಪ್ರಕರಣಗಳಲ್ಲಿ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರಿರುತ್ತಾರೆ. ನಗರದಲ್ಲಿ ಗುಂಪು ಕಟ್ಟಿಕೊಂಡು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಅಪರಾಧ ಪ್ರವೃತ್ತಿಯುಳ್ಳವರಾಗಿರುತ್ತಾರೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 19-04-2014 ರಂದು  ಬೆಳಗ್ಗೆ 11 ಗಂಟೆಗೆ ಮಹ್ಮದ ಬಿಲಾಲ ಇತನು ನಮ್ಮ ತಾಯಿಯಾದ ಹನಿಫಾ ಬೇಗಂ ಇವಳಿಗೆ ಕಣ್ಣು ತೊರಿಸಲು ಗುಲಬರ್ಗಾದ ನವಣಿ ಅಸ್ಪತ್ರೆಗೆ ಹೊಗಿರುತ್ತಾರೆ. ಮದ್ಯಾನ್ಹ 12 ಗಂಟೆಯ ಸುಮಾರಿಗೆ ವಾಡಿ ಹತ್ತಿರ ಇರುವ ಇಂಗಳಗಿ ಗ್ರಾಮದಲ್ಲಿ ನಮ್ಮ ಅಜ್ಜಿ ಶರಿಫಾ ಬೀ ಇವಳು ತಿರಿಕೊಂಡಿದ್ದ ಸುದ್ದಿ ತಿಳಿಯಿತು. ನಮ್ಮ ತಾಯಿ ಮತ್ತು ನಮ್ಮ ತಮ್ಮ ಗುಲಬರ್ಗಾಕ್ಕೆ ಹೊಗಿದ್ದರಿಂದ ಅವರು ಬರುವವರೆಗೂ ನಿಲ್ಲೋಣ ಅಂತಾ ಕಾಯುತ್ತ ಜೇವರ್ಗಿಯಲ್ಲಿ ಉಳಿದಿರುತ್ತೆವೆ. ನಮ್ಮ ತಮ್ಮ ಮಹ್ಮದ ಬಿಲಾಲ ಇತನು ಸಾಯಂಕಾಲ 4 ಗಂಟೆ ಸುಮಾರಿಗೆ ನಮ್ಮ ತಾಯಿಗೆ ಗುಲಬರ್ಗಾದ ನವಣಿ ಆಸ್ಪತ್ರೆಯಲ್ಲಿ ಬಿಟ್ಟು ಜೇವರ್ಗಿಗೆ ಬಂದಿರುತ್ತಾನೆ. ನಂತರ ಸದರಿ ನಮ್ಮ ಅಜ್ಜಿ ತಿರಿಕೊಂಡ ವಿಷಯ ತಿಳಿಸಿ ನಮ್ಮ ತಾಯಿಗೆ ಕರೆದುಕೊಂಡು ಬರಲು ಹೇಳಿದಾಗ ನಮ್ಮ ತಮ್ಮನು ಅವರ ಗೆಳೆಯನಾದ ಅಬ್ದುಲ್‌ ಬಾಷಾ ಇತನ ಟಿವಿಎಸ್‌ ಮೋಟರ್‌ ಸೈಕಲ್‌ ನಂ. ಕೆಎ 32 ಎಎಫ್‌-0541 ನೇದ್ದನ್ನು ತೆಗೆದುಕೊಂಡು ಇದರ ಮೇಲೆ ಕರೆದುಕೊಂಡು ಬರುತ್ತೆನೆ ಅಂತಾ ಹೇಳಿ ಹೊಗಿರುತ್ತಾನೆ. ಸಾಯಂಕಾಲ 4:30 ಗಂಟೆಗೆ ಸುಮಾರಿಗೆ ನಮ್ಮ ತಾಯಿ ತಾನು ಒಬ್ಬಳೆ ಅಸ್ಪತ್ರೆಗೆ ತೊರಿಸಿ ಮನೆಗೆ ಬಂದಿರುತ್ತಾಳೆ. ನಂತರ ನಾನು ಮತ್ತು ನನ್ನ ತಾಯಿ ಹನಿಫಾ ಬೇಗಂ ಇನ್ನೊಬ್ಬ ತಮ್ಮನಾದ ಮಹ್ಮದ ರಫೀಕ್‌ ಎಲ್ಲರೂ ಕೂಡಿಕೊಂಡು ಇಂಗಳಗಿ ಗ್ರಾಮಕ್ಕೆ ಹೋಗಿ ಅಂತ್ಯ ಸಂಸ್ಕಾರ ಮುಗಿಸಿ ಮರಳಿ ಜೇವರ್ಗಿಗೆ ರಾತ್ರಿ 11 ಗಂಟೆಗೆ ಸುಮಾರಿಗೆ ಬಂದಾಗ ನಮ್ಮ ಜೋಪಡಿ ಪಟ್ಟಿಯಲ್ಲಿರುವ ಫಾರೂಕ್‌ ಇತನು ಬಂದು ನಮಗೆ ತಿಳಿಸಿದ್ದೆನಂದರೆ ಈಗ ರಾತ್ರಿ 10:30 ಗಂಟೆಯ ಸುಮಾರಿಗೆ ರಾಷ್ರೀಯ ಹೆದ್ದಾರಿ 218 ರಸ್ತೆಯ ನಂದಿಕೂರ ತಾಂಡದ ಹತ್ತಿರ ಮಹ್ಮದ ಬಿಲಾಲ ಇತನು ಟಿವಿಎಸ್‌ ಮೋಟರ್‌ ಸೈಕಲ್‌ ಮೇಲೆ ಗುಲಬರ್ಗಾದಿಂದ ಜೇವರ್ಗಿಯ ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ಮಹ್ಮದ ಬಿಲಾಲನಿಗೆ  ಹಣೆಗೆ ಭಾರಿ ರಕ್ತಗಾಯವಾಗಿದ್ದು ಮತ್ತು ಬಲಗಾಲಿನ ಮೊಣಕಾಲಿನ ಹತ್ತಿರ ಮೂಳೆ ಮುರಿದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಮಹ್ಮದ ಮುಸ್ತಾಫ ತಂದೆ ಉಸ್ಮಾನ ಶಾ ವರವಿ ಸಾ:ಮಕ್ಕಾ ಮಜೀದ ಮುಸ್ಲಿಂ  ಬಸ್ತಿ ಜೊಪಡ ಪಟ್ಟಿ ರೋಡ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.