POLICE BHAVAN KALABURAGI

POLICE BHAVAN KALABURAGI

04 April 2014

Gulbarga District Reported Crimes

PÀªÀįÁ¥ÀÆgÀ ¥ÉưøÀ oÁuÉ:
 ದಿನಾಂಕ:03/04/2014  ರಂದು  ಠಾಣೆಯ ಸಿಬ್ಬಂದಿಯವರಾದ ಚಂದ್ರಕಾಂತ ಪಿಸಿ. 988, ಭೀಮಾಶಂಕರ ಪಿಸಿ.531, ಕತಲಸಾ ಪಿಸಿ. 310 ರವರೊಂದಿಗೆಕಮಲಾಪೂರದಿಂದ ಕಿಣ್ಣಿಸಡಕ ಸೇತುವೆವರೆಗೆ ಪೆಟ್ರೋಲಿಂಗ್ ಮಾಡುತ್ತಿರುವಾಗ  ಕಿಣ್ಣಿಸಡಕ ಗ್ರಾಮದ ಬಸ್ಸ ಸ್ಟ್ಯಾಂಡ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಗೆ ಲೋಕಸಭೆ  ಚುನಾವಣೆ  ನಿಮಿತ್ಯಾ ನೀವು ಯಾವ ಪಕ್ಷಕ್ಕೆ ಮತ ನೀಡುತ್ತಿರಿನಿಮ್ಮನ್ನು ನೋಡುತ್ತೇನೆ. ಮತ್ತು ನಾನು ಹೇಳಿದ ಪಕ್ಷಕ್ಕೆ ಮತ ಹಾಕಬೇಕು ಅಂತಾಒದರಾಡುತ್ತಾಚಿರಾಡುತ್ತಾ ಸಾರ್ವಜನಿಕರಿಗೆ ಹಾಗು ಹೋಗಿ ಬರುವ ಜನರಿಗೆ ತಡೆದು ನಿಲ್ಲಿಸಿ ರಸ್ತೆ ಸಂಚಾರಕ್ಕೆ ಅಡೆ ತಡೆ ಉಂಟುಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ಸಾರ್ವಜನಿಕರ ನೆಮ್ಮದಿ ಹಾಳು ಮಾಡುತ್ತಾ ಇದ್ದುದ್ದರಿಂದ ಸದರಿಯವನಿಗೆ ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸಂತೋಷಕುಮಾರ ತಂದೆ ಶರಣಪ್ಪಾ ಸಿಂಧೆ ವಯ; 28 ವರ್ಷ ಜಾಮಾದಿಗ ಉಮೇಕ್ಯಾನಿಕ್ ಕೆಲಸ ಸಾಕಿಣ್ಣಿಸಡಕ ತಾ:ಜಿ: ಗುಲಬಗರ್ಾ ಅಂತಾ ತಿಳಿಸಿದ್ದು ಸದರಿಯವನಿಗೆ ಹಾಗೆಯೆ ಬಿಟ್ಟಲ್ಲಿ ಇನ್ನು ಮುಂದೆ ಸಂಜ್ಞೆಯ ಅಪರಾಧ ಮಾಡುವದಾಗಿ ಕಂಡು ಬಂದಿದ್ದರಿಂದ ಮತ್ತು ಲೋಕಸಭೆ ಚುನಾವಣೆಯ ಸಮಯದಲ್ಲಿ ಗಲಾಟೆ ಮಾಡುವ ಸಂಭವವಿರುವದರಿಂದಮುಂಜಾಗ್ರತೆ ಅಡಿಯಲ್ಲಿ ದಸ್ತಗಿರಿ ಮಾಡಿಕೊಂಡು ಠಾಣೆಗೆ  ತಂದು ಸದರಿಯವನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.                                                                     
C¥sÀd®¥ÀÆgÀ ¥Éưøï oÁuÉ:
ಇಂದು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕುರಿತು ಜೀಪ ಚಾಲಕ ಪಿಸಿ-339 ಗುಂಡಪ್ಪ ಇವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ ಹೊರಟು, ಪೆಟ್ರೊಲಿಂಗ ಮಾಡುತ್ತಾ ಅಂಬೆಡ್ಕರ ಚೌಕ ಹತ್ತಿರ ಇದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ, ಅಂಬಿಗರ ಚೌಡಯ್ಯನವರ ಕಮಾನ ಹತ್ತಿರ ಇರುವ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ನಮ್ಮ ಠಾಣೆಯ ಸಿಬ್ಬಂದಿ ಜನರಾದ ಪಿಸಿ-1258 ಆನಂದ, ಪಿಸಿ-894 ನಿಂಗಣ್ಣ, ಪಿಸಿ-1225 ಚಿದಾನಂದ, ಪಿಸಿ-903 ಚಂದ್ರಶಾ ಇವರನ್ನು ವಾಕಿ ಮೂಲಕ ಬರಮಾಡಿಕೊಂಡು ದಾಳಿ ವಿಷಯ ತಿಳಿಸಿ, ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಹುಚ್ಚಪ್ಪ ತಂದೆ ಶರಣಪ್ಪ ಕೋಳಿಗೇರಿ ಸಾ|| ಇಬ್ಬರು ಅಫಜಲಪೂರ ಇವರನ್ನು ಹಾಜರು ಪಡಿಸಿಕೊಂಡು ದಾಳಿ ವಿಷಯವನ್ನು ತಿಳಿಸಿದೆನು. ಪಂಚರಾಗಲು ಒಪ್ಪಿಕೊಂಡ ನಂತರ ನಾನು ಮತ್ತು ಪಂಚರು, ಹಾಗು ಸಿಬ್ಬಂದಿಯವರು ಕೂಡಿಕೊಂಡು ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಂತೆ ಠಾಣೆ ಜೀಪಿನಲ್ಲಿ 5:15 ಪಿ ಎಮ್ ಕ್ಕೆ ಹೊರಟು  ಸ್ಥಳಕ್ಕೆ 5:20 ಪಿ ಎಮ್ ಕ್ಕೆ ಹೊಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಅಂಬಿಗರ ಚೌಡಯ್ಯನವರ ಕಮಾನದ ಹತ್ತಿರ ಇರುವ ಹನುಂತ ದೆವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜುಜಾಡುತ್ತಿದ್ದ 5 ಜನರನ್ನು ಹಿಡಿದು  ಒಟ್ಟು 4785/- ರೂ ಮತ್ತು 52 ಇಸ್ಪೆಟ ಎಲೆಗಳು ಮುಂದಿನ ಪುರಾವೆಗಾಗಿ ಪಂಚರ ಸಮಕ್ಷಮ ದಿಂದ ವರೆಗೆ ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡೆವು. ಸದರಿ ಆರೋಪಿತರೊಂದಿಗೆ ಠಾಣೆಗೆ ಬಂದು ಆರೋಪಿತರ ವಿರುದ್ದ ಮುಂದಿನ ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನಿಡಿದ್ದು, ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 
 ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ:
 ದಿನಾಂಕ: 04/04/2014 ರಂದು ರಾತ್ರಿ  ಕಾಮರೆಡ್ಡಿ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಹಾಜರಾಗಿ ಶ್ರೀ ಸೋಮನಾಥ ಇವರ ಎಮ್.ಎಲ್.ಸಿ. ಪತ್ರವನ್ನು ಹಾಜರಪಡಿಸಿದ್ದರಿಂದ ನಾನು ಕಾಮರೆಡ್ಡಿ ಆಸ್ಪತ್ರೆಗೆ ಭೇಟಿ ಕೊಟ್ಟು ಗಾಯಾಳು ಶ್ರೀ ಸೋಮನಾಥ ತಂದೆ ಶ್ರೀಶೈಲ ರವರನ್ನು ವಿಚಾರಿಸಿ ಫಿರ್ಯಾದಿ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ ಫಿರ್ಯಾದಿ ತನ್ನ ಮೋ/ಸೈಕಲ್ ನಂಕೆಎ 32 ವಿ 0210 ನೆದ್ದನ್ನು ಚಲಾಯಿಸಿಕೊಂಡು ಸುಪರ ಮಾರ್ಕೇಟ ದಿಂದ ಲಾಲಗೇರಿ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಅಪ್ಪನ ಕೆರೆ ಗಾರ್ಡನ ಕ್ರಾಸ್ ಹತ್ತಿರ ಲಾಲಗೇರಿ ಕ್ರಾಸ್ ಕಡೆಯಿಂದ ಮೋ/ಸೈಕಲ್ ನಂ:ಕೆಎ 32 ಇಇ 0770 ರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಟೋರೀಕ್ಷಾ ಕ್ಕೆ ಓವರ ಟೇಕ ಮಾಡಲು ಹೋಗಿ ಫಿರ್ಯಾದಿ ಮೋ/ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಹೊರಟು ಹೋಗಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶ ಅದೆ.