POLICE BHAVAN KALABURAGI

POLICE BHAVAN KALABURAGI

14 August 2015

Kalaburagi District Reported Crimes.

ಅಶೋಕ ನಗರ ಠಾಣೆ : ದಿನಾಂಕ 14/08/2015 ರಂದು ಮುಂಜಾನೆ 9-30 ಎಎಂಕ್ಕೆ  ಶ್ರೀ. ದಿಲೀಪ ತಂದೆ ದಿ: ಜೈರಾಮ ರಾಜೊಳಕರ  ಸಾ: ಪ್ಲಾಟ ನಂ. 66 ಜೈರಾಮ ನಿಲಯ  ರೈಲ್ವೆ ಟ್ರ್ಯಾಕ್‌ ಹತ್ತಿರ  ಶಕ್ತಿ ನಗರ ಕಲಬುರಗಿ  ರವರು ಠಾಣೆಗೆ ಬಂದು ಫಿರ್ಯಾದಿ ಹೇಳಿಕೆ ನೀಡಿದ್ದರ ಸಾರಾಂಶವೆನೆಂದರೆ  ನಿನ್ನೆ ದಿನಾಂಕ 13/08/2015 ರಂದು ರಾತ್ರಿ ಊಟ ಮಾಡಿಕೊಂಡು ನಾನು ಮತ್ತು ನನ್ನ ಪತ್ನಿ ಶೋಭಾ, ಮಗಳು ಪ್ರಿಯಾ ಎಲ್ಲರೂ ರಾತ್ರಿ 11 ಗಂಟೆಯ ವರೆಗೆ ಎಚ್ದರವಿದ್ದು ನಂತರ ಬೇಡ ರೂಮಿನಲ್ಲಿ ಮಲಗಿರುತ್ತೆವೆ. ನನ್ನ ತಾಯಿ ಕಮಲಾಬಾಯಿ ರವರು ನಮ್ಮ ಅಣ್ಣನ ಮನೆಗೆ ಹೊಗಿದ್ದರು. ದಿನಾಂಕ 14/08/2015 ರಂದು ಬಳಿಗ್ಗೆ  6-30 ಗಂಟೆಗೆ  ನನ್ನ ಪತ್ನಿ ಶೋಭಾ ರವರು ಎದ್ದು ನೊಡಲು ಅಡುಗೆ ಮನೆಯ ಕಿಟಕಿ ಗ್ರೀಲ್‌  ಮುರಿದಿದ್ದು, ಮತ್ತು ಕಿಚನ ಕಟ್ಟಿಯ ಮೇಲೆ ಬಂಗಾರದ ಖಾಲಿ ಕವರ ಪಾಕೇಟ ಗಳನ್ನು ನೊಡಿ ನನಗೆ ಹೇಳಿದ್ದು ನಾವು ಬೇಡರೂಮಿನಲ್ಲಿ ನೊಡಲು ಅಲಮಾರಾ ತೆರೆದಿದ್ದು ಒಳಗಡೆ ಇಟ್ಟಿದ್ದ ಈ ಕೆಳಕಂಡ ಆಭರಣಗಳು ಕಳವು ಆಗಿವೆ. . 1) ಬಂಗಾರದ ತಾಳಿ  ಚೈನ ಎರಡು ತುಂಡಾಗಿದ್ದು 4 ತೊಲೆ  2) ಬಂಗಾರದ ನಾನ್‌ 2 ತೊಲೆ, 3) ಬಂಗಾರದ ಉಂಗುರು ½ ತೊಲೆ, 4) ಎರಡು ಜೊತೆ ಕಿವಿ ಹೂವುಗಳು ಮತ್ತು ಮಾಟಿ 3 ಗ್ರಾಂ, 5) ನನ್ನ ಸಣ್ಣ ಮಗಳ  ಸಣ್ಣ 4 ಬಂಗಾರದ ಉಂಗುರುಗಳು 4 ಗ್ರಾಂ, 6)ಬೆಳ್ಳಿಯ 3 ಜೊತೆ ಕಾಲ ಚೈನಗಳು, ಒಂದು ಜೊತೆ ಬೆಲ್ಳಿ ಖಡ್ಗಗಳು 10 ತೊಲೆ, 7) ನಗದು ಹಣ 10,000/- ರೂ. ಹೀಗೆ ಒಟ್ಟು ಅಂದಾಜು 1,67,100/- ರೂ ಮೌಲ್ಯದ ಬಂಗಾರ ಬೆಳ್ಳಿ ಆಭರಣಗಳು ಮತ್ತು ನಗದು ಹಣವನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು  ನಾವು ಬೇಡ ರೂಮಿನಲ್ಲಿ ಮಲಗಿರುವಾಗ  ಅಡುಗೆ ಕೊಣೆಯ ಕಿಟಕಿ ಗ್ರೀಲ ಮುರಿದು ಅತಿಕ್ರಮ  ಪ್ರವೇಶ ಮಾಡಿ, ಇನ್ನೊಮದು ಬೇಡ ರೂಮಿನಲ್ಲಿದ್ದ ಅಲಮಾರಾ ತೆರೆದು ಈ ಮೆಲೆ ನಮೂದಿಸಿದ ಆಭರಣಗಳನ್ನು ಕಳ್ಳತನ ಮಾಡಕೊಂಡು ಹೊಗಿರುತ್ತಾರೆ. ಪತ್ತೆ ಹಚ್ಚಿ ಕೊಡಬೆಕೆಂದು ವಗೈರೆ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 107/2015 ಕಲಂ. 457, 380 ಐಪಿಸಿ ಪ್ರಕಾರ ಗುನ್ನೆ ದಾಖಲಾಗಿರುತ್ತದೆ.
ನಿಂಬರ್ಗಾ  ಠಾಣೆ : ದಿನಾಂಕ 14/08/2015 ರಂದು 0930 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶ್ರೀಮಂತ ತಂದೆ ಗುರುಲಿಂಗಪ್ಪ ಮೂಲಗೆ ವ_|| 55 ವರ್ಷ, ಜಾ|| ಲಿಂಗಾಯತ, || ವಾಚಮನೆ ಕೆಲಸ, ಸಾ|| ತಂಬಾಕ ವಾಡಿ ( ಹಾಲ ತಡಕಲ ) ಹಾ|| || ಜಾಧವ ನಗರ ವಡಗಾಂವ ಪುಣೆ ಇವರು ಠಾಣೆಗೆ ಹಾಜರಾಗಿ ಒಂದು ಲೀಖಿತ ಫಿರ್ಯಾದಿ ಸಲ್ಲಿಸಿದ್ದೇನೆಂದರೆ ತನ್ನ ಮಗಳಾದ ಪ್ರಿಯಾಂಕಾ ಇವಳೀಗೆ 2009 ನೇ ಸಾಲಿನ ಮೇ ತಿಂಗಳಲ್ಲಿ ಪರಮೇಶ್ವರ ತಂದೆ ಚಂದ್ರಶಾ ಮಲಶೇಟ್ಟಿ ಸಾ|| ಧುತ್ತರಗಾಂವ ಇವರೊಂದಿಗೆ ವಿವಾಹ ಮಾಡಿ ಕೊಟ್ಟಿರುತ್ತೇವೆ, ಮದುವೆ ಕಾಲಕ್ಕೆ 50,000/- ರೂಪಾಯಿ ಹುಂಡಾ, 3 ತೊಲೆ ಬಂಗಾರ ಇವುಗಳನ್ನು ವರದಕ್ಷಿಣೆ ಅಂತ ನೀಡಿದ್ದು ಕರಾರಿನಂತೆ ಇನ್ನು 2 ತೊಲೆ ಬಂಗಾರ ಕೊಡುವದು ಬಾಕಿ ಇತ್ತು, ಕೊಡಬೇಕಾದ ಇನ್ನು 2 ತೊಲೆ ಬಂಗಾರ, ಇನ್ನು 50000/- ರೂಪಾಯಿ ಇವುಗಳನ್ನು ನಿನ್ನ ತವರು ಮನೆಯಿಂದ ತರುವಂತೆ ನನ್ನ ಮಗಳಿಗೆ ಗಂಡನಾದ ಪರಮೇಶ್ವರ ತಂದೆ ಚಂದ್ರಶಾ ಮಲಶೇಟ್ಟಿ, ಅತ್ತೆ ಶಾಂತಾಬಾಯಿ ಗಂಡ ಪರಮೇಶ್ವರ ಮಲಶೇಟ್ಟಿ, ಭಾವನಾಧ ರಾಜೇಂದ್ರ ತಂದೆ ಚಂದ್ರಶಾ ಮಲಶೇಟ್ಟಿ, ನಗೇಣಿಯಾದ ಪ್ರೇಮಿಳಾ ಗಂಡ ರಾಜೇಂದ್ರ ಮಲಶೇಟ್ಟಿ, ನಾದಿನಿಯಾದ ಜಗದೇವಿ ತಂದೆ ಚಂದ್ರಶಾ ಮಲಶೇಟ್ಟಿ ಇವರೆಲ್ಲರೂ ಮದುವೆಯಾದ 3 ತಿಂಗಳ ನಂತರ ಪ್ರಿಯಾಂಕಳಿಗೆ ವರದಕ್ಷಿಣೆ ಕಿರುಳ ಕೊಟ್ಟು ದಿನಾಂಕ 13/08/2015 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಹ್ನ 05.00 ಪಿ.ಎಮ ಮಧ್ಯದ ಅವಧೀಯಲ್ಲಿ ಹೊಡೆ ಬಡೆ ಮಾಡಿ ಕೊಲೆ ಮಾಡಿ ತಾವು ಮಾಡಿದ ಕೊಲೆಯನ್ನು ಮುಚ್ಚಿಹಾಕಲು ಮತ್ತು ಸಾಕ್ಷಿ ನಾಶ ಪಡಿಸಲು ಪ್ರಿಯಾಂಕ ಇವಳು ಊರುಲು ಹಾಕಿಕೊಂಡು ಸತ್ತಿರುತ್ತಾಳೆ ಅಂತ ಸುಳ್ಳು ಸುದ್ದಿ ಹಬ್ಬಿರುತ್ತಾರೆ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಲಿಖಿತ ಫಿರ್ಯಾದಿ ಸಾರಾಂಶದ ಮೇರೆಗೆ ನಿಂಬರ್ಗಾ ಪೊಲೀಸ ಠಾಣೆ ಗುನ್ನೆ ನಂ. 95/2015 ಕಲಂ 323, 498 (), 506, 302, 201, 304 (ಬಿ), ಸಂ 149 ಐಪಿಸಿ ಮತ್ತು 3 , 4 ಡಿಪಿ ಕಾಯ್ದೆ 1961 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಕಮಲಾಪೂರ ಪೊಲೀಸ ಠಾಣೆ : ದಿನಾಂಕ:14-08-2015 ರಂದು ಬೆಳಿಗ್ಗೆ  09-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಶಿವಲಿಂಗಪ್ಪಾ ತಂದೆ ಸಂಗಪ್ಪಾ ಪೊಲೀಸ ಪಾಟೀಲ ಸಾ: ದಿನಸಿ (ಕೆ) ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ             ನಾನು ನನ್ನ ವ್ಯವಹಾರಕ್ಕೆ ಅನುಕುಲವಾಗಲು ಮತ್ತು ನಾನು ಖರಿದಿಸಿದ ವಸ್ತುಗಳನ್ನು ಸಾಗಾಟ ಮಾಡುವ ಕುರಿತು ಒಂದು ಲಾರಿ ನಂ ಎಪಿ 22 ಡಬ್ಲೂ 0844 ನೇದ್ದು 6 ಲಕ್ಷ 70 ಸಾವೀರ ರುಪಾಯಿಗೆ ಖರಿದಿ ಮಾಡಿದ್ದು ಸದರಿ ಲಾರಿಯನ್ನು ನನ್ನ ವ್ಯವಹಾರ ಸಂಬಂದ ಬಳಕೆ ಮಾಡುತ್ತಾ ಬಂದಿದ್ದು ಇರುತ್ತದೆ. ಸದರಿ ನನ್ನ ಲಾರಿ ಮೇಲೆ ಶ್ರೀ ಸಿದ್ದು ತಂದೆ ಈರಣ್ಣ ಬಿರಾದಾರ ಸಾ: ಹುಣಚಕೇರಾ ಇತನು ಚಾಲಕ ಅಂತ ಕೆಲಸ ಮಾಡಿಕೊಂಡು ಬಂದಿದ್ದು ಮತ್ತು ಕ್ಲೀನರ ಅಂತ ನಮ್ಮ ಗ್ರಾಮದ ಗುಂಡಪ್ಪ ತಂದೆ ಲಕ್ಷ್ಮಣ ಇತನು ಕೆಲಸ ಮಾಡಿಕೊಂಡಿದ್ದು ನಮ್ಮ ಲಾರಿ ಬಾಡಿಗೆ ಮೇಲೆ ಹೊಗದೆ ಇದ್ದರೆ ಲಾರಿಯನ್ನು ಕಮಲಾಪೂರ ಗ್ರಾಮದ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸುತ್ತಾ ಬಂದಿದ್ದು ಇರುತ್ತದೆ.ನಮ್ಮ ಲಾರಿ ಚಾಲಕನಾದ ಶ್ರೀ ಸಿದ್ದು ಬಿರಾದಾರ ಇತನು ದಿನಾಂಕ 09.08.2015 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ಲಾರಿ ನಂ ಎಪಿ 22 ಡಬ್ಲೂ 0844 ನೇದ್ದು ಕಮಲಾಪೂರ ಗ್ರಾಮದ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿ ನನಗೆ ಪೂನ ಮಾಡಿ ತಿಳಿಸಿದ್ದೆನೆಂದರೆ ನಾನು ತನ್ನ ಗ್ರಾಮಕ್ಕೆ ಹೋಗುತ್ತಿದ್ದು ನಾಳೆ ಬೆಳ್ಳಿಗ್ಗೆ ಬಂದು ಲಾರಿ ತೆಗೆದುಕೊಂಡು ಹೊಗುತ್ತೆನೆ ಅಂತ ಹೇಳಿ ನಮ್ಮ ಲಾರಿಯಲ್ಲಿ ಸದರಿ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿ ಚಾಲಕನು ತನ್ನ ಗ್ರಾಮಕ್ಕೆ ಹೊಗಿದ್ದು ಕ್ಲೀನರ ಇತನು ನಮ್ಮ ಗ್ರಾಮಕ್ಕೆ ಬಂದಿದ್ದು ಇರುತ್ತದೆ. ದಿನಾಂಕ 10.08.2015 ರಂದು ಬೆಳ್ಳಿಗ್ಗೆ 7 ಗಂಟೆಯ ಸುಮಾರಿಗೆ ನಮ್ಮ ಲಾರಿ ಚಾಲಕನಾದ ಸಿದ್ದು ಬಿರಾದಾರ ಇತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ಮಾಟುರ ಪೇಟ್ರೊಲ ಪಂಪದಲ್ಲಿ ನಿಲ್ಲಿಸಿದ ನಮ್ಮ ಲಾರಿ ಕಾಣುತ್ತಿಲ್ಲ ಅಂತ ಹೆಳಿದ್ದು ಆಗ ನಾನು ಗಾಬರಿಗೊಂಡು ಕ್ಲೀನರನನ್ನು ಕರೆದುಕೊಂಡು ಕಮಲಾಪೂರದಲ್ಲಿರುವ ಮಾಟೂರ ಪೇಟ್ರೋಲ ಪಂಪಕ್ಕೆ ಬಂದು ನೋಡಲು ನಮ್ಮ ಲಾರಿ ಇರಲಿಲ್ಲ. ನಾನು ನಮ್ಮ ಚಾಲಕ ಮತ್ತು ಕ್ಲೀನರ ಕೂಡಿಕೊಂಡು ಎಲ್ಲಾ ಕಡೆಗೆ ಹುಡುಕಾಡಿದ್ದು ಪತ್ತೆಯಾಗಿರುವದಿಲ್ಲ. ಸದರಿ ನಮ್ಮ ಲಾರಿ ಪತ್ತೆ ಕುರಿತು ನಾವು ಹುಮನಾಬಾದ, ಬಸವಕಲ್ಯಾಣ, ಬೀದರ ಉಮಗರ್ಾ ಇತ್ಯಾದಿ ಕಡೆಗಳಲ್ಲಿ ಹುಡುಕಾಡಿದ್ದು ಮತ್ತು ನಮಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ದಿನಾಂಕ 09.08.2015 ರಂದು ರಾತ್ರಿ 10 ಗಂಟೆಯಿಂದ ದಿನಾಂಕ 10.08.2015 ರಂದು ಬೆಳ್ಳಿಗ್ಗೆ 7 ಗಂಟೆಯ ಮಧ್ಯದಲ್ಲಿ ಮಾಟುರ ಪೇಟ್ರೋಲ ಪಂಪದಲ್ಲಿ ನಿಲ್ಲಿಸಿದ್ದ ನಮ್ಮ ಲಾರಿ ನಂ ಎಪಿ 22 ಡಬ್ಲೂ 0844 :ಕಿ: 6 ಲಕ್ಷ 70 ಸಾವೀರ ರೂಪಾಯಿ ನೇದ್ದು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಲಾರಿ ಪತ್ತೆ ಕುರಿತು ಹೋಗಿದ್ದರಿಂದ ಫಿಯರ್ಾದಿ ನೀಡಲು ತಡವಾಗಿರುತ್ತದೆ. ಕಾರಣ ಮಾನ್ಯರವರು ಕಳುವಾದ ನಮ್ಮ ಲಾರಿ ಪತ್ತೆ ಮಾಡಿಕುಡಬೇಕು ಮತ್ತು ನಮ್ಮ ಲಾರಿ ಕಳ್ಳತನ ಮಾಡಿಕೊಂಡು ಹೋದವರ ವಿರುಧ್ದ ಕಾನುನ ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ಫಿರ್ಯಾಧ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ-106/2015 ಕಲಂ.379,.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ. 

KALABURAGI DISTRICT REPORTED CRIMES

ಅಂಚೆ ನೌಕರ ಸಿದ್ರಾಮಪ್ಪಾ ಹೂಗಾರ ಈವರನ್ನು ಕೊಲೆ ಮಾಡಿದ ಆರೋಪಿತರ ಬಂಧನ.
ಫರತಾಬಾದ ಠಾಣೆ : ದಿನಾಂಕ 02/7/2015 ರಂದು ರಾತ್ರಿ ಶ್ರೀ ಚೇತನ ತಂದೆ ಸಿದ್ರಾಮಪ್ಪ ಹೂಗಾರ ಸಾ: ಹಡಗಿಲ್ ಹಾರುತಿ ಇವರ ತಂದೆಯಾದ ಶ್ರೀ ಸಿದ್ರಾಮಪ್ಪ ಹೂಗಾರ ಇವರು ಕಲಬುರಗಿ ನಗರದಲ್ಲಿರುವ ಜಗತ್ ಪೊಸ್ಟ ಆಪೀಸನಲ್ಲಿ ಮೇಲ ಓಚರ ಅಂತಾ ಕಳೆದ 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಂಕ 1-7-2015 ರಂದು  ಬೆಳಿಗ್ಗೆ ಕರ್ತವ್ಯಕ್ಕೆ ಹೋಗಿದ್ದು ಮರಳಿ ರಾತ್ರಿ 10-00 ಗಂಟೆ ಆದರೂ ಮನೆಗೆ ಬಾರದ ಕಾರಣ ಅವರ  ಮೊಬಾಯಿಲಗೆ ಪೊನ್ ಮಾಡಿದಾಗ ಮೊಬಾಯಿಲ್ ಹಡಗಿಲ್ ಹಾರುತಿ ಬಸ್ಸ ನಿಲ್ದಾಣ ಹಿಂದುಗಡೆ ರಿಂಗ್ ಆಗತೊಡಗಿದ್ದು ಗಾಬರಿಯಾಗಿ ನಮ್ಮೂರಿನ ಕೆಲವು ಜನರೊಂದಿಗೆ ಹೋಗಿ  ಬ್ಯಾಟರಿ ಬೆಳಕು ಹಾಕಿ ನೋಢಲಾಗಿ ತನ್ನ ತಂ ಸಿದ್ರಾಮಪ್ಪ ಇವರ ಶವ ಬಿದಿದ್ದು ಕುತ್ತಿಗೆಗೆ, ಹೊಟ್ಟೆಯಲ್ಲಿ, ಎಡ ಕಪಾಳಿಗೆ, ಎದೆಗೆ ಹರಿತವಾದ ಆಯುಧಗಳಿಂಧ ಹೊಡೆದು ಕೊಲೆ ಮಾಡಿರುತ್ತಾರೆ ನನ್ನ ತಂದೆ ಇಲಾಖೆಯಲ್ಲಿ ನಿಷ್ಠುರವಾಗಿ ಕರ್ತವ್ಯ ನಿರ್ವಹಿಸಿದ್ದರಿಂದ ಯಾರೋ ಅವರಿಗೆ ಹರಿತವಾದ ಆಯುದದಿಂದ ಹೊಡದು ಕೊಲೆ ಮಾಡಿ ನಮ್ಮೂರ ಬಸ್ಸ ನಿಲ್ದಾಣದ ಹಿಂದುಗಡೆ   ಬಿಸಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದ ಪತ್ತೆ ಕುರಿತು ಮಾನ್ಯ ಶ್ರೀ ಅಮಿತ್ ಸಿಂಗ್. ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲಬುರಗಿ, ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಕಲಬುರಗಿ ಹಾಗು ಮಾನ್ಯ ಶ್ರೀ ವಿಜಯ ಅಂಚಿ ಡಿ.ಎಸ್.ಪಿ ಗ್ರಾಮಿಣ ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ  ಶ್ರೀ ಜೆ. ಹೆಚ್ ಇನಾಮದಾರ ಸಿಪಿಐ ಎಂ. ಬಿ ನಗರ ವೃತ್ತ ಕಲಬುರಗಿ ರವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ, ಶ್ರೀ ಜಿ.ಎಸ್ ರಾಘವೇಂದ್ರ ಪಿ.ಎಸ್.ಐ ವಿಶ್ವವಿದ್ಯಾಲಯ ಪೊಲೀಸ ಠಾಣೆ, ಶ್ರೀ ಹೇಮಂತ ಪಿ.ಎಸ್.ಐ ಮಿರಿಯಾಣ ಪೊಲೀಸ ಠಾಣೆ, ಶ್ರೀ ನಾಗಭೂಷಣ ಎ.ಎಸ್.ಐ ಫರಹತಾಬಾದ ಪೊಲೀಸ ಠಾಣೆ ಹಾಗು ಸಿಬ್ಬಂದಿಯವರಾದ ಶ್ರೀ ಶಂಕರ ಹೆಚ್.ಸಿ, ಹಣಮಂತ್ರಾಯ ಹೆಚ್.ಸಿ, ಅಜರ್ುನ ಎ.ಹೆಚ್.ಸಿ, ಅರ್ಜುನಸಿಂಗ ಸಿ.ಹೆಚ್.ಸಿ, ಮಲ್ಲಿಕಾರ್ಜುನ ಪಿಸಿ, ಸಂತೋಷ ಪಿಸಿ, ದೇವಪ್ಪ ಪಿಸಿ, ಮಲ್ಲಿನಾಥ ಪಿಸಿ, ಪ್ರಭು ಪಿಸಿ ರವರು ಕೂಡಿಕೊಂಡು ಮಾಹಿತಿ ಸಂಗ್ರಹ ಹಾಗು ಮೊಬಾಯಿಲ್ ಕರೆಗಳ ಆಧಾರದ ಮೇಲೆ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಆರೋಪಿತರಾದ 1) ಚೇತನ ತಂದೆ ಸಿದ್ರಾಮಪ್ಪಾ ಹೂಗಾರ 2) ಬಸವರಾಜ ತಂದೆ ಶಂಕರ  ಹೂಗಾರ 3) ಲಕ್ಷ್ಮೀಕಾಂತ ತಂದೆ ಕಲ್ಯಾಣಿ ಹೂಗಾರ    ಮೂವರು ಸಾ : ಹಾರುತಿ ಹಡಗಿಲ ಇವರು ತಾವು ಮಡಿರುವ ತಪ್ಪನ್ನು ಒಪ್ಪಿಕೊಂಡಿದ್ದು ಮೂವರ ಜನರು ಪರಸ್ಪರ ಸಂಬಂದದಲ್ಲಿ ಅಣ್ಣ ತಮ್ಮಂದಿರಾಗಿರುತ್ತಾರೆ. ಆರೋಪಿ ಚೇತನ್ ಈತನು ತನ್ನ ತಂದೆ ಮೃತ ಸಿದ್ರಾಮಪ್ಪ ಹೂಗಾರ ಇವರು ಬೇರೊಬ್ಬ ಹೆಂಗಸ್ಸಿನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರಿಂದ ತಂದೆಯ ಮೇಲೆ ದ್ವೇಷ ಭಾವನೆ ಹೊಂದಿ ಸಂಬಂಧದಲ್ಲಿ ಅಣ್ಣ ತಮ್ಮಂದಿರರಾಗಬೇಕಾದ ಬಸವರಾಜ, ಲಕ್ಷ್ಮಿಕಾಂತ ಇವರನ್ನು ಜೊತೆ ಗೂಡಿಸಿಕೊಂಡು ಹೆತ್ತ ತನ್ನ ತಂದೆಯನ್ನು ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಿರುತ್ತಾರೆ. ನಂತರ ತನಗೇನು ಗೊತ್ತಿಲ್ಲ ಎಂಬಂತೆ ನಟಿಸುತ್ತಾ ತಾನೇ ದೂರು ದಾಖಲಿಸಿ ಓಡಾಡಿಕೊಂಡಿದ್ದು ಮೊಬಾಯಿಲ್ ಕರೆಗಳನ್ನು ವಿಶ್ಲೇಷಣೆ ಮಾಡಿದ ತನಿಖಾಧಿಕಾರಿಗಳು ಈತನೇ ಆರೋಪಿತನು ಅಂತಾ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಪ್ರಕರಣದಲ್ಲಿ ತನಿಖೆ ಕೈಕೊಂಡು ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಆಯುಧ ಹಾಗು ಬುಲೇರೋ ವಾಹನ ಜಪ್ತು ಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 13-07-2015 ರಂದು ರಾತ್ರಿ ನಾನು ನನ್ನ ಹೆಂಡತಿ ನನ್ನ ಕೀರಿಯ ಮಗ ಹುಲಗಪ್ಪ ಮೂರು ಜನ ಮನೆಯಲ್ಲಿ ಮಾತಾಡುತ್ತಾ ಕುಳಿತಾಗ ನನ್ನ ಮಗನಾದ ರಾಜಕುಮಾರನು ಹುಲಗಪ್ಪನ ಫೋನಿಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ನಮ್ಮೂರ ಅಲಿಸಾಬ ತಂದೆ ನಬಿಸಾಬ ಪಟ್ಟೆದಾರ ಮತ್ತು ಮುಸ್ತಾಫ್ ತಂದೆ ಚಾಂದಸಾಬ ಮುಜಾವರು ಇವರು ಇಫ್ತಿಯಾರ್ ಊಟಕ್ಕೆ ಕರೆದಿದ್ದು ಆಂದೊಲಾದಲ್ಲಿ ಊಟ ಮಾಡಿ ನಾಳೆ ಮುಂಜಾನೆ ಬರುತ್ತೆನೆ, ನೀವು ಊಟ ಮಾಡಿ ಮಲಗಿರಿ ಅಂತಾ ತಿಳಿಸಿದ್ದು ನನ್ನ ಮಗನಾದ ರಾಜಕುಮಾರನಿಗೆ ಊಟ ಮಾಡಲೆಂದು ಅಲಿಸಾಬ ಹಾಗು ಸಂಗಡಿಗರು ಅಲಿಸಾಬನ ಕಾರಿನಲ್ಲಿ ಕರೆದುಕೊಂಡು ಹೊಗುವದನ್ನು ಫೋನ್ ಬಂದಿದ್ದರಿಂದ ನನ್ನ ಮಗ ಹುಲಗಪ್ಪನು ನಮ್ಮೂರ ಪಂಚಾಯಿತಿ ಕಟ್ಟೆಯ ಮೇಲೆ ಲಕ್ಷ್ಮಣ ದೋರಿ ಇವರೋಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಹೋಗುವದನ್ನು ನೋಡಿದ್ದು ನನ್ನ ಮಗನಾದ ರಾಜಕುಮಾರನು ಅಂದು ರಾತ್ರಿ ಹೋದವನು ಮರುದಿನ ಬರಲೆ ಇಲ್ಲಾ. ದಿನಾಂಕ 14-07-2015 ರಂದು ಬೇಳಿಗ್ಗೆ 10 ಗಂಟೆಯ ಸುಮಾರಿಗೆ ರಾಜಕುಮಾರನ ಮೋಬೈಲ್ ಗೆ ಫೊನ್ ಮಡಿದಾಗ ಸ್ವಿಚ್ ಆಫ್ ಅಂತಾ ಹೇಳಿದ ಮೇಲೆ ಅಲಿಸಾಬ ಇವರ ಪೋನಿಗೆ ಕರೆ ಮಾಡಿ ನನ್ನ ಮಗನಾದ ಮದನಗೋಪಲನು ನನ್ನ ತಮ್ಮನಿಗೆ ಕರೆದುಕೊಂಡು ಹೋಗಿ ಎಲ್ಲಿ ಬಿಟ್ಟಿದ್ದಿರಿ ಅಂತಾ ಕೇಳಿದಾಗ ಅಲಿಸಾಬ ಮತ್ತು ಮುಸ್ತಫ ಇವರು ಹಾರಿಕೆ ಉತ್ತರ ನೀಡಿ ನಿಮ್ಮ ತಮ್ಮನಿಗೆ ನಿನ್ನೆ ರಾತ್ರಿನೆ ಮನೆಗೆ ಹೋಗು ಅಂತಾ ಊರಲ್ಲಿ ತಂದು ಬಿಟ್ಟಿದ್ದು ಎಲ್ಲಿ ಹೋಗಿದ್ದಾನೆ ನಮಗೆನೂ ಗೊತ್ತು ಅಂತಾ ಹೇಳಿ ಫೋನ್ ಕಟ್ ಮಾಡಿದರು. ಅಂದಿನಿಂದ ನಾವು ನಮ್ಮ ಸಂಬಂದಿಕರು ಇರುವ ಕಡೆಗೆ ಹುಡಕಾಡಿ ಕೇಳಲಾಗಿ ಎಲ್ಲಿಯೂ ಸಿಗಲಿಲ್ಲ ಅದರಂತೆ ನನ್ನ ಮಗನಾದ ರಾಜಕುಮಾರನಿಗೆ ಕರೆದುಕೊಂಡು ಹೋದ ಅಲಿಸಾಬ ಹಾಗು ಸಂಗಡಿಗರಿಗೂ ಕೆಳಿದರೆ ಸರಿಯದ ಉತ್ತರ ನೀಡಲಿಲ್ಲ ಇಂದು ದಿನಾಂಕ 16-07-2015 ರಂದು ಮುಂಜಾನೆ 8 ಗಂಟೆಯ ಸೂಮಾರಿಗೆ ನಾವು ಊರಲ್ಲಿದ್ದಾಗ ನಮ್ಮ ಸಂಬಂದಿಕನಾದ ಗಂಗಣ್ಣ ದೋರೆ ಹದನೂರ ಇವರು ಫೊನ್ ಮಾಡಿ ನಮ್ಮೂರ ಹಳ್ಳದಲ್ಲಿ ಯಾವುದೋ ಒಂದು ಹೆಣ ಬಿದ್ದಿದೆ ಅಂತಾ ತಿಳಿಸಿದ್ದರಿಂದ ನಾನು ನನ್ನ ಮಕ್ಕಳು ಎಲ್ಲರೂ ಕೂಡಿಕೊಂಡು ಹೋಗಿ ಹದನೂರ ಹಳದ ಬ್ರಿಜ್ ಕೆಳಗೆ ಇದ್ದ ಹೇಣವನ್ನು ಹೋಗಿ ನೋಡಲಾಗಿ ಅಲ್ಲಿ ಬಿದ್ದಿರುವ ಶವದ ಮೇಲೆ ಇರುವ ಬಟ್ಟೆ ಹಾಗು ಮೈ ಕಟ್ಟು ಮತ್ತು ಶವದ ಎಡಗೈನಲ್ಲಿ ನೈಕ್ ಪ್ರೆಂಡ್ಶಿಪ್ ಬೆಲ್ಟ್ ನೋಡಿ ನನ್ನ ಮಗ ರಾಜಕುಮಾರನದ್ದೆ ಅಂತಾ ಖಾತ್ರಿ ಪಡಿಸಿಕೊಂಡಿದ್ದು ನನ್ನ ಮಗನಿಗೆ ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ  ಉದ್ದೆಶದಿಂದ ನೀರಲ್ಲಿ  ಒಗೆದಿದ್ದರಿಂದ ಎರಡು-ಮೂರು ದಿನ ನೀರಲ್ಲಿ ಕೋಳೆತು ಮುಖ, ಕೈ ಕಾಲು, ದೇಹ ಉಬ್ಬಿ ಕೋಳೆತಾಂತಾಗಿದೆ ನನ್ನ ಮಗನಿಗೆ ಕೋಲೆ ಮಾಡಿ ಓಗೆದು ಹೋಗಿದ್ದು ಅದಕ್ಕೆ ಕಾರಣ ತಿಳಿದು ಬಂದಿದ್ದೆನೆಂದರೆ ನನ್ನ ಮಗ ರಾಜಕೂಮಾರನು ನಮ್ಮೂರ ಲಾಲ್ ಬಿ ತಂದೆ ಚಾಂದಸಾಬ ಮೂಜಾವಾರ ಇವಳೋಂದಿಗೆ ಶಾಲೆ ಕಲಿಯುವಾಗಿನಿಂದ ಸ್ವಲ್ಪ ಸಲುಗೆಯಿಂದ ಮಾತಾನಾಡುತ್ತಿದ್ದನು. ಇತ್ತಿಚೀಗೆ ಸ್ವಲ್ಪ ಮೋಬೈಲ್ ನಲ್ಲಿ ಮೇಸೆಜ್ ಕೂಡ ಮಾಡುತ್ತಿದ್ದರು. ಅದೆ ತಪ್ಪು ತಿಳೀದುಕೊಂಡು ಇದೆ ಉದ್ದೆಶದಿಂದ ನನ್ನ ಮಗನಿಗೆ ಊಟಕ್ಕೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿ ಒಂದು ಗೋಣಿ ಚೀಲದಲ್ಲಿ ಹಾಕಿ ಹದನೂರ ಹಳ್ಳದಲ್ಲಿ ಒಗೆದಿದ್ದು ಇರುತ್ತದೆ. ನನ್ನ ಮಗ ರಾಜಕುಮಾರನಿಗೆ 1) ಅಲಿಸಾಬ 2) ಮುಸ್ತಫಾ 3) ಚಂದಾವಲಿ 4) ಅಬ್ದುಲ್ 5) ರಿಯಾಜ್ 6) ಸದ್ದಾಂ ಇವರೆಲ್ಲರೂ ಕೂಡಿ ಕರೆದುಕೊಂಡು ಹೊಗಿ ಕೋಲೆ ಮಾಡಿ ಮುಚ್ಚಿಯಾಕಲು ಪ್ರಯತ್ನಿಸಿರುತ್ತಾರೆ ಅಂತಾ ಶ್ರೀ ಹಣಮಂತ್ರಾಯ ತಂದೆ ಭೀಮರಾಯ ದೋರಿ ಸಾ : ವಡಗೆರಾ ತಾ : ಜೇವರ್ಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ.ಜಾಫರ್‌ ಅಲಿ ತಂದೆ ಖಾಸಿಂ ಅಲಿ ಲಾಡಖಾನ ಸಾ: ಬಂದರವಾಡ ಗಲ್ಲಿ ಆಳಂದ ಜಿ: ಕಲಬುರಗಿ ರವರು ಆಳಂದದ  ಚೌಡಪ್ಪ ತಂದೆ ನಾಗಣಪ್ಪಾ ಅಮನೆ ಇವರ ಟವರಸ್‌ ಲಾರಿ ನಂ ಎಮ್‌ಎಚ್‌ 11 ಎಎಲ್‌ 5455 ಲಾರಿ ನೇದ್ದರ ಮೇಲೆ 5-6 ತಿಂಗಳಿಂದ ಚಾಲಕ ಅಂತಾ ಕೆಲಸ ಮಾಡುತ್ತಿದ್ದು ದಿನಾಂಕ 12/08/2015 ರಂದು ರಾತ್ರಿ 11:00 ಗಂಟೆಗೆ ಸದರಿ ಲಾರಿಯನ್ನು ಆಳಂದ-ಉಮರ್ಗಾ ರೋಡಿಗೆ ಇರುವ ಕಸ್ತೂರಿ ಬಾರ್ ಎದುರುಗಡೆ ಲಾರಿ ನಿಲ್ಲಿಸಿ ಮನೆಗೆ ಹೋಗಿ ವಿಶ್ರಾಂತಿ ಪಡೆದು ನಂತರ ಎಂದಿನಂತೆ ಬೆಳಿಗ್ಗೆ 5 ಗಂಟೆಗೆ ಬಂದು ಲಾರಿ ನೋಡಲಾಗಿ ಸದರಿ ಲಾರಿಯು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲಾ ನಂತರ ನಮ್ಮ ಮಾಲಿಕರಾದ ಚೌಡಪ್ಪಾ ತಂದೆ ನಾಗಣಪ್ಪಾ ಅಮನೆ ರವರಿಗೆ ಪೋನ ಮಾಡಿ ವಿಷಯ ತಿಳಿಸಿದಾಗ ನಾನು ಮತ್ತು ಅವರು  ಕೂಡಿ ಎಲ್ಲಾ ಹುಡುಕಾಡಿದರೂ ನಮ್ಮ ಲಾರಿಯ ಬಗ್ಗೆ ಯಾವುದೆ ಮಾಹಿತಿ ದೊರತಿರುವುದಿಲ್ಲಾ . ದಿನಾಂಕ 12/08/2015 ರ ರಾತ್ರಿ 11 ಗಂಟೆಯಿಂದ ದಿನಾಂಕ 13/08/2015 ರ ಬೆಳಗಿನ 5 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದರ  ಅಂದಾಜು ಅ:ಕಿ: 11,00000  ಇರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ  
ಅಫಜಲಪೂರ ಠಾಣೆ :  ಶ್ರೀಮತಿ ಸುರೇಖಾ ಗಂಡ ಯಲ್ಲಪ್ಪ ಕಟ್ಟಿಮನಿ ಸಾ : ಚಿಟ್ಟರಕಿ ತಾ : ಸಿಂದಗಿ ಹಾ.ವ. ಶಿರವಾಳ ತಾ : ಅಫಜಲಪೂರ ರವರನ್ನು ಎರಡು ವರ್ಷದ ಹಿಂದೆ ಸಿಂದಗಿ ತಾಲೂಕಿನ ಚಟ್ಟರಕಿ ಗ್ರಾಮದ ಯಲ್ಲಪ್ಪ ತಂದೆ ಶರಣಪ್ಪ ಕಟ್ಟಿಮನಿ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಇನ್ನೂ ಮಕ್ಕಳಾಗಿರುವುದಿಲ್ಲ. ಮದುವೆಯಾದ ಒಂದು ವರ್ಷದ ವರೆಗೆ ನನಗೆ ನನ್ನ ಗಂಡ ಮತ್ತು ನಮ್ಮ ಅತ್ತೆಯಾದ ಚಂದ್ರಬಾಯಿ ಗಂಡ ಶರಣಪ್ಪ ಕಟ್ಟಿಮನಿ ಇಬ್ಬರು ಚೆನ್ನಾಗಿ ಪ್ರೀತಿ ಪ್ರೇಮದಿಂದ ನೋಡಿಕೊಂಡಿರುತ್ತಾರೆ, ಈಗ 1 ವರ್ಷದಿಂದ ನನ್ನ ಗಂಡ ಮತ್ತು ನಮ್ಮ ಅತ್ತೆ ಇಬ್ಬರು  ನನಗೆ ನೀನು ಸರಿಯಾಗಿಲ್ಲ, ನಮಗ್ಯಾಕ ಮೂಲಾಗಿದಿ, ನೀನು ಸಿಗದಿದ್ದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆ ಅಂತಾ ನನ್ನ ಗಂಡ ಹಾಗೂ ನಮ್ಮ ಅತ್ತೆ  ನಿನು ನೋಡಲು ಚೆನ್ನಾಗಿಲ್ಲ, ನಿನು ನಮ್ಮ ಮನೆಗೆ ಹೊಂದುವುದಿಲ್ಲ ಎಂದು ವಿಕಾರಣ ನನಗೆ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ.ನಾನು ಸದರಿ ವಿಷಯ ನಮ್ಮ ತಂದೆ ತಾಯಿಯವರಿಗೆ ತಿಳಿಸಿರುತ್ತೆನೆ.ನನ್ನ ಗಂಡ ಹಾಗೂ ಅತ್ತೆ ಕೊಡುವ ಕಿರುಕುಳ ತಾಳಲಾರದೆ ನಾನು ಈಗ 8 ದಿವಸದಿಂದೆ ನನ್ನ ತವರು ಮನೆಯಾದ ಶಿರವಾಳ ಗ್ರಾಮಕ್ಕೆ ಬಂದು ನನ್ನ ತವರು ಮನೆಯಲ್ಲಿರುತ್ತೇನೆ ನಿನ್ನೆ ದಿನಾಂಕ 12/08/2015 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಎಂದಿನಂತೆ ನಮ್ಮ ತಂದೆ ತಾಯಿ ಇಬ್ಬರು ಹೊಲಕ್ಕೆ ಹೊಗಿದ್ದು  ನಾನು ಒಬ್ಬಳೆ ಮನೆಯಲಿದ್ದಾಗ ನನ್ನ ಗಂಡ ಯಲ್ಲಪ್ಪ ಹಾಗು ನಮ್ಮ ಅತ್ತೆ ಚಂದ್ರಬಾಯಿ ಇವರು ಚಟ್ಟರಗಿ ಗ್ರಾಮದಿಂದ ನನ್ನ ತವರು ಮನೆಗೆ ಬಂದಿದ್ದು ಆಗ ಅಂದಾಜ ಸಮಯ 10.30 ಎಎಮ್ ಆಗಿರಬಹುದು ನಾನು ಸದರಿಯವರಿಗೆ ನೋಡಿ ಕುಡಿಯಲು ನೀರು ತಗೆದುಕೊಂಡು ಮನೆಯಿಂದ ಹೊರಗೆ ಬಂದಾಗ ನನ್ನ ಗಂಡ ನನಗೆ ಏನೇ ರಂಡಿ ನೀನು ಯಾರಿಗಿ ಕೇಳಿ ನಿನ್ನ ತವರಮನಿಗಿ ಬಂದಿದಿ ಬೊಸಡಿ ಅಂತ ಬೈಯುತಿದ್ದಾಗ ನನ್ನ ಗಂಡ ಬಾಯಿ ಮಾಡುವ ಸಪ್ಪಳ ಕೇಳಿ ಅದೆ ಸಮಯಕ್ಕೆ ನಮ್ಮ ಓಣಿಯ ಅಪ್ಪಾಶಾ ತಂದೆ ಲಕ್ಷ್ಮಣ ಗಾಡಿ ವಡ್ಡರ ಇವರು ಬಂದು ನನ್ನ ಗಂಡನಿಗೆ ಯಾಕ್ರಿ ಬಾಯಿ ಮಾಡುಕತ್ತಿರಿ ಅಂತ ಕೇಳುತಿದ್ದಾಗ ನಮ್ಮ ಅತ್ತೆ ಚಂದ್ರಬಾಯಿ ಇವಳು ನನಗೆ ಈ ರಂಡಿ ಯಾರಿಗೂ ಹೇಳದೆ ಕೇಳದೆ ನಮ್ಮ ಮನಿ ಬಿಟ್ಟು ತವರ ಮನಿಗಿ ಬಂದಾಳ ಅಂತ ಅಂದು ತನ್ನ ಕೈಯಿಂದ ನನ್ನ ಕಪಾಳ ಮ್ಯಾಲ ಹೊಡೆಯುತಿದ್ದಾಗ ಅಪ್ಪಾಶಾ ಇವರು ಸದರಿಯವರಿಗೆ ಯಾಕೆ ಜಗಳ ಮಾಡ್ತಿರಿ ಅವರ ತಂದೆ ತಾಯಿ ಬರ್ಲಿ ಮಾತಾಡೋಣ ಅಂತ ಅನ್ನುತಿದ್ದಾಗ ನಮ್ಮ ಅತ್ತೆ ಈ ರಂಡಿ ಇಲ್ಲೇ ಇರ್ಲಿ ನಮ್ಮ ಮನಿಗೆ ಬಂದರೆ ಜಿವಾನೆ ಹೊಡಿತಿವಿ ಬೋಸಡಿಗೆ ಅಂತ ಅನ್ನುತಿದ್ದಾಗ ನನ್ನ ಗಂಡನು ಈ ರಂಡಿಗಿ ನಾವು ಇನ್ನ ಮುಂದೆ ನಮ್ಮ ಮನ್ಯಾಗ ಇಟ್ಕೊಳಲ್ಲಾ ಅಂತ ಅಂದು ತನ್ನ ಕೈಯಿಂದ ನನ್ನ ಬೆನ್ನ ಮೇಲೆ ಹೊಟ್ಟೆಗೆ ಹೊಡೆಯುತಿದ್ದಾಗ ನಮ್ಮ ಅತ್ತೆ ಕಾಲಿನಿಂದ ನನಗೆ ಒದೆಯುತಿದ್ದಳು ಅಪ್ಪಾಶಾ ಇವರು ನನಗೆ ಹೊಡೆಯುವದನ್ನು ಬಿಡಿಸಿರುತ್ತಾರೆ ಸದರಿಯವರು ನನಗೆ ಈ ರಂಡಿಗಿ ಇನ್ ಉಳಿಗಾಲ ಇಲ್ಲಾ ಇಕಿಗಿ ಖಲಾಸ ಮಾಡ್ತಿವಿ ಅಂತ ಅನ್ನುತ್ತಾ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 12.08.2015 ರಂದು 23:45 ಗಂಟೆಯಿಂದ ದಿ: 13.08.2015 ರಂದು 01:30 ಗಂಟೆಯ ಮಧ್ಯದ ಅವಧಿಯಲ್ಲಿ ನನ್ನ ಗಂಡನಾದ ನಿಂಗಪ್ಪ  ಹಡಪದ ಸಾ|| ಬಳುಂಡಗಿ ಹಾ|||| ಜೇವರಗಿ ಈತನು ತನ್ನ ಮೋಟಾರು ಸೈಕಲ್ ನಂ ಕೆ.ಎ-32,ವಿ-2110 ನೇದ್ದನ್ನು ಮಂದೇವಾಲ ಕಡೆಯಿಂದ ಜೇವರಗಿ ಕಡೆಗೆ ನಡೆಸಿಕೊಂಡು ಜೇವರಗಿ ವಿಜಯಪುರ ರಸ್ತೆ ಮೇಲೆ ಜೇವರಗಿಯ ಹೆಲಿಪ್ಯಾಡ್ ಹತ್ತಿರ ಬರುತ್ತಿದ್ದಾಗ ಎದುರಿನಿಂದ  ಟಾಟಾ ಎಸಿಇ ವಾಹನ ನಂ ಕೆ.ಎ-18,ಬಿ-4408 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಗಂಡನ ಮೋಟಾರು ಸೈಕಲ್‌ ಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಗಂಡನಿಗೆ ಭಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು, ಅಪಘಾತನದ ನಂತರ ವಾಹನ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪ್ರಾಪ್ತಯ ಮೇಲೆ ಅತ್ಯಾಚರ ಮಾಡಿದ ಪ್ರಕರಣ :
C¥sÀd®¥ÀÆgÀ oÁuÉ : ನನಗೆ ಒಟ್ಟು ಮೂರು ಜನ ಮಕ್ಕಳಿದ್ದು, ನನ್ನ ಮಗಳು ಕುಮಾರಿ ಇವಳು 8 ನೇ ತರಗತಿಯ ವರೆಗೆ ಶಾಲೆ ಕಲಿತು ಬಿಟ್ಟಿರುತ್ತಾಳೆ. ಈಗ ಮನೆ ಕೆಲಸ ಮಾಡಿಕೊಂಡಿರುತ್ತಾಳೆ. ನಮ್ಮ ಮನೆಯ ಹತ್ತಿರ ನಮ್ಮ ಸಮಾಜದ ಸಿದ್ರಾಮ ತಂದೆ ಸಾಯಬಣ್ಣ ಜಮಾದಾರ ಇವರ ಮನೆ ಇರುತ್ತದೆ. ಅವರ ಸಂಭಂಧಿಕನಾದ ಮಲ್ಲು ತಂದೆ ಚಂದಪ್ಪ ತೆಗ್ಗಳ್ಳಿ ಸಾ|| ಅಳ್ಳಗಿ (ಬಿ) ಎಂಬಾತನು ಆಗಾಗ ಅವರ ಮನೆಗೆ ಬಂದು ಹೋಗುವುದು ಮಾಡುತ್ತಿರುತ್ತಾನೆ. ಮಲ್ಲು ತೆಗ್ಗಳ್ಳಿ ಈತನು ಅವರ ಮನೆಗೆ ಬಂದು ಹೋಗುವ ಸಮಯದಲ್ಲಿ ನನ್ನ ಮಗಳ ಇವಳೊಂದಿಗೆ ಸಲಿಗೆಯಿಂದ ಮಾತಾಡುವುದು ಮಾಡುತ್ತಿದ್ದುದನ್ನು ನಾನು ನೋಡಿರುತ್ತೇನೆ. ದಿನಾಂಕ 12-08-2015 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡ ಇಬ್ಬರು ಮನೆಯಲ್ಲಿದ್ದಾಗ ನನ್ನ ಮಗಳು ಇವಳು ಹೊಟ್ಟೆ ಬೇನೆಯಾಗುತ್ತಿದೆ ಅಂತಾ ಒದ್ದಾಡುತ್ತಿದ್ದಳು, ನನ್ನ ಮಗಳಿಗೆ ಏನಾಗಿದೆ ಎಂದು ವಿಚಾರಸಿಲಾಗಿ, ಅವಳು ತಿಳಿಸಿದ್ದೆನೆಂದರೆ ದಿನಾಂಕ 08-08-2015 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ನಿಂತಿದ್ದಾಗ ಸಿದ್ರಾಮ ಜಮಾದಾರ ಇವರ ಮನೆಗೆ ಬಂದಿದ್ದ ಮಲ್ಲು ತಂದೆ ಚಂದಪ್ಪ ತೆಗ್ಗಳ್ಳಿ ಈತನು ನನ್ನ ಹತ್ತಿರ ಬಂದು, ನನಗೆ ನಮ್ಮ ಮಾವನ ಹೊಲಕ್ಕೆ ಹೋಗಿ ಬರೋಣ ಬಾ ಅಂತಾ ಹೇಳಿ ಕರೆದನು, ಆಗ ನಾನು ಬರುವುದಿಲ್ಲ ಮನೆಯಲ್ಲಿ ಕೆಲಸ ಇದೆ ನನ್ನ ತಂದೆ ತಾಯಿ ಹೊಲಕ್ಕೆ ಹೋಗಿದ್ದಾರೆ, ಮನೆಯಲ್ಲಿ ಯಾರು ಇಲ್ಲ ನಾನು ಬರುವುದಿಲ್ಲ ಅಂತಾ ಹೇಳಿದೆನು, ಆಗ ಅವನು ಹೋಗಿ ಬರೋಣ ನಡೆ ಅಂತಾ ಹೇಳಿದನು, ನಾನು ಬರುವುದಿಲ್ಲಾ ಅಂತಾ ಹೇಳೀದರೂ ಸಹ ನನಗೆ ಹೆದರಿಸಿ ಒತ್ತಾಯಪೂರ್ವಕವಾಗಿ ನನ್ನನ್ನು ಮನೆಯಿಂದ ಅಫಹರಿಸಿಕೊಂಡು ಅವರ ಸಂಬಂದಿಕ ಸಿದ್ರಾಮ ಜಮಾದಾರ ಇವರ ಹೊಲಕ್ಕೆ ಕರೆದುಕೊಂಡು ಹೋದನು, ಹೊಲಕ್ಕೆ ಹೋದ ನಂತರ, ಅಲ್ಲಿ ಯಾರು ಇಲ್ಲದನ್ನು ನೋಡಿ ಮದ್ಯಾಹ್ನ 2:00 ಗಂಟೆ ಸುಮಾರಿಗೆ ನನಗೆ ಅರಣಿಯ ಪಕ್ಕಕ್ಕೆ ಕರೆದುಕೊಂಡು ಹೋಗಿ ಬಲವಂತದಿಂದ ನನಗೆ ನೆಲಕ್ಕೆ ಕೆಡವಿದನು, ಆಗ ನಾನು ಕೂಗಾಡುತ್ತಿದ್ದಾಗ, ಕೂಗಾಡಿದರೆ ಇಲ್ಲಿ ಯಾರು ಕೇಳುವರಿಲ್ಲ ಸುಮ್ಮನೆ ಮಲಗಿಕೊ ಅಂತಾ ನನ್ನ ಬಾಯಿ ಒತ್ತಿ ಹಿಡಿದು ಬಲತ್ಕಾರದಿಂದ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯವೆಸಗಿರುತ್ತಾನೆ. ಮತ್ತು ಈ ವಿಷಯವನ್ನು ನಿಮ್ಮ ಮನೆಯವರಿಗಾಗಲಿ ಮತ್ತೆ ಬೇರೆ ಯಾರಿಗಾಗಲಿ ಹೇಳಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ, ಅಂತಾ ತಿಳಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.