POLICE BHAVAN KALABURAGI

POLICE BHAVAN KALABURAGI

21 May 2016

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ :ಶ್ರೀ ಸಾಜೀದ ಅಹ್ಮದ ತಂದೆ ಅಬ್ದುಲ ರಜಕ ಅಲಮ ಸಾ: ನಬಿಕೇಫೆ ಹತ್ತಿರ ಮೋಮಿನಪೂರ ಕಲಬುರಗಿ ರವರು ತಮ್ಮ ಕೆಲಸದ ಸಂಬಂಧ ಮುಂಜಾನೆ ಸಮಯದಲ್ಲಿ ನಾನು ಮತ್ತು ಮಹ್ಮದ ಇಮ್ರಾನ ತಂದೆ ಮಕ್ಬೂಲ ಮರ್ಚಂಟ ಇಬ್ಬರು ಕೂಡಿ ದಿನಾಂಕ: 08.05.2016 ರಂದು ಕಲಬುರಗಿಯಿಂದ ವಿಜಯಪೂರಕ್ಕೆ ನಮ್ಮ ಕಾರ ನಂ ಕೆಎ-32,ಎನ್-8159 ನೇದ್ದರಲ್ಲಿ ಕುಳಿತು ಜೇವರಗಿ ಮಾರ್ಗವಾಗಿ ವಿಜಯಪೂರಕ್ಕೆ ಹೋಗುತ್ತಿದ್ದೇವು. ಕಾರ ಸೈಯದ ಮಹ್ಮದ ಮತೀನ ತಂದೆ ಅಬ್ದುಲ ಜಬ್ಬಾರ ಮಿಯಾ ಸಾ: ಕಲಬುರಗಿ ಇತನು ನಡೆಸುತ್ತಿದ್ದನು. ಮದ್ಯಾಹ್ನ 2 ಗಂಟೆ ಸಮಯದಲ್ಲಿ ಜೇವರಗಿ ದಾಟಿ ಜೇವರಗಿ-ಸಿಂದಗಿ ಮೇನ್ ರೋಡ ರೇವನೂರ ಕ್ರಾಸ ಹತ್ತಿರ ರೋಡಿನಲ್ಲಿ ನಮ್ಮ ಚಾಲಕನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಸಿಕೊಂಡು ಹೋಗುತ್ತಿದ್ದಾಗ ಕಾರಿನ ಮುಂದಿನ ಟಯಾರ ಬಸ್ಟ ಆಗಿದ್ದರಿಂದ ನಮ್ಮ ಕಾರ ರೋಡಿನ ಸೈಡಿನಲ್ಲಿ ಪಲ್ಲಿಯಾಗಿ ಬಿತ್ತು. ನಾವು ಕಾರಿನಿಂದ ಹೊರಗೆ ಬಂದು ನೋಡಲು ನನಗೆ ಮತ್ತು ಇಮ್ರಾನ ಹಾಗೂ ಕಾರ ಚಾಲಕನಿಗೆ ಯಾವುದೇ ಗಾಯ ಆಗಿರುವದಿಲ್ಲಾ. ಕಾರು ಪೂರ್ತಿ ಜಖಂ ಗೊಂಡಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ರುದ್ರುಗೌಡ ತಂದೆ ಚಂದ್ರಾಮಪ್ಪ ಹವಳಗಿ ಸಾ: ಯಡ್ರಾಮಿ ತಾ|| ಜೇವರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಪಿರ್ಯಾದಿ ಹಾಜರುಪಡಿಸಿದರ ಸಾರಾಂಶವೆನೇಂದರೆ  ದಿನಾಂಕ 12-03-2016 ರಂದು ಬೆಳಿಗ್ಗೆ ನಾನು ಕೋಣಸಿರಸಗಿ ಗ್ರಾಮಕ್ಕೆ ಹೋದೆನು, ಮದ್ಯಾಹ್ನ 1:00 ಗಂಟೆ ಸುಮಾರಿಗೆ ನನ್ನ ಹೆಂಡತಿಯಾದ ಸುಜಾತಾ ಇವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ಇಂದು ಬೆಳಿಗ್ಗೆ 11;00 ಗಂಟೆಗೆ ನಾನು ಮನೆಯಲ್ಲಿದ್ದಾಗ ಇಬ್ಬರು ಅಪರಚಿತರು ಮನೆಗೆ ಬಂದು ನಾವು ಬಂಗಾರ ಮತ್ತು ಬೆಳ್ಳಿ ಹಿತಾಳೆ ಸಾಮಾನುಗಳು ತೊಳೆದುಕೊಡುತ್ತೇವೆ ಅಂತಾ ಹೇಳಿದಾಗ ನಾನು ಅವರಿಗೆ ನನ್ನ ಬೆಳ್ಳಿಯ ಕಾಲುಂಗರ ಮತ್ತು ಕಾಲಚೈನ ತೊಳೆದು ಕೊಡಲು ಕೊಟ್ಟೆನು, ಅವರಿಬ್ಬರು ಆ ಸಾಮಾನುಗಳನ್ನು ತೊಳೆದು ಮರಳಿ ನನಗೆ ಕೊಟ್ಟರು, ಬಂಗಾರದ ಸಾಮಾನುಗಳನ್ನು ಸಹ ನಾವು ಸರಿಯಾಗಿ ತೊಳೆದು ಕೊಡುತ್ತೇವೆ ಅಂತಾ ಹೇಳಿದ್ದರಿಂದ ನಾನು ನನ್ನ ಕೊರಳಲ್ಲಿಯ 40 ಗ್ರಾಂ ಬಂಗಾರದ ತಾಳಿ ಸರ ಅವರಿಗೆ ತೊಳೆಯಲು ಕೊಟ್ಟೆನು, ನಮ್ಮ ಮನೆಯಲ್ಲಿದ್ದ ಒಂದು ಸ್ಟೀಲ ಡೆಬ್ಬಿಯಯನ್ನು ತರೆಸಿ ಅದರಲ್ಲಿ ಅವರ ಹತ್ತಿರ ಇದ್ದ ಪೌಡರ ಮತ್ತು ಸ್ವಲ್ಪ ನೀರು ಹಾಕಿ ನನ್ನ ತಾಳಿ ಸರವನ್ನು ಅದರಲ್ಲಿ ಹಾಕಿದರು. ನಂತರ ಅವರು ನನಗೆ ಕುಡಿಯಲು ನೀರು ಕೊಡಲು ಕೇಳಿದಾಗ ನಾನು ಮನೆಯಲ್ಲಿ ಹೋಗಿ ನೀರು ತೆಗೆದುಕೊಂಡು ಬಂದು ಅವರಿಗೆ ಕೊಟ್ಟೆನು, ಆಗ ಅವರು ನನಗೆ ಸ್ಟೀಲ ಡಬ್ಬಿಯನ್ನು ಕೊಟ್ಟು ಇದರಲ್ಲಿ ನಿಮ್ಮ ತಾಳಿ ಸರ ಇದೆ, 10 ನಿಮಿಷ ಒಲೆಯ ಮೇಲೆ ಇಟ್ಟು ಕಾಯಿಸಿ ತೆರೆದು ನೋಡಿರಿ ಅಂತಾ ಹೇಳಿ ಹೋದರು, ಅವರು ಹೋದ ನಂತರ ನನಗೆ ಸಂಶಯ ಬಂದು ನಮ್ಮ ಪಕ್ಕದ ಮನೆಯವರಾದ ಅಕ್ಕಮಹಾದೇವಿ ಬಿರಾದಾರಶಕುಂತಲಾ ಬಂಡೆಪ್ಪಗೌಡರ ಹಿಗೆಲ್ಲರು ಡೆಬ್ಬಿಯನ್ನು ತೆರೆದು ನೋಡಲಾಗಿ ಡೆಬ್ಬಿಯಲ್ಲಿ ನನ್ನ ತಾಳಿ ಸರ ಇರಲಿಲ್ಲಾ. ನಂತರ ನಾವು ಮೂರುಜನ ಕೂಡಿ ಹೊಡಕಾಡಲಾಗಿ ಅವರು ಸಿಗಲಿಲ್ಲಾ, ಅಂತಾ ಹೇಳಿದ ಕೂಡಲೆ ನಾನು ಸಹ ಯಡ್ರಾಮಿಗೆ ಬಂದು ನನ್ನ ಹೆಂಡತಿಯೊಂದಿಗೆ ಗ್ರಾಮದಲ್ಲಿ ಎಲ್ಲಾ ಕಡೆ ಹುಡಕಾಡಿದರು ಸಿಗಲಿಲ್ಲ, ನಂತರ ನಾನು ಮತ್ತು ನಮ್ಮ ಸಂಬಂದಿಕರಾದ ಕಾಶಿನಾಥ ತಂದೆ ಗೊಲ್ಲಾಳಪ್ಪ ಪಾಟೀಲ ರವರು ಕೂಡಿಕೊಂಡು ಜೇವರಗಿ ಸಿಂದಗಿ, ಕಲಬುರಗಿ ಹಾಗು ಇತರೆ ಕಡೆಗಳಲ್ಲಿ ಹೋಗಿ ಹುಡಕಾಡಿದರು ಪತ್ತೆಯಾಗಿರುವುದಿಲ್ಲ, ದಿನಾಂಕ 13-03-2016 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಅಪರಿಚಿತರಿಬ್ಬರು ನನ್ನ ಹೆಂಡತಿಯ ಕೊರಳಲ್ಲಿಯ 40 ಗ್ರಾಂ ಬಂಗಾರದ ತಾಳಿ ಸರ ಅ.ಕಿ. 80,000/- ರೂ ನೇದ್ದನ್ನು ತೊಳೆದು ಕೊಡುತ್ತೇವೆ ಅಂತಾ ಹೇಳಿ ಮೊಸದಿಂದ ತೆಗೆದುಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.  
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಪುಷ್ಪಾವತಿ ಗಂಡ  ನರಸಿಂಗ ತಾಳಮಡಗಿ ಸಾ:ಚಂದಾಪೂರ ತಾ:ಚಿಂಚೋಳಿ ಇವರ ಮಕ್ಕಳಾದ ಸೌಮ್ಯ,ಸವಿತಾ ಇವರಿಬ್ಬರು  ವಿಧ್ಯಾಭ್ಯಾಸ  ಸಲುವಾಗಿ ಅಹ್ಮದ ಸಲಾವೊದ್ದಿನ ಸ್ಟೇಷನಬಜಾರ ಏರಿಯಾ ಕಲಬುರಗಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು  ನಾನು ಆಗಾಗ ಚಂದಾಪೂರದಿಂದ ಕಲಬುರಗಿ ಹೋಗಿ ಬಂದು ಮಾಡುತ್ತಿದ್ದು   ದಿನಾಂಕ 9-4-2016 ರಂದು 3 ಗಂಟೆಯ ಸುಮಾರಿಗೆ  ಮಗಳು ಸೌಮ್ಯ ಇವಳು ನನಗೆ ಪೋನ ಮಾಡಿ ಸವಿತಾ ಇವಳು ಬೆಳಗ್ಗೆ 8 ಗಂಟೆಯ ಸುಮಾರಿಗೆ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲಾ   ಸೌಮ್ಯ ಇವಳು ಸವಿತಾ  ಓದುವ ದಿಶಾ ಕಾಲೇಜಿಗೆ ಹೋಗಿ ವಿಚಾರಿಸಿದ್ದು  ಕಾಲೇಜಿಗೆ ಬಂದಿರುವುದಿಲ್ಲಾ   ನಾನು ಆ ದಿನವೇ ಸಾಯಾಂಕಾಲ ಕಲಬುರಗಿ ಬಂದು ಅಲ್ಲಿಂದ ಇಲ್ಲಿಯವರೆಗೆ ಅವಳ ಸ್ನೇಹಿತರಲ್ಲಿ ನಮ್ಮ ಸಂಬಂಧಿರಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆ ಆಗಿರುವುದಿಲ್ಲಾ  ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಸವಿತಾ ಇವಳು ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.