POLICE BHAVAN KALABURAGI

POLICE BHAVAN KALABURAGI

12 September 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಈರಣ್ಣಾ ತಂದೆ ನಿಂಗಣ್ಣಾ ಗುಗ್ಗರಿ  ಸಾ: ಮಾಹಾದೇವ ಗುಡಿ ಹತ್ತಿರ ಭವಾನಿ ನಗರ ಕಲಬುರಗಿ ರವರ ತಮ್ಮನಾದ ಶರಣು ಇತನು  ಬಿ.ಕಾಂ. ಅಂತಿಮ ವರ್ಷದಲ್ಲಿ  ಕೆಲವು ವಿಷಯಗಳಲ್ಲಿ ಫೇಲಾಗಿದ್ದು, ಯಾವದೇ ಕೆಲಸ ಮಾಡದೇ ಊಡಾಳ ಗೆಳೆಯರಾದ  ವಿಶ್ವನಾಥ ಕೋನಕಟ್ಟಿ, ಶಿವಶರಣಪ್ಪ ಚಿಂಚನಸೂರ, ಶ್ರೀಕಾಂತ ಬೆಂಗಳೂರೆ, ಅಂಬರೀಷ ರಾಮ ನಗರ, ರೇವಣಸಿದ್ಧ ಬಸವ ನಗರ, ಶಂಕರ ಪಾಟೀಲ ಓಂ ನಗರ, ಸಂದೀಪ ರಾಮ ನಗರ, ಪ್ರಭು ಶಹಾಬಜಾರ, ಗ್ಯಾಸ ನಾಗು, ಶ್ರವಣ ಮತ್ತು ನಾಗು ಗೌಡರ, ಇವರೊಂದಿಗೆ ಹೆಚ್ಚಾಗಿ ಓಡಾಡಿಕೊಂಡು ಇದ್ದು ದಿನಾಂಕ  10/09/2016 ರಂದು ರಾತ್ರಿ  11-00  ಗಂಟೆ ಸುಮಾರಿಗೆ  ನಾನು ಮನೆಯಲ್ಲಿ ಇದ್ದಾಗ  ನನ್ನ ತಮ್ಮನಾದ ಶರಣು ಇತನ ಗೆಳೆಯರು ಯಾರೋ ಒಬ್ಬರು ನಮ್ಮ ಮನೆಗೆ ಬಂದು  ನಮ್ಮ ತಮ್ಮ ಶರಣು ಇತನಿಗೆ ಕರೆದುಕೊಂಡು ಹೋಗಿರುತ್ತಾರೆ. ರಾತ್ರಿಯಾದರೂ ಸಹಾ ನನ್ನ ತಮ್ಮ ಶರಣು  ಮನೆಗೆ ಮರಳಿ ಬಂದಿರುವುದಿಲ್ಲಾದಿನಾಂಕ 11/09/2016  ರಂದು ಬೆಳಿಗ್ಗೆ 06-30  ಗಂಟೆ ಸುಮಾರಿಗೆ ನಮ್ಮ ಪಕ್ಕದ ಮನೆಯ ಮೌನೇಶ ಇತನು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದೆರೆ, ನನ್ನ ತಮ್ಮನಾದ ಶರಣು ಇತನಿಗೆ ರಾಮ ನಗರದ ವಿನಾಯಕ ಸಲಗರ ಇವರ ಮನೆ ಹಿಂದೆ ಇರುವ  ಖುಲ್ಲಾ ಜಾಗೆಯಲ್ಲಿ  ಯಾರೋ ಕಲ್ಲುಗಳು ತಲೆಯ ಮೇಲೆ ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆ ಅಂತಾ ತಿಳಿಸಿದನು. ಆಗ  ನಾನು ಮತ್ತು ನಮ್ಮ ಮನೆಯವರು ಕೂಡಿಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ತಮ್ಮ ಶರಣು ಇತನು ಕೊಲೆಯಾಗಿ ಬೋರಲಾಗಿ ಬಿದ್ದಿದ್ದು, ತಲೆಯ ಪಕ್ಕದಲ್ಲಿ ಒಂದು ದೊಡ್ಡ  ಶಹಾಬಾದ  ಪೇಚಿಂಗ ಕಲ್ಲು ಮತ್ತು ಒಂದು ದೊಡ್ಡ ಕಲ್ಲು ಬಿದ್ದಿದ್ದು. ಶರಣು ಇತನಿಗೆ ನೋಡಲಾಗಿ ಅವನ ತಲೆಯ ಹಿಂಭಾಗದಲ್ಲಿ ಬಲ ಕಿವಿಯ ಹಿಂದೆ ಭಾರಿ ರಕ್ತಗಾಯ, ನಡು ತಲೆಯಲ್ಲಿ ಭಾರಿ ರಕ್ತಗಾಯ, ಬಲಭುಜದ ಹಿಂಭಾಗದಲ್ಲಿ  ರಕ್ತಗಾಯ, ಬಲಗೈ ರಟ್ಟೆಗೆ ರಕ್ತಗಾಯ, ಬಲಗೈ ಮೊಳಕೈ ಕೆಳೆಗೆ  ರಕ್ತಗಾಯ, ಬಲಗೈ ಹಸ್ತದ ಒಳಭಾಗದಲ್ಲಿ  ರಕ್ತಗಾಯ, ಎಡಗೈ ಮುಂಗೈಗೆ ರಕ್ತಗಾಯ, ಗದ್ದಕ್ಕೆ ಭಾರಿ ರಕ್ತಗಾಯ, ಎಡ ಹಣೆಗೆ ಭಾರಿ ರಕ್ತಗಾಯ, ಎದೆಗೆ ಭಾರಿ ರಕ್ತಗಾಯ, ಮುಖ ಜಜ್ಜಿದ್ದು ಚಪ್ಪಟೆಯಾಗಿರುತ್ತದೆ. ಇದನ್ನೆಲ್ಲಾ ನೋಡಲಾಗಿ ನನ್ನ ತಮ್ಮ  ಶರಣು ಇತನ ಜೊತೆಯಲ್ಲಿ ಓಡಾಡುತ್ತಿದ್ದವರಲ್ಲಿ  ಯಾರೋ ಜನರು  ಯಾವುದೋ ಕಾರಣಕ್ಕಾಗಿ ಮತ್ತು ಯಾವುದೋ ದ್ವೇಷದಿಂದ ಕಲ್ಲುಗಳನ್ನು ತಲೆಯ ಮೇಲೆ. ಎದೆಯ ಮೇಲೆ, ಕೈ ಕಾಲುಗಳ ಮೇಲೆ ಎತ್ತಿ  ಹಾಕಿ  ಹೊಡೆದು ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.     
ಅಸ್ವಾಭಾವಿಕ ಸಾವು ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 11/09/16 ರಂದು ಮುಂಜಾನೆ 11 ಗಂಟೆಯ ಸುಮಾರಿಗೆ  ನಮ್ಮೂರಿನಲ್ಲಿ ಕೆಲವು ಜನರು  ನನ್ನ ಹೊಲದ ಹತ್ತಿರ ಹಳ್ಳದ ನೀರಿನಲ್ಲಿ  ಒಬ್ಬ ವ್ಯಕ್ತಿಯ ಶವ ನೀರಿನಲ್ಲಿ ಹರಿದು ಬಂದು  ಹಳ್ಳದ ದಡದಲ್ಲಿ ಪೋದೆಗಳಲ್ಲಿ  ತಟ್ಟಿ ನೀತಿರುತ್ತದೆ ಅಂತಾ ಅಂದಾಡುವುದನ್ನು ಕೇಳಿ ನಾನು ಮತ್ತು ನನ್ನ ಪಕ್ಕದ ಹೊಲದವರಾದ ಉಸ್ಮಾಸಾಬ ಮೋಜಿನ್ಅಮೀರಪಟೇಲ  ಮಾಲಿ ಪಾಟೀಲ ಇವರೊಂದಿಗೆ ಹೋಗಿ ನೋಡಲಾಗಿ ವಿಷಯ ನಿಜವಿದ್ದು ಸುಮಾರು 40-45 ವರ್ಷದ ಗಂಡು ಮನುಷ್ಯನ ಶವ ಇದ್ದು ಶವ ಪೂರ್ತಿಯಾಗಿ ಕೊಳೆತು ಹೋಗಿ ಎಲಬು & ತಲೆ ಬುರೆ ಇದ್ದು ಶವದ ಮೈಮೇಲೆ ಒಂದು ದೋತ್ರ & ಒಂದು ನೆಹರು ಶರ್ಟ ಬಟ್ಟೆಗಳಿರುತ್ತವೆ ವ್ಯಕ್ತಿ  ಮೃತಪಟ್ಟಿದ್ದು  ಸುಮಾರು ಒಂದು ತಿಂಗಳ  ಗತಿಸಿರಬಹುದು ಇತನು ಯಾರು ಎಲ್ಲಿಂದ ಬಂದ ಹೇಗೆ ಮೃತಪಟ್ಟ ಎಂಬುವದು ನನಗೆ ಗೋತ್ತಾಗಿರುವುದಿಲ್ಲಾ.  ಹಳ್ಳದ ನೀರಿನಲ್ಲಿ  ಮುಳಗಿ ಮೃತಪಟ್ಟಂತೆ  ಕಂಡುಬರುತ್ತದೆ ಈತನ ಸಾವಿನಲ್ಲಿ  ನನಗೆ ಸಂಶಯ ಕಂಡುಬರುತ್ತದೆ ಅಂತಾ ಶ್ರೀ  ಸಂಗನಗೌಡ ತಂದೆ ಭೀಮರಾಯಗೌಡ ಅಲ್ಲಾಪೂರ ಸಾ:ಸೀತನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನರೋಣಾ ಠಾಣೆ : ದಿನಾಂಕ:- 10/09/2016 ರಂದು ರಾತ್ರಿ ನಮ್ಮ ಚಿಕ್ಕಪ್ಪನ ಮಗನಾದ ವಿಜಯಬಹದ್ದೂರ ಈತನು ಬಹಳಷ್ಟು ಸರಾಯಿ ಕೂಡಿದು ಬಂದು ಊಟ ಮಾಡದೆ ಹಾಗೇ ಪತ್ರಾ ಶೆಡ್ಡಿನ ಹೊರಗೆ ಜೋಡಿಸಿದ ಸಿಮೆಂಟ್ ಕಂಬಗಳ ಮೇಲೆ ಮಲಗಿಕೊಂಡಿದ್ದು ನಾವೇಲ್ಲರು ಸೇರಿ ರಾತ್ರಿ 9:00 ಗಂಟೆಯ ಸುಮಾರಿಗೆ ಅವನನ್ನು ಊಟಕ್ಕೆ ಎಬ್ಬಿಸಿದೇವು ಆದರೆ ಅವನು ಊಟ ಮಾಡದೆ ಹಾಗೇ ಮಲಗಿಕೊಂಡನು ಅಲ್ಲದೆ ವಿಜಯಬಹದ್ದೂರ ಈತನು ಹಿಂದೆಯು ಆಗಾಗ ವಿಪರೀತ ಸರಾಯಿ ಕೂಡಿದು ಬಸ್ ನಿಲ್ದಾಣದ ಹತ್ತಿರ ದಾಬಾಗಳ ಹತ್ತಿರ ಮತ್ತು ರಸ್ತೆಯ ಪಕ್ಕದ ಹತ್ತಿರ ಇರುವ ಗಿಡಗಳ ಕೆಳಗೆ ಮಲಗುವುದು ಮಾಡುತ್ತಿದ್ದನು ನಾವು ಅವನಿಗೆ ರೀತಿ ಕೂಡಿಯುವುದು ಸರಿ ಅಲ್ಲಾ ಇದರಿಂದ ಆರೋಗ್ಯ ಕೆಡುತ್ತದೆ ಮತ್ತು ಹಣವುಕೂಡಾ ತುಂಬಾ ಕರ್ಚಾಗುತ್ತದೆ ಎಂದು ತಿಳಿಸಿ ಹೇಳಿದರು ಸಹ ನಿನ್ನೆ ರಾತ್ರಿ ವಿಪರಿತವಾಗಿ ಸರಾಯಿ ಕುಡಿದು ಬಂದು ಊಟಮಾಡದೆ ಹಾಗೇ ಮಲಗಿಕೊಂಡಿದ್ದನು ಮುಂಜಾನೆ 06:00 ಗಂಟೆಯ ಸುಮಾರಿಗೆ ನಾವೆಲ್ಲರು ಎದ್ದು ಅವನಿಗೂ ಕೂಡಾ ಎಬ್ಬಿಸಬೇಕೆಂದು ಸಿಮೆಂಟ್ ಕಂಬಗಳು ಜೊಡಿಸಿ ಇಟ್ಟಿದ್ದ ಜಾಗಕ್ಕೆ ಹೋಗಿ ನೋಡಲು ವಿಜಯಬಹದ್ದೂರನು ಕಂಬಗಳ ಪಕ್ಕದಲ್ಲಿ ಇಟ್ಟಿರುವ ಚಿಕ್ಕ ನೀರಿನ ಹೌಜ್ಗಳ ಮದ್ಯದಲ್ಲಿ ತಲೆ ಕೆಳಗೆ ಮಾಡಿಕೊಂಡು ಬಿದ್ದಿದ್ದನು ನಾವೆಲ್ಲರು ಅವನನ್ನು ಎತ್ತಿ ಪಕ್ಕದಲ್ಲಿ ಇರುವ ಕಂಬಗಳ ಮೇಲೆ ಹಾಕಿ ಮಾತನಾಡಿಸಿದ್ದು ಆದರೆ ಅವನು ಮಾತನಾಡಲಿಲ್ಲ ಅಲ್ಲದೆ ಉಸಿರು ಕೂಡಾ ನಿಂತು ಹೋಗಿ ಮೃತಪಟ್ಟಿದ್ದನು ಅವನ ತಲೆಯ ಮೇಲೆ ಒಳಪೆಟ್ಟು ಆದಂತೆ & ಎರಡು ಭುಜಗಳಿಗೆ ಹಾಗೂ ಕಣ್ಣ ರೆಪ್ಪೆಗೆ ಮತ್ತು ಎಡಕಿವಿಗೆ ತರಚಿದ ಗಾಯಗಳಾಗಿದ್ದವು. ವಿಜಯಬಹದ್ದೂರ ಈತನು ಸರಾಯಿ ಕೂಡಿತದ ಚಟಕ್ಕೆ ಅಂಟಿಕೊಂಡು ಸರಿಯಾಗಿ ಊಟಮಾಡದೆ ಆಕಡೆ ಇಕಡೆಗೆ ಮಲಗುವುದು ಮಾಡುತ್ತಾ ನಿನ್ನೆ ದಿನಾಂಕ:- 10/09/2016 ರಂದು ರಾತ್ರಿ ವಿಪರೀತ ಸರಾಯಿ ಕೂಡಿದು ಬಂದು ಊಟಮಾಡದೆ ಹಾಗೇ ಮಲಗಿಕೊಂಡಿದ್ದು ಸರಾಯಿ ಕೂಡಿದ ಅಮಲಿನಲ್ಲಿ ಹಾಗೂ ನಿದ್ರೆಯಲ್ಲಿ ಸಿಮೆಂಟ್ ಕಂಬ್ಗಳು ಸಂಗ್ರಹಿಸಿ ಇಟ್ಟಿದ್ದ ಕಂಬಗಳ ಮೇಲಿಂದ ತಲೆ ಕೆಳಗಾಗಿ ಬಿದ್ದು ಇದರಿಂದ ಅವನ ತಲೆಗೆ ಭಾರಿ ಒಳಪೆಟ್ಟಾಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನರೋಣಾ ಠಾಣೆ : ದಿನಾಂಕ: 10/09/2016 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿಯಾದ ಮಲ್ಲಮ್ಮ ಹಾಗೂ ನನ್ನ ಮಗನಾದ ಬಸವರಾಜ ಮುಲಗೆ ಹಾಗೂ ನನ್ನ ಅಕ್ಕಳಾದ ನಜಮುನ್ ಅಲಿಯಾಸ್ ಅಬೇದಾ ನಾವೆಲ್ಲರೂ ಕೂಡಿಕೊಂಡು ಅಂಬಲಗಾ ಗ್ರಾಮದ ಸಂತೆ ಇದ್ದ ಪ್ರಯುಕ್ತ ತರಕಾರಿ ವ್ಯಾಪಾರಿಗಳಾದ ನಾವುಗಳು ಅಂಬಲಗಾ ಕ್ರಾಸ್ ಕಮಾನನಿಂದ ಎಲ್ಲರೂ ಕೂಡಿಕೊಂಡು ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಸುಮಾರು ನಾವು ಕಮಾನದಿಂದ 1. 1/2 ಕಿ.ಮೀ ದೂರ ಅಂಬಲಗಾ ಗ್ರಾಮದ ಕಡೆಗೆ ನಡೆದುಕೊಂಡು ಹೊಗುತ್ತಿರುವಾಗ ನಮ್ಮ ಹಿಂದುಗಡೆಯಿಂದ ಅಂದರೆ ಅಂಬಲಗಾ ಕ್ರಾಸ್ ಕಮಾನಕಡೆಯಿಂದ ಒಬ್ಬ ಟಂಟಂ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ಹಾಗೂ ಅಲಕ್ಷತನದಿಂದ ನಿಮ್ಮ ಅಕ್ಕಳಾದ ನಜಮುನ್  ಹಾಗೂ ನನ್ನ ಮಗನಾದ ಬಸವರಾಜ ಇವರಿಗೆ ಜೋರಾಗಿ ಡಿಕ್ಕಿಹೊಡಿಸಿದ್ದು ನಿಮ್ಮ ಅಕ್ಕಳಾದ ನಜಮುನ್ ಇವಳು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಹಾಗೂ ನನ್ನ ಮಗನಿಗೆ ಎಡಗಾಲಿನ ತೋಡೆಗೆ ಭಾರಿ ಗುಪ್ತಗಾಯವಾಗಿ ಹಾಗೂ ಬಲ ಕಾಲಿನ ಕೆಳಗೆ ರಕ್ತಗಾಯ ವಾಗಿರುತ್ತದೆ ಅಂತಾ ತಿಳಿಸಿರುವುದರಿಂದ ನಾನು ಗಾಭರಿಗೊಂಡು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನಮ್ಮ ಅಕ್ಕಳಾದ ಅಪಘಾತದಿಂದ ಆದ ಗಾಯ ನಿಜವಿದ್ದು ನಮ್ಮ ಅಕ್ಕಳಾದ ನಜಮುನ್  ಇವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹಾಗೂ ಸಿದ್ದಲಿಂಗಪ್ಪ ಮುಲಗೆ ರವರ ಮಗನಾದ ಶ್ರೀ ಬಸವರಾಜ ಮುಲಗೆ ಇತನಿಗೆ ಎಡತೊಡಗೆ ಭಾರಿಗುಪತ್ತ ಗಾಯವಾಗಿದ್ದು ಮತ್ತು ಬಲಗಾಲಿನ ಮೊಳಕಾಲು ಕೇಳಗೆ ರಕ್ತಗಾಯವಾಗಿದ್ದು ಇರುತ್ತದೆ ಅಘಾತಪಡಿಸಿದ ಟಂಟಂ ಸಂಖ್ಯೆ ನೋಡಲಾಗಿ ಏಂ 32 4877 ಆಗಿದ್ದು ಅದರ ಚಾಲಕನು ತನ್ನ ವಾಹನವನ್ನು ಅಲ್ಲೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಿದ್ದಲಿಂಗಪ್ಪ ಮುಲಗೆ & ಆತನ ಹೆಂಡತಿಯಾದ ಶ್ರೀಮತಿ ಮಲ್ಲಮ್ಮ ರವರು ತಿಳಿಸಿರುತ್ತಾರೆ. ಘಟನೆಯಾದಗ ಬೆಳಿಗ್ಗೆ ಸುಮಾರು 9-30 ಗಂಟೆ [.ಎಂ] ಆಗಿರುತ್ತದೆ ಎಂದು ತಿಳಿಸಿದ್ದು ನಂತರ ಘಟನಾ ಸ್ಥಳಕ್ಕೆ ಆ್ಯಂಬೂಲೆನ್ಸ್ ಬಂದಿದ್ದರಿಂದ ನನ್ನ ಅಕ್ಕಳಿಗೆ ಹಾಗೂ ಬಸವರಾಜ ಮುಲಗೆ ಇತನಿಗೆ ಉಪಚಾರ ಕುರಿತು ಕಲಬುರಗಿಗೆ ತರುವಾಗ ದಾರಿ ಮಧ್ಯದಲ್ಲಿ ಮಹಾಗಾಂವ ಕ್ರಾಸ ಹತ್ತಿರ ಮೃತಪಟ್ಟಿದ್ದು ನಂತರ ನಾವು ಗಾಯವಳು ಆದ ಬಸವರಾಜ ಈತನಿಗೆ .ಎಸ್.ಎಂ ಆಸ್ಪತ್ರೆಗೆ ದಾಖಲುಮಾಡಿದ್ದು ನನ್ನ ಅಕ್ಕಳಾದ ನಜಮುನ ಇವಳು ಅಂದಾಜು 11-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ ಅಜಮೀರ್ ತಂ ಮೌಲಾಸಾಬ ನದಾಫ್ ಮು:ತಂಬಾಕವಾಡಿ, ತಾ:ಆಳಂದ, ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ