POLICE BHAVAN KALABURAGI

POLICE BHAVAN KALABURAGI

28 September 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಮುಧೋಳ ಠಾಣೆ : ದಿನಾಂಕ; 27-09-2018 ರಂದು ಮುಂಜಾನೆ 8-30 ಗಂಟೆ ಸುಮಾರಿಗೆ ನಮ್ಮ  ಅಣ್ಣಾನಾದ ಶಾಮಪ್ಪಾ ತಂದೆ ಭೀಮಪ್ಪಾ ಮುನ್ನೂರ ಇತನು ಆಡಕಿ ಸಿಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂ 269 ನ್ನೆದ್ದರಲ್ಲಿ ಹೊಲಕ್ಕೆ ಗಳ್ಯಾ ಹೊಡೆಯಲು ಹೊಗಿದ್ದು ನಂತರ  ನಾನು ಮತ್ತು ನನ್ನ ಹೆಂಡತಿ ಜಗಮ್ಮಾ ಗಂಡ ಶರಣಪ್ಪಾ ಮತ್ತು ನಮ್ಮ ಅಣ್ಣಾನ  ಹೆಂಡತಿ ಸಾವೀತ್ರಮ್ಮಾ ಗಂಡ ಶಾಮಪ್ಪಾ ಮುನ್ನೂರ ಮುರು ಜನರು ಕೂಡಿ ಇಂದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ನಮ್ಮ ಹೊಲ ಸರ್ವೆ ನಂ 269 ರಲ್ಲಿ ಹೊದಾಗ  ಹೊಲದಲ್ಲಿ ನಮ್ಮ ಅಣ್ಣಹೊಲದಲ್ಲಿ ಗಳ್ಯಾ ಕಟ್ಟಿ 2-3 ಸುತ್ತು ಗಳ್ಯಾ ಹೊಡೆದಿದ್ದು, ಎತ್ತುಗಳು ಹೊಲದಲ್ಲಿ ಇದ್ದು ನಮ್ಮ ಅಣ್ಣನು ಹೊಲದಲ್ಲಿ ಕಾಣಿಸಲಿಲ್ಲಾ. ನಾವು ನಮ್ಮ ಅಣ್ಣಾ ಎಲ್ಲಿ ಹೊದನು ಎತ್ತುಗಳು ಮಾತ್ರ ಇರುತ್ತವೆ ಅಂತಾ ಅನುಮಾನ ಬಂದು ಮನೆಗೆನಾದರು ಹೊಗಿರುಬಹುದು ಅಂತಾ ತಿಳಿದು ನಮ್ಮ ತಾಯಿಗೆ ಪೋನ ಮಾಡಿ ಕೇಳಿದಾಗ ನಮ್ಮ ತಾಯಿ ನಿಮ್ಮ  ಅಣ್ಣಾ ಮನೆಗೆ ಬಂದಿರುವದಿಲ್ಲಾ ಅಂತಾ ಹೇಳಿದಳು ನಂತರ ನಮಗೆ ಭಯವಾಗಿ ನಾನು ಮತ್ತು ನನ್ನ ಹೆಂಡತಿ ಹಾಗು ನಮ್ಮ ಅಣ್ಣನ ಹೆಂಡತಿ ಮೂರು ಜನರು ಕೂಡಿ ನಮ್ಮ ಹೊಲದಲ್ಲಿ ಕುಂಟಿಯ  ಹತ್ತಿರ ಹೊಗಿ ನೊಡಲಾಗಿ ಎತ್ತುಗಳು ಕುಂಟಿಯನ್ನು ಮುಂದಕ್ಕೆ ಎಳೆದುಕೊಂಡು ಹೊಗಿದ್ದು  ಕಂಡು ಬಂದಿದ್ದು ಮತ್ತು ಸಾಗು ಮಾಡಿದ ಸಾಲಿನಲ್ಲಿ ತಲೆಯ ಕುದಲು ಹಾಗು ಸ್ವಲ್ಪ ರಕ್ತ ಬಿದ್ದಿದ್ದು ಕಂಡು ಬಂದು ಇದನ್ನು ನೋಡಿ ನಾವು ಭಯ ಪಟ್ಟು ನಮ್ಮ ಹೊಲದ ಸೂತ್ತ ಮುತ್ತಲು ತಿರುಗಾಡಿ ನೊಡುತಿದ್ದಾಗ, ನಮ್ಮ ಪಕ್ಕದ ಸಿದ್ದಪ್ಪ ವಾಲಿಕಾರ್ ಇವರ ತೊಗರಿ ಹೊಲದ ಬಂದಾರಿಯ ಪಕ್ಕದಲ್ಲಿ ಹೆಚ್ಚಿಗೆ ರಕ್ತ ಬಿದಿದ್ದು ಕಂಡು ಅನುಮಾನ ಬಂದು ಹಾಗೆ ಸುತ್ತಾಮುತ್ತಾ ತಿರುಗಾಡುತ್ತಿದ್ದಾಗ ಮದ್ಯಾಹ್ನ 2-00 ಗಂಟೆ ಸುಮಾರಿಗೆ ನಮ್ಮ ಹೊಲದಿಂದ ಎರಡು  ಹೊಲ ಬಿಟ್ಟು ರಾಮುಲು ತಂದೆ ನರಸಪ್ಪಾ ಗಡ್ಡಮಿದಿ ಸಾ|| ಕೊಂತನಪಲ್ಲಿ ಇವರ ತೊಗರಿ ಹೊಲದ  ಸಾಲಿನಲ್ಲಿ ನಮ್ಮ ಅಣ್ಣಾ ಶಾಮಪ್ಪಾ ಇತನು ಕೊಲೆಯಾಗಿ ಸತ್ತು ಬಿದ್ದಿದ್ದು ನಾವು ಹತ್ತಿರ ಹೊಗಿ ನೊಡಲಾಗಿ ನಮ್ಮ ಅಣ್ಣಾ ಶಾಮಪ್ಪಾ ಇವರಿಗೆ ಕುತ್ತಿಗೆಗೆ ಹಾಗು ಮುಖದ ಮೆಲೆ ಎರಡು  ಕಫಾಳಕ್ಕೆ ಹಾಗು ಬಲ ಭುಜಕ್ಕೆ   ಇತರಕಡೆ ಹರಿತವಾದ ಅಯುಧದಿಂದ ಹೊಡೆದು ಭಾರಿ ಗಾಯ ಪಡಿಸಿ  ಕೊಲೆ ಮಾಡಿದ್ದು ಕಂಡು ಬಂದಿದ್ದು ಇರುತ್ತದೆ.ನಾವು ಈ ಬಗ್ಗೆ ನಮ್ಮ ಹೊಲದ ಹತ್ತಿರ ಸುತ್ತ ಮುತ್ತಲಿನ ಹೊಲದಲ್ಲಿ ಕೆಲಸ ಮಾಡು ಜನರಿಗೆ  ವಿಚಾರಿಸಲು ಇಂದು ಮುಂಜಾನೆ 10-00 ಗಂಟೆ ಸುಮಾರಿಗೆ ಇಲ್ಲಿ ನಾಲದಿಂದ ಯಾರೋ 2-3 ಜನರು ಓಡಿ ಹೊದರು ನಾವು ದೋರದಿಂದ ನೊಡಿರುತ್ತವೆ ಅಂತಾ ತಿಳಿಸಿದರು. ಸದರಿ ನಮ್ಮ ಅಣ್ಣಾ ಶಾಮಪ್ಪಾ ಇವರು ಇಂದು ಬೆಳಗ್ಗೆ 0900 ಗಂಟೆ ಸುಮಾರಿಗೆ ಮನೆಯಿಂದ ಹೊಲಕ್ಕೆ ಬಂದು ಆಡಕಿ ಸಿಮಾಂತರದಲ್ಲಿರುವ ನಮ್ಮ ಹೊಲ ಸರ್ವೆ ನಂ 269 ಕುಂಟಿ ಹೊಡೆಯುತ್ತಿದ್ದಾಗ ನಮ್ಮೂರ 1] ಭೀಮರೆಡ್ಡಿ ತಂದೆ ರಾಮರೆಡ್ಡಿ ಪಲ್ಯಾ ಮತ್ತು ಅವರ ತಮ್ಮಂದಿರಾದ 2] ನರಸರೆಡ್ಡಿ ತಂದೆ ರಾಮರೆಡ್ಡಿ ಹಾಗು 3] ಬಸರೆಡ್ಡಿ ತಂದೆ ರಾಮರೆಡ್ಡಿ ಪಲ್ಯಾ ಇವರುಗಳೂ ನಮ್ಮ ಹೊಲದಲ್ಲಿ ಅಕ್ರಮವಾಗಿ ಬಂದು ನಮ್ಮ ಅಣ್ಣ ಶಾಮಪ್ಪ ಇತನು ಅವರ ಅಣ್ಣನಾದ ಮಲ್ಲರೆಡ್ಡಿ ಇವರಿಗೆ ಹೊದ ವರ್ಷ ಹೊಡೆದು ಕೊಲೆ ಮಾಡಿರುತ್ತಾನೆ ಅಂತಾ ತಿಳಿದು ಅದೇ ವೈಮನಸ್ಸಿನಿಂದ ನಮ್ಮ ಅಣ್ಣ ಶಾಮಪ್ಪ ಇತನಿಗೆ ಇವರು 3 ಜನರು ಕೂಡಿ ಇಂದು ಬೆಳಗ್ಗೆ 0900 ಗಂಟೆಯಿಂದ ಮಧ್ಯಾಹ್ನ 1200 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಅಣ್ಣ ನಿಗೆ ಯಾವುದೋ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿ ನಮ್ಮ ಹೊಲದಿಂದ 2 ಎರಡು ಹೊಲ ಬಿಟ್ಟು ರಾಮುಲು ಗಡ್ಡಾಮಿದಾ ಇವರ ತೊಗರಿ ಹೊಲದ ಸಾಲಿನಲ್ಲಿ ನಮ್ಮ ಅಣ್ಣ ಶವವನ್ನು ಹಾಕಿ ಹೋಗಿದ್ದು ಇರುತ್ತದೆ. ಸದರಿ ನಮ್ಮ ಅಣ್ಣ ಶಾಮಪ್ಪ ಇತನಿಗೆ ಹೊಡೆದು ಕೊಲೆ ಮಾಡುವಂತೆ ಭೀಮರೆಡ್ಡಿ ಇತನ ತಾಯಿಯಾದ ಸೌಭಾಗ್ಯಮ್ಮ ಇವಳು ಪ್ರಚೋದನೆ ನೀಡಿದ್ದು ಇರುತ್ತದೆ. ಕಾರಣ ಸದರಿ 1] ಭೀಮರೆಡ್ಡಿ ತಂದೆ ರಾಮರೆಡ್ಡಿ  ಪಲ್ಯಾ ಮತ್ತು ಅವರ ತಮ್ಮಂದಿರಾದ 2] ನರಸರೆಡ್ಡಿ ತಂದೆ ರಾಮರೆಡ್ಡಿ ಹಾಗು 3] ಬಸರೆಡ್ಡಿ ತಂದೆ ರಾಮರೆಡ್ಡಿ  ಪಲ್ಯಾ ಹಾಗು ಇವರ ತಾಯಿಯಾದ 4] ಸೌಭಾಗ್ಯಮ್ಮ ಗಂಡ ರಾಮರೆಡ್ಡಿ ಸಾ: ಎಲ್ಲರೂ ಸೊಮಪಲ್ಲಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶರಣಪ್ಪಾ ತಂದೆ ಭೀಮಪ್ಪಾ ಮುನ್ನೂರ ಸಾ|| ಸೋಮಪಲ್ಲಿ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 27.09.2018 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಗಂಗಾನಗರ ಬಡಾವಣೆಯಲ್ಲಿ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರದ ಸುರೇಶ ದಿಗ್ಗಾವಿ ಇವರ ಮನೆಯ ಹತ್ತಿರ ಹೋಗಿ ಜೀಪ ನಿಲ್ಲಿಸಿ, ನಾವು ಜೀಪಿನಿಂದ ಇಳಿದು ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ ಮರೆಯಿಲ್ಲಿ ನಿಂತು ನೋಡಲು ಹಿಟ್ಟಿನ ಗಿರಣಿ ಮುಂದೆ ರಸ್ತೆಗೆ ಹೊಂದಿಕೊಂಡಿರುವ ಪಾನ ಶ್ಯಾಪ ಪಕ್ಕದಲ್ಲಿ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಬಸವರಾಜ ತಂದೆ ಶಂಕರ ನಾಯಿಕೊಡಿ ಸಾ: ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 300/- ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 60 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 30. ರೂ 32 ಪೈಸೆ. ಒಟ್ಟು ಕಿಮ್ಮತ್ತು 1819ರೂ. 20ಪೈಸೆ. ಅವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು  ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ವೇಂಕಟೇಶ ತಂದೆ ಶಿವಾಜಿ ಜಾಧವ್ ಸಾ|| ಕೀರ್ತಿ ನಗರ ಕಲಬುರಗಿ ಹಾ;ವ: ಕೃಷ್ಣಾ ನಗರ ಪಿಂಕಿ ಆಡಿಯೋ ಸೆಂಟರ ಎದುರುಗಡೆ ಕಲಬುರಗಿ ಇವರು ದಿನಾಂಕ; 26/09/2018 ರಂದು ರಾತ್ರಿ  ತನ್ನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ; KA32EF8759 ಚಸ್ಸಿ ನಂ; MBLHA10AMEHC45453 ಇಂಜಿನ ನಂ; HA10EJEHC64707;ಕಿ; 25000/- ರೂ ನೇದ್ದನ್ನು ಕೃಷ್ಣಾ ನಗರ ಪಿಂಕಿ ಆಡಿಯೋ ಸೆಂಟರ್ ಎದುರುಗಡೆ ಕಲಬುರಗಿಯ ಮನೆಯ ಮುಂದುಗಡೆ ನಿಲುಗಡೆ ಮಾಡಿದ್ದು. ದಿನಾಂಕ; 27/09/2018 ರಂದು ಬೆಳಗ್ಗೆ 6;00ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ ಸದರಿ ನನ್ನ ಮೋಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿದ್ದು ಇಲ್ಲಿಯವರೆಗೂ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲ.  ಕಾರಣ ನನ್ನ ಮೋಟಾರ ಸೈಕಲ್ ಕಳ್ಳತನಮಾಡಿದವರನ್ನು ಪತ್ತೆಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಅಂಬರೇಷ ತಂದೆ ಚಂದ್ರಪ್ಪ ಯಾದವ ಸಾ: ಗಂಗಾ ನಗರ ಕಲಬುರಗಿ ರವರು ತನ್ನ ಕೆಲಸ ಸಂಬಂದ ಒಂದು ಹಿರೋ ಸ್ಪೆಂಡರ ಮೋಟಾರ ಸೈಕಲ ನಂ ಕೆಎ 32 ಇಕೆ 0425 ನೇದ್ದು ಖರಿದಿಸಿದ್ದು ಸದರಿ ಮೋಟಾರ ಸೈಕಲನ್ನು ನಾನೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ. ಈ ಹಿಂದೆ ದಿನಾಂಕ 24.08.2018 ರಂದು ರಾತ್ರಿ 10 ಗಂಟೆಯ ಸುಮಾರಿಗೆ ನಾನು ನನ್ನ ಮೋಟಾರ ಸೈಕಲನ್ನು ನಮ್ಮ ಮನೆಯ ಪಕ್ಕದಲ್ಲಿ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು ದಿನಾಂಕ 25.08.2018 ರಂದು ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ನಾನು ಎದ್ದು ಮನೆಯಿಂದ ಹೊರಗೆ ಬಂದು ನೋಡಲು ಮನೆಯ ಮುಂದೆ ನಿಲ್ಲಿಸಿದ ನನ್ನ ಹಿರೋ ಸ್ಪೆಂಡರ ಮೋಟಾರ ಸೈಕಲ ನಂ ಕೆಎ 32 ಇಕೆ 0425 ನೇದ್ದು ಇರಲಿಲ್ಲ ನಂತರ ನಾನು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಅಂದಿನಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಯಾರೊ ಕಳ್ಳರು ನನ್ನ ಮೋಟಾರ ಸೈಕಲನ್ನು ದಿನಾಂಕ 24.08.2018 ರಂದು ರಾತ್ತಿ 10 ಗಂಟೆಯಿಂದ ದಿನಾಂಕ 25.08.2018 ರಂದು ಬೆಳ್ಳಿಗ್ಗೆ 06:00 ಗಂಟೆಯ ಮಧ್ಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಗುರುಪಾದ ತಂದೆ ರಾಮಲಿಂಗ ಹೊಸಮನಿ ಸಾಃ ರೇವನೂರ ತಾಃ ಜೇವರಗಿ ರವರು ದಿನಾಂಕ 25.09.2018 ರಂದು ತಮ್ಮೂರಲ್ಲಿ ಮಹಾಂತೇಶ @ ಯೊಗೇಶ ಇತನು ನಮ್ಮ ಕಾಕನ ಮಗನಾದ ಶಿವಪುತ್ರ ಇತನ ಸಂಗಡ ಜಗಳ ಮಾಡಿದಕ್ಕೆ. ನಾನು ಮಹಾಂತೇಶನಿಗೆ ಶಿವಪುತ್ರನ ಸಂಗಡ ಯಾಕೆ ಜಗಳ ಮಾಡಿದ್ದಿ ಎಂದು ಕೇಳಿದಕ್ಕೆ ಅವನಿಗೂ ನನಗೂ ಜಗಳ ಆಗಿರುತ್ತದೆ ಮಹಾಂತೇಶನು ನನಗೆ ನೀನು ಜೇವರಗಿಗೆ ಬಾ ಒಂದು ಕೈ ನೊಡಿಕೊಳುತ್ತೆನೆ ಎಂದು ನನಗೆ ಬೇದರಿಕೆ ಹಾಕಿ ಹೋಗಿರುತ್ತಾನೆ.  ದಿನಾಂಕ .25.09.2018 ರಂದು ನಾನು ನಮ್ಮೂರಿನಿಂದ ಜೇವರಗಿಗೆ ಬಜಾರ ಮಾಡಲು ಬಂದು ಜೇವರಗಿ ಪಟ್ಟಣದ ಜ್ಯೋತಿ ಹೊಟೇಲ ಎದುರುಗಡೆ ಇದ್ದಾಗ, 1) ಮಹಾಂತೇಶ @ ಯೋಗೇಶ ತಂದೆ ಲಕ್ಷ್ಮಣ ಹಂಚಿನಾಳ ಸಾಃ ರೇವನೂರ, 2) ಶ್ರೀನಿವಾಸ @ ಕುಮಾರ ತಂದೆ ಶರಣಪ್ಪ ಹೊಸಮನಿ ಸಾಃ ಹರನೂರ ಇವರು ನಾನು ಇದ್ದಲ್ಲಿಗೆ ಬಂದು ನೀನ್ನೆಯ ಜಗಳದ ವಿಷಯದಲ್ಲಿ ಮಾತನಾಡೊಣ ನಡೆ ಎಂದು ಹೇಳಿ ನನಗೆ ಒಂದು ಅಟೋ ವಾಹನದಲ್ಲಿ ಕುಳಿಸಿಕೊಂಡು ಜೇವರಗಿ ಪಟ್ಟಣದ ಹೊರ ವಲಯದ ಕೆ.ಎಸ್.ಆರ್.ಟಿ.ಸಿ ಬಸ್ಸ ಡೀಪೊ ಹಿಂದಿನ ಹಳ್ಳದ ಹತ್ತಿರ ಕರೆದುಕೊಂಡು ಹೋಗಿ ಅಟೋದಿಂದ ಇಳಿಸಿ ಅಲ್ಲಿ ಅವರು ನನಗೆ ಬೈಯಹತ್ತಿದ್ದರು. ಅವರಿಬ್ಬರೂ ಅಲ್ಲದೆ ಇನ್ನೂ ಇತರೆ ಆರು ಜನರು ಅಲ್ಲಿಗೇ ಬಂದರು. ಅವರು ಕೂಡಾ ನನಗೆ ಬೊಸಡಿಮಗನೆ ನಮ್ಮ ಗೆಳೆಯ ಮಹಾಂತೇಶನ ಸಂಗಡ ಊರಲ್ಲಿ ಜಗಳ ಮಾಡುತಿ ರಂಡೀ ಮಗನೆ ಎಂದು ಅವಾಚ್ಯವಾಗಿ ಬೈಹತ್ತಿದ್ದರು, ನಾನು ಅವರಿಗೆ ಊರಿಗೆ ನಡೆರಿ ಅಲ್ಲಿಯೇ ಮಾತಾಡೊಣಾ ಎಂದಾಗ ಶ್ರೀನಿವಾಸ @ ಕುಮಾರ ಹೊಸಮನಿ ಇತನು ಬೊಸಡಿಮಗನೆ ಹೊಲೆಯ ಎಲ್ಲಿಗೆ ಹೋಗುತಿ ಎಂದು ನನಗೆ ಮುಂದಕ್ಕೆ ಹೋಗದಂತೆ ತಡೆದು ಹಿಡಿದುಕೊಂಡನು. ಮಹಾಂತೇಶ @ ಯೋಗೇಶ ಹಂಚಿನಾಳ ಇತನು ಊರಲ್ಲಿ ನನ್ನ ಸಂಗಡ ಜಗಳ ಮಾಡುತಿ ರಂಡಿ ಮಗನೆ ಎಂದು ಬಡಿಗೆಯಿಂದ ನನ್ನ ಬೇನ್ನು ಮೇಲೆ, ಎರಡು ಕೈಗಳ ಮತ್ತು ಕಾಲಿನ ಮೇಲೆ ಬಾಯಿ ಮೇಲೆ ತಲೆಯ ಮೇಲೆ ಹೋಡೆದನು. ಮತ್ತು ಶ್ರೀನಿವಾಸ @ ಕುಮಾರ ಇತನು ಕಲ್ಲು ತೆಗೆದುಕೊಂಡು ನನ್ನ ಬೇನ್ನು ಮೇಲೆ ಹೋಡೆದಿರುತ್ತಾನೆ. ಅವನ ಸಂಗಡ ಬಂದವರು ಸೂಳೆ ಮಗನಿಗೆ ಜೀವ ಸಹಿತ ಬಿಡಬಾರದು ಎಂದು ಅವಾಚ್ಯವಾಗಿ ಬೈಯುತ್ತಿದ್ದರು. ಮಹಾಂತೇಶನು ಸೂಳೆ ಮಗನೆ ನಮ್ಮ ತಂಟೆಗೆನಾದರೂ ಬಂದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಜಗನ್ನಾಥ ತಂದೆ ದೇವೀಂದ್ರಪ್ಪ ಮಡಿವಾಳ ಮತ್ತು ಮೃತನಾದ ಅಜಯಕುಮಾರ ಹಾಗೂ ತಮ್ಮರಿನ ಗಂಗಾಧರ  ಇವರಿಬ್ಬರು ಹಾಗೂ ಜಗನ್ನಾಥ ಮೂವರು ಕೂಡಿಕೊಂಡು ಗಂಗಾಧರನ ಹತ್ತಿರ ದ್ದ ನೋವಾ ಕೆ.-51 ಎನ್. 7506 ನೇದ್ದರ ವಾಹನದಲ್ಲಿ ಖಾಸಗಿ ಕೆಲಸ ಸಂಬಂದ ಕುಳಿತು ಗುಂಡಗುರ್ತಿ ಗ್ರಾಮಕ್ಕೆ ಹೊರಟಿದ್ದು. ವಾಹನವನ್ನು ಗಂಗಾಧರ ಇತನು ದಿನಾಂಕ: 25-09-2018 ರಂದು  4:30 ಪಿ.ಎಮ್. ಸುಮಾರಿಗೆ ಕಲಬುರಗಿ ಸೇಡಂ ರಾಜ್ಯ ಹೆದ್ದಾರಿಯ ಟೆಂಗಳಿ ಕ್ರಾಸ್ ಸಮೀಪದ ವೇರಹೌಸ ಹತ್ತಿರ ರೋಡಿನ ಮೇಲೆ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಬಲಭಾಗದ ಗಿಡಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಮುಂದೆ ಕೆ..ಬಿ. ಕಂಬಕ್ಕೆ ಡಿಕ್ಕಿ ಹೊಡೆದು ವಾಹನ ಪಲ್ಟಿ ಮಾಡಿರುತ್ತಾನೆ. ಅಪಘಾತದಲ್ಲಿ ಮೃತನ ತಲೆಗೆ ಭಾರಿ ರಕ್ತಗಾಯ ಹಣೆಯ ಮೇಲೆ ರಕ್ತಗಾಯ ಏಡ ಕಿವಿಗೆ ಭಾರಿ ರಕ್ತಗಾಯವಾಗಿ ಕಿವಿ ಹರಿದು ಸ್ಳಳದಲ್ಲಿಯೆ ಮೃತ ಪಟ್ಟಿರುತ್ತಾನೆ. ಹಾಗೂ ಜಗನ್ನಾಥ ಮತ್ತು ಗಂಗಾಧರ ಇವರಿಬ್ಬರಿಗೂ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.