POLICE BHAVAN KALABURAGI

POLICE BHAVAN KALABURAGI

28 May 2012

GULBARGA DIST REPORTED CRIME

ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ:ಶ್ರೀ ರವಿಕುಮಾರ ತಂದೆ ಸಿದ್ರಾಮಪ್ಪಾ ಕೋರಿ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ ರವರು ನಮ್ಮ ತಂದೆ ಸಿದ್ರಾಮಪ್ಪಾ ತಾಯಿ ಕಾಂತುಬಾಯಿ ರವರು  ದಿಃ 25/05/2012 ರಂದು ಇಬ್ಬರು ಕೂಡಿಕೊಂಡು ಕಮಲಾಪೂರ ಕೆ.ಜಿ.ಬಿ ಬ್ಯಾಂಕಿನಲ್ಲಿ ಕೆಲಸವಿದ್ದ ಪ್ರಯುಕ್ತ ಸೈಕಲ ಮೇಲೆ ಕುಳಿತುಕೊಂಡು ರಾಜನಾಳದಿಂದ ಕಮಲಾಪುರಕ್ಕೆ ಬರುತ್ತಿದ್ದಾಗ ಬೆಳಿಗ್ಗೆ 11-00 ಗಂಟೆ ಸುಮಾರಿಗೆ ರಾಜನಾಳ ಕ್ರಾಸ ಹತ್ತಿರ ಎದುರಿನಿಂದ ಜೀಪ ನಂ. ಕೆಎ-20 ಎಮ್-7865 ನೇದ್ದರ ಚಾಲಕ ಮಹ್ಮದ ಮೋಹಿನ ತಂದೆ ಸರದಾರಸಾಬ ಸಾಃ ಮರಗುತ್ತಿ ಈತನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಸೈಕಲ ಮೇಲೆ ಬರುತ್ತಿದ್ದ ನಮ್ಮ ತಂದೆ ತಾಯಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನಮ್ಮ ತಂದೆಗೆ ಬಲಕಣ್ಣಿನ ಕೆಳಗೆ ರಕ್ತಗಾಯ, ಹಣೆಗೆ ರಕ್ತಗಾಯವಾಗಿರುತ್ತದೆ. ನಮ್ಮ ತಾಯಿ ಕಾಂತಾಬಾಯಿ ಇವಳಿಗೆ ಹಣೆಗೆ ರಕ್ತಗಾಯ, ಎಡಕಣ್ಣಿನ ಹತ್ತಿರ ರಕ್ತಗಾಯ, ಬಲಗೈ ಮಣಿಕಟ್ಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ಅಪಘಾತ ನೋಡಿದವರು 108 ಅಂಬುಲೇನ್ಸದಲ್ಲಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕಳುಹಿಸಿರುತ್ತಾರೆ. ಕಾರಣ ನನ್ನ ತಂದೆ ತಾಯಿಗೆ ಅಪಘಾತ ಪಡಿಸಿದ ಮಹ್ಮದ ಮೋಹಿನ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.62/2012 ಕಲಂ.279,337 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DIST REPORTED CRIMES

ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:26/05/2012 ರಂದು  ಕೆಎ-32-5963 ಲಾರಿಯಲ್ಲಿ   ಉಸುಕು (ರೇತಿ) ತುಂಬಿಕೊಂಡು ಬರಲು ವಿಜಯಕುಮಾರ ತಂದೆ ಬೋಜು ರಾಠೋಡ ಸಾ:ಜಾಫೂರ ತಾಂಡಾನಂದೂರ (ಬಿ) ಬಾಪುನಾಯಕ ತಾಂಡಾದ ಹತ್ತಿರ ತಾ:ಜಿ:ಗುಲಬರ್ಗಾ ಇತನು ಹೊನಗುಂಟಾ ಗ್ರಾಮಕ್ಕೆ ಹೋಗಿದ್ದನು. ಲಾರಿ ಚಾಲಕ ವಿಜಯ ಕುಮಾರ ಇವನು ನನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶಹಾಬಾದದ ಭೀಮಶಪ್ಪಾ ನಗರ ಬ್ರೀಡ್ಜ ಹತ್ತಿರ ರೋಡಿನ ಬಲಬಾಜು ಕಟ ಮಾಡಿದ್ದರಿಂದ ಲಾರಿ ಪಲ್ಟಿಯಾಗಿ ಸ್ಥಳದಲ್ಲಿಯೇ ವಿಜಯಕುಮಾರ ಇವನು ಮೃತ ಪಟ್ಟಿದ್ದ ವಿಷಯ ತಿಳಿದುಕೊಂಡು ನಾನು ಶಹಾಬಾದಕ್ಕೆ ಹೋಗಿ ಬಂದು ನೋಡಲು ಲಾರಿ ನಂ.ಕೆಎ-32-5963 ನೇದ್ದು ಪಲ್ಟಿಯಾಗಿ ಬಿದ್ದು ಅದರ ಕೆಳಗೆ ವಿಜಯಕುಮಾರ ಇವನು ಸಿಕ್ಕಿ ಬಿದ್ದು ಮೃತ ಪಟ್ಟಿರುತ್ತಾನೆ ಈ ಘಟನೆಯು ದಿನಾಂಕ:26/05/2012 ರಂದು ರಾತ್ರಿ  10-45 ಗಂಟೆ ಸುಮಾರಿಗೆ ಘಟನೆ ಜರೂಗಿರಬಹುದು ಅಂತಾ ಶ್ರೀ ವಿಜಯಕುಮಾರ ತಂದೆ ಮಾನಸಿಂಗ ಚವ್ಹಾಣ ಉ:ಲಾರಿ.ನಂ.ಕೆಎ-32-5963 ನೇದ್ದರ ಮಾಲಿಕ ಸಾ:ಶಕ್ತಿನಗರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 76/2012 ಕಲಂ:279, 304 (ಎ) ಐಪಿಸಿ   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಗುರಣ್ಣ ತಂದೆ ಶರಣಪ್ಪ ಹಾಗರಗಿ ಸಾ: ಮನೆ ನಂ 1920/31/ 2 ನೇ ಕ್ರಾಸ ರಾಮನಗರ ರವರು ನಾವು ದಿನಾಂಕ 23-05-2012 ರಂದು ಮಧ್ಯರಾತ್ರಿ 12-00 ಗಂಟೆ ಸುಮಾರಿಗೆ ಮ್ಮ ಮನೆಗೆ ಕೀಲಿ ಹಾಕಿಕೊಂಡು ಮನೆಯ ಮಾಳಿಗೆ ಮೇಲೆ ಮಲಗಿದ್ದು ಕೀಲಿ ಕೈ ತಲೆ ದಿಂಬಿನ ಕೆಳಗಡೆ ಇಟ್ಟಿಕೊಂಡಿದ್ದೆನು. ದಿನಾಂಕ 24-05-2012 ರಂದು ಬೆಳಗ್ಗೆ 5-00 ಗಂಟೆಗೆ ಬಂದು ನೋಡಲಾಗಿ ಯಾರೋ ನನ್ನ ತಲೆ ದಿಂಬಿನ ಕೆಳಗಿದ್ದ ಬೀಗದ ಕೈ ತೆಗೆದುಕೊಂಡು ಮನೆಯಲ್ಲಿಟ್ಟಿದ್ದ  5 ತೊಲಿ ಬಂಗಾರದ ಒಡವೆಗಳು ಮತ್ತು 15 ತೊಲಿ ಬೆಳ್ಳಿಯ ಸಾಮಾನುಗಳು ನಗದು 20,000/- ರೂ ಹೀಗೆ ಒಟ್ಟು 1,58,700/- ರೂಪಾಯಿ ಮೌಲ್ಯದ್ದಯ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 78/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗೃಹಿಣೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಕೊಲೆ ಮಾಡಿದ ಬಗ್ಗೆ :
ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಅಂಬು ಗಂಡ ಪಾಂಡು ಗೌಳಿ ಸಾ:ಸೈಯ್ಯದ ಚಿಂಚೋಳಿ ಹಾ:ವ:ಪಟ್ಟಣ ತಾ:ಜಿ:ಗುಲಬರ್ಗಾರವರು ನನಗೆ ನನ್ನ ಗಂಡನಾದ ಪಾಂಡು ಇತನು ದಿನಾಂಕ:-23/05/2012 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ಶೀಲದ ಬಗ್ಗೆ ಶಂಕೆ ಮಾಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಪಟ್ಟಣ ಕ್ರಾಸದಲ್ಲಿ ವಾಸವಾಗಿರುವ ಮನೆಯಲ್ಲಿ ಅವಳೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡಿ ಮೈಮೇಲೆ ಸೀಮೇ ಎಣ್ಣೆ ಹಾಕಿ ಬೆಂಕಿ ಹಚ್ಚಿ ಓಡಿ ಹೋಗಿರುತ್ತಾನೆ ಗಾಯಾಳುವಿನಿಂದ ದೂರು ದಾಖಲಾಗಿತ್ತು, ಗಾಯಾಳು ಉಪಚಾರ ಕುರಿತು ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಲಾಗಿತ್ತು, ಸುಟ್ಟಗಾಯಗಳಿಂದ ಗುಣಮುಖ ವಾಗದೇ ದಿನಾಂಕ:27/05/2012 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾಳೆ ಅಂತಾ ನಾಮದೇವ ರವರು ಹೇಳಿಕೆಯಿಂದ ಗುನ್ನೆ ನಂ: 169/2012 ಕಲಂ 498 (ಎ) 307 , 504 ಐಪಿಸಿ ನೇದ್ದರಲ್ಲಿ ಕಲಂ 302 ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಕಸ್ಮಿಕ ಬೆಂಕಿ ಅಪಘಾತ:
ಮಾಡಬೂಳ ಪೊಲೀಸ್ ಠಾಣೆ ದಿನಾಂಕ:7/05/12 ರಂದು ಮದ್ಯಾಹ್ನ 12-00 ಗಂಟೆ ಇಂದು ದಿನಾಂಕ:27-05-2012 ರಂದು ಬೆಳಿಗ್ಗೆ 10-30 ಗಂಟೆಗೆ ಗುರಮಿಟಕಲ್ ದಿಂದ ಮಳಖೇಡ ಮಾರ್ಗವಾಗಿ ಗುಲಬರ್ಗಾಕ್ಕೆ ಬರುತ್ತಿರುವಾಗ ಟೆಂಗಳಿ ಕ್ರಾಸ ಹತ್ತಿರ ರಸ್ತೆಯ ಮೇಲೆ ತಾನು ಚಲಾಯಿಸುತ್ತಿರುವ ಮಿನಿ ಲಾರಿ ಕೆಎ 32 ಎ-6783 ನೇದ್ದು ಆಕಸ್ಮಿಕವಾಗಿ ಬೆಂಕಿ ತಗುಲಿ ವಾಹನದಲ್ಲಿ ತುಂಬಿಕೊಂಡು ಬರುತ್ತಿರು ಹಳೆಯ ಸಾಮಾನುಗಳು ಬೆಂಕಿ ತಗಲು ಸುಮಾರು 80,000/- ಮೌಲ್ಯದ್ದು ಸುಟ್ಟು ಕರಕಲಾಗಿದ್ದು, ಲಾರಿಯು ಸಹ ಸುಟ್ಟಿದ್ದರಿಂದ   ಸುಮಾರು 6,50,000/- ಮೌಲ್ಯದು ಹಾನಿಯಾಗಿರುತ್ತದೆ. ಹೀಗೆ ಒಟ್ಟು 7,30,000/- ರಷ್ಟು ನಷ್ಟವಾಗಿರುತ್ತದೆ ಅಂತಾ ಶ್ರೀ ಹನೀಪ್ ತಂದೆ ದಾವೂದ್ ಸುನಖೇವಾಲೆ ಸಾ:ಗುರುಮಿಠಕಲ್ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಆಕಸ್ಮಿಕ ಬೆಂಕಿ ಅಪಘಾ ನಂಬರ:01/2012 ನೇದ್ದರಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.