POLICE BHAVAN KALABURAGI

POLICE BHAVAN KALABURAGI

07 July 2011

GULBARGA DISTRICT REPORTED CRIMES

ಅಪಹರಣ ಪ್ರಕರಣ:

ಶಹಾಬಾದ ನಗರ ಠಾಣೆ : ಶ್ರೀಮತಿ ನೀಲಮ್ಮಾ ತಂದೆ ಬಾಬು ಗುತ್ತೇದಾರ ವ:35 ಸಾ:ಮರತೂರ ರವರು ನನ್ನ ತಂಗಿ ಸಾವಿತ್ರಿ ಇವಳು ದಿನಾಂಕ 27/6/11 ರಂದು ಗುಲಬರ್ಗಾಕ್ಕೆ ಹಾಲ ಟಿಕೇಟ ತೆಗೆದುಕೊಂಡು ಬರುತ್ತೇನೆ ಅಂತಾ ಮರತೂರ ಬಸ್ಸನಿಲ್ದಾಣದಲ್ಲಿ ನಿಂತಾಗ ನಮ್ಮೂರಿನ ಬಸವರಾಜ ಮತ್ತು ಮಹ್ಮದ ರಫೀಕ ಇಬ್ಬರೂ ಆಟೊ ನಂ ಕೆ.ಎ. 32 8638 ನೇದ್ದರಲ್ಲಿ ಕೂಡಿಸಿಕೊಂಡು ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾನುವಾರಗಳು ಕಳವು ಪ್ರಕರಣ:

ನರೋಣಾ ಪೊಲೀಸ ಠಾಣೆ :
ಶ್ರೀ. ಭೀಮಶ್ಯಾ ತಂದೆ ಹಿರಣ್ಣ ಜಮಾದಾರ ಸಾ: ಬೆಳಮಗಿ ರವರು ನನ್ನ 8 ಎತ್ತುಗಳು, ಒಂದು ಕರು ಒಂದು ಆಕಳು ಬೆಳಮಗಿ ಗ್ರಾಮದ ಸಿಮಾಂತರದಲ್ಲಿರುವ ಹೊಲದಲ್ಲಿ ದಿನಾಂಕ; 06-07-2011 ರಂದು ರಾತ್ರಿ ಕೊಟಿಗಿಯಲ್ಲಿ ಕಟ್ಟಿದ್ದು, ಯಾರೋ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಹುಲ್ ತಂದೆ ಬಂಡೆಪ್ಪಾ ಕಟ್ಟಿಮನಿ ಸಾ|| ಕರಹರಿ ಹಾ || ವ|| ಮರಗಮ್ಮ ಗುಡಿ ಹತ್ತಿರ ಗಾಜಿಪೂರ ಗುಲಬರ್ಗಾ ರವರು ನನ್ನ ಅಣ್ಣನಾದ ದುಳಪ್ಪಾ ಕಟ್ಟಿಮನಿ ಇತನು ಪಿ.ಡಿ.ಎ ಇಂಜನಿಯರಿಂಗ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ ಅಂತಾ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಕೆಲಸ ಮುಗಿಸಿಕೊಂಡು ಸೈಕಲ್ ಮೇಲೆ ವಿ.ಜಿ. ಮಹಿಳಾ ಕಾಲೇಜಿನ ಹತ್ತಿರ ಬರುತ್ತಿರುವಾಗ ಯಾವದೋ ದ್ವಿ- ಚಕ್ರ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ . ದೂಳಪ್ಪಾ ಇತನು ಭಾರಿಗಾಯ ಹೊಂದಿದ್ದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡುವಷ್ಟರಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರರಕಣ :

ವಾಡಿ ಠಾಣೆ : ಶ್ರೀ ಲಕ್ಷ್ಮಣ ತಂದೆ ಶಂಕರ ಚೌಹಣಾ ಸಾ|| ಲಕ್ಷ್ಮಿ ಪೂರವಾಡಿ ರವರು ನಾನು ನನ್ನ ದೊಡಪ್ಪಾ ದಾವೂಜಿ ಕೂಡಿಕೊಂಡು ಮೋಟಾರ ಸೈಕಲ್ ನಂ: ಕೆಎ 32 ಎಕ್ಸ್ 5681 ನೇದ್ದರ ಮೇಲೆ ವಾಡಿಯಿಂದ ಚಿತ್ತಾಪೂರ ಕಡೆಯ ರೋಡ ರಾವೂರ ಹತ್ತಿರ ಹೊರಟಿದ್ದಾಗ ನಮ್ಮ ಹಿಂದೆ ಹೊರಟಿದ್ದ ಎಮ.ಎಚ 24 ಎಪ್ 6672 ಲಾರಿ ಚಾಲಕ ಸುಭಾಶ ರಾವ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಬಂದು ನಮ್ಮ ಮೋಟಾರ ಸೈಕಲ ಗೆ ಡಿಕ್ಕಿ ಪಡಿಸಿದನು, ಡಿಕ್ಕಿ ಪಡಿಸಿದ ಪರಿಣಾಮ ಮೊಟಾರ ಸೈಕಲ್ ನ ಹಿಂದೆ ಕುಳಿತ ದೊಡ್ಡಪ್ಪಾ ಇತನು ಕೆಳಗಡೆ ಬಿದ್ದನು, ಲಾರಿಯು ಆತನ ಮೇಲೆ ಹೋಗಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ಲೀಲ ಮೊಬಾಯಿಲ್ ಸಂದೇಶ ಕಳುಹಿಸಿದ ವ್ಯಕ್ತಿಯ ವಿರುದ್ದ ಪ್ರಕರಣ:

ಅಶೋಕ ನಗರ ಠಾಣೆ :
ಶ್ರೀಮತಿ ಸುನೀತಾ ಪ್ರಕಾಶ ಮುಡ್ಡೆ ಸಾ|| ಬ್ರಾಹ್ಮಣ ಗಲ್ಲಿ ಕಾಳೆ ಹೌಸ ಶಾಂತಿ ನಗರ ಗುಲಬರ್ಗಾ ರವರು ನನಗೆ ಅನಾಮದೇಯ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಸಂ. 8095462934

ನೇದ್ದರಿಂದ ನನ್ನ ಮೊಬೈಲ್ ಗೆ ಕರೆಗಳನ್ನು ಮಾಡುತ್ತಿದ್ದು, ನನಗೆ ಅತಿಯಾಗಿ ಕಿರುಕೂಳ ಕೊಟ್ಟು ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಹಾಗು ನನ್ನ ಮೊಬೈಲಗೆ ಅಶ್ಲಿಲ ಸಂದೇಶಗಳನ್ನು ಕಳುಸುತ್ತಿದ್ದಾನೆ.

ಅಂತಾ ದೂರು ಸಲ್ಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ