POLICE BHAVAN KALABURAGI

POLICE BHAVAN KALABURAGI

16 September 2016

Kalaburagi District Police.

ಪತ್ರಿಕಾ ಪ್ರಕಟಣೆ
          ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಬ್‌‌-ಇನ್ಸಪೆಕ್ಟರ್‌ ವೃಂದದ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ. ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿರುತ್ತದೆ. ಅರ್ಹ ಅಭ್ಯರ್ಥಿಗಳಿಂದ ದಿನಾಂಕ;19-09-2016 ರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ವಿಧಾನ, ವಯೋಮಿತಿ, ವಿದ್ಯಾರ್ಹತೆ ಸಹಿಷ್ಣತೆ ಮತ್ತು ದೇಹದಾರ್ಡೃತೆ ಪರೀಕ್ಷೆ, ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಕುರಿತು ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್‌‌ www.ksp.gov.in ನಲ್ಲಿ ನೋಡಬಹುದಾಗಿರುತ್ತದೆ.
ಈ ಕೆಳಕಂಡ ಸಬ್‌-ಇನ್ಸ್‌ಪೆಕ್ಟರ್‌‌ ವೃಂದದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿರುತ್ತದೆ.
ಕ್ರಮ
ಸಂಖ್ಯೆ
ಹುದ್ದೆ
ಹುದ್ದೆಗಳ ಸಂಖ್ಯೆ
1.        
ಸಶಸ್ತ್ರ ಮೀಸಲು ಪೊಲೀಸ್ ಸಬ್‌‌-ಇನ್ಸ್‌ಪೆಕ್ಟರ್‌ (ಸಿ.ಎ.ಆರ್‌‌/ಡಿಎಆರ್‌) (ಪುರುಷ)
90
2.        
ಪೊಲೀಸ್ ಸಬ್‌‌-ಇನ್ಸ್‌ಪೆಕ್ಟರ್‌ (ವೈರ್‌ಲೆಸ್‌‌) (ಪುರುಷ&ಮಹಿಳಾ)
28
3.        
ಪೊಲೀಸ್ ಸಬ್‌‌-ಇನ್ಸ್‌ಪೆಕ್ಟರ್‌ (ಸಿವಿಲ್‌) (ಪುರುಷ&ಮಹಿಳಾ)
398
4.        
ವಿಶೇಷ ಮೀಸಲು ಸಬ್‌‌-ಇನ್ಸ್‌ಪೆಕ್ಟರ್‌ (ಕೆ.ಎಸ್‌.ಆರ್‌.ಪಿ ) (ಪುರುಷ)
28

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ದೂರವಾಣಿ ಸಂಖ್ಯೆ: 080-22943346 ಸಂಪರ್ಕಿಸಬಹುದಾಗಿರುತ್ತದೆ.

ಸಬ್- ಇನ್ಸಪೆಕ್ಟರ ಮತ್ತು ಕಾನ್ಸಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂದಿಸಿದಂತೆ ಅಭ್ಯರ್ಥಿಗಳು ಈ ಕೆಳಕಂಡ ವಿಷಯಗಳ ಬಗ್ಗೆ ಗಮನವಹಿಸತಕ್ಕದ್ದು
1) ಅಬ್ಯರ್ಥಿಗಳು ನೇಮಕಾತಿ ಸಲುವಾಗಿ ಪ್ರಕಟಿಸಲಾದ ಅಧಿಸೂಚನೆಯನ್ನು ಓದಿಕೊಳ್ಳತಕ್ಕದ್ದು.
2) ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಅಂಶಗಳನ್ನು ಓದಿಕೊಂಡು ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡತಕ್ಕದ್ದು.
3) ಪವರ್ಗ, ಗ್ರಾಮೀಣ, ಕನ್ನಡ.ಪಿಡಿಪಿ  ಹಾಗು ಇತರೆ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಡಿಸಿರುವ ಕೊನೆಯ ದಿನಾಂಕದೊಳಗಾಗಿ ಪಡೆದುಕೊಂಡು ಅರ್ಜಿಯನ್ನು ಸಲ್ಲಿಸತಕ್ಕದ್ದು ನಿಗದಿತ ದಿನಾಂಕದ ನಂತರ ಪಡೆದ ಪ್ರಮಾಣ ಪತ್ರಗಳನ್ನು ಪರಿಗಣಿಸುಲಾಗುವದಿಲ್ಲ.
4) ಅರ್ಹತಾ ಪರೀಕ್ಷೆಯ ಅಂಕಗಳನ್ನು ಅರ್ಜಿಯಲ್ಲಿ ನಿಗದಿಪಡಿಸಿರುವ ಸ್ಥಳದಲ್ಲಿ ಸರಿಯಾಗಿ ಭರ್ತಿ ಮಾಡತಕ್ಕದ್ದು ಒಂದು ವೇಳೆ ಅಂಕಗಳನ್ನು ತಪ್ಪಾಗಿ ಭರ್ತಿ ಮಾಡಿ ನಂತರ ಬದಲವಣೆಗೆ ಕೋರಿದಲ್ಲಿ ಬದಲಾವಣೆ ಮಾಡಲು ಅವಕಾಶವಿರುವದಿಲ್ಲ.
5)  ಸಹಿಷ್ಣುತೆ ಪರೀಕ್ಷೆಗೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ದೈಹಿಕವಾಗಿ ಸದೃಡರಿರಬೇಕು. ಎಲ್ಲಾ ರೀತಿಯಿಂದಲು ಪೂರ್ವ ತಯ್ಯಾರಿ ನಡಿಸಿಕೊಂಡಿರಬೇಕು. ಸಹಿಷ್ಣುತೆ ಪರೀಕ್ಷೆಯ ಸಂದರ್ಭದಲ್ಲಿ  ಸಂಬವಿಸುವ ಯಾವದೇ ರೀತಿಯ ಅನಾಹುತ/ ತೊಂದರೆಗೆಳಿಗೆ ಪೊಲೀಸ ಇಲಾಖೆ/ ನೇಮಕಾತಿ ಸಮೀತಿಯುವ ಜವಾಬ್ದಾರರಾಗಿರುವದಿಲ್ಲ.
6) ನೇಮಕಾತಿ ಪ್ರಕ್ರಿಯನ್ನು ಸಂಪೂರ್ಣವಾಗಿ ಪಾರದರ್ಶಕ , ಗಣಕಿಕೃತ , ವಸ್ತು ನಿಷ್ಟ, ಅರ್ಹತೆ , ಮತ್ತು ಮಿಸಲಾತಿಯ ಆಧಾರದ ಮೇಲೆ ನಡೆಸಲಾಗುವುದು. ಆದ್ದರಿಂದ ಅಬ್ಯರ್ಥಿಗಳು ಯಾವದೇ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಒಳಗಾಗಬಾರದು. ಈ ರೀತಿಯ ಒತ್ತಡಗಳು ಬಂದಲ್ಲಿ ಸ್ಥಳಿಯ ಪೊಲೀಸರಿಗೆ ದೂರು ನೀಡತಕ್ಕದ್ದು. ಯಾವದೇ ಪ್ರಭಾವಿ ವ್ಯಕ್ತಿಗಳಿಂದ ಒತ್ತಡ ತಂದಲ್ಲಿ ಅದನ್ನು ಈ ಇಲಾಖೆಯ ಕಾರ್ಯನಿರ್ವಹಣೆಯ ಅಡಚಣೆಯೆಂದು ಪರಿಗಣಿಸಲಾಗುವುದು.
ನೇಮಕಾತಿ ಪ್ರಕ್ರಿಯೆಗಳಿಗೆ ಸಂಬಂದಿಸಿದಂತೆ ಹೆಚ್ಚಿನ ಮಾಹಿತಿಯ ಸಲುವಾಗಿ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡತಕ್ಕದ್ದು.
ಸಹಾಯವಾಣಿ ಸಂಖ್ಯೆ  080-22943356/22943345