POLICE BHAVAN KALABURAGI

POLICE BHAVAN KALABURAGI

05 January 2014

Gulbarga District Reported Crimes

ಅಪಘಾತ ಪ್ರಕಣಗಳು
ಮಾದನಹಿಪ್ಪರಗಾ ಠಾಣೆ : ಶ್ರೀ  ಶೇಖ ಮಹ್ಮದ ಅಯಾಬ್ ತಂದೆ ಇಸ್ಮಾಯಿಲ್ ಶೇಖ ಇವರು ದಿನಾಂಕ 03-01-2014 ರಂದು ಮದ್ಯಾಹ್ನ 02:00 ಗಂಟೆಯ ಸುಮಾರಿಗೆ ಹಿರೋಳ್ಳಿ ಕ್ರಾಸ ಸಾಗರ ದಾಬಾದ ಹತ್ತಿರ ರಸ್ತೆಯ ಬದಿಯಲ್ಲಿ ನಿಂತ ನನ್ನ ಲಾರಿ ನಂ: AP:02 W-4758 ನೇದ್ದಕ್ಕೆ ಹಿಂದಿನಿಂದ ಬಂದ ಲಾರಿ ನಂ:  MH:12 HD-5980 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ರಸ್ತೆಯ ಪಕ್ಕದಲ್ಲಿ ನಿಂತ ನನಗೂ ಡಿಕ್ಕಿ ಪಡಿಸಿ ಅಫಘಾತ ಮಾಡಿದರಿಂದ ನನ್ನ ಭುಜದ ಎರಡು ಕಡೆ,ಹಿಂದುಗಡೆ ಸೊಂಟದ ಕೇಳಭಾಗದಲ್ಲಿ ಎಡಗಾಲಿನ ತೊಡೆಯ ಮೇಲೆ, ಎಡಗಡೆಯ ಕಿವಿಯ ಮೇಲ್ಬಾಗ ತಲೆಯಲ್ಲಿ ಬಾರಿ ರಕ್ತಗಾಯವಾಗಿರುತ್ತದೆ. ಅಪಘಾತ ಮಾಡಿ ತನ್ನ ಲಾರಿಯನ್ನು  ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜಕುಮಾರ ತಂದೆ ಪರೀಕ್ಷಿತ ರವರು ದಿನಾಂಕ 04-01-2014 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ತನ್ನ ಮೋಟಾರ ಸೈಕಲ ನಂಬರ ಕೆಎ-32 ವಿ-4319 ರ ಮೇಲೆ ಕೆಬಿಎನ್ ಆಸ್ಪತ್ರೆಯಿಂದ ಜಗತ ಸರ್ಕಲ ಮುಖಾಂತರ ಸುಪರ ಮಾರ್ಕೆಟ ಕಡೆಗೆ ಹೋಗುತ್ತಿರುವಾಗ ನ್ಯೂ ವ್ಯಾದಿರಾಜ ಲಾಡ್ಜ ಎದುರಿನ ರೋಡಿನ ಮೇಲೆ ಗಾಜಿಪೂರ ರೋಡ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಇಸಿ-6396 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸುಪರ ಮಾರ್ಕೆಟ ಕಡೆಗೆ ಹೋಗಲು ತಿರುಗಿಸುತ್ತಿದ್ದಾಗ ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಈರಣ್ಣಾ ತಂದೆ ತಿಮ್ಮದಾಸಪ್ಪ ಪೂಜಾರ  ಸಾ: ಪೊಲಾಯಾಪಲ್ಲಿ ತಾ: ಕಲ್ಲೆನದುರ್ಗಾ ಜಿ: ಅನಂತಪೂರ ಆಂದ್ರಪ್ರದೇಶ ಹಾ:ವ: ರಾಮಮಂದಿರ ರಿಂಗ ರೋಡ ಹತ್ತಿರ ಗುಲಬರ್ಗಾ  ರವರು ದಿನಾಂಕ 04-01-2014 ರಂದು ಬೆಳಿಗ್ಗೆ 8-15 ಗಂಟೆ ಸುಮಾರಿಗೆ ತನ್ನ ಮೋಟಾರ ಸೈಕಲ ನಂಬರ ಕೆಎ-43 ಕೆ-3628 ರ ಮೇಲೆ ತಿಮ್ಮರಾಯಪ್ಪ ತಂದೆ ತಿಮ್ಮರಾಯಪ್ಪ ಇತನನ್ನು ತನ್ನ ಮೊಟಾರ ಸೈಕಲ ಹಿಂದುಗಡೆ ಕೂಡಿಸಿಕೊಂಡು ಆರ್.ಪಿ. ಸರ್ಕಲ ಕಡೆಗೆ ಹೋಗುವ ಕುರಿತು ರಾಮ ಮಂದಿರ ರಿಂಗ ರೋಡ ಹತ್ತಿರ ಮೋಟಾರ ಸೈಕಲ ಮೇಲೆ ರೋಡ ಕ್ರಾಸ್ ಮಾಡುತ್ತಿದ್ದಾಗ ಹೈಕೋರ್ಟ ರೋಡ ಕಡೆಯಿಂದ ಕಾರ ನಂಬರ ಎಮ್.ಹೆಚ್-12 ಬಿಜಿ-4859 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗು ಮತ್ತು ತಿಮ್ಮರಾಯನಿಗೆ ಗಾಯಗೊಳಿಸಿ ಕಾರ ಅಲ್ಲೆ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸಂಗೀತಾ ಗಂಡ ಅರುಣಕುಮಾರ ಗೌನಳ್ಳಿ ಸಾ:ಸಂತೋಷ ಕಾಳೆ ಮೈಲ್ಲಾರಲಿಂಗೇಶ್ವರ ಗುಡಿ ಹತ್ತಿರ ಜಗತ ಗುಲಬರ್ಗಾ. ಇವರ ಗಂಡನಾದ ಅರುಣ ಕುಮಾರ ಇತನು ಮದುವೆಯಾದಾಗಿನಿಂದಲೂ ತವರು ಮನೆಯಿಂದ 3 ಲಕ್ಷ ರೂ. ಹಣ  ತೆಗೆದುಕೊಂಡು ಬರುವಂತೆ ಹಾಗೂ ನೀನು ಬೇರೆಯವರೊಂದಿಗೆ ಅನೈತಿಕ ಸಂಬಂದ ಹೊಂದಿರುವೆ ಅಂತಾ ದಿನಾಲೂ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುವದಲ್ಲದೇ ಇದಕ್ಕೆ ನನ್ನ ಅತ್ತೆಯಾದ ಪಾರ್ವತಿ ಮಾವ ಧರ್ಮರಾಜ ಮೈದುನರಾದ ವಿಜಯಕುಮಾರ, ಉದಯಕುಮಾರ, ಸಂಜೀವ ಕುಮಾರ ಹಾಗೂ ನಾದಿನಿಯಾದ ಕನ್ಯಾ ಕುಮಾರಿ ಹಾಗೂ ಶಿವರಾಯ , ನಾಗಮ್ಮ ,ವಿಶ್ವನಾಥ, ಮಲ್ಲಿಕಾರ್ಜುನ  ಸುಭಾಷ , ಕನ್ಯಾಕುಮಾರಿ ಇವರೆಲ್ಲರೂ ನನ್ನ ಗಂಡನಿಗೆ ಪ್ರೊತ್ಸಾಹ ಕೊಟ್ಟಿದ್ದಲ್ಲದೇ ನನಗೆ ಕಿರುಕುಳ ಕೊಟ್ಟಿರುತ್ತಾರೆ. ದಿನಾಂಕ: 04.01.2014 ರಂದು 10.00 ಎ.ಎಮ್ ಕ್ಕೆ ಮೇಲೆ ನಮೂದಿಸಿದವರೆಲ್ಲರೂ ನಮ್ಮ ಮನೆಗೆ ಬಂದು ಅವಾಚ್ಯಶಬ್ದಗಳಿಂದ ಬೈದು ಎಷ್ಟು ಸಲ ಹೇಳಬೇಕು ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂದರೆ ನಮ್ಮ ಮಾತಿಗೆ ಬೆಲೆ ಕೊಡದೇ ಸುಮ್ಮನೇ ಕುಳಿತಿರುವಿ ಅಂತಾ ಕೈಯಿಂದ ಹೊಡೆ ಬಡೆ ಮಾಡಿ ನನ್ನ ಮಗನಾದ ಪ್ರಜ್ವಲ ಕುಮಾರನಿಗೆ ಜಬರದಸ್ತಿಯಿಂದ ತೆಗೆದುಕೊಂಡು ಹೋಗಿರುತ್ತಾರೆ. ಈ ವಿಷಯ ಯಾರಿಗಾದರೂ ತಿಳಿಸಿದ್ದಲ್ಲಿ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.