POLICE BHAVAN KALABURAGI

POLICE BHAVAN KALABURAGI

31 January 2013

GULBARGA DISTRICT REPORTED CRIMES


ಮಹಿಳಾ ಪೊಲೀಸ್ ಠಾಣೆ:
ವರದಕ್ಷಿಣೆ ಕಿರುಕುಳ ಪ್ರಕರಣ:ಮಾನ್ಯ 2 ನೇ ಅಪರ ಜೆ.ಎಮ್.ಎಫ್.ಸಿ.ನ್ಯಾಯಾಲಯದಿಂದ ಖಾಸಗಿ ದೂರು ಪತ್ರ ನಂ.383/2013 ದಿನಾಂಕ:17.01.2013  ನೇದ್ದರ ಆದೇಶದ ಸಾರಂಶದವೇನೆಂದರೆ, ಶ್ರೀಮತಿ  ಶೀತಲ ಗಂಡ ರಾಘವೇಂದ್ರ ಶಿಂತರೆ, ಸಾ||ಪ್ರಗತಿ  ಕಾಲೋನಿ ಗುಲಬರ್ಗಾರವರು ನನಗೆ ದಿನಾಂಕ:12-06-2011 ರಂದು ರಾಘವೇಂದ್ರ ತಂದೆ ಲಕ್ಷ್ಮಣರಾವ ಸಿಂತ್ರೆ ಜೆ.ಸಿ.ನಗರ ಬೆಂಗಳೂರು ಇತನೊಂದಿಗೆ ಸಂಪ್ರದಾಯದಂತೆ ತಂದೆ ತಾಯಿಯವರು ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ನಗದು ಹಣ ಬಂಗಾರ ಇತರೆ ಸಾಮಾನುಗಳು ಕೊಟ್ಟಿರುತ್ತಾರೆ. ಮದುವೆಯಾದ 2 ತಿಂಗಳ ನಂತರ ನನ್ನ ಗಂಡ ತವರು ಮನೆಯಿಂದ ಮನೆ ಖರೀದಿಸಲು 10 ಲಕ್ಷ ರೂಪಾಯಿಗಳು ತೆಗೆದುಕೊಂಡು ಬರಬೇಕು ಅಂತಾ ಹೊಡೆಬಡೆ ಮಾಡಿದ್ದರು, ಈ ವಿಷಯ ತನ್ನ ತಂದೆ ತಾಯಿಗೆ ತಿಳಿಸಿ, ಮೊದಲನೇ ದೀಪಾವಳಿ ಹಬ್ಬಕ್ಕೆ ನನ್ನ ಗಂಡ ನನ್ನ ತವರು ಮನೆಗೆ ಬಂದಿರುವಾಗ 2 ಲಕ್ಷ ರೂಪಾಯಿ ಕೊಟ್ಟು, ಇನ್ನೂ ಮುಂದೆ ಹಣ ಕೊಡುವದು ಆಗುವದಿಲ್ಲ ಅಂತಾ ನನ್ನ ತವರು ಮನೆಯವರು ತಿಳಿಸಿದ್ದರು. ನಂತರ ನಮಗೆ ಒಂದು ಗಂಡು ಮಗು ಒಂದು ಹೆಣ್ಣು ಮಗು ಅವಳಿ ಮಕ್ಕಳಾಗಿರುತ್ತವೆ. ನನ್ನ ಮಕ್ಕಳೊಂದಿಗೆ ಗಂಡನ ಮನೆ ಬೆಂಗಳೂರಿಗೆ ಹೋಗಿದ್ದಾಗ ಆವಾಗಲೂ ಸಹ ಹಣ ತರಬೇಕು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದರೂ. ನನ್ನ ತಂದೆ ತಾಯಿ ಬೆಂಗಳೂರಿಗೆ ಬಂದು ಮಾವ ಲಕ್ಷಣ ಇತನಿಗೆ ಸಾದ್ಯವಾದಷ್ಟು ಬೇಗ ಹಣ ತಂದೆ ಕೊಡುತ್ತೇವೆ. ನಮ್ಮ ಮಗಳಿಗೆ ಇಟ್ಟುಕೊಳ್ಳಿರಿ ಅಂತಾ ಹೇಳಿದ್ದರಿಂದ ಒಂದು ತಿಂಗಳವರೆಗೆ ಇಟ್ಟುಕೊಂಡಿದ್ದರು. ನನ್ನ ತಂದೆ ತಾಯಿಗೆ ಹಣ ತಂದು ಕೊಡಲು ಆಗದೇ ಇದ್ದುದರಿಂದ, ಮತ್ತೆ ಹೊಡೆ ಬಡೆ ಮಾಡಿರುತ್ತಾರೆ. ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಮಾಡಿದ್ದರು ಸಹ ನನ್ನ ಗಂಡ  ಮನೆಗೆ ಕರೆದುಕೊಂಡು ಹೋಗಿರುವದಿಲ್ಲ. ಅನ್ನುವ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:04/2013 ಕಲಂ 498 (ಎ). 323. 506. 511 ಐಪಿಸಿ ಮತ್ತು 3 & 4 ಡಿಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:29-01-2013 ರಂದು ಮಧ್ಯಾಹ್ನ ನನ್ನ ತಂಗಿಯಾದ ನಂದಿತಾ  (ಹೆಸರು ಬದಲಾಯಿಸಿದೆ) 19 ವರ್ಷ ಇವಳು ಹೊಲದಿಂದ ಬರುತ್ತಿರುವಾಗ ಶಾಮರಾವ ತಂದೆ ಮಲಕಾಜಪ್ಪ ಸಾತನೂರ ಮತ್ತು ಬಸವರಾಜ ಬಸ್ಸು @ ತಂದೆ ಪರಮೇಶ್ವರ ಡೊಳ್ಳಾ ಸಾ:ಇಬ್ಬರೂ ಹೊಸಳ್ಳಿ ಗ್ರಾಮದವರು ಹಾಗೂ ಇನ್ನಿಬ್ಬರು ಹೆಸರು ಗೊತ್ತಿರದವರು ಕೂಡಿಕೊಂಡು ಜಬರದಸ್ತಿಯಿಂದ ಬುಲೆರೋ ಜೀಪಿನಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದು, ಅಪಹರಣ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಿಬೇಕು ಅಂತ ಹುಡಗಿಯ ಅಣ್ಣ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:26/2013 ಕಲಂ 366 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಹಲ್ಲೆಗೊಳಗಾದ ವ್ಯಕ್ತಿ ಮೃತ ಪಟ್ಟ ಬಗ್ಗೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ:ನನ್ನ ಅಣ್ಣನ ಮಗನಾದ ಗಣೇಶ ತಂದೆ ಮಲ್ಲಿಕಾರ್ಜುನ ಕಡೆಹಳ್ಳಿ ವಯಾ||16 ವರ್ಷ ಸಾ||ಬೋರಾಭಾಯಿ ನಗರ ಗುಲಬರ್ಗಾ ಇತನ ಜೋತೆ ಕಾಶಿನಾಥ ಬೇಕರಿ @ ಕಾಶಿನಾಥ ಹಾದಿಮನಿ ಸಾ|| ಬೋರಾಬಾಯಿ ಬಡಾವಣೆಯವನ ಜೋತೆ ದಿನಾಂಕ:30-01-2013 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಬಾಯಿ ಮಾತಿನ ತಕರಾರು ಆಗಿತ್ತು, ಗಣೇಶನು ನಮ್ಮ ಬಡಾವಣೆಯ ಶಂಕ್ರೆಪ್ಪಾ ಬಂದರವಾಡ ಇವರ ಮನೆಯ ಮುಂದೆ ಮಧ್ಯಾಹ್ನ 2-45 ಗಂಟೆಯ ಸುಮಾರಿಗೆ ಕುಳಿತಾಗ, ಕಾಶಿನಾಥ ಬೇಕರಿ @ ಕಾಶಿನಾಥ ಹಾದಿಮನಿ ಇತನು ಬಂದು, ಕೊಲೆ ಮಾಡುವ ಉದ್ದೇಶದಿಂದ ತಲವಾರದಿಂದ ಗಣೇಶನ ಹಣೆಯ ಮೇಲೆ, ತುಟಿಯ ಮೇಲೆ, ಎರಡು ಕೈಗಳ ಮೇಲೆ ಹೊಡೆದು ಭಾರಿ ರಕ್ತಗಾಯದಿಂದ ಬೇಹುಶ್ ಇರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹಣಮಂತ ತಂದೆ ಶಿವಶರಣಪ್ಫಾ ಕಡೆಹಳ್ಳಿ ಸಾ|| ಭೊರಾಭಾಯಿ ನಗರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:9/2013 ಕಲಂ 307, ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿತ್ತು. ದಿನಾಂಕ 30-01-2013 ರಂದು ರಾತ್ರಿ 11-00  ಗಂಟೆಗೆ ಹೆಚ್ಚಿನ ಉಪಚಾರಕ್ಕಾಗಿ ಸೋಲಾಪೂರಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರಿಂದ ಕಲಂ 302 ಐಪಿಸಿ ಅಳವಡಿಸಿಕೊಳ್ಳಲಾಗಿದೆ.
ಜಾತಿ ನಿಂದನೆ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ:ಮಾನ್ಯ ನ್ಯಾಯಾಲಯದ ಖಾಸಗಿ ದೂರು ನಂ:01/2013 ನೇದ್ದು ವಸೂಲಾಗಿದ್ದರ ಅರ್ಜಿ ಸಾರಾಂಶವೆನೆಂದರೆ. ಶ್ರೀ,ಭಗವಂತ ತಂದೆ ಅಪ್ಪಣ್ಣಾ ಕಂದಾರೆ ವಯಾ|| 41 ವರ್ಷ ಉ|| ಪತ್ರಕರ್ತ  ಸಾ|| ತೆಲಸಂಗ  ತಾ|| ಅಥಣಿ ಜಿ|| ಬೆಳಗಾಂವ ರವರಿಗೆ, ಶ್ರೀ ಸಂಗಪ್ಪ ತಂದೆ ನಾಗಪ್ಪಾ ಶಿವಣಗಿ ವಯ|| 56 ವರ್ಷ ಉ|| ಅಧಿಕ್ಷಕರು  ಕೈಗಾರಿಕಾ ಮತ್ತು ವಾಣಿಜ್ಯ  ಕೇಂದ್ರ  ಗುಲಬರ್ಗಾ ಸಾ|| ಐ.ಟಿ.ಐ ಕಾಲೇಜ ಪಕ್ಕದಲ್ಲಿ ಜೇವರ್ಗಿ  ಕ್ರಾಸ್ ಗುಲಬರ್ಗಾರವರು  ದೂರುದಾರರಿಗೆ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿರುತ್ತಾರೆ.ಅಂತಾ ನ್ಯಾಯಾಲಯದಿಂದ ಖಾಸಗಿ ದೂರು ವಸೂಲಾಗಿದ್ದರಿಂದ ಠಾಣೆ ಗುನ್ನೆ ನಂ:22/2013, ಕಲಂ 323, 341, 504, 506  ಐಪಿಸಿ & 3(1)(10) ಎಸ್‌.ಸಿ/ಎಸ್‌.ಟಿ ಪಿ.ಎ ಆಕ್ಟ್ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ಮಲಕಪ್ಪ ತಂದೆ ಯಮನಪ್ಪ ಕಟ್ಟಿಮನಿ ಸಾ: ಎಸ್ ಮಳ್ಳಿ ರವರು ನನ್ನ ಮಗನಾದ ಯಮನಪ್ಪಾ ಇತನು ದಿನಾಂಕ:28-01-2013 ರಂದು ಮುಂಜಾನೆ 10-30 ಗಂಟೆಗೆ ಮಳ್ಳಿ ಸರಕಾರಿ ಪ್ರೌಡ ಶಾಲೆಯ ಎದುರಿನಿಂದ ನಡೆದುಕೊಂಡು ಬರುವಾಗ ಟಾಟಾ-ಎಸಿ ನಂ ಕೆಎ-28-ಎ-4415 ನೇದ್ದರ ಚಾಲಕನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಯಮನಪ್ಪನಿಗೆ ಡಿಕ್ಕಿ ಪಡಿಸಿದ್ದರಿಂದ ಅವನ ತಲೆಯ ಹಿಂಬಾಗದಲ್ಲಿ ಭಾರಿ ರಕ್ತಗಾಯ ಹಾಗೂ ಡೊಂಕಕ್ಕೆ, ಎದೆಗೆ, ಭಾರಿ ಗುಪ್ತ ಪೆಟ್ಟಾಗಿದ್ದು, ವಾಹನ ಚಾಲಕನು ಅವನಿಗೆ ಎಬ್ಬಿಸಿ  ಅವನಿಗೆ ಆದ ಗಾಯವನ್ನು ನೋಡಿ ತನ್ನ ವಾಹನವನ್ನು ತೆಗೆದುಕೊಂಡು ಹೋಗಿರುತ್ತಾನೆ. ಯಮನಪ್ಪ ಇತನಿಗೆ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ. ಅಂತಾ ಆತನ ತಂದೆಯಾದ ಮಲಕಪ್ಪಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:19/2013,ಕಲಂ,279, 304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.