POLICE BHAVAN KALABURAGI

POLICE BHAVAN KALABURAGI

06 November 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಚೌಕ ಠಾಣೆ : ದಿನಾಂಕ 05/11/2015 ರಂದು ಖಿಲ್ಲಾದ ಎದುರುಗಡೆ ಇರುವ ಸಾರ್ವಜನಿಕ ರಸ್ತೆಯ ಹತ್ತಿರ ಕೆಲವು ಜನರು ಸಾರ್ವಜನಿಕರಿಂದ ಹಣ ಪಡೆದುಕೊಂಡು `1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ. ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಮೋಹನ ಮಾನೆ ಪಿ.ಎಸ್.ಐ (.ಅವಿ) ಚೌಕ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಖಿಲ್ಲಾದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚಿಟಿಗಳನ್ನು ಬರೆದುಕೊಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶೇಖ ಪೈಯಾಜ ತಂದೆ ಶೇಖ ಸಲೀಮ್ ತಾಂಬಡಿಗಡ ಸಾ: ಖಿಲ್ಲಾದ ಹತ್ತಿರ ಕಲಬುರಗಿ ಅಂತಾ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ ನಗದು ಹಣ 2100 ರೂ, ಒಂದು ಮಟಕಾ ಚೀಟಿ, ಒಂದು ಬಾಲಪೆನ್ನು, ಒಂದು ಮೋಬಾಯಿಲ್ ಅ.ಕಿ. 00 ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ ಮುದ್ದೆ ಮಾಲು ಜಪ್ತಿ ಪಡಿಸಿಕೊಂಡು ಈ ಮಟಕಾ ಚೀಟಿಗಳನ್ನು ಯಾರಿಗೆ ಕೊಡುವುದಾಗಿ ವಿಚಾರಿಸಿದಾಗ ಸದರಿಯವನು ತಾನು ಈ ಮಟಕಾ ಚೀಟಿಗಳನ್ನು ಮಟಕಾ ಬುಕ್ಕಿಯಾದ ವಿಜಯಕುಮಾರ @ ಬುಕ್ಕಿ ವಿಜಯ ತಂದೆ ಹಣಮಂತರಾವ ಬೇಳಗೇರಿ ಸಾ: ಮಾಹಾದೇವ ನಗರ ಶೇಖ ರೋಜಾ ಕಲಬುರಗಿ ಅಂತಾ ಹೆಸರು ಹೇಳಿದ್ದು ಸದರಿ ಆರೋಪಿತನಿಗೆ ಸ್ಥಳದಲ್ಲಿ ದಸ್ತಗಿರಿ ಮಾಡಿಕೊಂಡು ಅವನೊಂದಿಗೆ ಮಟಕಾ ಬುಕ್ಕಿ ಇತನ ವಿಳಾಸಕ್ಕೆ ಹೊಗಿ ನೋಡಿದಾಗ ಸದರಿ ಮಟಕಾ ಬುಕ್ಕಿ ವಿಜಯಕುಮಾರ @ ಬುಕ್ಕಿ ವಿಜಯ ಇತನು ಅಲ್ಲಿಂದ ಓಡಿ ಹೋಗಿದ್ದು ಸದರಿ ಆರೋಪಿತನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಮಾಹಂತಪ್ಪ ತಂದೆ ಭೀಮರಾಯ ಬೂಸಗೊಂಡು ಸಾ- ಎಸ್.ಎನ್. ಹಿಪ್ಪರಗಾ ತಾ-ಜೇವರ್ಗಿ ಜಿ-ಕಲಬುರ್ಗಿ ಇವರಿಗೆ 3 ಜನ ಹೆಣ್ಣು ಮಕ್ಕಳು ಮತ್ತು ,ಒಬ್ಬ ಗಂಡಸ ಮಗನು ಇರುತ್ತಾನೆ. ನಿನ್ನ ದಿನಾಂಕ:05/11/2015 ರಂದು ಮುಂಜಾನೆ 11-00ಗಂಟೆಯ ಸುಮಾರಿಗೆ ನಮ್ಮ ಊರಿನಲ್ಲಿ ಇರುವ ಹೊಲ ಸರ್ವೇ ನಂ:48ಕ್ಕೆ ನಾನು ನನ್ನ ಹೆಂಡತಿ ಶ್ರೀದೇವಿ ನನ್ನ ಮಗಳಾದ ದಾನಮ್ಮ ಕೂಡಿ ಹೊಲಕ್ಕೆ ಹೋದೇವು ನಾನು ನನ್ನ ಹೆಂಡತಿ ಹೊಲದಲ್ಲಿ ಕಸ ತಗಿಯುತ್ತಿದ್ದೇವು ನನ್ನ ಮಗಳಾದ ದಾನಮ್ಮ ಇವಳು ಹೊಲದಲ್ಲಿ ನಮ್ಮ ಹಿಂದೆನೆ ಹತ್ತಿ ಬೆಳೆಯಲ್ಲಿ ತಿರುಗಾಡುತ್ತಿದ್ದಳು ನಂತರ ನಾವೆಲ್ಲರೂ ಊಟ ಮಾಡಿದೇವು ನಾವಿಬ್ಬರು ಹತ್ತಿ ಬೆಳೆಯಲ್ಲಿ  ತಿರುಗಾಡುತ್ತಿದ್ದಳು ನಂತರ ಸಾಯಂಕಾಲ 5-00 ಪಿ.ಎಂ.ದ ಸುಮಾರಿಗೆ ನನ್ನ ಮಗಳು ದಾನಮ್ಮ ನಮ್ಮ ಹೊಲದಲ್ಲಿನ ಗುಡಿಸಲು ಹತ್ತಿರ ಹೋಗಿ ಅಲ್ಲೆ  ಮುಂದೆ ಮಲಗಿಕೊಂಡಿದ್ದು ಅಷ್ಟರಲ್ಲಿ ಅವಳ ಎಡಗೈ ರಟ್ಟಿಗೆ  ಹಾವು ಕಡಿದಿದ್ದು ಏನು ಕಡತು ಅಂತ ಒದರಿದಾಗ ನಾವು  ಇಬ್ಬರು ಓಡುತ್ತಾ ಬಂದಾಗ ಅವಳ ಹತ್ತಿರ ಗುಡಿಸಲು ಮುಂದೆ ಹಾವು ಇದ್ದು ನಾವು ಬಂದ ನಂತರ ಒಳಗೆ ಹೊಯಿತು ನಂತರ ಅವಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಾಗ ಹಾದಿಯಲ್ಲಿ  ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.