POLICE BHAVAN KALABURAGI

POLICE BHAVAN KALABURAGI

31 July 2012

GULBARGA DIST REPORTED CRIME

ಅಪಹರಣ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ :ಶ್ರೀ, ಸೋಮಯ್ಯ ತಂದೆ ಭೀಮಯ್ಯ ಒಡ್ಡರ ಸಾ|| ಅರಳಗುಂಡಗಿ ರವರು ನನಗೆ ರೇಶ್ಮಾ ಅಂತಾ 13 ವರ್ಷದ ಮಗಳಿದ್ದು,  ನಮ್ಮ ಜಾತಿಯವನೆಯಾದ ಹಣಮಂತ ತಂದೆ ಯಂಕಯ್ಯ ಕಲ್ಲೂರ ಇತನು ನಮ್ಮ ಮನೆಗೆ ಆಗಾಗ ಮನಗೆ ಬಂದು ಹೋಗಿ ನಮ್ಮೊಂದಿಗೆ ಸಲುಗೆಯಿಂದ ಮಾತನಾಡಿ ಹೋಗುತ್ತಿದ್ದನು.ದಿನಾಂಕ: 23-07-2012 ರಂದು ಬೆಳಿಗ್ಗೆ 9-00 ಗಂಟೆಗೆ ನಾನು ಗೌಂಡಿ ಕೆಲಸಕ್ಕೆಂದು ಕುರನಳ್ಳಿ ಗ್ರಾಮಕ್ಕೆ ಹೋಗಿದ್ದೆನು, ನಮ್ಮ ಮನೆಯಲ್ಲಿ ನನ್ನ ಹೆಂಡತಿಯಾದ ನಾಗಮ್ಮ ಮತ್ತು ನಮ್ಮ ಮಗಳಾದ ರೇಶ್ಮಾ ಇವರು ಮನೆಯಲ್ಲಿದ್ದರು ರಾತ್ರಿ 9 ಗಂಟೆಗೆ ನಾನು ಕೆಲಸದಿಂದ ಮನೆಗೆ ಬಂದಾಗ ನಮ್ಮೂರಿನ ಭೀಮಯ್ಯ ತಂದೆ ಯಂಕಯ್ಯ ಕಡಕೋಳ, ರಾಜು ತಂದೆ ರಾಮಯ್ಯ ರವರು  ನಿಮ್ಮ ಮಗಳಾದ ರೇಶ್ಮಾ ಇವಳಿಗೆ ಹಣಮಂತ ತಂದೆ ಯಂಕಯ್ಯ ಕಲ್ಲೂರ,. ಶಿವಾನಂದ ತಂದೆ ನಾಗಪ್ಪ ಒಡ್ಡರ, ಮಾಹಾಂತೇಶ ತಂದೆ ನಾಗಪ್ಪ ಒಡ್ಡರ, ಮಾರ್ಖಂಡಯ್ಯ ತಂದೆ ಗುಂಡಪ್ಪ ಒಡ್ಡರ ಮತ್ತು ನಾಗಪ್ಪ ತಂದೆ ರಾಮಸ್ವಾಮಿ ಒಡ್ಡರ ಹೀಗೆಲ್ಲರೂ ಎರಡು ಮೋಟಾರ ಸೈಕಲ್ ಗಳ ಮೇಲೆ ಬಂದವರೆ ರೇಶ್ಮಾ ಸಂಡಾಸಕ್ಕೆ ಹೋಗಿ ವಾಪಸ ಮನೆಯ ಕಡೆಗೆ ಬರುವಾಗ ಸರಕಾರಿ ಪ್ರಾಥಮಿಕ ಶಾಲೆ ಹಿಂದುಗಡೆ ರೋಡಿನ ಮೇಲೆ ಎತ್ತಿಕೊಂಡು ಮೋಟಾರ ಸೈಕಲ್ ಮೇಲೆ ಕುಡಿಸಿಕೊಂಡು ನಡೆ ಅಂತಾ ಪ್ರಚೋದನೆ ಮಾಡಿದರು ಆಗ ರೇಶ್ಮಾ ಇವಳು ಬೇಡ ಬೇಡ ಅಂತಾ ಚೀರಾಡಿದರೂ ನಿನಗೆ ನಾನು ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಜಬರದಸ್ತಿಯಿಂದ ಹಣಮಂತನು ತನ್ನ ಗಾಡಿಯ ಮೇಲೆ ಕುಡಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2012 ಕಲಂ 143, 366 (ಎ) 109 , 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

30 July 2012

GULBARGA DIST REPORTED CRIME


ಗುಲಬರ್ಗಾ ಜಿಲ್ಲಾ ಪೊಲೀಸರ ಯಶಸ್ವಿ ಕಾರ್ಯಚರಣೆ
ಹಿರಿಯ ಪತ್ರಕರ್ತ, ಹಾಗೂ ಸಾಹಿತಿ ಲಿಂಗಣ್ಣ ಸತ್ಯಂಪೇಟ ಕೊಲೆ ಪ್ರಕರಣ ಬೇಧಿಸಿ ಆರೋಪಿಗಳ ಬಂದನ .
ಮಾನ್ಯ ಐಜಿಪಿ ಈಶಾನ್ಯ ವಲಯ ಶ್ರೀ ಮಹಮ್ಮದ ವಜೀರ ಅಹ್ಮದ ಐಪಿಎಸ್ ಹಾಗೂ ಎಸ್.ಪಿ ಗುಲಬರ್ಗಾ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್, ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾರವರ ಮಾರ್ಗದರ್ಶನದಲ್ಲಿ  ತನಿಖಾ ತಂಡದ ಅಧಿಕಾರಿಗಳಾದ ಶ್ರೀ ಭೂಷಣ ಭೋರಸೆ ಎ.ಎಸ್.ಪಿ, (ಎ) ಉಪ-ವಿಭಾಗ, ಶ್ರೀ ಚಂದ್ರಶೇಖರ ಬಿಪಿ ಸಿಪಿಐ ಎಮ್.ಬಿ ನಗರ, ಸಿಪಿಐಗಳಾದ ಶ್ರೀ ಶರಣಬಸವೇಶ್ವರ, ವಿಶ್ವನಾಥ ಕುಲಕರ್ಣಿ, ಪಿಐಗಳಾದ ಜೆ.ಹೆಚ್ ಇನಾಮದಾರ, ಬಸೀರ ಪಟೇಲ, ಅಸ್ಲಾಮ ಬಾಷ, ಪಿ.ಎಸ್.ಐ ಗಳಾದ ಶ್ರೀ ರಾಜಶೇಖರ ಹಳಿಗೋದಿ, ಶಾಂತಿನಾಥ ಬಿ.ಪಿ, ಪಂಡಿತ ಸಗರ, ಬಸವರಾಜ ತೇಲಿ, ಸಂತೋಷಕುಮಾರ, ಹಾಗೂ ಸಿಬ್ಬಂದಿ ಜನರಾದ ಬಸವರಾಜ ಎ.ಎಸ್.ಐ, ಶಂಕರಲಿಂಗ, ತುಕಾರಾಮ, ಸುಭಾಷ, ಕಾಳಪ್ಪ, ದೇವಿಂದ್ರ, ಅರ್ಜುನ, ಅಶೋಕ ಹಳಗೋದಿ, ಮಶಾಕ, ಪ್ರಭಾಕರ, ಶಿವಪ್ರಕಾಶ, ರಪಿಕ, ರಾಮು ಪವಾರ, ಗಂಗಯ್ಯ, ಚನ್ನವೀರೇಶ, ಅಶೋಕ ಗಣಕಯಂತ್ರ ವಿಭಾಗ, ಅಣ್ಣಪ್ಪ, ಬಸವರಾಜ ಪಾಟೀಲ, ಶಿವಶರಣಪ್ಪ, ಶರಣಬಸಪ್ಪ, ರಾಜಕುಮಾರ ರವರು ದಿನಾಂಕ:29-07-2012 ರ ರಾತ್ರಿ ಗುಲಬರ್ಗಾ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಖಚಿತ ಮಾಹಿತಿಯಂತೆ ಹಠಾತ್ ದಾಳಿ ಮಾಡಿ ಹಿರಿಯ ಪತ್ರಕರ್ತ ಲಿಂಗಣ್ಣ ಸತ್ಯಂಪೇಟ್ ಕೊಲೆ ಪ್ರಕರಣದ ಆರೋಪಿತರಾದ ದಯಾನಂದ ತಂದೆ ಬೀರಪ್ಪಾ ಪೂಜಾರಿ ವಃ38  ವರ್ಷ ಜಾಃ ಕುರುಬ ಉಃ ಜೈ ಜವಾನ ಸೆಕ್ಯೂರಿಟಿ ಗಾರ್ಡ ಎಜೇನ್ಸಿ ಗುಲಬರ್ಗಾ, ಸಾ|| ಸಮತಾ ಕಾಲೋನಿ ಬ್ರಹ್ಮಪುರ ಗುಲಬರ್ಗಾ, ಶಾಮರಾವ @ ಶಾಮ ತಂದೆ ಶರಣಪ್ಪ ಪೂಜಾರಿ ವಃ38 ವರ್ಷ ಜಾಃ ಕುರುಬ ಉಃ ಜೈ ಜವಾನ ಸೆಕ್ಯೂರಿಟಿ ಗಾರ್ಡ ಎಜೇನ್ಸಿ ಗುಲಬರ್ಗಾ ಸಾ|| ಕನಕ ನಗರ ಬ್ರಹ್ಮಪುರ ಗುಲಬರ್ಗಾರವರನ್ನು ದಸ್ತಗಿರಿ ಮಾಡಿ ತನಿಖೆಗೆ ಒಳ ಪಡಿಸಿ ತನಿಖೆ ಕಾಲಕ್ಕೆ ಆರೋಪಿತರ ತಾಬಾದಿಂದ ಮೃತ ಲಿಂಗಣ್ಣ ರವರ ಸುಲಿಗೆಗೊಳಗಾದ ಮೊಬಾಯಿಲ್ ಪೊನ್, ನಗದು ಹಣ, ಬಸ್ ಪಾಸ್, ಹ್ಯಾಂಡಬ್ಯಾಗ, ಶಾಲು, ಪುಸ್ತಕ, ಬಸವ ಮಾರ್ಗ ಪತ್ರಿಕೆ ವಗೈರೆ ವಸ್ತುಗಳನ್ನು ಆರೋಪಿತರ ತಾಬಾದಿಂದ ವಶ ಪಡಿಸಿಕೊಂಡಿದ್ದು, ಹಿರಿಯ ಪತ್ರಕರ್ತ ಮೃತ ಲಿಂಗಣ್ಣ ಸತ್ಯಂಪೇಟ್ ರವರ ಶವವನ್ನು ಸಾಕ್ಷಿ ಪುರಾವೆ ನಾಶ ಪಡಿಸುವ ಉದ್ದೇಶದಿಂದ ಮೃತ ದೇಹದ ಮೇಲಿನ  ಧೋತಿ ಮತ್ತು ಶರ್ಟಗಳನ್ನು ತೆಗೆದು ದೇವಸ್ಥಾನದ ಆವರಣದ ಎದುರಿನ ತೆಂಗಿನ ಕಾಯಿ ಮಾರಾಟ ಮಾಡುವ  ಅಂಗಡಿಯ ಕೆಳಗಿನ ಒಳ ಚರಂಡಿಯಲ್ಲಿ ಬಿಸಾಕಿದ ಬಗ್ಗೆ ತಿಳಿಸಿರುತ್ತಾರೆ. ಸದರಿ ಲಿಂಗಣ್ಣ ಸತ್ಯಂಪೇಟ ರವರು ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ಯ ಪ್ರವಚನ ನಡೆಯುವ ಕಾರ್ಯಕ್ರಮಕ್ಕೆ ಅಹ್ವಾನಿತರಾಗಿ ಬಂದಿದ್ದರು. ಐದು ಬೇರೆ ಬೇರೆ ತಂಡದ ವಿಶೇಷ ತನಿಖಾಧಿಕಾರಿಗಳು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ತನಿಖೆ ಮಾಡಿ ವಿಶ್ಲೇಷಣೆಗೆ ಒಳ ಪಡಿಸಿ ರಾಜ್ಯದ ಗಮನ ಸೆಳದ ಸತ್ಯಂಪೇಟ್ ರವರ ಕೊಲೆ ಪ್ರಕರಣವನ್ನು ಅತ್ಯಂತ ಶೀಘ್ರವಾಗಿ ಚಾಕಚಕ್ಯತೆಯಿಂದ ಬೇಧಿಸಿ ಸತ್ಯಂಪೇಟ್ ರವರ ನಿಗೂಢ ಸಾವಿನ ಪ್ರಕರಣವನ್ನು ಬೇಧಿಸಿರುತ್ತಾರೆ. ಬಂದಿತ ಎರಡು ಜನ ಆರೊಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದ್ದು.  
ಸದರಿ ಆರೋಪಿತರಾದ ದಯಾನಂದ ಹಾಗೂ ಶಾಮರಾವ ರವರನ್ನು ಪುನಃ ಪೊಲೀಸ ಕಷ್ಟಡಿಗೆ ಪಡೆದು ತನಿಖೆಗೆ ಒಳಪಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಿಶೇಷ ತನಿಖಾ ತಂಡಕ್ಕೆ ಐಜಿಪಿ ಈಶಾನ್ಯ ವಲಯ ಗುಲಬರ್ಗಾ ಶ್ರೀ ಮಹಮ್ಮದ ವಜೀರ ಅಹ್ಮದ ಐಪಿಎಸ್ ಹಾಗೂ ಎಸ್.ಪಿ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ರವರು ಕುತೂಹಲ ಕೆರಳಿಸಿದ ಕೊಲೆ ಪ್ರಕರಣವನ್ನು ಬೇಧಿಸಿದ ತಂಡವನ್ನು ಶ್ಲಾಘಿಸಿ 25,000/- ರೂಪಾಯಿಗಳ ನಗದು  ಬಹುಮಾನವನ್ನು ಘೋಷಿಸಿರುತ್ತಾರೆ.   
ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರು ಲಿಂಗಣ್ಣ ಸತ್ಯಂಪೇಟ ರವರ ಕೊಲೆ ಪ್ರಕರಣದ ಇಬ್ಬರೂ ಆರೋಪಿತರನ್ನು ಹಾಗೂ ಸುಲಿಗೆಗೆ ಒಳಗಾದ ಲಿಂಗಣ್ಣ ಸತ್ಯಂ ಪೇಟ ರವರ ಮೊಬಾಯಿಲ್ ಪೊನ್, ನಗದು ಹಣ, ಹ್ಯಾಂಡ ಬ್ಯಾಗ, ಶಾಲು, ಅವರಿಂದ ರಚಿತವಾದ ಕೃತಿಗಳು, ಬಸವ ಮಾರ್ಗ ಪತ್ರಿಕೆಯ ಚಂದಾ ರಸೀದಿ ಪುಸ್ತಕ, ಬಸ್ ಪಾಸ ವಗೈರೆ ವಸ್ತುಗಳನ್ನು ಜಪ್ತು ಪಡಿಸಿಕೊಂಡು ತನಿಖೆ ಮುಂದುವರೆಯಿಸಿರುತ್ತಾರೆ. 

GULBARGA DIST REPORTED CRIMES

ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ : ದಿನಾಂಕ 29-07-12 ರಂದು ಸಾಯಂಕಾಲ 5-15  ಗಂಟೆ ಸುಮಾರಿಗೆ  ರಾಜು ತಂದೆ ಬಸವರಾಜ ಎಕಶೇಟ್ಟಿ, ಸಂತೋಷ ಕುಮಾರ ತಂದೆ ವಿಜಯಕಜುಮಾರ ಪರೀಟ್, ವೀರೇಶ ತಂದೆ ಗುಂಡಪ್ಪಾ ಮಾಶೇಟ್ಟಿ, ಗಿರೀಶ ತಂದೆ ದತ್ತಾತ್ರಯ ನಂದಲೇ, ಬಸವರಾಜ ತಂದೆ ಮಾಣಿಕರಾವ, ಮತ್ತು ಅಬ್ದುಲ ರಜಾಕ ತಂದೆ ಗೋರಬೈ ಸಾ||  ಎಲ್ಲರೂ ಗುಲಬರ್ಗಾ ರವರು ಡಬರಾಬಾದ ಈದ್ಗಾ ಹತ್ತಿರುವ ಒಂದು ಬೇವಿನ ಗಿಡದ ಕೆಳಗಡೆ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿರುವಾಗ ಮಾನ್ಯ ಡಿ.ಎಸ್.ಪಿ. ಗ್ರಾಮಾಂತರ್ರ  ರವರ ಮಾರ್ಗದರ್ಶನ ಮೇರೆಗೆ ಮತ್ತು ಸಿಪಿಐ ಗ್ರಾಮೀಣ ವೃತ್ತ  ಗುಲಬರ್ಗಾ ರವರ ನೇತೃತ್ವದಲ್ಲಿ ದಾಳಿ ಮಾಡಿ ಅವರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ, ಇಸ್ಪೇಟ ಎಲೆಗಳು ಜಪ್ತ ಮಾಡಿಕೊಂಡಿದ್ದರಿಂದ ಸರಕಾರಿ ತರ್ಪೆಯಾಗಿ ಶ್ರೀ ಆನಂದರಾವ ಎಸ್.ಎನ್.   ಪಿಎಸ್ಐ ಗ್ರಾಮೀಣ ಪೊಲೀಸ ಠಾಣೆರವರು  ಠಾಣೆ ಗುನ್ನೆ ನಂ: 247/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

ಚರಂಡಿಯಲ್ಲಿ ಬಿದ್ದು ಒಂದು ಮಗು ಸಾವು:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಸಂತೋಷ ತಂದೆ ದತ್ತಪ್ಪಾ ಅಪಗೊಂಡಿ ಹಟಗಾರ್ ಸಾ|| ಮರಗಮ್ಮನ ಗುಡಿಯ ಹತ್ತಿರ ಇಂದಿರಾನಗರ ಗುಲಬರ್ಗಾರವರು ನನಗೆ ನನಗೆ ಎರಡು ಜನ ಮಕ್ಕಳಿದ್ದು ಪೂಜಾ 5 ವರ್ಷ ಎರಡನೆಯವನು ಅಭೀಷೆಕ 3 ವರ್ಷ 6 ತಿಂಗಳು ದಿನಾಂಕ.29-07-2012 ರಂದು ಬೆಳಿಗ್ಗೆ 10.00 ಗಂಟೆಗೆ ದಿನ ನಿತ್ಯದಂತೆ ನಾನು ಕೂಲಿ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ 1.30 ಗಂಟೆಗೆ ನನ್ನ ತಾಯಿ ಬಂಗಾರೆಮ್ಮ ಇವಳು ನನಗೆ ಪೋನ್ ಮಾಡಿ ನನಗೆ ತಿಳಿಸಿದ್ದೆನಂದರೆ, ನಿನ್ನ ಮಗ ಅಭೀಷೆಕ ಈತನು ನಮ್ಮ ಮನೆಯ ಮುಂದಿರುವ ಚರಂಡಿಯಲ್ಲಿ ಬಿದ್ದಿದ್ದು ಅವನನ್ನು ಮೇಲೆ ಎತ್ತಿದ್ದೆವೆ ಅವನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವದಿದೆ ಬೇಗ ಬಾ ಅಂತಾ ತಿಳಿಸಿದ್ದರಿಂದ ನಾನು ಬಂದು ನನ್ನ ತಾಯಿಯನ್ನು ವಿಚಾರಿಸಲಾಗಿ ಅಭಿಷೆಕ ಈತನು ಆಟ ಆಡಲು ಹೋಗಿ ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಬಿದ್ದಿದ್ದು ನಾವು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿ ಸಿಗದ ಕಾರಣ ವಾಪಸ್ಸು ಮನೆಗೆ ಬರುವಾಗ ನಮ್ಮ ಮನೆಯ ಮುಂದೆ ಇರುವ ಚರಂಡಿಯಲ್ಲಿ ಅಭಿಷೆಕ ಈತನು ಬಿದ್ದಿದ್ದು ನೋಡಿ ನಾನು ಮತ್ತು ನಮ್ಮ ಒಣಿಯವರು ಚರಂಡಿಯಲ್ಲಿ ಬಿದ್ದಿರುವ ಅಭಿಷೆಕನನ್ನು ಮೇಲೆ ಎತ್ತಿರುತ್ತೇವೆ. ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗೊಣ ಅಂತಾ ತಿಳಿಸಿದ್ದರಿಂದ  ಡಾ|| ಸೂರ್ಯಕಾಂತ ಪಾವಲೆ ಮಕ್ಕಳ ತಜ್ಞರು ಇನರ ಆಸ್ಪತ್ರೆಗೆ ತಗೆದುಕೊಂಡು ಹೋಗಿ ತೊರಿಸಿದ್ದು ಅಲ್ಲಿಯ ವೈದ್ಯರು ನನ್ನ ಮಗನನ್ನು ಪರಿಕ್ಷಿಸಿ ಸದರಿ ಹುಡುಗನು ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದರು. ಕಾರಣ ನಮ್ಮ ಒಣಿಯ ಮುಂದಿರುವ ಚರಂಡಿಯು ತೆರೆದ ಚರಂಡಿಯಾಗಿದ್ದು ಎರಡು ಮೂರು ತಿಂಗಳ ಹಿಂದೆ ಮಹಾನಗರ ಪಾಲಿಕೆಯವರು ಚರಂಡಿಯಲ್ಲಿರುವ ಹೂಳ ತೆಗೆಯುವ ಕೆಲಸ ಕೈಗೊಂಡಿದ್ದು, ಸದರಿ ಮಹಾ ನಗರ ಪಾಲಿಕೆ ಅಧಿಕಾರಿಗಳಿಗೆ ಓಣಿಯ ಪ್ರಮುಖರಾದ ಶಾಂತಪ್ಪ. ಹಡಪದ ಮತ್ತು ಶಿವಶರಣಪ್ಪ.ಸಜ್ಜನಶೆಟ್ಟಿ ರವರು ಹಲವಾರು ಬಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಅಲ್ಲಲ್ಲಿ ಎರಡರಿಂದ ಮೂರು ಅಡಿ ನೀರು ನಿಲ್ಲುತ್ತಿದ್ದು ಅದು ಮಕ್ಕಳ ಪ್ರಾಣಕ್ಕೆ  ಅಪಾಯ ಇದೆ ಕೆಲಸ ಸರಿಯಾಗಿ ನಿರ್ವಹಿಸುವಂತೆ ವಿನಂತಿಸಿಕೊಂಡಿದ್ದರು  ಸಹ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೆಲಸ ಮಾಡದೇ ನಿರ್ಲಕ್ಷ್ಯತನ ಮತ್ತು ಬೇಜವಬ್ದಾರಿ ತೋರಿಸಿದರಿಂದ ನನ್ನ ಮಗನು ಚರಂಡಿಯಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಕಾರಣ ನನ್ನ ಮಗನ ಸಾವಿಗೆ ಕಾರಣರಾದ ಮಹಾನಗರ ಪಾಲಿಕೆಯ ಆಯುಕ್ತರಾದ 1) ಶ್ರೀ.ಸಿ.ನಾಗಯ್ಯ 2) ವಿಜಯಕುಮಾರ್ ಎಕ್ಸೂಕೂಟಿವ ಇಂಜಿನಿಯರ್  3). ಮಹ್ಮದ್ ಶಮಶೊದ್ದಿನ್ ವಲಯ ನಂಬರ್ 01 ಆಯುಕ್ತರು, 4). ಬಸವರಾಜ.ಪಾಟೀಲ್ ಸೆನೆಟರಿ ಇನ್ಸಪೆಕ್ಟರ್ ಹಾಗೂ ಗೋಪಾಲ್ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/2012 ಕಲಂ 149, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

29 July 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ನಿತೀಶ ತಂದೆ ಮನೋಹರ ಘಾಟೆ ಸಾ|| ಶಿವಲಿಂಗ ನಗರ ಅಳಂದ ರೋಡ ಗುಲಬರ್ಗಾ ರವರು ನನ್ನ ಹಿರೊ ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್ ನಂ. ಕೆಎ-32/ ಕ್ಯೂ-6283 ನೇದ್ದನ್ನು ದಿನಾಂಕ 13-07-2012 ರಂದು ರಾತ್ರಿ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿ ಮಲಗಿಕೊಂಡಿದ್ದು, ದಿನಾಂಕ 14-07-2012 ರಂದು ಬೆಳಿಗ್ಗೆ ಎದ್ದು ನೋಡಲು ಮನೆಯ ಮುಂದೆ ನಿಲ್ಲಿಸಿದ ಮೊಟಾರ್ ಸೈಕಲ್ ಇರಲಿಲ್ಲಾ. ಎಲ್ಲಾ ಕಡೆಗು ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಯಾರೋ ಅಪರಿಚಿತ ಕಳ್ಳರು ತನ್ನ ಮೊಟಾರ್ ಸೈಕಲ್ ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಂಡಬೇಕೆಂದು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 56/12 ಕಲಂ 379 ಐಪಿಸಿ ಪ್ರಕಾರ ಪ್ರಕರಣದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಕು|| ಈಶ್ವರಿ ತಂದೆ ಸಿದ್ದಣ್ಣಾ ಇಂದೂರ  ಸಾ||ತಾಡತೆಗನೂರ ಹಾ||ವ|| ಪ್ಲಾಟ ನಂ. 23 ಗೊದುತಾಯಿ ನಗರ ಗುಲಬರ್ಗಾ  ರವರು ನಾನು ದಿನಾಂಕ:28-07-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ  ಊಟ ಮಾಡಿಕೊಂಡು  ಗೊದುತಾಯಿ ನಗರದ ಗುರುರಾಜ ಸ್ವಾಮಿ ರವರ ಮನೆಯ ಮುಂದೆ ಗೇಟ ಹತ್ತಿರ ವಾಕಿಂಗ ಮಾಡುತ್ತಿರುವಾಗ ಹಿಂದಿನಿಂದ ಯಾವನೊ ಒಬ್ಬ ಅಪರಿಚಿತ 20-22 ವಯಸ್ಸಿನ ಹುಡುಗ ಬಂದವನೇ  ಒಮ್ಮೇಲೆ  ಕೊರಳಲ್ಲಿ ಕೈ ಹಾಕಿ 5 ಗ್ರಾಂ ಬಂಗಾರದ ಪದಕವುಳ್ಳ ಚೈನನ್ನು  ಕಿತ್ತಿಕೊಂಡು  ಓಡಿ ಹೊಗಿ ಎಸ್‌.ಜಿ ಟೆಂಗಳಿ ಮನೆಯ ಹತ್ತಿರ ನಿಂತ್ತಿದ್ದ. ಒಬ್ಬ ಮೋಟರ ಸೈಕಲ ಸವಾರನ ಹಿಂದೆ ಕುಳಿತು ತಪ್ಪಿಸಿಕೊಂಡು ಹೊಗಿರುತ್ತಾನೆ. ಅವನ ಮುಖ ಚಹರೆ ನೊಡಿದರೇ ಗುರ್ತಿಸುತ್ತೆನೆ. 5 ಗ್ರಾಂ ಬಂಗಾರದ ಚೈನಿನ ಮೌಲ್ಯ  12,000/-ರೂಪಾಯಿ  ಇರಬಹುದು.  ಈ ಘಟನೆಯನ್ನು  ಮನೆ ಮಾಲಿಕ ಗುರುರಾಜ ಸ್ವಾಮಿಐ.ಜಿ ಕೆಂಭಾವಿಮಠ ರವರು ನೊಡಿರುತ್ತಾರೆ. ಕಾರಣ ನನ್ನ ಬಂಗಾರದ ಚೈನ ಕಸಿದುಕೊಂಡು ಹೊಗಿದ್ದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು. ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ.59/2012 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 July 2012

GULBARGA DIST REPORTED CRIME


ಸುಳ್ಳು ಜಾತಿ ಪತ್ರ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ :ಶ್ರೀಮತಿ. ಜಯಶ್ರೀ ಗಂಡ ಮರುಳಾದ್ಯ ಕಿರಿಯ ಸಹಾಯಕಿ ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ಇವರು ಮೂಲತಃ ಲಿಂಗಾಯತ ಜಂಗಮ ಜಾತಿಯವಳಿದ್ದು, ದಿನಾಂಕ:23-12-1986 ರಂದು ಮಹಾನಗರ ಸಭೆ ಗುಲಬರ್ಗಾರವರಿಂದ ಪರಿಶಿಷ್ಟ ಜಾತಿಯ ಸುಳ್ಳು ಬೇಡ ಜಂಗಮ ಜಾತಿಯನ್ನು ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಕೆ.ಎಸ್.ಆರ್.ಟಿ.ಸಿ ಗುಲಬರ್ಗಾ ವಿಭಾಗದಲ್ಲಿ  ಕಿರಿಯ ಸಹಾಯಕಿ ಹುದ್ದೆಯಲ್ಲಿ  ನೇಮಕಾತಿ ಹೊಂದಿ ಪರಿಶಿಷ್ಟ ಜಾತಿ ಜನಾಂಗದವರಿಗೆ ಮತ್ತು ಸರಕಾರಕ್ಕೆ ಮೋಸ ಮಾಡಿದ್ದು, ಸದರಿಯವರ ವಿರುದ್ದ ಕಲಂ:198, 420, 465, 468, 471 ಐ.ಪಿ.ಸಿ. ಮತ್ತು ಕಲಂ:3 (1) (9) ಎಸ್.ಸಿ/ಎಸ್.ಟಿ. ಪಿ.ಎ. ಆಕ್ಟ್ 1989 ರ ಪ್ರಕಾರ ಶ್ರೀ ಹೆಚ್.ವೈ ತುರಾಯಿ ಪೊಲೀಸ ಉಪಾಧೀಕ್ಷರು ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯ ಗುಲಬರ್ಗಾ ರವರು ವರದಿ ಸಲ್ಲಿಸಿದ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ: 90/2012  ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಕಡತವನ್ನು ಮುಂದಿನ ತನಿಖೆಗಾಗಿ ಪಿರ್ಯಾದುದಾರರಿಗೆ ನೀಡಲಾಗಿದೆ. 

27 July 2012

GULBARGA DIST



ದೇವಲ ಗಾಣಗಾಪೂರ ಪೊಲೀಸ್ ರ ಕಾರ್ಯಚರಣೆ
 :: ಮೋಟಾರ ಸೈಕಲ ಕಳ್ಳರ ಬಂದನ  ::
 ಮಾನ್ಯ ಎಸ.ಪಿ ಸಾಹೇಬರಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ, ರವರು, ಮಾನ್ಯ ಅಪರ್ ಎಸ.ಪಿ ರವರಾದ ಶ್ರೀ ಕಾಶೀನಾಥ ತಳಕೇರಿ, ಮಾನ್ಯ ಶ್ರೀ ಡಿ.ಎಸ.ಪಿ ಆಳಂದ ಎಸ.ಬಿ.ಸಾಂಬಾ, ಮತ್ತು ಸಿಪಿಐ ಅಫಜಲಪೂರ ರವರಾದ ಶ್ರೀ ರಾಜೇಂದ್ರ ರವರ ಮಾರ್ಗದರ್ಶನದ ಮೇರೆಗೆ ದೇವಲ ಗಾಣಗಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ವತ್ತಿನ ಪ್ರಕರಣಗಳಲ್ಲಿಯ ಆರೋಪಿತರ ಮತ್ತು ಮಾಲು ಪತ್ತೆ ಕುರಿತು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ ಪಿ.,ಎಸ.ಐ. ಮಂಜುನಾಥ ಎಸ. ಕುಸಗಲ್  ಮತ್ತು ಸಿಬ್ಬಂದಿ ಜನರಾದ  ತಸ್ಲೀಮ್, ಪ್ರಕಾಶ, ಸಂಜಯ ಪಾಟೀಲ್, ಗುರುರಾಜ, ಶಾಂತವೀರ, ಮಲ್ಲಣ್ಣ, ಚಂದ್ರಕಾಂತ, ಎಂ.ಡಿ. ರಪೀಕ್ ರವರನೊಳ್ಳಗೊಂಡ ತಂಡವು ರಚಿಸಿದ್ದು,  ಅಪಜಲಪೂರ ತಾಲೂಕಿನ ಚೌಡಾಪೂರ ಗ್ರಾಮದ ಶ್ರೀ ದತ್ತಾ ಹೋಟೆಲ್ ಪಂಪ ಹತ್ತಿರ ದಿನಾಂಕ: 26-07-2012 ರಂದು ಸಾಯಂಕಾಲ 4-00 ಗಂಟೆಗೆ ಸುಮಾರಿಗೆ ಅಪಜಲಪೂರ ರೋಡಿನ ಕಡೆಯಿಂದ ಚೌಡಾಪೂರ ಕಡೆಗೆ ಒಬ್ಬರ ಹಿಂದೆ ಒಬ್ಬರು ಇಬ್ಬರು ಮೋಟಾರ ಸೈಕಲ ಸವಾರರು ಬರುತ್ತಿದ್ದ ನಮ್ಮನ್ನು ನೋಡಿ ತಮ್ಮ ಮೋಟಾರ ಸೈಕಲಗಳನ್ನು ತಿರುಗಿಸಿಕೊಂಡು ಓಡಿ ಹೋಗಲು ಯತ್ನಿಸುತ್ತಿದ್ದಾಗ ಅವರನ್ನು ಹಿಡಿದುಕೊಂಡು ವಿಚಾರಣೆ ಮಾಡಿದಾಗ ಅವರ ಹೆಸರು ಪ್ರವೀಣ ತಂದೆ ಆಶೋಕ ಪವಾರ ವ|| 30 ವರ್ಷ ಸಾ|| ಸೋಲಾಪೂರ, ಶ್ರೀಶೈಲ್ ತಂದೆ ಬಸಣ್ಣ ಜಮಾದಾರ ವ|| 30 ವರ್ಷ ಸಾ|| ಗಣೇಶ ನಗರ ಗುಲಬರ್ಗಾ ಅಂತಾ ತಿಳಿದು ಬಂದಿರುತ್ತದೆ. ಸದರಿಯವರು 11 ಮೋಟಾರ ಸೈಕಲಗಳು ಅಂದಾಜು ಕಿಮ್ಮತ್ತು 2,50,000/- ರೂಪಾಯಿಗಳದ್ದು ವಶಪಡಿಸಿಕೊಂಡಿರುತ್ತಾರೆ. ಮಾನ್ಯ ಎಸಪಿ ಸಾಹೇಬರು ದೇವಲ ಗಾಣಗಾಪೂರ ಪೊಲೀಸ್ ಠಾಣೆಯ  ಅಧಿಕಾರಿ ಮತ್ತು ಸಿಬ್ಬಂದಿಯವರ ಪತ್ತೆ ಕಾರ್ಯ ಪ್ರಶಂಸಿರುತ್ತಾರೆ. 

GULBARGA DIST REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿ: 25.07.2012 ರಂದು ರಾತ್ರಿ 2-30 ಗಂಟೆಯ ಸುಮಾರಿಗೆ ಕೆಎ/25-ಎ-5957 ನೇದ್ದರ ಟಾಟಾ ಸುಮೊ ಚಾಲಕ ನಿಂಗಯ್ಯ ಇತನು ಹುಮನಾಬಾದ ರಿಂಗರೋಡ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಹೊರಟಿದ್ದು, ಸೇಡಂ ರಿಂಗ ರೋಡ ಕಡೆಯಿಂದ ಕೆಎ-25 ಬಿ-1255 ನೇದ್ದರ ಲಾರಿ ಚಾಲಕ ಅಲ್ತಾಪ್ ಇತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ಲಾರಿ ಚಾಲಕ ಬಲಭಾಗಕ್ಕೆ ಹೊರಳಿಸಿದ್ದರಿಂದ ಎರಡು ವಾಹನಗಳ ಚಾಲಕರು ತಮ್ಮ ವಾಹನಗಳನ್ನು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ   ಮತ್ತು ಇಬ್ಬರು ವಾಹನ ಚಾಲಕರು  ತಮ್ಮ ತಮ್ಮ ಸೈಡಿಗೆ  ಡಿಗೆ ಹೋಗದೇ ಇದುದ್ದರಿಂದ ಒಂದಕ್ಕೊಂದ್ದು ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಉಂಟಾಗಿ ಎರಡು ವಾಹನಗಳು ಸುಟ್ಟಿದ್ದು ಅಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ಎಮ್ಮೆಗಳಲ್ಲಿ 3 ಎಮ್ಮೆಗಳು ಸ್ಥಳದಲ್ಲಿ ಸತ್ತಿದ್ದು. ಮತ್ತು 3 ಜನರಿಗೆ ಭಾರಿ ಸುಟ್ಟಗಾಯಗಳಾಗಿರುತ್ತವೆ, ಅಂತಾ ಸಂತೋಷ ಕುಮಾರ ತಂದೆ ಬಸವಣಪ್ಪಾ ಗುಂಡಪನವರ ಸಾ|| ಅಯ್ಯರವಾಡಿ ಅಂಬಭವಾನಿ ಗುಡಿ ಹತ್ತಿರ ಬಂಬೂ ಬಜಾರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:246/2012 ಕಲಂ 279, 337, 338, 429 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

26 July 2012

GULBARGA DIST REPORTED CRIMES


ದರೋಡೆ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ:ಶ್ರೀಮತಿ, ಅನ್ನಪೂರ್ಣ ಗಂಡ ರಾಜೇಂದ್ರ ಬಿರಾದಾರ ಸಾ|| ಭಾಗ್ಯವಂತಿ ನಗರ ಗುಲಬರ್ಗಾ ರವರ ನಾನು ದಿನಾಂಕ 26/07/2012 ರಂದು 6-15 ಎ.ಎಂ.ಕ್ಕೆ ಮನೆಯಿಂದ ವಾಕಿಂಗ ಕುರಿತು ಹೊರಟು ರಸ್ತೆಯ ಮುಖಾಂತರ ರಾಮ ಮಂದಿರ ಶ್ರೀ ಗುರು ಕಾಲೇಜವರೆಗೆ ವಾಕಿಂಗ ಮಾಡಿ ಮರಳಿ ಮನೆಗೆ ಬರುತ್ತಿರುವಾಗ ರಸ್ತೆಯ ಎಡಭಾಗದ ವೆಂಕಟೇಶ ಸರ್ವಿಸ್ ಸೆಂಟರ ಹತ್ತಿರದಲ್ಲಿ 7-15 ಎ.ಎಂ.ಕ್ಕೆ ನನ್ನ ಹಿಂದುಗಡೆಯಿಂದ ಒಬ್ಬ ವ್ಯಕ್ತಿ ಮೋಟಾರ ಸೈಕಲ್ ಬಂದವನೆ ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿ ಇದ್ದ ಗಂಟಣ ಮಂಗಳಸೂತ್ರ ಎರಡು ಎಳೆಯದ್ದು ದಪ್ಪ ಕರಿಮಣಿ ಹವಳು ಎರಡು ತಾಳಿ ಇದ್ದ ಗುಂಡುಗಳು 6 ಇದ್ದ ಒಟ್ಟು 5,1/2 ತೊಲೆ ಬಂಗಾರದ ಮಂಗಳಸೂತ್ರ ಕೈ ಹಾಕಿ ಕಿತ್ತುಕೊಂಡಿದ್ದು, ನನ್ನ ಕುತ್ತಿಗೆಯ ಹತ್ತಿರ ತರಚಿದ ಗಾಯವಾಗಿರುತ್ತದೆ. ಸದರಿ ಮಂಗಳಸೂತ್ರ ಸುಮಾರು 1,50,000/- ರೂ ಬೇಲೆ ಬಾಳುವದಿದ್ದು, ಮೋಟಾರ ಸೈಕಲ್ ಮೇಲೆ ಇದ್ದ ವ್ಯಕ್ತಿ ರೇನಕೋಟ ತಲೆಗೆ ಟೋಪಿ ಹಾಕಿದ್ದು ಸುಮಾರು 30 ರಿಂದ 35 ವರ್ಷ ವಯಸ್ಸಿನಿರುತ್ತಾನೆ.   ಸುಮಾರು 5,1/2 ತೊಲೆ ಇದ್ದು ಸುಮಾರು 1,50,000/- ರೂ ಬೇಲೆ ಬಾಳುವ ಮಂಗಳಸೂತ್ರ ಪತ್ತೆ ಹಚ್ಚಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ.58/2012 ಕಲಂ.392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಕೊಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ವಿಶ್ವರಾಧ್ಯ ತಂದೆ ಲಿಂಗಣ್ಣ ಸತ್ಯಂಪೇಠ ವ|| 43, ಉ|| ಪತ್ರಕರ್ತ ಸಾ|| ಸತ್ಯಂಪೇಠ, ಹಾ|| ವ|| ಶಹಾಪೂರ, ಜಿಲ್ಲಾ|| ಯಾದಗಿರಿ ರವರು ನಮ್ಮ ತಂದೆಯಾದ ಲಿಂಗಣ್ಣ ಇವರಿಗೆ ಶ್ರಾವಣ ಮಾಸದ ನಿಮಿತ್ಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮವಿರುವದರಿಂದ ಅದರಲ್ಲಿ ಭಾಗವಹಿಸುವ ಕುರಿತು ದಿನಾಂಕ:25-07-2012 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಶಹಾಪೂರ ದಿಂದ ಗುಲಬರ್ಗಾ ಬರುವ ಬಸ್ಸಿನಲ್ಲಿ ನನ್ನ ತಮ್ಮನಾದ ಸಂತೋಷನು ಇತನು ನಮ್ಮ ತಂದೆಗೆ ಕೂಡ್ರಿಸಿ ಕಳುಹಿಸಿದ್ದು, ರಾತ್ರಿ 8 ಗಂಟೆಯವರೆಗೆ ಗುಲಬರ್ಗಾಕ್ಕೆ ಬರದೇ ಇದ್ದುದ್ದರಿಂದ  ಎಸ.ಬಿ ಕಾಲೇಜಿನ ಉಪನ್ಯಾಸಕರು ನನಗೆ ಫೋನ್ ಮಾಡಿ ನಿಮ್ಮ ತಂದೆಯವರು ಸದರಿ ಕಾರ್ಯಕ್ರಮಕ್ಕೆ ಬಂದಿರುವದಿಲ್ಲಾ ಅಂತ ತಿಳಿಸಿದರು.  ನಾನು ನನ್ನ ತಂದೆಯ ಮೊಬೈಲ್ ನಂ 9480148016 ಮತ್ತು 7899148789 ನೇದ್ದವುಗಳಿಗೆ ಫೋನ್ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿತು. ಆದರೆ ಯಾರೂ ಮಾತಾಡಲಿಲ್ಲಾ. ಪುನಃ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ದಿನಾಂಕ 26-07-2012 ರಂದು ಮದ್ಯಾಹ್ನ 12 ಗಂಟೆಗೆ ನಾನು ಗುಲಬರ್ಗಾ ನಗರದ ಸೂಪರ್ ಮಾರ್ಕೆಟನಲ್ಲಿರುವಾಗ ನನ್ನ ತಮ್ಮ ಶಿವರಂಜನ್ ಈತನು ಫೋನ್ ಮಾಡಿ  ತಂದೆಯವರು ಶರಣಬಸವೇಶ್ವರ ದೇವಸ್ಥಾನದ ನಾಲೆಯಲ್ಲಿ ಬಿದ್ದಿದ್ದು, ನೀನು ತಕ್ಷಣ ಬರಬೇಕು ಅಂತ ತಿಳಿಸಿದಾಗ, ನಾನು ಸ್ಥಳಕ್ಕೆ ಹೋಗಿ ನೋಡಲು, ಯಾರೋ ದುಷ್ಕರ್ಮಿಗಳು ನಮ್ಮ ತಂದೆ ಲಿಂಗಣ್ಣ ತಂದೆ ಗುರಪ್ಪ ಸತ್ಯಂಪೇಠ ಇವರಿಗೆ ಕೊಲೆ ಮಾಡಿ ಗುರುತು ಸಿಗದ ಹಾಗೆ ನಾಲೆಯಲ್ಲಿ ಬಿಸಾಕಿದ್ದು ಇರುತ್ತದೆ. ಮೃತನು ಪತ್ರಕರ್ತನಾಗಿದ್ದು, ಆತನ ಬರವಣಿಗೆ ಚಾಟಿ ಏಟಿನಿಂದ ತಾಳದೇ ಮತಾಂದರು  ಈ ಕೃತ್ಯ ಮಾಡಿರಬಹುದು ಅವರುಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 55/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಬೈಲನಂದನಗುಡಿ ತಂದೆ ಸೋಮಣ್ಣಾ ಗಡಸೆ  ಸಾ|| ಬ್ರಹ್ಮಪುರ ಗುಲಬರ್ಗಾರವರು ನಾನು ದಿನಾಂಕ 25-07-2012 ರಂದು ಸಾಯಂಕಾಲ4-00 ಗಂಟೆಗೆ ನನ್ನ ಸೈಕಲ ಮೇಲೆ ಆರ್.ಟಿ.ಓ ಕ್ರಾಸ ಕಡೆಗೆ ಹೋಗುತ್ತಿದ್ದಾಗ ಮಹೀಂದ್ರಾ ಷೋ ರೂಮ ಕ್ರಾಸ ಹತ್ತಿರ ಮೋಟಾರ ಸೈಕಲ ನಂ. ಸಿ.ಎನ್.ಕ್ಯೂ. 2526 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2012 ಕಲಂ 279, 337 ಐಪಿಸಿ ಸಂಗಡ 187 ಐ,ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ :ಶ್ರೀಮತಿ  ಫರಜಾನ ಬೇಗಂ ಗಂಡ ನಿಜಾಮದ್ದೀನ್ ಪಟೇಲ್  ಸಾ ||ಎಕ್ಬಾಲ ಕಾಲೋನಿ ಎಮ್.ಎಸ್.ಕೆ. ಮಿಲ್ ಗುಲಬರ್ಗಾರವರು ನಮ್ಮ ಹೋಲ ಆಳಂದ ಗ್ರಾಮದಲ್ಲಿದ್ದು, ಸದರಿ ಜಮೀನಿಗೆ ನೀರಾವರಿಗೊಸ್ಕರ  ಹಸನ ಅನ್ಸಾರಿ  ಸಾ || ಆಳಂದ ಇವರ ಹತ್ತಿರ 2,35,000/- ರೂ. ಹಣ ನನ್ನ ಗಂಡ ಕೈಗಡ ತೆಗೆದುಕೊಂಡು ಒಂದು ವರ್ಷದ ಒಳಗಾಗಿ ಹಣ ಕೊಡುವದಾಗಿ ಮಾತಾಗಿತ್ತು. ದಿನಾಂಕ 23.07.2012 ರಂದು ಮುಂಜಾನೆ 10 ಗಂಟೆಗೆ ನಾನು ಮನೆಯಲ್ಲಿ ಇದ್ದಾಗ ಹಸನ ಅನ್ಸಾರಿ ಹಾಗೂ ಮಹ್ಮದ ಇಸ್ಮಾಯಿಲ ರವರು ಮನೆಗೆ ಬಂದು ನನ್ನ ಗಂಡನಿಗೆ ಕೇಳಿದರು, ಆಗ ನಾನು ನನ್ನ ಗಂಡ ಮನೆಯಲ್ಲಿ ಇಲ್ಲಾ ಬಂದ ಮೇಲೆ ತಿಳಿಸುತ್ತೇನೆ  ಅಂತಾ ಹೇಳಿದರೂ ಸಹ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2012 ಕಲಂ.341, 504, 506  ಸಂಗಡ 34 ಐಪಿಸಿ ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 July 2012

GULBARGA DIST REPORTED CRIME


ವರದಕ್ಷೀಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ, ಆಯೇಷಾ ಪರ್ವಿನ ಗಂಡ ಮಹ್ಮದ ರಿಜ್ವಾನ ಸಾ|| ಜೀವನ ಭಾಗ ಪಿರದೋಜ ಅಪಾರ್ಟಮೆಂಟ ನೆಲ ಮಹಡಿ ಮುಮ್ರಾ ಥಾಣಾ ಮುಂಬಯಿ ಮಹಾರಾಷ್ಟ್ರ ಹಾ||ವ||ಹೆಚ್.ಐ.ಜಿ-30 ಹೌಸಿಂಗ ಬೋರ್ಡ ಕಾಲೋನಿ ಪಿ.ಟಿ ಕಾಲೋನಿ ಹತ್ತಿರ ಗುಲಬರ್ಗಾ ರವರು ನನ್ನ ಮದುವೆಯು ದಿನಾಂಕ:04-03-2012 ರಂದು ಬಂದೇ ನವಾಜ ದರ್ಗಾದಲ್ಲಿ ಮಹ್ಮದ ರಿಜ್ವಾನ ತಂದೆ ಮಹ್ಮದ ಇಕ್ಬಾಲ (ಪೀರಮಹ್ಮದ) ಸಾ:ಮುಮ್ರ್ರಾ ಥಾಣಾ ಜಿಲ್ಲೆ ಮುಂಬಯಿ ಇವರೊಂದಿಗೆ ನಿಖಾವಾಗಿದ್ದುಮದುವೆಯಲ್ಲಿ ನಮ್ಮ ತಂದೆಯವರು ವರದಕ್ಷಿಣೆ ಅಂತಾ 51,000/-ರೂಪಾಯಿಗಳು,  5 ತೊಲೆ ಬಂಗಾರಮದುವೆಯಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಮೇಲ್ಪಟ್ಟು ಖರ್ಚು ಮಾಡಿರುತ್ತಾರೆ. ನಾನು ಗಂಡನ ಮನೆಗೆ ಹೋಗಿ ಒಂದು ತಿಂಗಳವರೆಗೆ ಸಂಸಾರ ಮಾಡಿರುತ್ತೇನೆ ಆದರೆ ಗಂಡ ಮಹ್ಮದ ರಿಜ್ವಾನ ಹಾಗೂ ಮಾವ ಮಹ್ಮದ ಇಕ್ಬಾಲ ನಾದಿನಿ ಅಲ್ಮಾಜ ಬಾನು ಮತ್ತು ನಾದಿನಿಯ ಗಂಡ ಇರ್ಪಾನಶೇಖ ಎಲ್ಲರೂ ನನಗೆ ತವರು ಮನೆಯಿಂದ  25,000/-ರೂಪಾಯಿ ತರುವಂತೆ ಒತ್ತಾಯಿಸಿ ದಿನಾಲು ಕಿರುಕುಳ ಕೊಡುತ್ತಿದ್ದರು. ಹಲವು ಬಾರಿ ನನಗೆ ನನ್ನ ಗಂಡ ಮಾವ ನಾದಿನಿ ನಾದಿನಿ ಗಂಡ ಕೂಡಿಕೊಂಡು ಕೈಯಿಂದ ರಾಡಿನಿಂದ ಹೊಡೆದಿರುತ್ತಾರೆ. ನಮ್ಮ ತಂದೆಯವರು ಬಡವರಾಗಿರುವದರಿಂದ ಹಣ ಜಮಾಯಿಸಲು ಆಗಿರುವದಿಲ್ಲಾ ಕಾರಣ ನಾನು ಇಲ್ಲಿಯವರೆಗೆ ನಮ್ಮ ತಂದೆಯವರ ಮನೆಯಲ್ಲಿಯೇ ಉಳಿದಿರುತ್ತೇನೆ.ನಾನು ಹಣ ತೆಗೆದುಕೊಂಡು ಹೋಗದೆ ಇರುವದೆ ಇರುವದರಿಂದ ದಿನಾಂಕ17-07-2012 ರಂದು ಬೆಳಿಗ್ಗೆ 9-30 ಗಂಟೆಗೆ ನಮ್ಮ ತಂದೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ಬಂದು ನನ್ನನ್ನು ಎಳದಾಡಿ ಕೈಯಿಂದ ಹೊಡೆದುಸಿಕ್ಕಾಪಟ್ಟೆ ಎಳೆದಾಡಿರುವದರಿಂದ ನಾನು ಕಿರುಚಿದಾಗ ಅಕ್ಕ-ಪಕ್ಕದ ಮನೆಯವರು ಬಂದು ಬಿಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ:56/2012 ಕಲಂ 498(ಎ) 143, 323, 504, ಸಂಗಡ 34 ಐಪಿಸಿ ಮತ್ತು 3 ಮತ್ತು 4 ಡಿಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

24 July 2012

GULBARGA DIST REPORTED CRIME


ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ:ಶ್ರೀ  ಆನಂದ ತಂದೆ ಚಂದ್ರಮೊಹನ ಶಹಾ ಸಾಃ ವಿವೇಕಾನಂದ ನಗರ ಗುಲಬರ್ಗಾ ರವರು ನಮ್ಮದೊಂದು ಕಾಟನ ಮಾರ್ಕೆಟದಲ್ಲಿ ಒಂದು ಗೋದಾಮ ಇರುತ್ತದೆ ಅದರಲ್ಲಿ ಸ್ಟೋರಗಳು ಮತ್ತು ಅದಕ್ಕೆ ಸಂಬಂದಪಟ್ಟ ಸ್ಟೋರ ಪಾರ್ಟ್ಸಗಳ ವ್ಯಾಪಾರ ಮಾಡುತ್ತಿರುತ್ತೆನೆ. ದಿನಾಂಕ 21.07.2012 ರಂದು 11-30 ಗಂಟೆ ಸುಮಾರಿಗೆ ಪಕ್ಕದ ಗೋದಾಮಿನ ಸತೀಶ ಇವರು ಪೋನ ಮಾಡಿ ನಿಮ್ಮ ಗೋದಾಮಿನ ಹಿಂದಿನ ಶೆಟ್ಟರ ಮರುದಿದ್ದು ಸಾಮಾನುಗಳೂ ಹೊರಗಡೆ ಬಿದ್ದಿವೆ ಅಂತ ತಿಳಿಸಿದ ಮೇರೆಗೆ ಹೋಗಿ ಬಂದು ನೋಡಲು ಸುಮಾರು 6,18,750/- ರೂ.ಗಳ ಕಿಮ್ಮತ್ತಿನ Rocker Sprayer Presssure Chamber  ಅಃಕಿಃ2,47,500/- Rocker Sprayer Lance with nozzle  ಅಃಕಿಃ1,80,000/- Rocker Sprayed Pressure value  ಅಃಕಿಃ1,91,250, ರೂಪಾಯಿಗಳು ವಿವಿಧ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 121/2012 ಕಲಂ 454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ. 

23 July 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ಶ್ರೀ,ಸಿದ್ದಣ್ಣ ತಂದೆ ದುಂಡಪ್ಪ ಸುಂಬಡ ಸಾ|| ಮಂದೇವಾಲ ರವರು ನಾನು ದಿನಾಂಕ:22/07/2012 ರಂದು ರಾತ್ರಿ 9-00  ಗಂಟೆ ಸುಮಾರಿಗೆ ಊಟ ಮಾಡಿ ಮನೆಯ ಮಾಳಿಗೆ ಮೇಲೆ ಮಲಗಿಕೊಂಡಿದ್ದು,  ಮಧ್ಯರಾತ್ರಿ ಅಂದಾಜು 3:30 ಗಂಟೆ ಸುಮಾರಿಗೆ ನನಗೆ ಎಚ್ಚರವಾದಾಗ ನಮ್ಮ ಮನೆಯ ಬಾಗಿಲು ತೆರೆದಿತ್ತು, ನಾನು ಎದ್ದು ಬಂದು ನೋಡಲು ಅರ್ದತೋಲಿಯ ಬಂಗಾರದ ಬೋರಮಳ ಹಾಗೂ ರೇಸ್ಮೆ ಸೀರೆಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅದರ ಕಿಮ್ಮತ್ತು ಅಂದಾಜ 22,400/- ರೂಪಾಯಿಗಳಾಗುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:99/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.   
ಅಪಘಾತ ಪ್ರಕರಣ:
ಆಳಂದ  ಪೊಲೀಸ್ ಠಾಣೆ:ಶ್ರೀ ಸೋಮಲಿಂಗಪ್ಪ ತಂದೆ ಭೀಮಶ್ಯಾ ಸಲಗರೆ ಸಾ|| ಜಿರೋಳ್ಳಿ ಗ್ರಾಮ ತಾ| ಆಳಂದ ರವರು ನನ್ನ ಮಗ ಸಂತೋಷ ಹಾಗು ನನ್ನ ತಮ್ಮ ಪರಮೇಶ್ವರ ಇಬ್ಬರೂ ಕೂಡಿಕೊಂಡು ದಿನಾಂಕ:22-07-2012  ರಂದು ಮಧ್ಯಾಹ್ನ 12-05 ಗಂಟೆಗೆ ಮೋಟಾರ ಸೈಕಲ್ ನಂ. ಕೆಎ-32 ವ್ಹಾಯ-816 ನೇದ್ದರ ಮೇಲೆ ಜೆರೋಳ್ಳಿಯಿಂದ ಎ.ಪಿ.ಎಮ್.ಸಿ. ಆಳಂದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿರುವಾಗ ಎದುರಗಡೆಯಿಂದ ಜೀಪ್ ನಂ.ಕೆಎ-32 ಎಮ್.ಎ-1048 ನೇದ್ದರ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಓಡಿ ಹೋಗಿದ್ದರಿಂದ ನನ್ನ ಮಗನಿಗೆ ಹಾಗೂ ನನ್ನ ತಮ್ಮನಿಗೆ ಭಾರಿ ಗಾಯವಾಗಿತ್ತು, ಉಪಚಾರ ಕುರಿತು ಆಳಂದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ನನ್ನ ತಮ್ಮ ಪರಮೇಶ್ವರ ಇತನು ಮೃತಪಟ್ಟಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:151/2012 ಕಲಂ 279,338,304(ಎ) ಐ.ಪಿ.ಸಿ. ಸಂ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 July 2012

GULBARGA DIST REPORTED CRIME


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :ಶ್ರೀ ಮಾಳಿಂಗರಾಯ   ತಂದೆ ಮಲ್ಕಪ್ಪಾ ಕೋಟೆ ಉ: ವಿಧ್ಯಾರ್ಥಿ  ಸಾ||ಮೇಳಕುಂದಾ (ಬಿ) ತಾ:ಜಿ:ಗುಲಬರ್ಗಾ ರವರು ನಾನು ದಿನಾಂಕ 21-07-12 ರಂದು 3-30  ಪಿ.ಎಮ್. ಗಂಟೆಗೆ ಲಾಲಗೇರಿ ಕ್ರಾಸ್ ದಿಂದ ಸುಪರ ಮಾರ್ಕೆಟ ಮೇನ ರೋಡಿನ ಸಿ.ಟಿ.ಬಸ್ ನಿಲ್ದಾಣದ ಹತ್ತಿರ ಕೆ.ಎಸ್.ಆರ್.ಟಿ.ಸಿ.ಬಸ್   ನಂ:ಕೆಎ 32 ಎಫ್  -1320 ನೇದ್ದರ ಚಾಲಕ ಅತೀವೇಗ ಮತ್ತು ಅಲಕ್ಷತನದಿಂದ  ಚಲಾಯಿಸಿದ್ದರಿಂದ, ಬಸ್ ಬಾಗಿಲಲ್ಲಿ ನಿಂತಿರುವ ಮಾಳಿಂಗರಾಯನಿಗೆ ಭಾರಿಗಾಯಗಳಾಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/12  ಕಲಂ: 279, 338 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

21 July 2012

GULBARGA DIST REPORTED CRIMES


ಅಟೋ ಕಳ್ಳತನ :
ಸುಲೇಪೇಟ ಪೊಲೀಸ ಠಾಣೆ: ಶ್ರೀ ಕಾಳೇಶ್ವರ ತಂಧೆ ಶಿವಶಂಕರಯ್ಯಾ ಮಠಪತಿ ಸಾ|| ಕೆರೋಳ್ಳಿ ರವರು ನನ್ನ ಆಟೋ ರಿಕ್ಷಾ ನಂ. ಕೆಎ 32, ಬಿ-0507 ನೇದ್ದನ್ನು  ದಿನಾಂಕ 17/07/2012 ರಂದು ರಾತ್ರಿ 9.00 ಗಂಟೆಗೆ ಸುಮಾರಿಗೆ ಕೆರೋಳ್ಳಿ ಗ್ರಾಮದ  ನನ್ನ ಮನೆಯ ಮುಂದಿನ ರಸ್ತೆಯ ಮೇಲೆ ನಿಲ್ಲಿಸಿ ಮಲಗಿ ಕೊಂಡಿದ್ದು. ದಿನಾಂಕ 18/07/2012 ರಂದು ಬೆಳಿಗ್ಗೆ  6.00 ಗಂಟಗೆ ಎದ್ದು ನೋಡಲು ನನ್ನ ಆಟೋ ರಿಕ್ಷಾ ಇರಲಿಲ್ಲಾ, ಯಾರೂ ಕಳ್ಳರು ನನ್ನ ಅಟೋ ರಿಕ್ಷಾ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ: 68/2012 ಕಲಂ, 379 ಐಪಿಸಿ ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ::
ದೇವಲ ಗಾಣಗಾಪೂರ ಪೊಲೀಸ್ ಠಾಣೆ: ಶ್ರೀ ರಾಜು ತಂದೆ ಗೋವಿಂದಪ್ಪ ಜಮಾದಾರ ಸಾ|| ದೇವಲ ಗಾಣಗಾಪೂರ ರವರು ನನ್ನ ಮೋಟಾರ ಸೈಕಲ ನಂ: ಕೆಎ 32 ಇಬಿ-4440 ನೇದ್ದನ್ನು ದಿನಾಂಕ 16-06-2012 ರಂದು ರಾತ್ರಿ 10:00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಮಲಗಿಕೊಂಡಿದ್ದು, ದಿನಾಂಕ 17-07-2012 ರಂದು ಮುಂಜಾನೆ 6:00 ಗಂಟೆಗೆ ಎದ್ದು ನೋಡಲು ನನ್ನ ಮೋಟರ ಸೈಕಲ ಇರಲಿಲ್ಲ. ನಾವು ಎಲ್ಲಾ ಕಡೆ ಇಲ್ಲಿಯವರೆಗೆ ಹುಡಕಾಡಿದರು ಮೋಟಾರ ಸೈಕಲ ಸಿಕ್ಕಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ:89/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಕಳ್ಳತನ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ.ಖಾಸೀಮ ಶಹಾ ತಂದೆ ಅಹಮದ ಶಹಾ ಸಾ||ಕಮಲಾಪೂರ ವರು ನಾನು ನನ್ನ ಹೆಂಡತಿ ದಿನಾಂಕ: 19/07/2012 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಮಲಗಿಕೊಂಡಾಗ ಮಧ್ಯರಾತ್ರಿ 2-00 ಗಂಟೆ ಸುಮಾರಿಗೆ ನನಗೆ ನಿದ್ದೆಯಿಂದ ಎಚ್ಚರ ಆಯಿತು. ಮೂತ್ರ ವಿಸರ್ಜನೆ ಕುರಿತು ಬಾಗಿಲು ತೆರೆಯಲು ಹೋದಾಗ ಬಾಗಿಲು ತೆರೆಯಲಿಲ್ಲ. ಆಗ ನಾನು ಹಿಂಬಾಗಿಲು ತೆರೆದು ಹೊರಗೆ ಬಂದು ಮುಂಬಾಗಿಲ ಹತ್ತಿರ ಬಂದಾಗ ನಾನಿದ್ದ ಬಾಗಿಲಿಗೆ ಕೊಂಡಿ ಹಾಕಲಾಗಿತ್ತು. ಅಲ್ಮಾರಿ ಇದ್ದ ರೂಮಿನ ಬಾಗಿಲು ನೋಡಿದಾಗ ಅದರ ಕೊಂಡಿಯನ್ನು ಯಾರೋ ಅಪರಿಚಿತ ಕಳ್ಳರು ಕೊಂಡಿ ಮಣಿಸಿ ಒಳಗೆ ಹೋಗಿ ಅಲ್ಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು, ಮತ್ತು ಬೆಳ್ಳಿನ ಸಾಮನುಗಳು ನಗದು ಹಣ 1300=00 ರೂಪಾಯಿ ಹೀಗೆ ಒಟ್ಟು 24,600=00 ರೂಪಾಯಿಯ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 86/2012 ಕಲಂ 457. 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

20 July 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ್  ಠಾಣೆ: ಶ್ರೀ ಅಣ್ಣೇಮ್ಮ ತಂದೆ ದಿ: ಸಾಯಬಣ್ಣ  ನಂದಿಕೂರ ವ: 21 ವರ್ಷ, ಸಾ: ಕಪನೂರರವರು ನಾನು ದಿ: 19/07/2012 ರಂದು ಮುಂಜಾನೆ 7-00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ರಾಜಕುಮಾರ ತಂದೆ ಭೀಮಶ್ಯಾ ನಂದಿಕೂರ ಇನ್ನೂ 2 ಜನರು ನಮ್ಮ  ಮನೆಯ ಮುಂದೆ ಬಂದು ನನ್ನನ್ನು  ಕರೆದು ನಿಮ್ಮ ಮನೆಯ ಮುಂದೆ ಕಂಕರ ಹಾಕಿದ್ದರಿಂದ ನಮ್ಮ ಮನೆಯ ಮುಂದೆ ಮಳೆಯ ನೀರು ನಿಂತಿರುತ್ತದೆ ಅಂತಾ ಅವ್ಯಾಚ್ಛವಾಗಿ ಬೈಯುತ್ತಿದ್ದಾಗ ಏಕೆ ಬೈಯುತ್ತಿದ್ದಿರಿ ಅಂತ ಕೇಳಿದಾಗ ನನಗೆ ಮತ್ತು ಈರಮ್ಮ, ದೇವಮ್ಮ ಇವರಿಗೆ ಹೊಡೆಬಡೆ ಮಾಡಿ ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 236/12 ಕಲಂ 323 324 504 506 ಸಂ/ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಚಂದ್ರಕಾಂತ ತಂದೆ ಮಲಕಾಜಪ್ಪ ರೇವೂರ ಸಾ|| ಝಳಕಿ (ಕೆ) ರವರು ನಾನು ಮತ್ತು ನಮ್ಮ ಗ್ರಾಮದ  ರೇವಬಾಯಿ ಮಠಪತಿ,  ಅನಿತಾಬಾಯಿ, ಬುದ್ದಮ್ಮ,  ಶೇಖರ, ಬಸವರಾಜ, ಶರಣಪ್ಪ ಹಾಗೂ ಇನ್ನು 3-4 ಜನರು ಕೂಡಿಕೊಂಡು ಆಳಂದದಿಂದ ಮಧ್ಯಾಹ್ನ 3-00 ಗಂಟೆಗೆ ನಮ್ಮ ಗ್ರಾಮದ ದೀಲಿಪ ತಂದೆ ಮಡಿವಾಳಪ್ಪ ಕೊಚಿ ಇವರು ಚಲಾಯಿಸುತ್ತಿದ್ದ ಜೀಪ ನಂ. ಕೆಎ-23, ಎಮ-4209 ನೇದ್ದರಲ್ಲಿ ಕುಳಿತು ಅಮರ್ಜಾ ಕೆನಲಾ ರೋಡಿನ ಪಕ್ಕದ ರಸ್ತೆಯಿಂದ ಝಳಕಿ (ಕೆ) ಗ್ರಾಮಕ್ಕೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಶರಣಪ್ಪ ನೀಲೂರ ಇವರ ಹೊಲದ ಹತ್ತಿರ ಜೀಪ ಚಾಲಕನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಪಲ್ಟಿ ಮಾಡಿದ್ದರಿಂದ ರೇವಬಾಯಿ ಗಂಡ ಶ್ರೀಶೈಲ ಮಠಪತಿ ವ|| 40 ವರ್ಷ, ಸಾ|| ಝಳಕಿ ( ಕೆ) ಗ್ರಾಮ ಇವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅನಿತಾಬಾಯಿ, ಬುದ್ದಮ್ಮಾಮತ್ತು ಶೇಖ ಇವರಿಗೆ ಗಾಯಗಳಾಗಿರುತ್ತವೆ, ಜೀಪ ಚಾಲಕನು ಓಡಿ ಹೋಗಿರುತ್ತಾನೆ ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 56/2012 ಕಲಂ 279, 337, 338, 304(ಎ) ಐಪಿಸಿ ಮತ್ತು 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ. 

19 July 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಸಂಜಯ ತಂದೆ ನಂದಕುಮಾರ ಉಖಂಡೆ  ಸಾ|| ವಿದ್ಯಾನಗರ  ಗುಲಬರ್ಗಾರವರು ದಿನಾಂಕ 18/07/2012 ರಂದು ರಾತ್ರಿ ನಾವೆಲ್ಲರೂ ಊಟ ಮಾಡಿ ನಮ್ಮ ಬಾಡಿಗೆ ಮನೆಯ ಅಡುಗೆ ಮನೆಯ ಬಾಗಿಲದ ಕೊಂಡಿ ಒಂದು ಭಾಗ ಕೊಂಡಿ ಬಿಳದೇ ಇರುವುದ್ದರಿಂದ ಹಾಗೇ ಬಾಗಿಲು ಮುಂದೆ ಮಾಡಿ ಮಲಗಿಕೊಂಡಿರುತ್ತೇವೆ. ದಿನಾಂಕ:19/07/2012 ರಂದು ಬೆಳಿಗ್ಗೆ ನೋಡಲಾಗಿ  1,1/2 ತೊಲೆ ಬಂಗಾರದ ಮಂಗಳಸೂತ್ರ, 7 ಮಾಸಿ ಬಂಗಾರದ ಮಂಗಳಸೂತ್ರ ನನ್ನ ತಮ್ಮನ ಹೆಂಡತಿಯದ್ದು, 4 ಮಾಸಿ ಬಂಗಾರದ ಕೀವಿ ಓಲೆ ನನ್ನ ತಮ್ಮನ ಹೆಂಡತಿಯದ್ದು, ನಗದು ಹಣ 1500=00 ರೂ.ಗಳು ಹೀಗೆ ಒಟ್ಟು 24,500/- ರೂ ಬೆಲೆ ಬಾಳುವ ಬಂಗಾರ & ನಗದು ಹಣ ಕಳುವಾಗಿದ್ದು ಇರುತ್ತದೆ. ಅಲ್ಲದೆ ದೇವರ ಮುಂದೆ ಇಟ್ಟ ದೇವರ ಗಲ್ಲಾ ಪೆಟ್ಟಿಗೆ ಚಿಲ್ಲರೆ ಹಣ  ಯಾರೋ ಕಳ್ಳರು ಮನೆ ಬಾಗಿಲ ತೆರೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:57/2012 ಕಲಂ. 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀಮತಿ ಗುಂಡಮ್ಮ ಗಂಡ ಬಸವರಾಜ ಚೌಡಾಪೂರ  ಸಾ || ಕೃಷ್ಣಾ ನಗರ ಬ್ರಹ್ಮಪುರ ಗುಲಬರ್ಗಾರವರು ನಾವು ಕಳೆದ 4 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಲ್ಲಿಯವರೆಗೆ ನಮಗೆ ಮಕ್ಕಳು ಆಗದೇ ಇರುವದರಿಂದ ನನ್ನ ಗಂಡನಾದ ಬಸವರಾಜ ಇತನು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕಳೆದ ಕೆಲವು ದಿವಸಗಳಿಂದ ಅತಿ ಹೆಚ್ಚು ಮಧ್ಯಪಾನ ಮಾಡುತ್ತಾ ಬಂದು ನಾನು ಇದ್ದು ಎನು ಸಾಧಿಸಬೇಕು ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು.ಡಿ.ಅರ್. ನಂ:9/12 ಕಲಂ 174 (ಸಿ)  ಸಿ.ಆರ್.ಪಿ.ಸಿ ಪ್ರಕಾರ ಯು.ಡಿ.ಅರ್. ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

GULBARGA DIST REPORTED CRIMES


ಕೊಲೆ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ :ಶ್ರೀ ಬಾಬು ತಂದೆ ರಾಮಯ್ಯಾ ಬಾಗೋಡಿ ಸಾ|| ನಾಸರ್ ಜಂಗ ಏರಿಯಾ ಚಿತ್ತಾಪೂರರವರು   ನನ್ನ ಮಗನಾದ ಭೀಮು ಇತನು ದಿನಾಂಕ: 18-07-2012 ರಂದು ಸಾಯಂಕಾಲ 4-30 ಗಂಟೆ ಏಕಿ ಮಾಡಲು ಹೋದ ಸಮಯದಲ್ಲಿ ತಾಯಪ್ಪಾ ತಂದೆ ರಾಮಯ್ಯ ಭಾಗೋಡಿ ಮತ್ತು ಯಲ್ಲಪ್ಪಾ ತಂದೆ ಸಾಬಣ್ಣ ಕರದಳ್ಳಿ ಇಬ್ಬರೂ ಹಣ ಕೂಡುವ ತೆಗೆದುಕೊಳ್ಳುವ ಸಂಬಂಧ ತಕರಾರು ಮಾಡಿಕೊಳ್ಳುತ್ತಿರು ಅದನ್ನು ಕಂಡು ನನ್ನ ಮಗ ಭೀಮು ಇತನು ಜಗಳ ಮಾಡಿಕೊಳ್ಳುವದು ಸರಿಯಲ್ಲ ಅಂತಾ ಹೇಳಿದಾಗ ಭೀಮು ತಂಧೆ ಶಿವಪ್ಪ ಕರದಳ್ಳಿ,  ಈರಪ್ಪ ತಂದೆ ಯಂಕಪ್ಪ ಆಂದೋಲಾಈಸು ತಂಧೆ ಈರಪ್ಪ ಆಂದೋಲಾಯಂಕಟಿ ತಂಧೆ ಈರಪ್ಪ ಇಂಗಳಗಿಸಣ್ಣ ನಾಗಪ್ಪ ತಂದೆ ತಿಮ್ಮಯ್ಯಾ ಬಶಿರಾಬಾದ,  ಈಸು ತಂದೆ ರಾಮಯ್ಯಾ ಇಂಗಳಗಿ,  ರಾಜು ತಂಧೆ ಸಾಬಯ್ಯಾ ಕರದಳ್ಳಿರಾಜು ತಂಧೆ ಈರಪ್ಪ ಆಂದೋಲಾ, ಯಲ್ಲಪ್ಪ ತಂದೆ ಸಾಬಣ್ಣ ಕರದಳ್ಳಿ ಸಾ|| ಎಲ್ಲರೂ ನಾಸರಜಂಗ ಏರಿಯಾ ಚಿತ್ತಾಫೂರ ರವರು ಎಲ್ಲರೂ ಕೂಡಿಕೊಂಡು ಕೈ ಮುಷ್ಟಿ ಮಾಡಿ ಹೊಟ್ಟೆಗೆ ಹೊಡೆದಿರುತ್ತಾರೆ. ನಾವು ಸಹ ಅಲ್ಲಿಗೇ ಹೋಗಿ ನೋಡಲು ಭೀಮು ಇತನು ಸ್ಥಳದಲ್ಲಿ ಕುಸಿದು ಬಿದ್ದನ್ನು , ಆತನನ್ನು  ಆಸ್ಪತ್ರೆಗೆ ಕರೆದುಕೊಂಡು ಹೋಗಿದಾಗ ವೈಧ್ಯಾಧಿಕಾರಿಗಳು ಮೃತ ಪಟ್ಟಿರುವ ಬಗ್ಗೆ ತಿಳಿಸಿದ್ದರು. ನನ್ನ ಮಗನಿಗೆ ಹೊಡೆದು ಕೊಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ 147, 148, 323, 324, 504, 302 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.