POLICE BHAVAN KALABURAGI

POLICE BHAVAN KALABURAGI

05 December 2015

Kalaburagi District Reorted Crimes

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ದಾಖಲೆಗಳನ್ನು ಕಸಿದುಕೊಂಡು ಹೋದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 08.09.2015 ರಂದು ಮುಂಜಾನೆ 11:30 ಗಂಟೆಯ ಸುಮಾರಿಗೆ ಸುಭಾಶಗೌಡ ಪಾಟೀಲ ಸಾ|| ಯನಗುಂಟಾ ಈತನು ವತ್ತಾಯಪೂರ್ವಕ ತಹಶೀಲದಾರ ಕಾರ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಸಿಬ್ಬಂದಿಗೆ ಅಂಜಿಸಿ ಅವರ ಹತ್ತಿರವಿದ್ದ ಪಂಚನಾಮೆ ವರದಿ, ಭೂ ಮಾಪಕರ ಸ್ಕೆಚ್‌ ನಕಾಶೆ ಹಾಗು ಹೇಳಿಕೆಗಳ ಮೂಲ ಪ್ರತಿಗಳನ್ನು ವತ್ತಾಯದಿಂದ ತೆಗದುಕೊಂಡಿದ್ದಲ್ಲದೆ ಸರಕಾರಿ ಕೆಲಸಕ್ಕೆ ಅಡತಡೆ ಮಾಡಿರುತ್ತಾನೆ ಅಂತಾ ಶ್ರೀ. ಯಲ್ಲಪ್ಪ ಸುಬೇದಾರ ತಹಶೀಲದಾರರು ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವೆಂಕಟಪ್ಪಾ ತಂದೆ ಮೊಗಲಪ್ಪಾ ನ್ಯಾಮಲ್ ಸಾ: ರಾಗಾಪೂರ ತಾ: ಸೇಡಂ ಸದ್ಯ ಚಂದಾಪೂರ ಪೊಲೀಸ್ ಕ್ವಾರ್ಟಸ್ ಎದುರುಗಡೆ ಬೆಂಗಳೂರು. ನಾವು ಕೂಲಿ ಕೆಲಸಕ್ಕೆಂದು ಬೆಂಗಳೂರಿನಲ್ಲಿ ಇರುತ್ತೆವೆ. ನನ್ನ ಹಿರಿಯ ಮಗ ಮೊಗಲಪ್ಪಾ ವಯ: 17 ವರ್ಷ, ಈತನು ಎಸ್.ಎಸ್.ಎಲ.ಸಿ ಪಾಸಾದ ನಂತರ ಕಲಬುರಗಿಯ ಇಂಡಿಪೆಂಡೆಂಟ ಕಾಲೇಜದಲ್ಲಿ ಪಿಯುಸಿ ಪ್ರಥಮ ವರ್ಷ ಸಾಯಿಂನ್ಸದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಬಸ್ಟಾಂಡ ಹತ್ತಿರದ ಎಲ್.ಐ.ಸಿ ಆಫೀಸ ಪಕ್ಕದ ಸರಕಾರಿ ಮ್ಯಾಟ್ರಿಕ್ ನಂತರದ ಹಾಸ್ಟೆಲ್ ದಲ್ಲಿ ವಾಸವಾಗಿರುತ್ತಾನೆ. ದಸರಾ ದೀಪಾವಳಿ ರಜೆ ಇರುವದರಿಂದ ಬೆಂಗಳೂರಿಗೆ ನಮ್ಮ ಹತ್ತಿರ ಬಂದಿದ್ದು ರಜೆ ಮುಗಿದ ನಂತರ ದಿನಾಂಕ 22/11/2015 ರಂದು ಬೆಂಗಳೂರದಿಂದ ಬಸ್ ನಲ್ಲಿ ಕೂಳಿಸಿ ಗುಲಬರ್ಗಾದ ಹಾಸ್ಟೆಲಗೆ ಕಳುಹಿಸಿರುತ್ತೇವೆ. ಕಳುಹಿಸುವಾಗ 1000/-ರೂಪಾಯಿ ಖರ್ಚಿಗೆ ಮತ್ತು 6000/-ರೂಪಾಯಿಯನ್ನು ರಾಗಾಪೂರದ ಮನೆಯಲ್ಲಿ ಕೊಡುವಂತೆ ಹೇಳಿ ಕಳುಹಿಸಿರುತ್ತೇವೆ. ನನ್ನ ಮಗ ಮೊಗಲಪ್ಪಾ ಈತನು  ದಿನಾಂಕ 23/11/2015 ರಂದು ಕಲಬುರಗಿಯ ಬಸ್ಟಾಂಡ ಹತ್ತಿರದ ಹಾಸ್ಟೆಲಗೆ ಬಂದಿದ್ದು ನಂತರ 4:00 ಪಿಎಮ್ ಕ್ಕೆ ನಮ್ಮೂರ ರಾಗಾಪೂರಕ್ಕೆ ಹೋಗಿ ಹಣ ಕೊಟ್ಟು ಬರುತ್ತೇನೆಂದು ತನ್ನ ಸಂಗಡ ಇದ್ದ ಗೆಳೆಯ ವೆಂಕಟೇಶ ಈತನಿಗೆ ಹೇಳಿ ಹೋದವನು ಇಲ್ಲಿಯವರೆಗೆ ನಾಪತ್ತೆಯಾಗಿರುತ್ತಾನೆ ಮತ್ತು ಆತನ ಮೊಬಾಯಿಲ ನಂ. 9980394971 ಸ್ವಿಚ್ ಆಫ ಆಗಿರುತ್ತದೆ. ನಂತರ ನಾವು ಎಲ್ಲಾ ಕಡೆ ಹುಡುಕಾಡಿದ್ದು ಮತ್ತು ಆತನ ಕ್ಲಾಸಮೆಂಟ ರಮೇಶ ಸಾ: ಕೋರಕುಂದಾ ರವರಿಗೆ ಕೇಳಿದಾಗ ಬೆಂಗಳೂರಿಗೆ ಹೋಗಿ ಮೈಸುರಿಗೆ ಹೋಗಿ ಬರುವದಾಗಿ ಹೇಳಿರುತ್ತಾನೆ ಎಂದು ಮಾಹಿತಿ ತಿಳಿಸಿರುತ್ತಾರೆ. ನಾವು ಬೆಂಗಳೂರದಲ್ಲಿ ಅಲ್ಲಲ್ಲಿ ಮತ್ತು ಸಂಬಂದಿಕರಲ್ಲಿ ಹುಡುಕಾಡಿದರು ಕೂಡ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಮಲ್ಲಪ್ಪ ತಂದೆ ರೇವಪ್ಪ ಅಣಜಗಿ ಸಾ : ಅರಳಗುಂಡಗಿ  ರವರು ದಿನಾಂಕ ೦4.12.2015 ರಂದು ಮಧ್ಯಾಹ್ನ ಜೇವರಗಿ ಪಟ್ಟಣದ ಜೆ.ಎಮ್.ಎಫ್.ಸಿ ನ್ಯಾಯಾಲಯದಿಂದ ಹೊರಗಡೆ ಬರುತ್ತಿದ್ದಾಗ ನ್ಯಾಯಾಲಯದ ಆವರನದಲ್ಲಿ 1) ಚಂದ್ರಶಾ ತಂದೆ ಹೊನ್ನಪ್ಪ ಬಿರಾದಾರ  2) ಭೀಮಣ್ಣ ತಂದೆ ಹೊನ್ನಪ್ಪ ಬಿರಾದಾರ 3) ಕರಣಪ್ಪ ತಂದೆ ಹೊನ್ನಪ್ಪ ಬಿರಾದಾರ  4) ಶರಣಮ್ಮ ಗಂಡ ಹೊನ್ನಪ್ಪ ಬಿರಾದಾರ ಸಾ : ಎಲ್ಲರು ಅರಳಗುಂಡಿ ಹಾ: ವ: ಕೋಟನೂರ ಮಠ ಕಲಬುರಗಿ ಎಲ್ಲರು ಕೂಡಿಕೊಂಡು ಬಂದು ನಮಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಹೊಲದ ವಿಷಯದಲ್ಲಿ ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ, ಚಪ್ಪಲಿಯಿಂದ ಹೊಡೆ ಬಡೆ ಮಾಡಿ ಬಾಯಿಯಿಂದ ಕಚ್ಚಿದ್ದು ಹಾಗು ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕಲರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀಮತಿ ಶರಣಮ್ಮ ಗಂಡ ಹೊನ್ನಮ್ಮ ಬಿರಾದಾರ ಸಾ : ಅರಳಗುಂಡಿ ಹಾ :: ಕೋಟನೂರ ಮಠ ಕಲಬುರಗಿ ರವರು ದಿನಾಂಕ ೦4.12.2015 ರಂದು ಮಧ್ಯಾಹ್ನ ಜೇವರಗಿ ಪಟ್ಟಣದ ಜೆ.ಎಮ್.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ನಿಂತಿದ್ದಾಗ 1) ಮಲ್ಲಪ್ಪ ತಂದೆ ರೇವಪ್ಪ ಅಣಜಗಿ 2) ಸಿದ್ದಪ್ಪ ತಂದೆ ದೇವಪ್ಪ ಅಣಜಗಿ 3) ಯಮನಪ್ಪ ತಂದೆ ಹಣಮಂತ ಬಿರಾದಾರ 4) ಹಣಮಂತ ತಂದೆ ಚನ್ನಬಸಪ್ಪ ಮಾಲಿ ಬಿರಾದಾರ ಸಾ : ಎಲ್ಲರು ಅರಳಗುಂಡಗಿ ಎಲ್ಲರು  ಕೂಡಿಕೊಂಡು ನಮ್ಮಲ್ಲಿಗೆ ಬಂದು ಹೊಲದ ವಿಷಯದಲ್ಲಿ ನಮ್ಮೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು  ಕೈಯಿಂದ, ಕಲ್ಲಿನಿಂದ ಹೊಡೆ ಬಡೆ ಮಾಡಿ ಕೈ ಹಿಡಿದು ಜಗ್ಗಾಡಿ ಅವಮಾನ ಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.