POLICE BHAVAN KALABURAGI

POLICE BHAVAN KALABURAGI

12 August 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :

ರಾಘವೇಂದ್ರ ನಗರ ಠಾಣೆ : ದಿನಾಂಕ 11-08-2014 ರಂದು ಸಾಯಂಕಾಲ 19-00 ಗಂಟೆ ಸುಮಾರಿಗೆ ರಾಘವೇಂದ್ರನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಮದಿನಾ ಕಾಲೋನಿಯಲ್ಲಿ ಮಟಕಾ ಜೂಜಾಟ ನಡೆದ ಬಗ್ಗೆ ಖಚಿತ ಮಾಹಿತಿ ಬಂದ ಮೆರೆಗೆ ಶ್ರೀ ಹೇಮಂತಕುಮಾರ ಎಂ ಪಿ ಎಸ್ ಐ ರಾಘವೇಂದ್ರನಗರ ಪೊಲೀಸ ಠಾಣೆ mtftu ಸಿಬ್ಬಂದಿ ಹಾಗು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ಆತನ ಹೆಸರು ವಿಳಾಸ ವಿಚಾರತಿಸಿದ್ದ ಅವನು ತನ್ನ ಹೆಸರು ಶೈಫಿಕ ತಂದೆ ಮೈಹೆಮೊದಖಾನ ಸಾ|| ಮದಿನಾ ಕಾಲೋನಿ ಗುಲಬರ್ಗಾ ಅಂತಾ ತಳಿಸಿದ್ದು. ಆತನ ಅಂಗ ಸಂಶೋದನೆ ಮಾಡಲು ಆತನ ಪ್ಯಾಂಟಿನ ಜೆಬಿನಲ್ಲಿ 1210 ರೂ. ಮತ್ತು ಒಂದು ಪೈನ ಮೂರು ಮಟಕಾ ಚೀಟಿಗಳು ಅ.ಕಿ.-00 ದೊರೆತವು ಸದರಿ ಘಟನೆ ಬಗ್ಗೆ ಒಂದು ಜಪ್ತಿ ಪಂಚನಾಮೆ ಬರೆದು ಸದರಿ ಆರೋಪಿತನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಆಶರಫ ಹುಸೇನ ತಂದೆ ಹಾಜಿ ಅಬ್ದುಲ ಲತೀಫ ಸಾ: ರಾಮ ಮೊಹಲ್ಲಾ ಶಹಾಬಾದ ಇವರು ದಿನಾಂಕ: 11-08-2014 ರಂದು ಮುಂಜಾನೆ 9-30 ಗಂಟೆಗೆ  ಬೆಂಡಿ ಬಜಾರನಲ್ಲಿರುವ ಜೀಕ್ರಿಯಾ ಮಟನ ಅಂಗಡಿಗೆ ಹೋಗಿ 12 ಕೆ.ಜಿ ಮಟನ ಬೇಕಾಗಿದೆ ಸರಿಯಾಗಿರುವ ಮಟನ ಕೊಡಿ ಅಂತಾ ಮುಂಗಡವಾಗಿ 1380-00 ರೂ ಕೊಟ್ಟು ಮನೆಗೆ ವಾಪಸ ಹೋಗಿ ನಂತರ  ಪಿರ್ಯಾದಿ ಆತನ ಗೆಳೆಯನಾದ  ನಜೀಬ ಖಾನ ಇಬ್ಬರೂ ಇಂದು ಮುಂಜಾನೆ 11-30 ಗಂಟೆಗೆ ಮಟನ ಅಂಗಡಿ ಬಂದು ಅವರು ಕಟ್ಟಿ ಇಟ್ಟ ಮಟನ ಬಿಚ್ಚಿ ನೋಡಲು ಸರಿಯಾದ ಮಟನ ಇರದ ಕಾರಣ ಮಟನ ಸರಿಯಾಗಿ ಇಲ್ಲ ಬೇರೆ ಕೊಡಿ ಅಂತಾ ಕೇಳಿದಕ್ಕೆ  ಅರೋಫಿ  ಮಹ್ಮದ ಅಜಮ ಮತ್ತು ಅವನ ತಮ್ಮ ಮೊಹ್ಮದ ಜಕೀರಿಯ ಹಾಗೂ ಹಾಜಿ ಕರೀಮ ಖುರೇಷಿ ಇವರುಗಳು ಮಟನ ಸರಿಯಾಗಿ ಕೊಡುವ ವಿಷಯದಲ್ಲಿ   ತಕರಾರು ಮಾಡಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿ ಮತ್ತು ಅವನ ಗೆಳೆಯ ನಜೀಬ ಖಾನ ಇತನಿಗೆ ಕೈಯಿಂದ ಮತ್ತು ಮಚ್ಚಿನಿಂದ ಹೊಡೆದು ಭಾರಿ ರಕ್ತ ಗಾಯಾ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಸೈಯ್ಯದ ವಲೀದ ತಾಹೇರ ತಂದೆ ಸೈಯ್ಯದ ತಾಹೇರ ಅಲಿ ಸಾಃ ಗಣೇಶ ಮಂದೀರ ಹತ್ತಿರ ಚೆಟ್ಟೆವಾಡಿ ಮೋಮಿನಪುರ ಗುಲಬರ್ಗಾ ದಿನಾಂಕಃ 10-08-2014 ರಂದು ರಾತ್ರಿ ಮೇಜಿಸ್ಟಿಕ್ ಫಂಕ್ಷನ ಹಾಲನಲ್ಲಿ ನನ್ನ ಅಣ್ಣನಾದ ಸೈಯ್ಯದ ಸೌತ ತಾಹೇರ ಇವರ ಮದುವೆ ಇರುವದರಿಂದ ನಾನು ಹಾಗೂ ನಮ್ಮ ಸಂಬಂದಿಕರು ಅಲ್ಲದೆ ನಮ್ಮ ಕುಟುಂಬ ಸಮೇತ ಎಲ್ಲರೂ ರಾತ್ರಿ 8.30 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಕೀಲಿ ಹಾಕಿ ಮದುವೆಗೆ ಹೋಗಿರುತ್ತೇವೆ.  ಮದುವೆ ಕಾರ್ಯ ಕ್ರಮ ಮುಗಿಸಿ ಕೊಂಡು ಮರಳಿ ರಾತ್ರಿ 3.00 ಗಂಟೆಗೆ ಮನಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ತೆರದ ಹಾಗೆ ಕಾಣುವದರಿಂದ ಗಾಬರಿಯಾಗಿ ಮನೆಯೊಳಗೆ ಹೋಗಿ ನೋಡಲು ಮನೆಯೋಳಗೆ ಇರುವ ಅಲಮಾರಿಯನ್ನು ತೆರೆದಿತ್ತು.  ನಾವು ಪರಶೀಲಿಸಿ ನೊಡಿದಾಗ ಅಲ್ಮಾರಿಯಲ್ಲಿದ್ದ ನನ್ನ ತಾಯಿಯ ಬಂಗಾರದ ಆಭರಣಗಳು ಒಟ್ಟು 5,67,825/- ಬೆಲೆ ಬಾಳುವ ಆರಣಗಳು ಮತ್ತು ನಗದು 1,00,000/- ಹೀಗೆ ಒಟ್ಟು 6,67,825/- ನೇದ್ದನ್ನು ಯಾರೋ ಕಳ್ಳರು ಕಳವು ಮಾಡಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.