POLICE BHAVAN KALABURAGI

POLICE BHAVAN KALABURAGI

17 October 2013

Gulbarga District Reported Crimes

ಜೂಜಾಟ ಪ್ರಕರಣ :
ಬ್ರಹ್ಮಪೂರ ಠಾಣೆ : ದಿನಾಂಕ 16-10-13 ರಂದು ಸಾಯಂಕಾಲ 4:30 ಗಂಟೆಗೆ ಹಳೆಯ ತಿರಂದಾಜ ಟಾಕೀಜ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಅಂದರ ಬಾಹರ ಎಂಬ ಇಸ್ಪೆಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಗೆ ಇಬ್ಬರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ಗೋಡೆಯ ಮರೆಯಲ್ಲಿ ನೋಡಲು 5-6 ಜನರು ಗುಂಪಾಗಿ ಕುಳಿತು ಅಂದರ 50 ರೂಪಾಯಿ ಬಾಹರ 50 ರೂಪಾಯಿ ಅಂತಾ ಇಸ್ಪೇಟ ಜೂಜಾಟ ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ  6 ಜನರನ್ನು ಹಿಡಿದು ಹೆಸರು ವಗೈರೆ ವಿಚಾರಿಸಲು 1) ದೇವಿಂದ್ರಪ್ಪ ತಂದೆ ಜೆಟ್ಟಪ್ಪ ಸಂಕಾ ಸಾ|| ಜಗತ್ ಬೀಮ ಮಗರ ಗುಲಬರ್ಗಾ 2) ರಾಜು ತಂದೆ ಕತಲಪ್ಪಾ ಒಂಟಿ ಸಾ|| ಜಗತ್ ಭೀಮ ನಗರ ಗುಲಬರ್ಗಾ 3) ಶಾಂತಪ್ಪ ತಂದೆ ನಾಗಪ್ಪ ಖಾನಾಪೂರ ಸಾ|| ಜಗತ್ ಭೀಮ ನಗರ ಗುಲಬರ್ಗಾ 4) ಅನೀಲ ತಂದೆ ಬಂದೆಗೆಪ್ಪ ಒಂಟಿ ಸಾ|| ಜಗತ್ ಭೀಮ ನಗರ ಗುಲಬರ್ಗಾ 5) ಮೈತಾಫಖಾನ್ ತಂದೆ ಹೈದರಖಾನ್ ಸಾ||ಗಾಜೀಪೂರ ಗುಲಬರ್ಗಾ 6) ಮಲ್ಲೇಶಪ್ಪ ತಂದೆ ಬಸಣ್ಣ ನೀಲೂರ ಸಾ|| ಜಗತ್ ಬೀಮ್ ನಗರ ಗುಲಬರ್ಗಾ ಅವರಿಂದ ನಗದು ಹಣ  ರೂ.1205/- ಹಾಗೂ 52 ಇಸ್ಪೆಟ್ ಎಲೆಗಳನ್ನು ಜಪ್ತಿ ಪಂಚನಾಮದ ಪ್ರಕಾರ ಜಪ್ತಿ ಪಡಿಸಿಕೊಂಡು ಎಲ್ಲಾ ಆರೋಪಿತರೊಂದಿಗೆ ಠಾಣೆಗೆ ಭಂದು ಸದರಿವರ ವಿರುದ್ಧ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ²æàಸಂಗಯ್ಯ ತಂದೆ ಬಸಯ್ಯ ಗದ್ದಗೆ ಸಾ: ಶಹಾಪೂರ ಜಿ: ಯಾದಗಿರ ರವರ ತಂದೆ ಬಸಯ್ಯ ಸುಮಾರು 20 ವರ್ಷಗಳ ಹಿಂದೆ ತೀರಿಕೊಂಡಿದ್ದು ಇರುತ್ತದೆ. ನಮ್ಮ ತಾಯಿ ಶಿವಶರಣಮ್ಮ ಇವಳು ನನ್ನೊಂದಿಗೆ ಮನೆಯಲ್ಲಿ ಇದ್ದಿರುತ್ತಾಳೆ. ಸದರಿ ನಮ್ಮ ತಾಯಿಗೆ ವಯಸ್ಆಗಿದ್ದು ಅವಳು ಆಗಾಗೆ ತಾನು ಬದುಕಿ ಮಾಡುವುದಾದರು ಏನು ಅಂತಾ ಜಿಗುಪ್ಸೆಯಿಂದ ಮಾತಾಡುತ್ತಿದ್ದಾಗ ನಾನು ಹಾಗೂ ನನ್ನ ಹೆಂಡತಿ ಅನುಸೂಬಾಯಿ ದೈರ್ಯ ಹೇಳುತ್ತಿದ್ದೇವು   ಹೀಗಿರುವಾಗ ನಮ್ಮ ತಾಯಿಯವರು ದಿನಾಂಕ: 13-10-2013 ರಂದು ಮದ್ಯಾಹ್ನ 01.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇಲ್ಲದಿದ್ದಾಗ ನನ್ನ ಹೆಂಡತಿ ಅನುಸುಬಾಯಿಗೆ ನಾನು ಮಡಿಕಲಗೆ ಹೋಗಿ ಗೋಲಿ ತರುತ್ತೇನೆ ಅಂತಾ ನಮ್ಮ ತಾಯಿ ಶಿವಶರಣಮ್ಮ ಇವಳು ಹೇಳಿ ಮನೆಯಿಂದ ಹೋಗಿರುತ್ತಾಳೆ. ನಂತರ ನಾನು ಮದ್ಯಾಹ್ನ 3.00 ಗಂಟೆಯ ಸುಮಾರಿಗೆ ಮನೆಗೆ ಬಂದಾಗ ನನ್ನ ಹೆಂಡತಿ ಸದರಿ ವಿಷಯ ತಿಳಿಸಿರುತ್ತಾಳೆ. ಆ ದಿನದಿಂದ ನಮ್ಮ ಅಣ್ಣ, ತಮ್ಮಂದಿರ ಮನೆಗೆ ಸಂಬಂಧಿಕರ ಮನೆಗೆ ವಿಚಾರಿಸಿದಾಗ ನಮ್ಮ ತಾಯಿ ಬಂದ ವಿಷಯ ತಿಳಿಯಲಿಲ್ಲಾ. ಇಂದು ದಿನಾಂಕ: 17-10-2013 ರಂದು 9-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಮ್ಮ ವೀರಭದ್ರಯ್ಯ ಇಬ್ಬರೂ ಕೂಡಿ ನಮ್ಮ ತಾಯಿಗೆ ಹುಡುಕಾಡುವ ಸಲುವಾಗಿ ಜೇವರ್ಗಿ, ಕಟ್ಟಿಸಂಗಾವಿ ಕಡೆಗೆ ಹುಡುಕಾಡಿದರೂ ನಮ್ಮ ತಾಯಿ ಸಿಕ್ಕಿರುವುದಿಲ್ಲ. ನಂತರ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಭೀಮಾ ನದಿಯ ಸೇತುವೆಯ ಕೆಳಗೆ ನದಿಯ ದಂಡೆಯಲ್ಲಿ ಹಸನಾಪೂರ ಸೀಮಾಂತರದಲ್ಲಿ ಒಬ್ಬ ಹೆಣ್ಣು ಮಗಳು ಬಿದ್ದಿರುವುದನ್ನು ನೋಡಿ ನಾವು ಹೋಗಿ ನೋಡಲಾಗಿ ಸದರಿ ಹೆಣ್ಣು ಮಗಳ ಮೃತ ದೇಹ ನಮ್ಮ ತಾಯಿಯಾಗಿರುತ್ತಾಳೆ. ಸದರಿ ನಮ್ಮ ತಾಯಿಯು ವಯಸ್ಸಾಗಿದ್ದು ಅವಳು ಮಾನಸಿಕವಾಗಿ ಜರ್ಜರಿತವಳಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ನದಿಯಲ್ಲಿ ಬಿದ್ದು ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಗಂಡ ಮತ್ತು ಗಂಡನ ಮನೆಯವರಿಂದ ಕಿರುಕಳ ಪ್ರಕರಣ :
ಫರತಾಬಾದ ಠಾಣೆ : ²æÃಮತಿ ಮಹಾದೇವಿ ಗಂಡ ರವಿ ಮುಚ್ಚಖೇಡ ಸಾ: ಪಾಣೆಗಾಂವ ಹಾ:ವ: ಮಾರಡಗಿ(ಎಸ್‌ಎ) ತಾ:ಜೇವರ್ಗಿ ರವರನ್ನು ಪಾಣೆಗಾಂವ ನಿವಾಸಿಯಾದ ರವಿ ಜೊತೆ ಸುಮಾರು 12 ವರ್ಷಗಳ ಹಿಂದೆ ಮದುವೆಯಾಗಿದ್ದು, ನನ್ನ ಹಾಗೂ ರವಿಯ ವೈವಾಹಿಕ ಜೀವನದಿಂದ 2 ಮಕ್ಕಳು ಜನಿಸಿದ್ದು, ಒಬ್ಬಳು ಭಾಗ್ಯ, ಇನ್ನೊಬ್ಬಳು ವಿಧ್ಯಾ, ನನ್ನ ಗಂಡ, ಅತ್ತೆ, ಮಾವ, ಭಾವ ಮೈದುನ ಇವರು ನಾನು ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಹಿಯಾಳುಸುತ್ತಿದ್ದರು. ಹಾಗೂ ನನ್ನ ತವರು ಮನೆಯಿಂದ 2 ಲಕ್ಷ ರೂ. 5 ತೊಲಾ ಬಂಗಾರ ತಗೆದುಕೊಂಡು ಬಾ ಅಂತಾ ಪದೇ ಪದೇ ಪಿಡುಸುತ್ತಿದ್ದರು. ನನ್ನ ತಂದೆಯವರು ತೀರಿ ಹೋದ ಕಾರಣ ನನ್ನ ಚಿಕ್ಕಪ್ಪರಾದ ನಿಂಗಪ್ಪಾ ತಂದೆ ಸಿದ್ದಪ್ಪಾ ದೊಡ್ಡಮನಿ, ಹಾಗೂ ಹಿರಿಯrರು  ಮನೆಗೆ ಬಂದು ಬುದ್ದಿ ಮಾತು ಹೇಳಿದರೂ ನನ್ನ ಅತ್ತೆ ಮಾವನಾಗಲಿ, ನನ್ನ ಗಂಡನಾಗಲಿ, ನನ್ನ ಭಾವ ಮೈದುನರಾಗಲಿ ಯಾರು ಕೇಳಲಿಲ್ಲ. ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರಕುಳ ನೀಡುತ್ತಿದ್ದರು. ಹೀಗಿದ್ದು ಈಗ 1 ವರ್ಷದ ಹಿಂದೆ ಅಂದರೆ 2012 ನೇ ಸೆಪ್ಟೆಂಬರ ತಿಂಗಳು 15 ನೇ ತಾರೀಖನಂದು ಸಾಯಂಕಾಲ 18-00 ಗಂಟೆಯ ಸುಮಾರಿಗೆ  ನನ್ನ ಗಂಡ ರವಿ ತಂದೆ ಶಿವರಾಯ ಮುಚ್ಚಖೇಡ, ನನ್ನ ಮಾವ ಶಿವರಾಯ ತಂದೆ ನಿಂಗಪ್ಪಾ, ನನ್ನ ಅತ್ತೆ ನಿಂಗಮ್ಮ ಗಂಡ ಶಿವರಾಯ, ನನ್ನ ಭಾವ ರಾಜು ತಂದೆ ಶಿವರಾಯ, ಹಾಗೂ ನನ್ನ ಮೈದುನ ಬೀರಪ್ಪಾ ತಂದೆ ಶಿವರಾಯ ಎಲ್ಲರೂ ಸೇರಿಕೊಂಡು ಅವಾಚ್ಯವಾಗಿ ಬೈದು ಎಷ್ಟು  ಸಲ ಹೇಳಿದರೂ ನಿಮ್ಮ ತವರು ಮನೆಯಿಂದ ಹಣ ಮತ್ತು ಬಂಗಾರ ತರಲಿಲ್ಲ ಅಂತಾ  ನನಗೆ ಕೈಯಿಂದ ಹೊಡೆಬಡೆ ಮಾಡಿ ನನಗೆ ಭಾವಿಗೆ ತಳ್ಳಿ ಖಲಾಸ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ಈ ವಿಷಯವನ್ನು ನನ್ನ ಚಿಕ್ಕಪ್ಪರಾದ ನಿಂಗಪ್ಪಾ ಇವರಿಗೆ ತಿಳಿಸಿದಾಗ ನನ್ನ ಚಿಕ್ಕಪ್ಪ, ಹಾಗೂ ಊರಿನ ಹಿರಿಯರು ಬಂದು ನನ್ನ ತವರು ಮನೆಯಾದ ಮಾರಡಗಿ(ಎಸ್ಎ) ಗೆ ಕರೆದುಕೊಂಡು ಹೋಗಿರುತ್ತಾರೆ. 2013 ನೇ ಅಕ್ಟೊಬರ ತಿಂಗಳಲ್ಲಿ ಕಟ್ಟಿಸಂಗಾವಿ ಗ್ರಾಮದ ನಿಂಗಪ್ಪಾ ಬನದಳ್ಳಿ ಈತನ ಮಗಳಾದ ಶಾಂತಮ್ಮ ಇವಳ ಜೊತೆಗೆ ನನ್ನ ಗಂಡ ರವಿ ಈತನು 2 ನೇ ಮದುವೆಯಾಗಿರುತ್ತಾನೆ ಅಂತಾ ನನ್ನ ಚಿಕ್ಕಪ್ಪ ನಿಂಗಪ್ಪಾ ಇವರು ನಮ್ಮ ಬೀಗರ ಊರಿಗೆ ಹೋದಾಗ ಗೊತ್ತಾಗಿದ್ದು ಇರುತ್ತದೆ.  ಕಾರಣ ನನ್ನ ಗಂಡ, ನನ್ನ ಮಾವ, ನನ್ನ ಅತ್ತೆ, ಭಾವ, ಮೈದುನ ಹಾಗೂ ನನ್ನ ಗಂಡನ 2 ನೇ ಹೆಂಡತಿಯಾದ ಶಾಂತಮ್ಮ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು  ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಕುಂತಲಾ ಗಂಡ ಶಿವಶರಣ ಹೊಸಮನಿ ಸಾ||ಕರಜಗಿ ಇವರು  ದಿನಾಂಕ  11-10-2013 ರಂದು ಬೆಳಿಗ್ಗೆ 9:00 ಗಂಟೆ ಸಮಯಕ್ಕೆ ನಾನು ಮತ್ತು ಮೇಲೆ ಕಾರ್ಯಕರ್ತೆಯರು ಹಾಗೂ ಸಹಾಯಕಿ ಶಾಂತಾಬಾಯಿ ಹೋಸಕೇರಿ ಎಲ್ಲರೂ ಅಂಗನವಾಡಿ ಕೆಂದ್ರಕ್ಕೆ ಹೊಗಿದ್ದು, ಅಂಗನವಾಡಿ ಕೆಂದ್ರದ  ಸ್ಟಾಕ ರೂಮಿನ ಬಾಗಿಲಿಗೆ ಇದ್ದ ಕೀಲಿ ಮುರಿದಿದ್ದು ನೋಡಿದೆನು, ನಾವು ಎಲ್ಲರೂ ಕೋಣೆಯ ಒಳಗೆ ಹೋಗಿ ನೋಡಲು ರೂಮಿನಲ್ಲಿ ಇಟ್ಟಿದ  ಸರ್ಕಾರದಿಂದ ಮಂಜೂರಾಗಿ ಕೆಂದ್ರದಲ್ಲಿ ಇನ್ನು ಸ್ವಲ್ಪ ಉಳಿದ ಸಾಮಾನುಗಳಾದ 1) ಗೋದಿ  1 ಕಿಂಟ್ವಲ 38 ಕೆಜಿ ಅಕಿ -717/- ರೂ 2) ಅಕ್ಕಿ 43 ಕೆಜಿ ಅಕಿ-327/- ರೂ  3) ಬೆಲ್ಲ 13 ಕೆಜಿ ಅಕಿ- 593/- ರೂ  4) ತೊಗರಿ ಬೇಳೆ 15 ಕೆಜಿ ಅ ಕಿ-1236/- ರೂ  5) ರವಾ 13 ಕೆಜಿ ಅ ಕಿ- 129/-  ರೂ 6) ಕಡ್ಲೇಬೇಳೆ 16 ಕೆಜಿ ಅ ಕಿ-1332/- ರೂ  7) 2 ಬೋಗೊಣಿ  ಅಕಿ -2000/-  ರೂ 8) 40 ಪ್ಲೇಟಗಳು ಅ ಕಿ- 1000/- ರೂ  ಹೀಗೆ ಒಟ್ಟು 7334 ರೂ ಕಿಮ್ಮತ್ತಿನ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ಶ್ರೀ ಬಸವರಾಜ ತಂದೆ ಕಾಶಪ್ಪಾ ಪಾಟೀಲ,  ಸಾಃ ಮ.ನಂ. 20 ಕಾವೇರಿ ನಗರ ಗುಲಬರ್ಗಾ ರವರು ದಿನಾಂಕ 16-10-2013 ರಂದು 02-15 ಪಿ.ಎಮ್ ಕ್ಕೆ ಗಂಜ ಬಸ್ ಸ್ಟಾಂಡ ರೋಡಿಗೆ ಇರುವ ಅವಿನಾಶ ಪೆಟ್ರೊಲ ಬಂಕ ಎದರುಗಡೆ ಫಿರ್ಯಾದಿ ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ ಮೋಟಾರ ಸೈಕಲ ನಂ.ಕೆ.ಎ 32 ಇ.ಇ. 1189 ನೇದ್ದರ ಚಾಲಕನು ಹುಮನಾಬಾದ ಬೇಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿಗೆ ಬಲಗಾಲು ಹಿಮ್ಮಡಿಯ ಹತ್ತಿರ ಮತ್ತು ಎಡಗೈ ಮಣಿಕಟ್ಟಿನ ಹತ್ತಿರ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ.ಕಸ್ತೂರಬಾಯಿ ಗಂಡ ಶಿವಲಾಲ ಕೂಳೆಕರ ಸಾ:ನಿಂಬಾಳ ತಾ:ಆಳಂದ.ಇವರು ದಿನಾಂಕ:15-10-2013 ರಂದು  ರಂದು ರಾತ್ರಿ 08:30 ಗಂಟೆ ಸುಮಾರಿಗೆ ನನ್ನ ಗಂಡನಾದ ಶಿವಲಾಲ ಕೂಳೆಕರ ಇವರಿಗೆ ನಮ್ಮ ಗ್ರಾಮದ ಬಸ್ ನಿಲ್ದಾಣದ ಹತ್ತಿರ ನನ್ನ ಗಂಡನಿಗೆ 1) ಉತ್ತಮ ತಂದೆ ಬಸಣ್ಣಾ ಸಿಗರಕಂಠಿ 2) ರಾಜು ತಂದೆ ನಾಗೇಂದ್ರಪ್ಪ ಸಿಗರಕಂಠಿ 3) ಗಿರೆಪ್ಪ ಬರಗಾಲೆ 4) ಲಕ್ಷ್ಮೀಪುತ್ರ ತಂದೆ ಹಣಮಂತ ಶ್ರೀಗಣಿ 5) ರವಿ ತಂದೆ ಯಶ್ವಂತರಾಯ ಹೊನ್ನಳ್ಳಿ 6) ಬಸವರಾಜ ತಂದೆ ಸೋಮನಾಥ ಕೊಣೆ 7) ಮಲ್ಲಪ್ಪ ತಂದೆ ಲಕ್ಷ್ಮಣ ಗದ್ದಿ 8) ಮಹಾಂತಪ್ಪ ತಂದೆ ಪರಮೇಶ್ವರ ಸಿಗರಕಂಠಿ 9) ಲಕ್ಷ್ಮಣ ತಂದೆ ಬಸಣ್ಣಾ ಸಿಗರಕಂಠಿ 10) ಶಿವಕುಮಾರ ತಂದೆ ಗುರುನಾಥ ಸಿಗರಕಂಠಿ 11) ಲಕ್ಷ್ಮೀಪುತ್ರ ತಂದೆ ಚನ್ನಬಸಪ್ಪ ನಂದ್ಯೆಣಿ ಇವರೆಲ್ಲರೂ ಗುಂಪು ಕಟ್ಟಿಕೊಂಡು ನನ್ನ ಗಂಡನಿಗೆ ಹೊಡೆಯುತ್ತಿದ್ದಾರೆ.ಅಂತಾ ಜನರು ಅಂದಾಡುವುದನ್ನು ಕೇಳಿ ತಿಳಿದುಕೊಂಡು  ಬಂದು  ನೋಡಲಾಗಿ ನನ್ನ ಗಂಡನಿಗೆ ಈ ಮೇಲ್ಕಂಡ ಜನರು ಹೊಡೆ-ಬಡೆ ಮಾಡುತ್ತಿದ್ದಾಗ ನಾನು ನಡುವೆ ಹೋಗಿ ಜಗಳ ಬಿಡಿಸುತ್ತಿದ್ದಾಗ.ಸದರಿಯವರು ನನಗೆ ಈ ರಂಡೀ ಬೋಸಡಿ ಮಗಳಿಗೆ ಸೊಕ್ಕು ಬಹಳ ಇದೆ ಈಕೆಗೂ ಸಹ ಹೊಡೆಯಿರಿ ಅಂತಾ ಅಂದಾಗ ಅವರಲ್ಲಿ ಉತ್ತಮ ಸಿಗರಕಂಠಿ ಇತನು ನನ್ನ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿ ಬೇನ್ನು ಮೇಲೆ ,ಹೊಟ್ಟೆಯ ಮೇಲೆ,ಕೈ ಮುಷ್ಠಿ ಮಾಡಿ ಹೊಡೆದಿದ್ದರಿಂದ ನನಗೆ ಒಳಪೆಟ್ಟಾಗಿರುತ್ತದೆ.ಮತ್ತು ಅವರಲ್ಲಿ ರಾಜು ಸಿಗರಕಂಠಿ ಇತನು ನನ್ನ ಸೀರೆ ಹಿಡಿದು ಜಗ್ಗಾಡಿ ಅವಮಾನ ಮಾಡಿ ಜಾತಿನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀಮತಿ.ಸಂಗಮ್ಮಾ ಗಂಡ ಯಶವಂತರಾವ ಸಾಣಕ ಸಾ:ನಿಂಬಾಳ ದಿನಾಂಕ:15-10-2013 ರಂದು ರಾತ್ರಿ 08:30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮನೆಯ ಪಕ್ಕದವರಾದ ಕನ್ನುಬಾಯಿ ಗಂಡ ಹಣಮಂತರಾಯ ಶ್ರೀಗಣಿ ಇಬ್ಬರು ಕೂಡಿಕೊಂಡು ನಮ್ಮೂರ ಬಸ್ ನಿಲ್ದಾಣದ ಹತ್ತಿರ ಹೋರಟಾಗ ನಮ್ಮ ಗ್ರಾಮದವರಾದ 1] ಲಕ್ಷ್ಮಿಪುತ್ರ ತಂದೆ ಬಸಣ್ಣಾ ಕೊಳೆಕರ 2] ಶಿವಲಾಲ ತಂದೆ ಬಸಣ್ಣಾ ಕೊಳೆಕರ 3] ಶ್ಯಾಮಸುಂದರ ತಂದೆ ಅಣ್ಣಪ್ಪ ತಳಕೇರಿ 4] ದತ್ತತ್ರೇಯ ತಂದೆ ಅಮೃತ ತಳಕೇರಿ 5] ಅಂಬೇಡ್ಕರ ತಂದೆ ಅಣಪ್ಪ ತಳಕೇರಿ 6] ರಾಘವೇಂದ್ರ ತಂದೆ ತುಕಾರಾಮ ನಿಂಬಾಳಕರ್ 7] ಸಿದ್ದಾರಾಮ ತಂದೆ ತಮ್ಮಣ್ಣಾ ತಳಕೇರಿ 8] ಜೈಭೀಮ ತಂದೆ ಸಿದ್ದಣ್ಣಾ ಹೊಳಿಕೆರಿ 9] ರೇವಣಸಿದ್ದ ತಂದೆ ಶರಣಪ್ಪಾ ಇಬ್ರಹಿಂಪೂರ 10] ಲಕ್ಷ್ಮಣ ತಾಯಿ ಶಿವಮ್ಮಾ ತಳಕೇರಿ 11] ಗೌತಮ ಪಟೇದ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಗ್ರಾಮದಲ್ಲಿ ಇಕೆಯದು ಬಹಳ ಆಗಿದೆ ಈ ಸೂಳೆಗೆ ಬೀಡಬೇಡಿರಿ ಅಂತಾ ನನ್ನ ಮೈಮೇಲಿನ ಸೀರೆ ಹಿಡಿದು ಜಗ್ಗಾಡಿ ಅವಮಾನ ಮಾಡಿರುತ್ತಾರೆ. ಯ್ಯಾಕರೆಪ್ಪಾ ಸುಮ್ಮ ಸುಮ್ಮನೆ ಬೈದು ತಕರಾರು ಮಾಡುತ್ತಿರಿ ಅಂತಾ ಕೇಳಿದಕ್ಕೆ ನಮ್ಮಗೆ ಎದುರು ಮಾತನಾಡುತ್ತಿ ರಂಡೀ ಸೂಳೆ ಅಂತ ಅವಾಚ್ಯ ಶಬ್ಬಗಳಿಂದ ಬೈದು ಕೈಯಿಂದ ಹೊಡೆ-ಬಡೆ ಮಾಡುತ್ತಿದ್ದಾಗ ಕನ್ನುಬಾಯಿ ಬಿಡಿಸಲು ಬಂದರೆ ಅವಳಿಗೂ ಸಹ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಿ ಕೈಯಿಂದ ಹೊಡೆ-ಬಡೆ ಮಾಡಿರುತ್ತಾರೆ. ಈ ರಂಡೀಯರಿಗೆ ಬೀಡಬೇಡಿರಿ ಅಂತಾ ಜೀವದ ಭಯದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲುಗೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಆನಂದ ತಂದೆ ಠಾಕೂರ ಪವಾರ ಸಾ: ಬಾಲನಾಯಕ ತಾಂಡಾ ತಾ: ಚಿತ್ತಾಪೂರ ರವರು  ದಿನಾಂಕ-16-10-2013 ರಂದು ಕೆಲಸಕ್ಕೆ ರಜೆ ಹಾಕಿ ಬೆಳ್ಳಿಗೆ ಮೋ.ಸೈ.ನಂಬರ ಪ್ಲೇಟ್ ಬರೆಸಿಕೊಂಡು ಬರಲು ಗುಲಬರ್ಗಾಕ್ಕೆ ಹೋಗಿದ್ದು ಬಕ್ರೀದ ಹಬ್ಬದ ಕಾರಣ ಅಂಗಡಿಗಳು ಬಂದ ಇದ್ದುದರಿಂದ ಮರಳಿ ಸಾಯಂಕಾಲ 5-30 ಗಂಟೆ ಸುಮಾರಿಗೆ ಗುಲಬರ್ಗಾದಿಂದ ಬಿಟ್ಟು ಮುಗಳನಾಗಾಂವ್ ಗ್ರಾಮದ ಹೊಸ ಶಾಲೆ ದಾಟಿ ಸ್ವಲ್ಪ ಮುಂದೆ ಹೋಗುತ್ತಿರುವಾಗ ರೋಡಿನ ಪಕ್ಕದಲ್ಲಿ 4 ಜನರು ನಿಂತುಕೊಂಡು ಕೈ ಮಾಡಿ ಪೆಟ್ರೋಲ ಖಾಲಿ ಆಗಿದೆ ಸ್ವಲ್ಪ ಕೊಡಿ ಅಂತಾ ಕೇಳಿದಕ್ಕೆ ಮೊ.ಸೈಕಲ ನಿಲ್ಲಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ನನ್ನ ಹತ್ತಿರ ಇದ್ದ 1] ಒಂದು ಬಜಾಜ ಕಂಪನಿಯ ಮೋ.ಸೈ ಅ.ಕಿ 50000/- 2] ಒಂದು ಶ್ಯಾಮಸಾಂಗ ಕಂಪನಿಯ ಮೋಬೈಲ ಅ.ಕಿ 1000/- 3] ಒಂದು ಟೈಟನ ಕಂಪನಿಯ ಗಡಿಯಾರ ಅ.ಕಿ.1500/- 4] ನಗದು ಹಣ 300/- ರೂ ಹೀಗೆ ಎಲ್ಲಾ ಸೇರಿ ಒಟ್ಟು ಅಂದಾಜ ಕಿಮ್ಮತ್ತು 52,800/- ರೂ ಸಾಮಾನುಗಳನ್ನು ದೋಚಿಕೊಂಡು ಹೋಗಿರುತ್ತಾರೆ  CAvÁ ಸಲ್ಲಿಸಿದ ದೂರು ¸ÁgÁA±ÀzÀ ªÉÄðAzÀ ªÀiÁqÀ§Æ¼À oÁಣೆಯಲ್ಲಿ ಪ್ರಕರಣ ದಾಖಲಾಗಿದೆ.