POLICE BHAVAN KALABURAGI

POLICE BHAVAN KALABURAGI

19 November 2015

KALABRAGI DISTRICT REPORTED CRIMES

ಕಳವು ಪ್ರಕರಣ:
ಚೌಕ ಪೊಲೀಸ್‌ ಠಾಣೆ : ದಿನಾಂಕ 18.11.2015 ರಂದು  ಶ್ರೀ ಗುರುಪ್ರಕಾಶ ತಂದೆ ಶಿವಶರಣಪ್ಪ ಮುಗಳಿ ಸಾಃ ಜನತಾ ಲೇಔಟ ಕಲಬುರಗಿ ಇವರು ದಿನಾಂಕಃ 13.10.2015 ರಂದು ಸಾಯಂಕಾಲ 5.00 ಗಂಟೆಗೆ  ತಮ್ಮ ಮನೆಯ ಮುಂದೆ ಮೋಟಾರ ಸೈಕಿಲ್‌ ನಿಲ್ಲಿಸಿ ಮನೆಯೋಳಗೆ ಹೋಗಿ ಊಟ ಮಾಡಿ ಮರಳಿ 6.00 ಗಂಟೆಗೆ ಬಂದು ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ ಹೀರೋ ಹೊಂಡಾ ಸ್ಪೆಲಂಡರ  ಮೊಟಾರ ಸೈಕಲ ನಂ ಕೆಎ 32  ಯು 5919 ನೇದ್ದು ಇರಲ್ಲಿಲ.  ಆಗ ನಾನು ಗಾಬರಿಗೊಂಡು ನನ್ನ ಸ್ನೇಹಿತರಿಗೆ ನನ್ನ ಮೋಟಾರ ಸೈಕಿಲ್‌ ಕಳುವಾದ ಬಗ್ಗೆ ಹೇಳಿದ್ದು ಇರುತ್ತದೆ. ನಂತರ ನಾನು ಹಾಗೂ ನಮ್ಮ  ಸ್ನೇಹಿತರು ಸೇರಿ ಎಲ್ಲಾ ಕಡೆ ಹುಡಕಾಡಿದ್ದು ಪತ್ತೆ ಆಗಿರುವದಿಲ್ಲ. ಸದರಿ ನನ್ನ ಮೋಟಾರ ಸೈಕಲನ್ನು ಯೋರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರನ ಬಂಧನ:
ನಿಂಬರ್ಗಾ ಪೊಲೀಸ್ ಠಾಣೆ: ದಿನಾಂಕ 18-11-2015 ರಂದು ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್. ನಿಂಬರ್ಗಾ ಪೊಲೀಸ ಠಾಣೆ ರವರು ಮಾಡಿಯಾಳ ಗ್ರಾಮದ  ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಾ ಸಾರ್ವಜನಿಕರಿಂದ ಹಣ ಪಡೆದು ಮೋಸ ಮಾಡುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂಧಿಯವರಾದ  ಹಜರತ ಅಲಿ ಪಿಸಿ 154, ಶಿವಶರಣ ಸಿಪಿಸಿ 1153 ರವರೊಂದಿಗೆ ಪಂಚರಾದ ಶಿವಾನಂದ, ಮಹಾದೇವ ಇವರನ್ನು ಬರ ಮಾಡಿಕೊಂಡು ಸಿಬ್ಬಂಧಿ ಹಾಗೂ ಪಂಚರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಪ್ರಭಾಕರ ತಂದೆ ಬಾಬು ಸಾ: ಮಾಡಿಯಾಳ ಇತನನ್ನು ದಸ್ತಗೀರ ಮಾಡಿ ಆತನಿಂದ  ನಗದು ರೂ 1210/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ವಶಪಡಿಸಿಕೊಂಡು ಆತನ ವಿರುದ್ದ ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರನ ಬಂಧನ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ 18.11.2015 ರಂದು ಓಕಳಿ ಕ್ರಾಸ ಹತ್ತಿರ ನೋಡಲು ಓಕಳಿ ಕ್ರಾಸ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಹೋಗಿ ಬರುವ ಸಾರ್ವಜನಿಕರಿಗೆ ಕರೆದು ಬಾಂಬೆ ಮಟಾಕ ಇದೆ 1 ರುಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿಯನ್ನು ಬರೆದು ಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಠಾಣೆಯ ಸಿಬ್ಬಂದಿಯವರಾದ ಕತಲಸಾ ಪಿಸಿ 310, ಮಲ್ಲಿಕಾರ್ಜುನ ಪಿಸಿ 1229 ರವರು ಮತ್ತು ಪಂಚರೊಂದಿಗೆ ದಾಳಿ ಮಾಡಿ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಮಟಕಾ ಬರೆದುಕೊಳ್ಳುತ್ತಿದ್ದ ಗೊರಖನಾಥ ತಂದೆ ಸಂಗಣ್ಣ ದುರ್ಗೆ ಸಾ: ಅಂಬಲಗಿ ತಾ:ಜಿ: ಆಳಂದ ಜಿ: ಕಲಬುರಗಿ ಈತನಿಗೆ ದಸ್ತಗೀರ ಮಾಡಿ ಆತನಿಂದ ನಗದು ಹಣ 550/- ರೂ, ಒಂದು ಬಾಲ ಪೇನ, ಮತ್ತು 2 ಮಟಕಾ ಚೀಟಿಗಳು ಜಪ್ತಿಮಾಡಿ ಆತನ ವಿರುದ್ದ ಕಮಲಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ