POLICE BHAVAN KALABURAGI

POLICE BHAVAN KALABURAGI

26 December 2015

Kalaburagi District Reported Crimes

 ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ. ವೀರುಪಾಕ್ಷಪ್ಪಾ ತಂದೆ ಶಂಕರೆಪ್ಪಾ ಹಣಮಶೆಟ್ಟಿ ಸಾ: ಜಿಡಗಾ ತಾ:ಆಳಂದ ರವರ ಹಿರಿಯ ಅಣ್ಣನಾದ ಶರಣಬಸಪ್ಪಾ ತಂದೆ ಶಂಕರೆಪ್ಪಾ ಹಣಮಶೆಟ್ಟಿ ಈತನು ಗುಲಬರ್ಗಾದ ಸಾಯಿನಾಥ ಫಟ್ರೀಲೈಜರರಲ್ಲಿ ಮ್ಯಾನೇಜರ್ ಅಂತಾ ಕೆಲಸ ಮಾಡಿಕೊಂಡು ತಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತಿದ್ದು ದಿನಾಂಕ:24/12/2015 ರಂದು ರಾತ್ರಿ 11:45 ಗಂಟೆ ಸುಮಾರಿಗೆ ನನಗೆ ನನ್ನ ಅಣ್ಣನ ಮೊಬೈಲದಿಂದ ಯಾರೋ ಪೋನ್ ಮಾಡಿ ಆಳಂದ ಚೆಕ್ಕಪೋಸ್ಟ್ ದಾಟಿ ಒಂದು ಕೀ.ಮಿ.ಅಂತರದ ಹಿರೋಳಿ ರೋಡಿನ ಮೇಲೆ ರಸ್ತೆ ಅಪಘಾತವಾಗಿ ಈ ಮೊಬೈಲಿನ ಮನುಷ್ಯ ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದರಿಂದ ನಾನು ಸ್ಥಳಕ್ಕೆ ಹೋಗಿ ನೋಡಲು ನನ್ನ ಅಣ್ಣನಾದ ಶರಣಬಸಪ್ಪಾನೆ ಇದ್ದು ಆತನ ಶವವೂ ಮುಖ್ಯ ರಸ್ತೆಯ ಮೇಲೆ ಅಂಗಾತವಾಗಿ ಬಿದ್ದು ತಲೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ನನ್ನ ಅಣ್ಣನು ಚಲಾಯಿಸುತ್ತಿದ ಮೋಟರ್ ಸೈಕಲ ಸಹ ಬಿದಿದ್ದು, ಅದಕ್ಕೆ ಡಿಕ್ಕಿ ಪಡಿಸಿದ ಟ್ರಾಕ್ಟರ್ ಇಂಜಿನ್ ನಂ: MH-26 V-7247 ಇದ್ದು ಅದಕ್ಕೆ ಎರಡು ಟ್ರೈಲಿಗಳಿದ್ದು ಆ ಟ್ರೈಲಿಗಳಿಗೆ ನಂಬರ್ ಇರುವುದಿಲ್ಲಾ. ನನ್ನ ಅಣ್ಣನು ಆಳಂದ ಚೆಕಪೋಸ್ಟ್ ಮುಖಾಂತರ ನಮ್ಮ ಗ್ರಾಮವಾದ ಜಿಡಗಾ ಗ್ರಾಮಕ್ಕೆ ಹೋಗುವಾಗ ಅವನ ಹಿಂದಿನಿಂದ ಅಂದರೆ ಆಳಂದ ಚೆಕಪೋಸ್ಟ್ ಕಡೆಯಿಂದ ಟ್ರಾಕ್ಟರ್ ಚಾಲಕನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ನನ್ನ ಅಣ್ಣ ಚಲಾಯಿಸುತ್ತಿದ್ದ ಮೋಟರ್ ಸೈಕಲಕ್ಕೆ ಡಿಕ್ಕಿ ಪಡಿಸಿ ವಾಹನ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಸದರಿ ಘಟನೆಯು ಅಂದಾಜು ದಿನಾಂಕ:24/12/2015 ರ ರಾತ್ರಿ 11 ಗಂಟೆಯಿಂದ 11-30 ರ ಮಧ್ಯದ ಅವಧಿಯಲ್ಲಿ ಆಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:-20/12/2015 ರಂದು ನನ್ನ ತಂದೆ ಸಾಯಿಬಣ್ಣಾ ಇವರಿಗೆ ರಸ್ತೆ ಅಪಘಾತವಾದ ಬಗ್ಗೆ ಈಗಾಗಲೆ ದಿನಾಂಕ.21-12-2015 ರಂದು ದೂರು ದಾಖಲಿಸಿದ್ದು  ಕ್ರೋಜರ ನಂ.ಕೆ.ಎ.25 ಬಿ-3375 ನೆದ್ದರ ಚಾಲಕ ಶರಣಯ್ಯಾ ತಂದೆ ಮಾಣಿಕಯ್ಯಾ ಗುತ್ತೇದಾರ ಸಾ;ನವನಿಹಾಳ ತಾ;ಜಿ;ಕಲಬುರಗಿ ಈತನು ತನ್ನ ಕ್ರೋಜರನ್ನು ಅತೀವೇಗದಿಂದ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊಗುತ್ತಿದ್ದ ನಮ್ಮ ತಂದೆಗೆ ಡಿಕ್ಕಿ ಪಡಿಸಿದರಿಂದ ಆದ ಗಾಯಗಳಿಂದಾಗಿ ನಮ್ಮ ತಂದೆ ಸಾಯಿಬಣ್ಣಾ ತಂದೆ ಹಿರಿಗೆಪ್ಪಾ ಇವರು ದಿನಾಂಕ.20-12-2015 ರಿಂದ ದಿನಾಂಕ. 24-12-2015 ರವರಂದು ಬೆಳೆಗ್ಗೆ 6-30 ಗಂಟೆಯವರೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡಿಸಿದರೂ ಸಹಾ ಉಪಚಾರ ಫಲಕಾರಿ ಆಗದೆ ಇಂದು ದಿನಾಂಕ. 24-12-2015 ರಂದು ಬೆಳಗ್ಗೆ 6-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾರೆ. ಅಂತಾ ಶ್ರೀ. ಪ್ರಕಾಶ ತಂದೆ ಸಾಯಿಬಣ್ಣಾ ಕೋರವಾರ ಸಾ:ಕಪನೂರ ತಾ:ಜಿ:ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಯೊ ಇಂಜಕ್ಷನನಿಂದ ಮಗು ಮೃತಪಟ್ಟ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.23-12-2015 ರಂದು ಬೆಳಗ್ಗೆ 9-30 ಗಂಟೆಗೆ ನಮ್ಮೂರ ಅಂಗನವಾಡಿ ಕೇಂದ್ರದಲ್ಲಿ ಸಣ್ಣ ಮಕ್ಕಳಿಗೆ ಪೊಲೀಯೋ ಇಂಚೆಕ್ಸನ ಕೊಡುತ್ತಿದ್ದಾರೆ  ಅಂತಾ ನಮ್ಮೂರಿನ ಅಂಗನವಾಡಿಯ ಕಾರ್ಯ ಕರ್ತೆಯಾದ ಶೈಲಾಜ ಇವರು ನನ್ನ ಮಗಳು ಭವಾನಿ ಇವಳಿಗೆ ಕರೆದುಕೊಂಡು ಬಾ ಅಂತಾ ತಿಳಿಸಿದಾಗ ನಾನು ನನ್ನ ಮಗಳು ಭವಾನಿ ಇವಳಿಗೆ ಕರೆದುಕೊಂಡು ಅಂಗನವಾಡಿ ಕೇಂದ್ರಕ್ಕೆ ಹೋದಾಗ ನನಗೆ ನಮ್ಮ ಗ್ರಾಮದ ಶಶಿಕಲಾ ನಡಗೇರಿ ಹಾಗೂ ಅಂಬಿಕಾ ಜಮದಾರ ಮತ್ತು ಇತರರು ಸಹಾ  ತಮ್ಮ ತಮ್ಮ ಮಕ್ಕಳಿಗೆ ಪೊಲೀಯೋ ಇಂಜಕ್ಸನ ಹಾಕಿಸಲು ಬಂದಿದ್ದರು . ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪದ್ಮಣಿ ಸಿಸ್ಟರ ಪೊಲಿಯೋ ಇಂಜೆಕ್ಸನ ಮಾಡುತಿದ್ದರು. ಸರದಿಯಂತೆ ಬೆಳಗ್ಗೆ 10-30 ಗಂಟೆಗೆ  ನನ್ನ ಸರದಿ ಬರಲು ನನ್ನ ಮಗಳು ಭವಾನಿಗೆ ಆರೋಗ್ಯ ತಪಾಸಣೆ ಮಾಡದೆ ಪೊಲಿಯೋ ಇಂಜಕ್ಸನ ಪದ್ಮಣಿ ಸಿಸ್ಟರ ರವರು  ಭವಾನಿಗೆ ಮಾಡಿರುತ್ತಾರೆ , ನಂತರ ನನ್ನ ಮಗಳು ಭವಾನಿಗೆ ಮನೆಗೆ ಕರೆದುಕೊಂಡು ಹೋಗಿರುತ್ತೇವೆ. ಇಂಜೆಕ್ಸನ ಮಾಡಿದ ನಂತರ ನನ್ನ ಮಗಳು ಸುಸ್ತಾಗಿದ್ದು . ದಿನಾಂಕ. 24-12-2015 ರಂದು ಬೆಳಗಿನ ಜಾವ 6-00 ಗಂಟೆಗೆ ಮನೆಯಲ್ಲಿ ಮೃತ ಪಟ್ಟಿರುತ್ತಾಳೆ ನಮ್ಮ ಮನೆಯಲ್ಲಿ ಮತ್ತು ಅಕ್ಕ ಪಕ್ಕದವರನ್ನು ವಿಚಾರಿಸಿ ತಡವಾಗಿ ನನ್ನ ಮಗಳು ಭವಾನಿಯ ಶವವನ್ನು ಕಲಬುರಗಿ ಸರಕಾರಿ ಆಸ್ಪತ್ರೆಗೆ ತಂದಿರುತ್ತೇನೆ .ಕಾರಣ ನನ್ನ ಮಗಳು ಭವಾನಿಯ ಸಾವಿನ ಕಾರಣರಾದ ಪದ್ಮಣಿ ಸಿಸ್ಟರ  ಇವರ ಮೇಲೆ ಸೂಕ್ತ  ಕಾನೂನು ಕ್ರಮಕೈಕೊಳ್ಳಬೇಕು ಅಂತಾ ಶ್ರೀಮತಿ ರುಕ್ಮಣಿ ಗಂಡ ಪ್ರಕಾಶ ಎಡಗೇರಿ ಸಾ :: ಪಂಡಿತ ದಿನದಯಾಳ ಉಪಧ್ಯಾಯ ನಗರ ಜಾಫರಬಾದ ತಾ;ಜಿ;ಕಲಬುರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.