POLICE BHAVAN KALABURAGI

POLICE BHAVAN KALABURAGI

18 January 2016

Kalaburagi District Press Note

ಪತ್ರಿಕಾ ಪ್ರಕಟಣೆ
                ಕಾಣೆಯಾದ ಮಕ್ಕಳ ಪತ್ತೆಗೆ ಸಂಭಂದಿಸಿದಂತೆ ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ಅಪರೇಶನ ಸ್ಮಾಯಲ್ -2 ಎಂಬ ವಿನೂತನ ಯೋಜನೆಯನ್ನು ದಿನಾಂಕ   18-01-2016  ರಿಂದ 18-02-2016 ರವರೆಗೆ ಹಮ್ಮಿಕೊಂಡ ವಿಷಯಕ್ಕೆ ಸಂಭಂದಿಸಿದಂತೆ ಕಲಬುರಗಿ ಪೊಲೀಸ್ ಭವನ ಸಭಾಂಗಣದಲ್ಲಿ ದಿನಾಂಕ 18-01-2016 ರಂದು ಸಭೆಯನ್ನು ನಡೆಸಲಾಯಿತು. ಈ ಸಭೆಗೆ ಮಹಿಳಾ ಮತ್ತು ಮಕ್ಕಳ ಯೋಜನೆಗೆ ಸಂಭಂದಪಟ್ಟಂತಹ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಯವರಾದ ಮತ್ತು ನ್ಯಾಯಾಧಿಶರಾದ ಶ್ರೀ.ಹೆಚ್.ಎಲ್ ಚೌವ್ಹಣ, ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಯವರಾದ ಶ್ರೀ.ಸಿದ್ದಲಿಂಗಪ್ಪರವರು, ಶ್ರೀ ಭರತೇಶ ಶೀಲವಂತ ಕಾನೂನು ಪರಿವೀಕ್ಷಣಾಧಿಕರಿಗಳು ಜಿಲ್ಲಾ ಮಕ್ಕಳ ಘಟಕ ಕಲಬುರಗಿ ರವರು,ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಶ್ರೀಮತಿ ಅನುಸೂಯಾ ಕಿನ್ನಾಳ,ಮಕ್ಕಳ ಕಲ್ಯಾಣ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ದುತ್ತರಗಾಂವ ರವರು, ಹಾಗೂ ಬಾಲಕ ಬಾಲಕಿಯರ ಬಾಲಮಂದಿರ ಅಧೀಕ್ಷಕರು,ಸಿ.ಡಿ.ಪಿ.ಓ ರವರು, ಹಾಗೂ ಜಿಲ್ಲಾ ಶಿಕ್ಷಣ ಇಲಾಖೆಯವರು, ಹಾಗೂ ಮಕ್ಕಳು ಕಾಣೆಯಾದ ಬ್ಯೂರು (ಡಾನ್ ಬಾಸ್ಕೋರವರು) ಅಧಿಕಾರಿಗಳು, ಮಹಿಳಾ & ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೆಶಕರು, ಇನ್ನೂ ಇತರ ಸಂಘ ಸಂಸ್ಥೆಗಳ ಸದಸ್ಯರು, ಮತ್ತು ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಮಕ್ಕಳ ಘಟಕದಲ್ಲಿ ಕಾರ್ಯ ನಿರ್ವಹಿಸುವಂತಹ ಪೊಲೀಸ್ ಅಧಿಕಾರಿಗಳು ಹಾಗೂ ಆರಕ್ಷಕ ಉಪಾಧಿಕ್ಷಕರು, ಆರಕ್ಷಕ ವೃತ್ತನಿರೀಕ್ಷಕರು, ಇತರರು, ಈ ಕಾಯಕ್ರಮದಲ್ಲಿ ಭಾಗಿಯಾಗಿದ್ದರು.
           ಕಾಣೆಯಾದ ಮಕ್ಕಳ ಪಾಲಕರ ತೊಂದರೆಯನ್ನು ಈಡೇರಿಸುವ ಹಿನ್ನಲೆಯಲ್ಲಿ ಹಾಗೂ ಸಮಾಜದ ಸುಧಾರಣೆ  ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ,ಬಾಲಕರ ಪುನರ ವಸತಿ ನಿರ್ವಹಣ ರವರ ಅಭೀದೋಯ ಮತ್ತು ಬಾಲಕಾರ್ಮಿಕ ವೃತ್ತಿಯನ್ನು ಮತ್ತು ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ವಿವಿಧ ಕಾನೂನುಗಳ ಅರಿವು ಮೂಡಿಸಿದಲ್ಲದೇ,ಕಾರ್ಯ ಪ್ರವೃತ್ತರಾಗುವಂತಹ ಸಿಬ್ಬಂದಿಯವರಿಗೆ ಸೂಕ್ತ ನಿರ್ದೆಶನ ನೀಡಿ ಈ ದೆಸೆಯಲ್ಲಿ ಎಲ್ಲಾ ಇಲಾಖೆಯ ಸಿಬ್ಬಂದಿಯವರು ಕೈ ಜೋಡಿಸಿ ಈ ಯೋಜನೆ ಯಶಸ್ವಿಗೊಳಿಸಬೇಕು ಅಂತಾ ತಿಳುವಳಿಕೆ ನೀಡಿದರು.ಪೊಲೀಸ್ ಸಿಬ್ಬಂದಿಯವರಿಗೆ ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚುವ ಕುರಿತು ಪೊಲೀಸ್ ವೃತ್ತವಾರು ತಂಡಗಳನ್ನು ರಚಿಸಿ ಈ ದೆಸೆಯಲ್ಲಿ ಚುರುಕು ಕ್ರಮ ಮತ್ತು ಎಡಬಿಡದ ಪ್ರಯತ್ನ ಮುಂದುವರೆಸುವ ಬಗ್ಗೆ ಸೂಚಿಸಲಾಯಿತು.ಮತ್ತು ಈ ಕಾರ್ಯ ನಿರ್ವಹಣೆಯಲ್ಲಿ ನಿರ್ವಹಿಸಿಬೇಕಾದಂತಹ ಕಾನೂನುಗಳ ಮಾಹಿತಿ ನೀಡಿದರು. ಸದರ ಸಭೆ ಶ್ರೀ. ಅಮಿತ ಸಿಂಗ ಐಪಿಎಸ್. ಆರಕ್ಷಕ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ನಡೆಯಿತು.