POLICE BHAVAN KALABURAGI

POLICE BHAVAN KALABURAGI

29 April 2016

KALABURAGI DISTRICT REPORTED CRIMES.

ನಿಂಬರ್ಗಾ ಪೊಲೀಸ ಠಾಣೆ : ನಾನು ಈ ಹಿಂದೆ 2 ಬಾರಿ ಮತ್ತು ನನ್ನ ಹೆಂಡತಿಯಾದ ಶಾಂತಾಬಾಯಿ 2 ಬಾರಿ ದಂಗಾಪೂರ ಗ್ರಾಮ ಪಂಚಾಯತನ ಸದಸ್ಯರು ಆಗಿದ್ದೇವು. ಇದಕ್ಕೆ ನಮ್ಮ ಜಾತಿಯವರೆ ಆದ ರವಿ ತಂದೆ ಮೌಲಪ್ಪ ಮದನಕರ ಮತ್ತು ಆತನ ಮನೆಯವರು ನಮ್ಮ ಮೇಲೆ ದ್ವೇಶ ಸಾಧಿಸುತ್ತಾ ಬಂದಿರುತ್ತಾರೆ. ಕಳೆದ ಬಾರಿ ನನ್ನ ಹೆಂಡತಿ ಶಾಂತಾಬಾಯಿ ಇವಳು ಕೂಡ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸ್ಪರ್ದಿಸಿದ್ದು ಇವಳ ಎದುರು ರವಿ ತಂದೆ ಮೌಲಪ್ಪ ಮದನಕರ ಇವರ ತಾಯಿಯಾದ ನೀಲಮ್ಮ ಗಂಡ ಮೌಲಪ್ಪ ಮದನಕರ ಇವಳು ಗೆದ್ದಿರುತ್ತಾಳೆ. ನಮ್ಮಷ್ಟಕ್ಕೆ ನಾವು ಇದ್ದರು ಸಹ ರವಿ ಮತ್ತು ಆತನ ಕಡೆಯವರು ನಮ್ಮ ಮೇಲೆ ದ್ವೇಶ ಹೆಚ್ಚಿಸಿಕೊಂಡು ದಿನಾಂಕ 28/04/2016 ರಂದು ಅಂದಾಜ ಸಾಯಂಕಾಲ 0700 ಗಂಟೆಯ ಸುಮಾರಿಗೆ ನಮ್ಮೂರಿನ ಅಂಬೇಡ್ಕರ ಕಟ್ಟೆಯ ಮೇಲೆ ನಾನು ನನ್ನ ಕಡೆಯವರಾದ 01] ಮಲೀಕಪ್ಪ ತಂದೆ ಫಕೀರಪ್ಪ ಸಿಂಘೆ, 02] ಬಾಬು ತಂದೆ ದತ್ತಪ್ಪ ಸಿಂಘೇ. 03] ಸಂತೋಷತಂದೆ ದತ್ತಪ್ಪ ಸಿಂಘೆ, 04] ವಿಶಾಲ ತಂದೆ ಬಸವರಾಜ ಸಿಂಘೇ, 05] ಶಿವಾನಂದ ತಂದೆ ಮಲ್ಲಿಕಾರ್ಜುನ ಸಿಂಘೇ, 06] ಭಾಗಮ್ಮ ಗಂಡ ಮಹಾಂತಪ್ಪ ಸಿಂಘೇ, 07] ಉಮಾಶ್ರೀ ಗಂಡ ಬಾಬು ಸಿಂಘೆ, 08] ರಮಾ ಗಂಡ ಸಂತೋಷ ಸಿಂಘೆ, 09] ಶಾಂತಾಬಾಯಿ ಗಂಡ ದತ್ತಪ್ಪ ಸಿಂಘೆ ಎಲ್ಲರೂ ಸೇರಿ ಮಾತನಾಡುತ್ತಾ ಕುಳಿತಾಗ ಇದೆ ಸಮಯ ಸಾಧೀಸಿಕೊಂಡು ನಮ್ಮನ್ನು ಕೊಲೆ ಮಾಡುವ ಉದ್ದೇಶದಿಂದ 01] ರವಿ ತಂದೆ ಮೌಲಪ್ಪ ಮದನಕರ, 02] ಮಹಾಂತಪ್ಪ ತಂದೆ ಮೌಲಪ್ಪ ಮದನಕರ, 03] ಬಾಬು ತಂದೆ ಮಲ್ಕಪ್ಪ ಮದನಕರ, 04] ಮಡಿವಾಳ ತಂದೆ ಮಲ್ಕಪ್ಪ ಮದನಕರ, 05] ವಿಶ್ವನಾಥ ತಂದೆ ಮಲ್ಕಪ್ಪ ಮದನಕರ, 06] ಮಲ್ಕಪ್ಪ ತಂದೆ ಶಿವಪ್ಪ ಮದನಕರ, 07] ಗೌತಮ ತಂದೆ ರವಿ  ಮದನಕರ, 08] ರಾಹುಲ ತಂದೆ ರವಿ ಮದನಕರ, 09] ಜೈಕುಮಾರ ತಂದೆ ಅಣ್ಣಪ್ಪ ಘತ್ತರ್ಗಿ, 10] ಬಾಬು ತಂದೆ ಅಣ್ಣಪ್ಪ ಘತ್ತರ್ಗಿ, 11] ಭೋಗಪ್ಪ ತಂದೆ ಸೋಮಣ್ಣ ಝಳಕಿ, 12] ಪರಸಪ್ಪ ತಂದೆ ಭೋಗಪ್ಪ ಝಳಕಿ, 13] ಬಸವರಾಜ ತಂದೆ ಭೋಗಪ್ಪ ಝಳಕಿ, 14] ಸೋಮಣ್ಣ ತಂದೆ ಪರಸಪ್ಪ ಝಳಕಿ, 15] ನಾಗಪ್ಪ ತಂದೆ ಬಸಪ್ಪ ಸಿಂಘೆ, 16] ಜೈಕುಮಾರ ತಂದೆ ನಾಗಪ್ಪ ಸಿಂಘೆ, 17] ಸುನೀಲ ತಂದೆ ಮಲಕಪ್ಪ ದಂಡನಕರ, 18] ರವಿ ತಂದೆ ಮಲಕಪ್ಪ ದಂಡನಕರ, 19] ಬಾಬು ತಂದೆ ಗಾಳೆಪ್ಪ ಖಾನಾಪೂರ, 20] ರಮೇಶ ತಂದೆ ಗಾಳೆಪ್ಪ ಖಾನಾಪೂರ ಸಾ|| ಎಲ್ಲರೂ ಭಟ್ಟರ್ಗಾ, 21] ವಸಂತ ತಂದೆ ಮಲ್ಲಿಕಾರ್ಜುನ ಕುಮಸಿ ಸಾ|| ನಿಂಬರ್ಗಾ ಅಲ್ಲದೆ ಇನ್ನು ಇತರರು ತಮ್ಮ ತಮ್ಮ ಕೈಯಲ್ಲಿ ತಲವಾರ, ಚಾಕು, ಕಲ್ಲು ಮತ್ತು ಬಡಿಗೆಗಳೊಂದಿಗೆ ಚೀರಾಡುತ್ತಾ ಗುಂಪು ಕಟ್ಟಿಕೊಂಡು ಇವತ್ತು ನಿಮಗೆ ಇಡಂಗಿಲ್ಲ ರಂಡಿ ಮಕ್ಕಳೆ ಅಂತ ಬೈದಾಡುತ್ತಾ ಬಂದರು ನಾವೆಲ್ಲರೂ ಗಾಬರಿಗೊಂಡು ನಡಗುತ್ತಾ ನಿಂತಾಗ ರವಿ ತಂದೆ ಮೌಲಪ್ಪ ಮದನಕರ ಇತನು ತನ್ನ ಕೈಯಲ್ಲಿರುವ ತಲವಾರದಿಂದ ನನ್ನ ತಮ್ಮ ಮಲ್ಲಿಕಪ್ಪ ಇತನಿಗೆ ಮನಸ್ಸಿಗೆ ಬಂದಂತೆ ತಲೆಗೆ, ಬೆನ್ನಿಗೆ ಅಲ್ಲದೆ ಎಡಗೈ ಗೆ ಹೊಡೆದನು ನನ್ನ ತಮ್ಮ ಒದ್ದಾಡುತ್ತಾ ಅಲ್ಲಿಯೇ ಬಿದ್ದಾಗ ಬಾಬು ತಂದೆ ದತ್ತಪ್ಪ ಸಿಂಘೆ ಇತನು ಬಿಡಿಸಲು ಹೋಗಿದ್ದಕ್ಕೆ ಆತನಿಗೆ ಮಹಾಂತಪ್ಪನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತಲೆಯ ಮೇಲೆ ಮನಸ್ಸಿಗೆ ಬಂದಂತೆ ಹೊಡೆದನು, ಬಾಬು ತಂದೆ ಮಲ್ಕಪ್ಪ ಮದನಕರ ಇತನು ಕಲ್ಲಿನಿಂದ ಬೀಸಿ ಹೊಡೆದನು, ಸಂತೋಷ ತಂದೆ ದತ್ತಪ್ಪ ಸಿಂಘೆ ಇತನಿಗೆ ಜೈಕುಮಾರ ತಂದೆ ಅಣ್ಣಪ್ಪ ಘತ್ತರ್ಗಿ ಇತನು ಕೈಯಿಂದ ಹೊಟ್ಟೆ ಎದೆ ಬೆನ್ನಿಗೆ ಹೊಡೆದು ನೆಲಕ್ಕೆ ಹಾಕಿ ಕಲ್ಲಿನಿಂದ ಬಲಗಾಲ ಮೇಲೆ ಹೇರಿದನು, ವಿಶಾಲ ತಂದೆ ಬಸವರಾಜ ಸಿಂಘೆ ಇತನಿಗೆ ವಿಶ್ವನಾಥ ತಂದೆ ಮಲ್ಕಪ್ಪ ಮದನಕರ ಇತನು ಕಲ್ಲಿನಿಂದ ಕಪಾಳಕ್ಕೆ ಹೊಡೆದು ರಕ್ತಗಾಯ ಗುಪ್ತಗಾಯಪಡಿಸಿದನು. ಶಿವನಾಂದ ತಂದೆ ಮಲ್ಲಿಕಾರ್ಜುನ ಸಿಂಘೆ ಇತನಿಗೆ ಮಡಿವಾಳ ತಂದೆ ಮಲ್ಕಪ್ಪ ಮದನಕರ ಇತನು ಕಟ್ಟಿಗೆಯಿಂದ ತಲೆಯ ಮೇಲೆ ಹೊಡೆದನು, ಭಾಗಮ್ಮ ಗಂಡ ಮಹಾಂತಪ್ಪ ಸಿಂಘೆ ಇವಳಿಗೆ ಜೈಕುಮಾರ  ತಂದೆ ನಾಗಪ್ಪ  ಸಿಂಘೆ ಇತನು ಕಲ್ಲಿನಿಂದ ತೊಡೆಯ  ಮೇಲೆ  ಹೊಡೆದನು,  ಉಮಾಶ್ರೀಗೆ ಭೋಗಪ್ಪ ತಂದೆ  ಸೋಮಣ್ಣ ಝಳಕಿ ಇತನು ಬಲಗೈ ತಿರುವಿರುತ್ತಾನೆ. ರಮಾ ಇವಳೀಗೆ ಸೋಮಣ್ಣ ತಂದೆ ಪರಸಪ್ಪ ಝಳಕಿ ಇತನು ಬೆನ್ನ ಮೇಲೆ ಹಾಗೂ ಶಾಂತಾಬಾಯಿಗೆ ರಮೇಶ ತಂದೆ ಗಾಳೆಪ್ಪ ಖಾನಾಪೂರ ಇತನು ಕಾಲಿನಿಂದ ಹೊಟ್ಟೆ ಮೇಲೆ ಒದ್ದಿರುತ್ತಾನೆ. ನಾನು ನಿಮ್ಮ ಕಾಲ ಬೀಳತೀನಿ ಬಿಡರೋ ಅಂತ ಅಂದಾಗ ನನಗೆ ರವಿ ಮದನಕರ ಇತನು ಪಿಸ್ತೂಲ ತೆಗೆದುಕೊಂಡು ನನಗೆ ತೋರಿಸಿ ಇವತ್ತು ನಿನಗೆ ಇಡಂಗಿಲ್ಲ ಅಂತ ಅಂಜಿಸಿರುತ್ತಾನೆ. ಮಲೀಕಪ್ಪನು ರಕ್ತದ ಮಡುವಿನಲ್ಲಿ ಬಿದ್ದಾಗ ಮಲೀಕಪ್ಪ ಸತ್ತಾನ  ನಡಿರೋ ಅಂತ ಚೀರಾಡುತ್ತಾ ತಮ್ಮ ಮನೆಯ ಕಡೆಗೆ ಹೋಗಿರುತ್ತಾರೆ. ರವಿ ಮತ್ತು ಆತನ ಕಡೆಯವರು ನನ್ನ ತಮ್ಮನಾದ ಮಲೀಕಪ್ಪನಿಗೆ ತಲವಾರದಿಂದ ಹಲ್ಲೆ ಮಾಡಿ ತಲೆ, ಎಡಗೈಗೆ ಭಾರಿ ರಕ್ತಗಾಯಪಡಿಸಿ, ಬಾಬು, ಸಂತೋಷ, ವಿಶಾಲ, ಶಿವಾನಂದ ಇವರುಗಳಿಗೆ ಕಲ್ಲು ಬಡಿಗೆಗಳಿಂದ ತಲೆ, ಹೊಟ್ಟೆಗಳಿಗೆ ಭಾರಿ ರಕ್ತಗಾಯ ಗುಪ್ತಗಾಯಪಡಿಸಿ ಕೊಲೆ ಮಾಡಲು ಯತ್ನಿಸಿ ಹೆಣ್ಣುಮಕ್ಕಳ ಮೇಲು ಸಹ ಹಲ್ಲೆ ಮಾಡಿ ದೌರ್ಜನ್ಯವೆಸಗಿ ಹೋಗಿರುತ್ತಾರೆ. ಜಗಳದಲ್ಲಿ ಗಾಯಗೊಂಡವರನ್ನು ನಾನು ಮತ್ತು ನಮ್ಮೂರಿನ ಕಾಂತಪ್ಪ ತಂದೆ ಸೈಬಣ್ಣ ಸಿಂಘೇ, ಭೀಮಾಶಂಕರ ತಂದೆ ಹಣಮಂತ ಸಿಂಘೆ, ಸಂತೋಷ ತಂದೆ ಭೀಮಾಶಂಕರ ಸಿಂಘೆ, ಲಕ್ಷಪ್ಪ ತಂದೆ ತಿಪ್ಪಣ್ಣ ದಂಡನಕರ ಎಲ್ಲರೂ ಸೇರಿ  ಒಂದು ಖಾಸಗಿ  ವಾಹನದಲ್ಲಿ ನಿಂಬರ್ಗಾ ಆಸ್ಪತ್ರೆಗೆ ತಂದು ಉಪಚಾರ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕೊಟ್ಟು ಕಳಿಸಿರುತ್ತೇನೆ. ಕಾರಣ ರವಿ ಮತ್ತು ಇತರರ ಮೇಲೆಸೂಕ್ತ ಕಾನೂನು  ಕ್ರಮ ಜರುಗಿಸಲು ಹೇಳಿಯ ಪ್ರಕಾರ ಗುನ್ನೆ ದಾಖಲಾದ ಬಗ್ಗೆ ವರದಿ.
ಅಶೋಕ ನಗರ ಠಾಣೆ : ದಿನಾಂಕ 28/04/2016 ರಂದು ಸಂಜೆ 6 ಪಿಎಂಕ್ಕೆ  ಶ್ರೀ. ವಿಶ್ವನಾಥ ತಂದೆ ಹಣಮಂತರಾವ ಕೌವಲಗಿ  ವಿಳಾಸ: ಮನೆ ನಂ. 1-891/30/254/1 ಸಂತೋಷ ಕಾಲೋನಿ ಚಾಮುಂಡೆಶ್ವರಿ ನಗರ ಕಲಬುರಗಿ ರವರು ಸಲ್ಲಿಸಿದ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ ನನ್ನ ಪತ್ನಿಯವರು ಬೆಂಗಳೂರಿಗೆ ಹೊಗಿರುತ್ತಾರೆ. ಈಗ 3 ದಿನದಿಂದ  ನಾನು ಮತ್ತು ನನ್ನ ಮಗ ವೀರಣ್ಣ ಕೌವಲಗಿ ಇಬ್ಬರೇ ಮನೆಯಲ್ಲಿದ್ದೆವೆದಿನಾಂಕ 26/04/2016 ರಂದು ನಾನು ಮತ್ತು ನನ್ನ ಮಗನಾದ ವೀರಣ್ಣ ಕೌವಲಗಿ ಇಬ್ಬರೂ ಕೂಡಿ ಪಂಜಾಬ ನ್ಯಾಶನಲ್‌ ಬ್ಯಾಂಕಿಗ ಹೊಗಿ  ಅಗ್ರಿ ಗೊಲ್ಡ ಲೋನದಲ್ಲಿ ಇಟ್ಟಿದ್ದ ನನ್ನ ಪತ್ನಿಯ  21 ತೊಲೆ ಚಿನ್ನದ ಆಭರಣಗಳನ್ನು ಬಿಡಿಸಿಕೊಂಡು ಮನೆಯ ಬೇಡ್‌ ರೂಮಿನಲ್ಲಿರುವ ಕಪಾಟ ಡ್ರಾವದಲ್ಲಿಟ್ಟಿರುತ್ತೆನೆ. ನಿನ್ನೆ ದಿನಾಂಕ 27/04/2016 ರಂದು ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೊಗಿದ್ದು ಮನೆಯಲ್ಲಿ ನನ್ನ ಮಗ ಒಬ್ಬರೇ ಇದ್ದರು. ಮನೆಕೆಲಸದವಳಾದ  ನಿಂಗಮ್ಮಾ ಮಡಿವಾಳಪ್ಪಾ ರವರು ಮನೆಯಲ್ಲಿ ಕೆಲಸ ಮಾಡಿ ಹೊಗಿರುತ್ತಾರೆ. ನಾನು ಮದುವೆ ಕಾರ್ಯಕ್ರಮದಿಂದ ರಾತ್ರಿ ಮನೆಗೆ ಬಂದಿರುತ್ತೆನೆಇಂದು ದಿನಾಂಕ: 28/04/2016 ರಂದು ಮದ್ಯಾಹ್ನ 3 ಗಂಟೆಗೆ ಕೂಡಲಸಂಗಮಕ್ಕೆ ಮದುವೆ ಕಾರ್ಯಕ್ರಮಕ್ಕಾಗಿ ಹೊಗುತ್ತಿರುವಾಗ ನನ್ನ ಮಗನಾದ ವೀರಣ್ಣ ಕೌವಲಗಿ ರವರು ಫೋನ ಮಾಡಿ ಕಪಾಟ ಡ್ರಾವದಲ್ಲಿಟ್ಟಿದ್ದ  ಬಂಗಾರದ ಆಭರಣಗಳು ಕಡಿಮೆ ಕಾಣಿಸುತ್ತಿವೆ. ಎಂದು ಹೇಳಿದಾಗ ನಾನು ಮರಳಿ ಬಂದು ನೊಡಲು ಡ್ರಾವದಲ್ಲಿಟ್ಟಿದ್ದ ಒಂದು ಬಿಳಿಬಟ್ಟೆಯ ಪಾಕೇಟದಲ್ಲಿ ಎರಡು ಚಿನ್ನದ ಪಾಟಲಿಗಳು ಮಾತ್ರ ಇದ್ದು, ಇನ್ನೂಳಿದ  1) ಚಿನ್ನದ ನಾಲ್ಕು ಬಿಲ್ವಾರ್‌ಗಳು 50 ಗ್ರಾಂ, 2) ಚಿನ್ನದ ಒಂದು ಜೊತೆ ತೊಡೆಗಳು 50 ಗ್ರಾಂ, 3) ಚಿನ್ನದ ಚಪ್ಪಲಾರ್‌ 60 ಗ್ರಾಂ, ಕಾಣಿಸಲಿಲ್ಲಈ ಬಗ್ಗೆ ನನ್ನ ಮಗ ವೀರಣ್ಣ ಕೌವಲಗಿ ಮತ್ತು ಮನೆಕೆಲಸದವಳಾದ ನಿಂಗಮ್ಮಾ ಮಡಿವಾಳಪ್ಪಾ ರವರಿಗೆ ಕರೆದು ಕೇಳಿದ್ದು  ನಮಗೇನು ಗೊತ್ತಿಲ್ಲಾ ಎಂದು ಹೇಳಿದರು. ನನ್ನ ಮನೆಯ ಬೇಡ ರೂಮಿನ ಡ್ರಾವದಲ್ಲಿಟ್ಟಿದ್ದ  ಒಟ್ಟು 21 ತೊಲೆ ಚಿನ್ನಾಭರಣದಲ್ಲಿಂದ  16 ತೊಲೆ ಚಿನ್ನಾಭರಣಗಳು ಅದರ ಅಂದಾಜು ಕಿಮ್ಮತ್ತು 4,16,000/- ರೂ ನೇದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಥವಾ ಮನೆಗೆಲಸದವರು ಮಾಡಿರುತ್ತಾರೆ ಎನ್ನುವ ಬಗ್ಗೆ ಸಂಶಯ ಇರುತ್ತದೆ. ಈ ಬಗ್ಗೆ ತನಿಖೆ ಮಾಡಿ ಕಳ್ಳತನವಾಗಿರುವ ನನ್ನ ಚಿನ್ನಾಭರಣಗಳನ್ನು ಪತ್ತೆ ಹಚ್ಚಿಕೊಡಬೇಕೆಂದು ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಾದ ಬಗ್ಗೆ ವರದಿ.
ಆಳಂದ ಠಾಣೆ : ದಿನಾಂಕ:28/04/2016 ರಂದು 02:00 ಪಿ.ಎಂ.ಕ್ಕೆ ಪಿರ್ಯಾದಿ ಶ್ರೀ.ಸಂತೋಷ ತಂದೆ ರೇವಣಸಿದ್ದಪ್ಪಾ ಬಂಡೆ ವಯಸ್ಸು:33 ವರ್ಷ ಜಾತಿ:ಲಿಂಗಾಯತ ಸಾ:ಖಂಡಾಳ ತಾ: ಆಳಂದ ಇವರು ಠಾಣೆಗೆ ಹಾಜರಾಗಿ ಅರ್ಜಿ ನೀಡಿದರ ಸಾರಾಂಶವೆನೆಂದರೆ ನಾನು ಹಾಗೂ ಉಲ್ಲಾಸ ಗಂಡು ಮಕ್ಕಳಿದ್ದು ನಮ್ಮ ತಾಯಿ ಮಹಾನಂದಾ ನಮ್ಮ ಜೊತೆಗೆ ವಾಸವಾಗಿದ್ದು. ನಮ್ಮ ತಂದೆಯ ಪಾಲಿಗೆ 04 ಎಕರೆ ಜಮೀನು ಇದ್ದು ಅದನ್ನು ಸಾಗುವಳಿ ಮಾಡುತ್ತಾ ಬಂದಿದ್ದಿದೆ ಈ ಎರಡು ತಿಂಗಳ ಹಿಂದೆ ನನ್ನ ಹೆಂಡತಿ ಹೆರಿಗೆ ಸಮಯದಲ್ಲಿ ಉಮರ್ಗಾದ ಶಿಂದೆ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾಳೆ. ನಮ್ಮ ತಂದೆಯವರು ಆಸ್ಪತ್ರೆಯ ನನ್ನ ಹೆಂಡತಿಯ ಉಪಚಾರಕ್ಕಾಗಿ 02 ಲಕ್ಷ ರೂಪಾಯಿ ಖರ್ಚು ಮಾಡಿದ್ದು ಅಲ್ಲದೆ ಈ ವರ್ಷ ಬರಗಾಲ ಬಿದ್ದು ಹೊಲದಲ್ಲಿ ಯಾವುದೇ ಬೆಳೆ ಇರದಿದ್ದರಿಂದ ಸರಕಾರದ ಸಾಲ ಹಾಗೂ ಖಾಸಗಿ ಸಾಲ ಹೊಲದ ಮೇಲೆ ಅಂದಾಜು 05 ಲಕ್ಷ ರೂಪಾಯಿದಷ್ಟು ಸಾಲ ಮಾಡಿಕೊಂಡಿದ್ದು ಅದನ್ನು ಹೇಗೆ ತೀರಿಸುವದು ಅಂತಾ ನಮ್ಮ ತಂದೆಯವರು ಚಿಂತೆ ಮಾಡುತ್ತಿದ್ದರು ಅದಕ್ಕೆ ನಾವು ಹೇಗಾದರೂ ಮಾಡಿ ಸಾಲ ಮುಟ್ಟಿಸೋಣ ಚಿಂತಿಸಬೇಡ ಎಂದು ಧೈರ್ಯ ಹೇಳುತ್ತಾ ಬಂದಿದ್ದೆವೆ. ದಿನಾಂಕ: 27/04/2016 ರಂದು ಬೆಳೆಗ್ಗೆ ಸುಮಾರು 10 ಗಂಟೆಗೆ ಮನೆಯಿಂದ ಆಳಂದಕ್ಕೆ ಹೋಗುತ್ತೆನಂತ ಹೋದವನು ಮರಳಿ ಮನೆಗೆ ಬಂದಿರಲಿಲ್ಲಾ. ಇಂದು ದಿನಾಂಕ:28/04/2016 ರಂದು ಮದ್ಯಾಹ್ನ 01:00 ಗಂಟೆ ಸುಮಾರಿಗೆ ಪೋನ್ ಮುಖಾಂತರ ಮಾಹಿತಿ ಬಂದಿದ್ದೆನೆಂದರೆ ನಮ್ಮ ತಂದೆಯವರು ಆಳಂದದ ಕ್ರಿಡಾಂಗಣದ ಹತ್ತಿರ ಘಾಳೇಪ್ಪಾ ಹಟಗಾರ ಇವರ ಹೊಲದಲ್ಲಿದ ಬೇವಿನ ಮರಕ್ಕೆ ಹಗ್ಗದಿಂದ ಉರಲು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ನಮ್ಮೂರ ಲಕ್ಷ್ಮಣ ತಂದೆ ಗುಂಡಪ್ಪಾ ಜಮಾದಾರ ತಿಳಿಸಿದ ಮೇರೆಗೆ ನಮ್ಮೂರಿಂದ ನಾನು ಹಾಗೂ ನನ್ನ ಚಿಕ್ಕಪ್ಪಾ ಮಲ್ಲಿನಾಥ ಹಾಗೂ ಗ್ರಾಮಸ್ಥರು ಕೂಡಿ ಬಂದು ನೋಡಲಾಗಿ ನಮ್ಮ ತಂದೆಯವರು ಉರಲು ಹಾಕಿಕೊಂಡು ಮೃತಪಟ್ಟಿದ್ದು ನಿಜವಿತ್ತು. ನಮ್ಮ ತಂದೆಯವರಿಗೆ ಆದ ಸಾಲದ ಭಾದೆಯನ್ನು ತಾಳದೆ ಅದನ್ನು ಹೇಗೆ ಮುಟ್ಟಿಸುವದು ಎಂದು ಚಿಂತಿಸಿ ಮನ:ನೊಂದು ಉರಲು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಆತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲಾ ತಾವುಗಳು ಮುಂದಿನ ಕ್ರಮ ಜರುಗಿಸಬೇಕು. ನಮ್ಮ ತಂದೆಯವರು ಇಂದು 28/04/2016 ರಂದು 10:00 ಎ.ಎಂ.ದಿಂದ 12:00 ಪಿ.ಎಂ. ಅವಧಿಯಲ್ಲಿ ಮರಣ ಹೊಂದಿರುತ್ತಾರೆಂದು ಅಂತಾ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿಯಾಗಿರುತ್ತದೆ ಮೃತ ಪಟ್ಟವರು ರೇವಣಸಿದ್ದಪ್ಪಾ ತಂದೆ ರಾಮಲಿಂಗಪ್ಪಾ ಬಂಡೆ ವಯ: 65 ವರ್ಷ ಜಾತಿ:ಲಿಂಗಾಯತ ಉ:ಒಕ್ಕಲುತನ ಸಾ: ಖಂಡಾಳ ತಾ: ಆಳಂದ .