POLICE BHAVAN KALABURAGI

POLICE BHAVAN KALABURAGI

17 November 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 16/11/16 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ನಮ್ಮ ಮನೆಯ ಪಕ್ಕದ ನಿವಾಸಿ ಸಾಯಿಶಂಕರ ಪಾಂಡೆ ಇವರು ಹೇಳಿದ ನನ್ನ ತಮ್ಮ ಸಂದೀಪ ಇತನು ಬಾಲಾಜಿ ಹೋಟಲಕ್ಕೆ ಹಾಲು ಕೊಟ್ಟು ಬರಲು ಟಿ.ವಿ.ಎಸ್. ಎಕ್ಸಎಲ್  ಕೆಎ 32 ಇಎಲ್ 7809 ತೆಗೆದುಕೊಂಡು ಮನೆಯಿಂದ ಹೋಗಿದ್ದು. ಹಾಲು ಕೊಟ್ಟು ವಾಪಸ್ಸು ಮನೆಯ ಕಡೆಗೆ ಟಿ.ವಿ.ಎಸ್. ಎಕ್ಸಎಲ್  ಕೆಎ 32 ಇಎಲ್ 7809 ಮೇಲೆ ಸಂದೀಪ ಒಬ್ಬನೇ ಕುಳಿತುಕೊಂಡು ಹುಮನಾಬಾದ ರಿಂಗ ರೋಡ ಕಡೆಯಿಂದ ಬರುತ್ತಿದ್ದಾಗ ಬೆಳಗಿನ 08-30 ಗಂಟೆ ಸುಮಾರಿಗೆ ಸೈಯ್ಯದ ಚಿಂಚೋಳಿ ಕ್ರಾಸಿನಲ್ಲಿ ಇರುವ ಬಾಲಾಜಿ ವೈನಶಾಪ ಎದುರಿನ ರಿಂಗ ರೋಡ ಕ್ರಾಸಿನ ಮೇಲೆ ನಿಂತ ಆಟೋ ಕೆಎ 32 ಬಿ 5403 ಚಾಲಕ ಮಾರುತಿ ತಂದೆ ರಾಮು ರಾಠೋಡ ಸಾ:ಆಶ್ರಯ ಕಾಲನಿ ಕಲಬುರಗಿ  ಇತನು ಯಾವುದೇ ಇಂಡಿಕೇಟರ ಹಾಕದೇ ಮತ್ತು ಮುನ್ಸೂಚನೇ ನೀಡದೆ ಒಮ್ಮಿಂದ ಒಮ್ಮೇಲೆ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಆಟೋ ಟರ್ನ ಮಾಡಿ  ಹುಮನಾಬಾದ ರಿಂಗ ರೋಡ ಕಡೆಯಿಂದ ಬರುತ್ತಿದ್ದ ಸಂದೀಪನ ಟಿ.ವಿ.ಎಸ್. ಗಾಡಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಸ್ಥಳದಲ್ಲಿ ಆಟೋ ನಿಲ್ಲಿಸಿದನು.ಇದರಿಂದಾಗಿ ಸಂದೀಪನ ಬಲಗೈ ಮುಂಗೈ ಮೇಲೆ ರಕ್ತಗಾಯ ಮತ್ತು ಬಲಗಾಲ ತೊಡೆ ಮೇಲೆ ತರಚಿದ ಗಾಯ ಮತ್ತು ಗುಪ್ತಗಾಯವಾಗಿದ್ದು. ಮತ್ತು ತಲೆಗೆ ಭಾರಿ ಗುಪ್ತಗಾಯವಾಗಿ ಬೇಹುಷ ಸ್ಥಿತಿಯಲ್ಲಿ ಬಿದ್ದಿದ್ದನು ಈ ವಿಷಯ ಘಟನಾ ಸ್ಥಳಕ್ಕೆ ನಾನು ಮತ್ತು ಸಾಯಿಶಂಕರ ಇಬ್ಬರು ಹೋದಾಗ ಘಟನಾ ಸ್ಥಳದಲ್ಲಿ ಹಾಜರಿದ್ದ ಸಾಯಿಶಂಕರನಿಗೆ ಪರಿಚಯವಿದ್ದ  ಸತೀಷ ಕಮಲಾಪೂರೆ ಮತ್ತು ಪದ್ಮಾಜಿ ಕುಸುಮಕರ ಇವರಿಗೆ  ವಿಚಾರಿಸಲಾಗಿ ಈ ಮೇಲಿನ ವಿಷಯ ಕೇಳಿ ಗೊತ್ತಾಗಿದ ನಂತರ ನಮ್ಮ ತಮ್ಮನಿಗೆ ಉಪಚಾರ ಕುರಿತು ಎ.ಎಸ್.ಎಂ. ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದ್ದು, ಆಟೋ ಕೆಎ 32 ಬಿ 5403 ಚಾಲಕ ಮಾರುತಿ ತಂದೆ ರಾಮು ರಾಠೋಡ ಸಾ:ಆಶ್ರಯ ಕಾಲನಿ ಕಲಬುರಗಿ  ಇತನ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಗಾಯಾಳು  ಸಂದೀಪ ಇತನು ಇಂದು ದಿನಾಂಕ 16/11/16 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಆದ ರಸ್ತೆ ಅಪಘಾತ ಗಾಯಗಳಿಂದ ಉಪಚಾರ ಹೊಂದುತ್ತಾ ಗುಣ ಮುಖ ಹೊಂದದೇ ಇಂದು ರಾತ್ರಿ 08-30 ಗಂಟೆಗೆ ಎ.ಎಸ್.ಎಂ. ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ  ಅಂತಾ ಸತೀಶ ತಂದೆ ಮಾಹಾದೇವ ಗೌಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶಿವರುದ್ರಯ್ಯ ತಂದೆ ರೇವಯ್ಯ ಕರಬಂಟನಾಳ ಸಾ||ಘತ್ತರಗಾ ಇವರು ದಿನಾಂಕ 15/11/2016 ರಂದು ರಾತ್ರಿ ನಾನು ನಮ್ಮ ಮನೆಯ ಮುಂದೆ ಕುಳಿತಿದ್ದಾಗ ನಮ್ಮ ತಂದೆಯಾದ ರೇವಯ್ಯ ತಂದೆ ಗುಂಡಯ್ಯ ಕರಬಂಟನಾಳ ಇವರು ಬಹಿರ್ದೆಸೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯ ಮುಂದಿನ ರೋಡಿನ ಬಾಜು ಹೋಗುತ್ತಿದ್ದಾಗ ಅದೆ ಸಮಯಕ್ಕೆ ಅಫಜಲಪೂರ ಕಡೆಯಿಂದ ಒಂದು ಟಂಟಂ ಘತ್ತರಗಾ ಕಡೆ ಬರುತ್ತಿದ್ದು, ಅದರ ಚಾಲಕನು ತನ್ನ ಟಂಟಂ ಅನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ  ಚಲಾಯಿಸಿಕೊಂಡು ಬಂದು ಒಮ್ಮೆಲೆ ನಮ್ಮ ತಂದೆಗೆ ಡಿಕ್ಕಿ ಪಡಿಸಿ ಟಂಟಂ ಪಲ್ಟಿ ಮಾಡಿ ತನ್ನ ಟಂಟಂ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ನಾನು ಗಾಬರಿಯಾಗಿ ಚಿರಾಡುತ್ತಾ ಓಡಿ ಹೋಗಿ ನೋಡಲು ಮತ್ತು ಅದೇ ಸಮಯಕ್ಕೆ ರೋಡಿನ ಹತ್ತಿರ ಮಾತನಾಡುತ್ತಾ ನಿಂತಿದ್ದ ನಮ್ಮ ಗ್ರಾಮದ ಪ್ರಕಾಶ ತಂದೆ ಶಾಂತಯ್ಯ ಹೀರೆಮಠ, ಚನ್ನಯ್ಯ ತಂದೆ ಸಂಗಯ್ಯ ಹೀರೆಮಠ, ಹೈದರಅಲಿ ತಂದೆ ಬಾಬುಸಾಬ ಅತ್ತಾರ ಹಾಗು ಇತರರು ಬಂದಿದ್ದು ಎಲ್ಲರು ಕೂಡಿ ನಮ್ಮ ತಂದೆಯ ಹತ್ತಿರ ಹೋಗಿ ನೋಡಿದಾಗ ನಮ್ಮ ತಂದೆಯ ತಲೆಯ ಹಿಂದಿನ ಭಾಗಕ್ಕೆ   ಭಾರಿ ರಕ್ತಗಾಯವಾಗಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ನಾವೇಲ್ಲರು ಡಿಕ್ಕಿ ಪಡಿಸಿದ ಟಂಟಂ ನಂಬರ ನೊಡಲಾಗಿ ಕೆಎ-29 ಎ-6668 ಅಂತ ಇರುತ್ತದೆ.ನಂತರ ನಮ್ಮ ತಂದೆಯನ್ನು ಚಿಕಿತ್ಸೆಗಾಗಿ ನಮ್ಮೂರಿನ ಮಡಿವಾಳಪ್ಪ ತಂದೆ ಭಗವಂತರಾಯ ಕಲ್ಲೂರ ಇತನ ಕ್ರೂಜರ ವಾಹನದಲ್ಲಿ ಅಫಜಲಪೂರಕ್ಕೆ ತರುತಿದ್ದಾಗ ರಾತ್ರಿ 10.45 ಗಂಟೆ ಸುಮಾರಿಗೆ ಹಿಂಚಗೇರಾ ಹತ್ತಿರ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀಮತಿ ಪಾರ್ವತಿ ಗಂಡ ದಿ: ರವಿ ಜಮಾದಾರ ಸಾ: ಇಂದಿರಾ ನಗರ ಕಲಬುರಗಿ ಇವರು ದಿನಾಂಕ 15/11/2016 ರಂದು ಬೆಳಿಗ್ಗೆ 10 ಗಂಟೆಗೆ ನಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಬಸವಕಲ್ಯಾಣ ತಾಲೂಕಿನ ಬಗ್ಗದೂರಿ ಯಲ್ಲಮ್ಮ ದೇವಸ್ಥಾನಕ್ಕೆ ದೇವರ ಮಾಡುವ ಸಲುವಾಗಿ ನಮ್ಮ ಮನೆಯವರೆಲ್ಲರೂ ಕೂಡಿ ಹೋಗಿದ್ದು ಮರಳಿ 9 ಪಿ.ಎಂ.ಕ್ಕೆ ನಮ್ಮ ಮನೆಗೆ ಬಂದಾಗ ಬಾಗಿಲ ಕೀಲಿ ಮುರಿದಿದ್ದನ್ನು ನೋಡಿದೇನು. ಗಾಬರಿಯಾಗಿ ಮನೆಯಲ್ಲಿ ಹೋಗಿ ನೋಡಲಾಗಿ ಅಲಮಾರಿಯಲ್ಲಿಯ 1) 5 ಗ್ರಾಂ ಬಂಗಾರದ ಒಂದು ಸುತ್ತುಂಗುರ ಅ.ಕಿ. 15,000/- ರೂ 2) 5 ಗ್ರಾಂ ಬಂಗಾರದ ಎರಡು ಜೊತೆ ಕೀವಿ ಓಲೆಗಳು ಅ.ಕಿ. 15,000/- ರೂ 3) 1 ಗ್ರಾಂ ಬಂಗಾರದ ಮುಗುತಿ & ಕೀವಿಯ ರಿಂಗ ಅ.ಕಿ. 4000/- ರೂ 4) 2 ತೊಲೆ ಬೆಳ್ಳಿಯ ಎರಡು ಕುಂಕುಮ ಬಟ್ಟಲಗಳು ಅ.ಕಿ. 800/- ರೂ ಹಾಗು  5) 500 ರೂ ನಗದು ಹಣ ಹೀಗೆ ಒಟ್ಟು ಅಂದಾಜು ಕಿಮ್ಮತ್ತು 35,300/- ರೂ ಬೇಲೆ ಬಾಳುವ ಬಂಗಾರ, ಬೆಳ್ಳಿ ಹಾಗು ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಕಿರಣಕುಮಾರ ತಂದೆ ಬಸವರಾಜ ಕಲ್ಲೂರ ಸಾ|| ಬಸವೇಶ್ವರ ನಗರ ಜೇವರಗಿ  ರವರು ದಿನಾಂಕ 15.11.2016 ರಂದು ಮುಂಜಾನೆ 11:30 ಗಂಟೆಗೆ ಜೇವರಗಿ ಪಟ್ಟಣದ ಬಸವೇಶ್ವರ ನಗರದಲ್ಲಿ ಇರುವ ನಮ್ಮ ಮನೆಯ ಮುಂದೆ ಸಿದ್ದಣ್ಣ ತಂದೆ ಅಮ್ಮಣ್ಣ ಕಲ್ಲೂರ ಈತನು ಮನೆಯ ಮುಂದಿನ ಮಣ್ಣು ತೆಗೆದು ಒಡ್ಡು ಹಾಕಿದ ವಿಷಯದಲ್ಲಿ ನನ್ನೊಂದಿಗೆ ಜಗಳ ತೆಗೆದು ನನಗೆ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ತಾಯಿಗೆ ಕೈಯಿಂದ ಜಗ್ಗಾಡಿ ನೂಕಿಸಿಕೊಟ್ಟು ನನಗೆ ಕೊಲೆ ಮಾಡುವ ಉದ್ದೇಶದಿಂದ ಗುದ್ದಲಿ ಯಿಂದ ನನ್ನ ತಲೆಗೆ ಜೋರಾಗಿ ಹೊಡೆದು ಭಾರಿ ರಕ್ತ ಗಾಯಪಡಿಸಿ ಕೊಲೆಗೆ ಪ್ರಯತ್ನ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.