POLICE BHAVAN KALABURAGI

POLICE BHAVAN KALABURAGI

24 December 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 23.12.2014 ರಂದು ಮಧ್ಯಾಹ್ನ 12:45 ಗಂಟೆಗೆ ನನ್ನ ಮಗ ಕಲ್ಲಪ್ಪ ಈತನು ತನ್ನ ಸ್ಕೂಟಿ ಮೋಟಾರು ಸೈಕಲ್ ನಂ ಕೆಎ 32 ಇ7802 ನೇದ್ದರ ಮುಂದೆ ನನ್ನ ಮೊಮ್ಮಗನಾದ ದೇವು ಈತನಿಗೆ ನಿಲ್ಲಿಸಿಕೊಂಡು ಮುಡಬೂಳ ಗ್ರಾಮದಿಂದ ನರಬೋಳಿ ಗ್ರಾಮಕ್ಕೆ ಬರುವ ಕುರಿತು ಅವರಾದ ಕ್ರಾಸ್‌ ಸಮೀಪ ಶಹಾಪುರ ಜೇವರ್ಗೀ ರಸ್ತೆಯ ಮೇಲೆ ಬರುತ್ತಿದ್ದಾಗ ಆ ವೇಳೆಗೆ ಕೆಂಪುಬಣ್ಣದ ಕಾರ್‌ ನಂ ಕೆಎ-51 ಎಮ್‌ಎ-4299 ನೇದ್ದರ ಚಾಲಕನು ತನ್ನ ಕಾರ್‌ ನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನ ಸೈಡಿನಿಂದ ಬರುತ್ತಿದ್ದ ನನ್ನ ಮಗನ ಮೋಟಾರು ಸೈಕಲ್‌ ಗೆ ಎದುರಾಗಿ ಡಿಕ್ಕಿ ಪಡಿಸಿದ್ದರಿಂದ ನನ್ನ ಮೊಮ್ಮಗನು ಭಾರಿ ಗಾಯ ಹೊಂದಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಮತ್ತು ನನ್ನ ಮಗನಿಗೆ ಭಾರಿ ಗಾಯಗೊಳಿಸಿ ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾರೆ. ಅಂತಾ ಶ್ರೀ.ಮತಿ ಕಾಳಮ್ಮ ಗಂಡ ದಿವಂಗತ ಅಮೇತಪ್ಪ ಹಸನಾಪುರ ಸಾ: ನರಬೋಳ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾದನಹಿಪ್ಪರಗಾ ಠಾಣೆ : ಶ್ರೀ.ದಯಾನಂದ ತಂದೆ ಸೋಮಲಿಂಗ ಹಾಸು ಸಾ:ಹಿರೋಳಿ ತಾ: ಆಳಂದ. ಇವರು ದಿನಾಂಕ 23-12-2014 ರಂದು ಬೇಳಗಿನ ಜಾವ ಅಂದಾಜು ಮುಂಜಾನೆ 06 ಗಂಟೆಯ ಸುಮಾರಿಗೆ ನಾನು ನನ್ನ ತೋಟದ ಮನೆಯಿಂದ ಹಿರೋಳ್ಳಿ ಕಡೆಗೆ ಹೋಗುತ್ತಿದ್ದಾಗ ಶ್ರೀ.ಅಶೋಕರಾವ ದೇಶಮುಖ ರವರ ಹೊಲದ ಹತ್ತಿರ ಬ್ರಿಜ್ ಮೇಲೆ ಒಬ್ಬ ಪೀಕಪ್ ಚಾಲಕನು ಆಳಂದ ಕಡೆಯಿಂದ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ರೋಡಿನ ಎಡಗಡೆಯ ಬ್ರಿಜ್ ಮೂಲಿಗೆ ತನ್ನ ವಾಹನವನ್ನು ಡಿಕ್ಕಿಪಡಿಸಿ ಅಪಘಾತ ಪಡಿಸಿದ್ದು ಇರುತ್ತದೆ. ಸದರಿ ಘಟನೆಯನ್ನು ನಾನು ನೋಡಿ ನನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಕೆಳಗೆ ಇಳಿದು ನೋಡಲಾಗಿ ಅದರ ನಂಬರ್  MH:04 E.B-5628 Bolero Max Trax ಇದ್ದು ಚಾಲಕನ ಹೆಸರು ಕೇಳಲಾಗಿ ತನ್ನ ಹೆಸರು ಸುಶೀಲಕುಮಾರ ತಂದೆ ರಕಮರಾಜ ಸಿಂಗ ಸಾ: ಶಿವಸೇನಾ ಆಫೀಸ್ ಹತ್ತಿರ ಸಾಥೇವಲ್ಲಿ ತಾ:ವಸಯಿ ಜಿಲ್ಲಾ:ಠಾಣಾ ರಾ: ಮಹಾರಾಷ್ಟ್ರ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ವಿಜಯಕುಮಾರ ದಳವಾಯಿ ಆಹಾರ ನಿರೀಕ್ಷಕರು ತಹಸಿಲ್ದಾರ ಆಫಿಸ್ ಅಫಜಲಪೂರ ರವರು ಈಗ 4 ವರ್ಷಗಳಿಂದ ಅಫಜಲಪೂರ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಆಹಾರ ನಿರೀಕ್ಷಕರು ಅಂತಾ ಕೆಲಸ ಮಾಡುತ್ತಿದ್ದು. ಶ್ರೀ ಅಬ್ದುಲ ಸಲೀಂ ಪಟೇಲ ತಂ. ಅಬ್ದುಲ ಹಮೀದ ಪಟೇಲ ಸಾ|| ಅಫಜಲಪೂರ ಇವರು ನಮ್ಮ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿ ದಿನಾಂಕ 26-11-2013 ರಂದು 11:30 ಎಮ್ ಕ್ಕೆ ಬಿ.ಪಿ.ಎಲ್ ಪಡೀತರ ಚೀಟಿ ಪಡೆದುಕೊಂಡಿರುತ್ತಾರೆ, ಸರಕಾರದ ಆದೇಶ ಸಂ/ಆವಾಸ/80/ಡಿ.ಅಎ/2012 ದಿನಾಂಕ 24-08-2012 ರಲ್ಲಿ ಆರ್ಥಿಕವಾಗಿ ಸದೃಡ ಕುಟುಂಬಗಳನ್ನು ಅಂದರೆ ಕೇಳಗಿನ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಕುಟುಂಬಗಳು ಬಿ.ಪಿ.ಎಲ್ ಕಾರ್ಡನ್ನು ಹೊಂದಲು ಅರ್ಹರೆಂದು ಪರಿಗಣಿಸುವುದಾಗಿದೆ. ಶ್ರೀ ಸಲೀಂ ಪಟೇಲ ಇವರು ಸರಕಾರದ ಮಾನದಂಡದಂತೆ ಬಿ.ಪಿ.ಎಲ್ ಕಾರ್ಡ ಪಡೆಯಲು ಅನರ್ಹರಿದ್ದು ಸಹ ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆದಿದ್ದು ಅದಕ್ಕೆ ಕಾರಣಗಳು ಇಂತಿವೆ, ವೃತ್ತಿಪರ ವರ್ಗಗಳು, ವೈದ್ಯರುಗಳು, ಆಸ್ಪತ್ರೆಗಳ ನೌಕರರು, ವಕೀಲರುಗಳು, ಲೆಕ್ಕ ಪರೀಶೋದಕರುಗಳು, ಹಾಗೂ ಮೂರು ಹೆಕ್ಟರ (7.20ಎಕರೆ ಒಣ ಭೂಮಿ) ಮತ್ತು ತತ್ಸಮಾನ ನಿರಾವರಿ ಭೂಮಿ ಹೊಂದಿರುವವರು ಬಿ.ಪಿ.ಎಲ್ ಪಡಿತರ ಚೀಟಿ ಹೊಂದಲು ಅರ್ಹರಿರುವುದಿಲ್ಲ. ಆದರೆ ಶ್ರೀ ಅಬ್ದುಲ ಸಲೀಂ ಪಟೇಲ ಇವರು ವೃತ್ತಿಯಿಂದ ವಕೀಲರಿದ್ದು ಇವರೊಬ್ಬ ವಕೀಲರು ಎಂಬುವುದಕ್ಕೆ ಸಾಬೀತು ಪಡಿಸಲು ಜಮೀನು ಖರೀದಿ ಪತ್ರದಲ್ಲಿ ತಾವೊಬ್ಬ ವಕೀಲರೆಂದು ಘೋಸಿಸಿ ಸಹಿ ಮತ್ತು ಮೋಹರು ಹಾಕಿ ನಮೂದು ಮಾಡಿರುತ್ತಾರೆ, ಹಾಗೂ ಸದರಿಯವರು ತಮ್ಮ ಕುಟುಂಭದ ಹೆಸರಿನಲ್ಲಿ ಒಟ್ಟು 22 ಎಕರೆ 24 ಗುಂಟೆ ಜಮೀನು ಹೊಂದಿರುವುದು ಕಂಡು ಬಂದಿರುತ್ತದೆ. ಸರ್ಕಾರದ ಮಾನದಂಡದ ಪ್ರಕಾರ ವಕೀಲರು 7.20 ಎಕರೆ ಗಿಂತ ಜಾಸ್ತಿ ಜಮೀನು ಹೊಂದಿರುವರು, ಇವರು ಬಿ.ಪಿ.ಎಲ್ ಪಡಿತರ ಚಿಟಿ ಹೊಂದಲು ಅನರ್ಹರಿದ್ದು ರೀತಿ ತಪ್ಪು ಮಾಹಿತಿ ನೀಡಿ ಹಾಗೂ ಅರ್ಜಿಯಲ್ಲಿ ಸುಳ್ಳು ಘೋಸಣೆ ಮಾಡಿ ಮೋಸ ಮಾಡಿದ್ದು ಕಂಡು ಬಂದಿರುತ್ತದೆ, ಮತ್ತು ಸದರಿಯವರು ತಮ್ಮ ರೇಷನ ಕಾರ್ಡನಲ್ಲಿ ತಮ್ಮ ಕುಟುಂಭದ ಸದಸ್ಯರ ಹೆಸರು ಸೇರಿಸಲು ಮಾತ್ರ ಅವಕಾಸವಿದ್ದು ಇದರಲ್ಲಿ ಕುಟುಂಬೇತರ ತನ್ನ ಅಣ್ಣನ ಮಗನಾದ ಮಜೀದ ಲತೀಫ್ ಪಟೇಲ ಎಂಬ ಹೆಸರು ಸಹ ಸೇರಿಸಿರುವರು. ಅದಲ್ಲದೆ ಮಜೀದ ಪಟೇಲ ಇವರ ಹೆಸರು ಲತೀಫ್ ಪಟೇಲ ಇವರು ಹೊಂದಿದ .ಪಿ.ಎಲ್ ಪಡೀತರ ಚೀಟಿಯಲ್ಲಿ  ಸಹ ಇರುತ್ತದೆ, ರೀತಿ ಇವರ ಹೆಸರು ಎರಡು ಕಾರ್ಡನಲ್ಲಿ ನಮೂದು ಇದೆ ಆದ್ದರಿಂದ ಇವರು (ಕರ್ನಾಟಕ ಪ್ರಿವೆನಶನ್ ಆಫ್ ಅನಅಥರೈಜ್ಡ ಪೋಜೀಶನ್ ಆಫ್ ರೇಷನ ಕಾರ್ಡ) ಆರ್ಡರ 1977 ಕ್ಲಾಜಾ 3 ನ್ನು ಉಲ್ಲಂಗಿಸಿ ಅಫರಾದವೇಸಗಿರುವರು, ಸದರಿ ಅಬ್ದುಲ ಸಲೀಂ ಪಟೇಲ ಇವರು ಸರ್ಕಾರದ ಮಾನದಂಡದಂತೆ ಬಿ.ಪಿ.ಎಲ್ ಕಾರ್ಡ ಪಡೆಯಲು ಅನರ್ಹರಿದ್ದು ಸುಳ್ಳು ಮಾಹಿತಿ ನೀಡಿ ಬಿ.ಪಿ.ಎಲ್ ಪಡೀತರ ಚೀಟಿ ಪಡೆದು ಸರ್ಕಾರದ ಸೌಲಬ್ಯಗಳನ್ನು ಪಡೆದು ಸರ್ಕಾರಕ್ಕೆ ಮೋಸ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ. ಮಲ್ಲಿಕಾರ್ಜುನ @ ಮಲ್ಲಿನಾಥ ತಂದೆ ದೇವಿಂದ್ರಪ್ಪಾ  ಕಡಗಂಚಿ ಸಾ; ತಾಜಸುಲ್ತಾನಪೂರ ತಾ;ಜಿ; ಕಲಬುರಗಿ ಇವರ ಮಗಳು ಅಶ್ವಿನಿ ಇವಳು ದಿನಾಂಕ.19-12-2014 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನನ್ನ  ತಮ್ಮನಾದ ಪೀರಪ್ಪಾ ಕಡಗಂಚಿ ಇವರ ಮನೆಗೆ ಹೋಗಿಬರುತ್ತೇನೆ ಅಂತಾ ಮನೆಯಿಂದ ಹೋದಳು , ಹಾಗೂ ಪಕ್ಕದ ಮನೆಯ ನಾಗಮ್ಮಾ ತಂದೆ ಚಂದ್ರಕಾಂತ ಬೈರಾಮಡಗಿ ವಯ;14 ವರ್ಷ  ಇಬ್ಬರು ಕೂಡಿಕೊಂಡು ಹೋದವರು ರಾತ್ರಿಯಾದರು ಮರಳಿ ಮನೆಗೆ ಬಂದಿರುವದಿಲ್ಲಾ , ಅದಕ್ಕಾಗಿ ನಾನು ಮತ್ತು ಚಂದ್ರಕಾಂತ ಬೈರಾಮಡಗಿ ಇಬ್ಬರು ಕೂಡಿಕೊಂಡು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾ , ಸದರಿ  ನನ್ನ ಮಗಳು ಅಶ್ವಿನಿ ವಯ;15 ವರ್ಷ ಮತ್ತು  ನಾಗಮ್ಮಾ ತಂದೆ ಚಂದ್ರಕಾಂತ ಬೈರಾಮಡಗಿ ವಯ;14 ವರ್ಷ  ಇವರಿಬ್ಬರು ಕಾಣೆಯಾಗಿರುತ್ತಾರೋ ಅಥವಾ ಯಾರಾದರೂ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.