POLICE BHAVAN KALABURAGI

POLICE BHAVAN KALABURAGI

17 December 2011

GULBARGA DIST REPORTED CRIMES

ಮಂಗಳಸೂತ್ರ ಮತ್ತು ಊಟಕ್ಕೆ ನೀಡಿದ 500/- ರೂಪಾಯಿಗಳು ದೋಚಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಬಸವನಪ್ಪ ತಂದೆ ಅಂತಪ್ಪ ಚಲಗೇರಿ ಸಾ: ಹಾವ ಅಶೋಕ ಲಾಕೆ ಮನೆ ಹತ್ತಿರ ಗಂಗೋತ್ರಿ ನಿವಾಸ ಗುಲಬರ್ಗಾರವರು ನಾನು ದಿನಾಂಕ 16/12/2011 ರಂದು ರಾತ್ರಿ 10 ಗಂಟೆಗೆ ನಮ್ಮ ಮಾಲಿಕರು ಊಟ ತರುವ ಕುರಿತು ಜೆ.ಸಿ.ಪಿ ಹೊಟೆಲಗೆ ಕಡೆ ಹೊರಟಾಗ ಕಾರ ಸರ್ವಿಸಿಂಗ ಸೆಂಟರ ಹತ್ತಿರ 3 ಜನರು ಅಪರಿಚಿತರು ಮೋಟಾರು ಸೈಕಲ್ ಮೇಲೆ ಬಂದು ನನ್ನನ್ನು ನಿಲ್ಲಿಸಿ, ನನ್ನ ಮಗಳು ಘಟಾಯಿಸಲು ಕೊಟ್ಟಿದ್ದ 5 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ 14000/- ರೂ ನನ್ನ ಬಳಿ ಇಟ್ಟುಕೊಂಡು ನನ್ನ ಮಾಲಿಕರು ಊಟ ತರಲು ಕೊಟ್ಟ 500/- ರೂಪಾಯಿಗಳು 3 ಜನ ಅಪರಿಚಿತರು ದೋಚಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 213/11 ಕಲಂ 392 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀ ಪ್ರಾಣೇಶ ತಂದೆ ಶ್ರೀಧರರಾವ ಹೇರೂರಕರ ಸಾ: ಪ್ಲಾಟ ನಂ. 154 ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ನೀಡಿದ ನಾನು ದಿನಾಂಕ 16/12/2011 ರಂದು ರಾತ್ರಿ ನನ್ನ ಅಳಿಯನಿಗೆ ಆರಾಮ ವಿಲ್ಲದಕ್ಕೆ ಮನೆ ಬೀಗ ಹಾಕಿಕೊಂಡು ಮಾಕಾ ಲೇಔಟ ಬಡಾವಣೆಯ ಮಾವನ ಮನೆಗೆ ಹೋಗಿದ್ದು ಪುನಃ ಮುಂಜಾನೆ ಬಂದು ನೋಡಲು ಬಾಗಿಲು ಬೀಗ ಮುರಿದಿತ್ತು ಒಳಗೆ ಹೋಗಿ ನೋಡಲು ಬಂಗಾರ ಆಭರಣಗಳು ಮತ್ತು ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 65 ರಿಂದ 70 ಸಾವಿರ ರೂಪಾಯಿ ಬೇಲೆ ಬಾಳುವದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಗುನ್ನೆ ನಂ. 135/2011 ಕಲಂ. 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ನಾಗೇಂದ್ರ ತಂದೆ ಜಗದೇವಪ್ಪ ಭೂಮಕ್ಕ, ಸಾ ಮನೆ ನಂ:11-436/1, ಶಹಾ ಹುಸೇನಿ ಚಿಲ್ಲಾ ಸಮತಾ ಕಾಲೋನಿ ರೋಡ ಗುಲಬರ್ಗಾರವರು ನಾನು ಮೋಟರ ಸೈಕಲ ನಂ:ಕೆಎ 37 ಕ್ಯೂ 4899 ನೇದ್ದರ ಮೇಲೆ ಲಾಲಗೇರಿ ಕ್ರಾಸ ಹತ್ತಿರ ಬಂದಾಗ ನನ್ನ ಮೋಟರ ಸೈಕಲದಲ್ಲಿರುವ ಪೆಟ್ರೋಲ್ ಖಾಲಿ ಆಗಿದ್ದು ನನ್ನ ಮೋಟರ ಸೈಕಲನ್ನು ತಳ್ಳಿಕೊಂಡು ಎಸ್.ಬಿ ಕೆರೆ ಗಾರ್ಡನ ದಾಟಿ ಸ್ವಲ್ಪ ಮುಂದೆಗಡೆ ಬರುತ್ತಿದ್ದಾಗ 3 ಜನ ಅಪರಿಚಿತರು ನನ್ನ ಮುಂದುಗಡೆ ಬಂದು ನನಗೆ ಪೆಟ್ರೋಲ ಆಗಿದೆ ಅಂತಾ ಕೇಳಿದಾಗ ನಾನು ಅವರಿಗೆ ಪೆಟ್ರೋಲ್ ಆಗಿರುತ್ತದೆ ಅಂತಾ ಹೇಳಿದಾಗ ಅವರು ಬಾಟಲಿ ಕೊಡಲಿ ಅಂತಾ ಕೇಳಿದಾಗ ನಾನು ಇಲ್ಲಿ ಸಮೀಪದಲ್ಲೆ ಪೆಟ್ರೋಲ್ ಪಂಪ ಇದೆ ಹೋಗುತ್ತೇನೆ ಅಂತಾ ಹೇಳಿದೆನು ಸುಮಾರು 21-25 ರ ವಯಸ್ಸಿನ ತರುಣರಲ್ಲಿ ಅವರಲ್ಲಿ ಒಬ್ಬನು ತನ್ನ ಹತ್ತಿರ ಇದ್ದ ಚಾಕು ತೋರಿಸಿ ತೇರೆ ಪಾಸ ಕಿತನಾ ಪೈಸಾ ಹೈ ನಿಕಾಲೋ ನೈ ತೋ ತುಜೆ ಯಹಿ ಖತಮ ಕರುಂಗಾ ಅಂತಾ ಹೇಳಿದಾಗ ನಾನು ಕೊಡುವದಿಲ್ಲ ಅಂತಾ ಅಂದಿದಕ್ಕೆ ನನಗೆ ಎರಡು ಜನ ಹಿಡಿದರು, ಮತ್ತೊಬ್ಬನು ನನ್ನ ಮೇಲಗಡೆ ಜೇಬಿನಲ್ಲಿ ಇದ್ದ 170/- ರೂಪಾಯಿ ಜಬರ ದಸ್ತಿಯಿಂದ ಕಸಿದುಕೊಂಡು ಅಲ್ಲೆ ಹತ್ತಿರದಲ್ಲಿ ನಿಲ್ಲಿಸಿದ ಮೋಟರ ಸೈಕಲ ಮೇಲೆ 3 ಜನರು ಕುಳಿತುಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:227/11 ಕಲಂ: 392 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಪಿಡಿಓ ಅಧಿಕಾರಿಯ ಮೇಲೆ ಹಲ್ಲೆ:
ನಿಂಬರ್ಗಾ ಪೊಲೀಸ ಠಾಣೆ.
ಶ್ರೀ ರಾಮಚಮದ್ರ ತಂದೆ ದೇವಂಗಪ್ಪ ಹುಲಿಮನಿ ಗ್ರಾ ಪಂಚಾಯತ ಪಿ.ಡಿ.ಒ. ಯಳಸಂಗಿ ವಾಸ ಸುಂಟನೂರ ತಾ ಆಳಂದ ರವರು ನಾನು ದಿನಾಂಕ 16/12/2011 ರಂದು ಕರ್ತವ್ಯದಲ್ಲಿ ಇದ್ದಾಗ ಮಧ್ಯಾಹ್ನ 1-30 ಗಂಟೆಗೆ ಶರಣಪ್ಪ ತಂದೆ ದರ್ಮಣ್ಣಾ ಮಾಮಗ ಸಾ ಯಳಸಂಗಿ ಇತನು ಬಂದು ನೀರಿನ ಪೈಪಲೈನ ಮಾಡಿದ ಬಿಲ್ಲಿನ ವಿಷಯದ ಸಂಬಂದ ಅವಾಚ್ಯ ಶಬ್ದಗಳಿಂದ ಬೈದು ಬಾಗಿಲು ಮುಚ್ಚಿ ಹಲ್ಲೆ ಮಾಡಿ ಗುಪ್ತ ಗಾಯ ಪಡಿಸಿರುತ್ತಾನೆ ಮತ್ತು ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 126/2011 ಕಲಂ. 332 342 353 504 355 506 ಐಪಿಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಮೋಸ ವಂಚನೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ
: ಶ್ರೀ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೇವಣಸಿದ್ದಪ್ಪ ತಂದೆ ಶಿವಶರಣಪ್ಪಾ ಇಂಗನಶಟ್ಟಿ, ಭೀಮಾಶಂಕರ ತಂದೆ ಶಾಂತವೀರಪ್ಪಾ ಮುತ್ತಟ್ಟಿ, ನಿರಂಜನ ತಂದೆ ಮಲ್ಲಣ್ಣ ಗೊಳೆದ, ವಿಜಯಕುಮಾರ ತಂದೆ ಶಾಂತವೀರಪ್ಪಾ ಮುತ್ತಟ್ಟಿ, ಇವರೆಲ್ಲರೂ ಕೂಡಿಕೊಂಡು ನೊಂದಾಯಿತ ಬಾಡಿಗೆ ಪತ್ರದಲ್ಲಿರುವ ಸರ್ವೇ ನಂ.151/1 ಇದ್ದದ್ದನ್ನು ಉದ್ದೇಶ ಪೂರ್ವಕವಾಗಿ ಸ.ನಂ.151/2 ಎಂದು ಕಾನೂನು ಬಾಹಿರವಾಗಿ ತಿದ್ದುಪಡಿ ಮಾಡಿ ಅದನ್ನೆ ನಿಜವಾದ ದಾಖಲಾತಿಯೆಂದು ಸರಕಾರಿ ಕಛೇರಿಗಳಲ್ಲಿ ಕೊಟ್ಟು ಉಪಯೋಗಿಸಿ ಮೊಸಗೊಳಿಸಿದ್ದಲ್ಲದೆ ಕೇಳಲು ಹೋದ ನಮಗೆ ಬೆದರಿಕೆ ಹಾಕಿದ್ದಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ 196/2011 ಕಲಂ:120[ಬಿ], 447, 464, 465, 468, 471, 506 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.