POLICE BHAVAN KALABURAGI

POLICE BHAVAN KALABURAGI

26 February 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 25/2/2018 ರಂದು ಬೆಳಿಗ್ಗೆ ಸಿರನೂರ ಗ್ರಾಮಕ್ಕೆ ಔಷದ ಹಾಕಿ ಕೊಂಡು ಬರುವ ಕುರಿತು ತನ್ನ ಮಗನೊಂದಿಗೆ ಪಾಣೆಗಾಂವ ಕ್ರಾಸ ದಿಂದ ರಾಷ್ಟ್ರಿಯ ಹೆದ್ದಾರಿ 218 ರ ಮಹ್ಮದ ಬಿ.ಎಡ್.ಕಾಲೇಜು ಎದುರು ಗಡೆ ರೋಡಿನ ಮೇಲೆ ನಡೆದು ಕೊಂಡು ಹೋಗುತ್ತಿರುವಾಗ ಕಲಬುರಗಿ ಕಡೆಯಿಂದ ಕ್ರೂಜರ ವಾಹನ ನಂ ಕೆಎ-37/3785 ನೇದ್ದರ ಚಾಲಕ ನು ತನ್ನ ವಾಹನವನ್ನು ಚಲಾಯಿಸಿ ಕೊಂಡು ಬಂದು ರೋಡಿನ ಪಕ್ಕದಲ್ಲಿ ನಡೆದುಕೊಂಡುಹೋಗುತ್ತಿರುವ ಪಿಪಳಾಬಾಯಿ&ಉಮೇಶ ಇತನಿಗೆ ಡಿಕ್ಕಿ ಪಡೆಯಿಸಿದ್ದರಿಂದ ಪಿಪಳಾಬಾಯಿ ಇವಳಿಗೆ ತಲೆಗೆ ಬಲಗಡೆ ಮುಖಕ್ಕೆ ಭಾರಿ ರಕ್ತಗಾಯ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಉಮೇಶ ಇತನಿಗೆ ತಲೆಗೆ & ಎರಡು ಕಾಲುಗಳಿಗೆ ಭಾರಿ ರಕ್ತಗಾಯ ಗುಪ್ತಗಾಯಗಳಾಗಿರುತ್ತವೆ ಅಂತಾ ಶ್ರೀ ಸಂತೋಷ ತಂದೆ ಗೋಪು ರಾಠೋಡ ಸಾ// ಬಸವನ ತಾಂಡಾ ಪಾಣೆಗಾಂವ ತಾ/ಜಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ನರೋಣಾ ಠಾಣೆ : ದಿನಾಂಕ:- 24/02/2017 ರಂದು ಕಡಗಂಚಿ ಗ್ರಾಮದಲ್ಲಿ ಸಂತೆ ಕಟ್ಟೆಯ ಹತ್ತಿರ ಇರುವ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನೀಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ ಗಜಾನನ.ಕೆ.ನಾಯಕ ಪಿಎಸ್ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳವಾದ ಕಡಗಂಚಿ ಗ್ರಾಮದ ಸಂತೆ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸಂತೆ ಕಟ್ಟೆಯ ಮೇಲೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನೀಕರಿಂದ ಹಣ ಪಡೆದು ಒಪನ್ ನಂಬರ್ ಬಂದರೆ ಒಂದು ರೂಪಾಯಿಗೆ ಎಂಟು ರೂಪಾಯಿ ಗೆಲ್ಲಿರಿ ಜಾಯಿಂಟ್ ನಂಬರ ಬಂದರೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆಲ್ಲಿರಿ ಎಂದು ಕೂಗುತ್ತಾ ಸಾರ್ವಜನೀಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿದ್ದುದ್ದನ್ನು ಖಚೀತ ಪಡೆಸಿಕೊಂಡು ದಾಳಿಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ತೀರ್ಥಪ್ಪಾ ತಂದೆ ರೇವಪ್ಪಾ ಹರಶೆಟ್ಟಿ ಸಾ: ಕಡಗಂಚಿ ಅಂತ ತಿಳಿಸಿದ್ದು ಸದರಿಯವನನ್ನು ಚೆಕ್ ಮಾಡಲಾಗಿ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 320/- ರೂ, ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ ದೊರೆತಿದ್ದು ಅವುಗಳನ್ನು ವಶಕ್ಕೆ ಪಡೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.