POLICE BHAVAN KALABURAGI

POLICE BHAVAN KALABURAGI

10 March 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ದಿನಾಂಕ:09-03-2013 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾವು ಮನೆಯರೆಲ್ಲರೂ ಊಟ ಮಾಡಿಕೊಂಡು ಮಲಗಿಕೊಂಡಿದ್ದು ರಾತ್ರಿ 11-45 ಗಂಟೆಯ ಸುಮಾರಿಗೆ ಮನೆಯಲ್ಲಿನ ಬಿಸಿ ವಾತಾವರಣದಿಂದ ಮತ್ತು ಸೊಳ್ಳೆಗಳಿಂದ ಮನೆಯ ಮಾಳಿಗೆ ಮೇಲೆ ಮಲಗಿಕೊಳ್ಳಲು ಹೋಗಿರುತ್ತಾರೆ. ಮಧ್ಯರಾತ್ರಿ 00-10 ಗಂಟೆಯಿಂದ ನಸುಕಿನ ವೇಳೆ 5-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಮನೆಯಲ್ಲಿರುವ ಅಲಮಾರ ಚಾವಿ ಮುರಿದು ಆಲಮಾರಿಯಲ್ಲಿಟ್ಟಿದ್ದ  ನಗದು ಹಣ 1,90,000=00 ರೂಪಾಯಿಗಳು ತೆಗೆದುಕೊಂಡು,   ಮನೆಯಲ್ಲಿರುವ ಹಳೆಯ ಕಟ್ಟಿಗೆಯ ಪೆಟ್ಟಿಗೆಯನ್ನು ತಗೆದುಕೊಂಡು ಹೋಗಿ ಚಂದ್ರಶಾ ಕಾಬಾ ಇವರ ಹೊಲದಲ್ಲಿ ಸದರಿ ಪೆಟ್ಟಿಗೆ ಒಡೆದು ಅದರಲ್ಲಿಟಿದ್ದ ಬಂಗಾರದ ಆಭರಣಗಳು ಬೆಳ್ಳಿಯ ಸಾಮಾನುಗಳು, ಮತ್ತು ಲಾವಾ ಕಂಪನಿಯ ಮೊಬೈಲ್ ಹೀಗೆ ಒಟ್ಟು 2,08150=00 ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಬಸವರಾಜ ತಂದೆ ಶಿವಪ್ಪಾ ಹರಳಯ್ಯ ಸಾ|| ಹೊನ್ನ ಕಿರಣಗಿ ಗ್ರಾಮ ತಾ|| ಜಿ|| ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 32/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ, ಭೀಮಾಶಂಕರ ತಂದೆ ಸಾಯಿಬಣ್ಣ ಕಣ್ಣಿ ಪೊಲೀಸ್ ಕಾನ್ಸಟೇಬಲ್ ಸಾ|| ಜಯತಿರ್ಥ ನಗರ ಉದನೂರ ರೋಡ ಗುಲಬರ್ಗಾ ರವರು ನಾನು ಮತ್ತು ಶಿವರಾಜ ತಂದೆ ಅಮೃತ ಕೇರೂರ ಸಾ|| ಬ್ರಹ್ಮಪೂರ ಇಬ್ಬರೂ ಕೂಡಿಕೊಂಡು ಕೆಎ-32 ಟಿಬಿ-6217 ನೇದ್ದರ ಹಿರೋ ಹೊಂಡಾ ಮೋಟಾರ ಸೈಕಲ್ ಮೇಲೆ ಶರಣಸಿರಸಗಿ ಮಡ್ಡಿಯ ರಸ್ತೆಯಲ್ಲಿ ಹೊರಟಾಗ ಶಿವರಾಜ ಇತನು ಅತೀವೇಗದಿಂದ ಚಲಾಯಿಸಿ ಒಮ್ಮೇಲೆ ಬ್ರೆಕ್ ಹಾಕಿದಾಗ ಮೋಟಾರ ಸೈಕಲ್ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದು, ಮೋಟಾರ ಸೈಕಲ್  ಹಿಂದೆ ಕುಳಿತಿರುವ ನನಗೆ ಬಲಗೈ ಮೊಳಕೈಗೆ ಭಾರಿಗಾಯವಾಗಿರುತ್ತದೆ ಅಂತಾ ಭೀಮಾಶಂಕರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 125/2013 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಯಲ್ಲಾಲಿಂಗ ತಂದೆ ಬಾಬುರಾವ ಜಮಾದಾರ ಸಾ: ಬನ್ನೂರ ತಾ||ಜಿ||ಗುಲಬರ್ಗಾರವರು ದಿನಾಂಕ: 08-03-2013 ರಂದು ಸಾಯಂಕಾಲ 5-00  ಗಂಟೆಯ ಸುಮಾರಿಗೆ ನಾನು ನಡೆದು ಕೊಂಡು ಹೋಗುವಾಗ ವಿಜಯಕುಮಾರ ತಂದೆ ಶಿವಶರಣಪ್ಪಾ ಇನತು ನನಗೆ ಮಾರಿದ ಹೊಲ ಸರ್ವೇ ನಂ 26/3 1 ಎಕರೆ ಹೊಲದ ಪಹಣೆ ನಿಮ್ಮ ಹೆಸರಿಗೆ ಆಗುವವರಿಗೆ ಹೊಲದಲ್ಲಿ ಕಬ್ಬು ಹಚ್ಚಬೇಡರಿ ಅಂತ ಜಗಳ ತೆಗೆದು ಕಾಲಿನಿಂದ ಒಯ್ದು ಗಾಯ ಮಾಡಿದ್ದಲ್ಲದೇ ನಮ್ಮ ಕಡೆಯವರಿಗೂ ಸಹ ವಿಜಯಕುಮಾರ, ಬಸಪ್ಪಾ, ಸೀತಾರಾಮ, ಸಾಬಮ್ಮ  ಇವರೆಲ್ಲರೂ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಯಲ್ಲಾಲಿಂಗ್ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2013 ಕಲಂ, 341 323 324 504 506 ಸಂ 34  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.