POLICE BHAVAN KALABURAGI

POLICE BHAVAN KALABURAGI

31 March 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಫರತಬಾದ ಪೊಲೀಸ ಠಾಣೆ: ಶ್ರೀ, ಬಾಪುಗೌಡ ತಂದೆ ಶಾಂತಗೌಡ ಪೊಲೀಸ್ ಪಾಟೀಲ ಸಾ: ದಂಡ ಸೊಲಾಪೂರ ತಾ: ಸುರಪೂರ ಜಿ: ಯಾದಗಿರ ರವರು ನಾನು ಜೇವರ್ಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಮೈಹಿಬೂಬ ಶೇಖ ಇವರ ಮೋಟಾರ ಸೈಕಲ ಖರೀಸಿದ್ದು, ಮೋಟಾರ ಸೈಕಲ್ ಕಾಗದ ಪತ್ರಗಳನ್ನು ನನ್ನ ಹೆಸರಿಗೆ ಮಾಡಿಕೊಳ್ಳುವ ಸಲುವಾಗಿ ಗುಲಬರ್ಗಾಕ್ಕೆ ದಿನಾಂಕ:30-3-2013 ರಂದು ಬೆಳಿಗ್ಗೆ 7-00 ಗಂಟೆಗೆ ನಮ್ಮೂರಿನಿಂದ ನಾಗರಹಳ್ಳಿ ಗ್ರಾಮಕ್ಕೆ ಬಂದು ಮೈಹಿಬೂಬ ಇತನಿಗೆ ನನ್ನ ಸ್ವಂತ ಮೊಟಾರ ಸೈಕಲ ನಂ: ಕೆಎ-33 ಕೆ-4094 ನೇದ್ದರ ಮೇಲೆ ಗುಲಬರ್ಗಾಕ್ಕೆ ಕರೆದುಕೊಂಡು ಬಂದು ಕೆಲಸ ಮುಗಿಸಿಕೊಂಡು ಮರಳಿ 4-30 ಪಿ,ಎಮಕ್ಕೆ ನಮ್ಮೂರಿಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ನಂ.218 ರಸ್ತೆಯ ಗಣೇಶ ಪೆಟ್ರೋಲ ಪಂಪ ದಾಟಿ ಸ್ವಲ್ಪ ಮುಂದೆ ಹೋಗುತ್ತಿರುವಾಗ ಎದುರಿನಿಂದ ಜೇವರ್ಗಿ ಕಡೆಯಿಂದ ಲಾರಿ ನಂ ಕೆಎ-32 ಎ-9380  ನೇದ್ದರ ಚಾಲಕ ಸುಭಾಷ ಇತನು  ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಮೊಟಾರ ಸೈಕಲ ನಡೆಸುತ್ತಿದ್ದ ಮೈಹಿಬೂಬು ಶೇಖ ಇತನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:40/2013 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ, ಮಹಾದೇವಪ್ಪ ತಂದೆ ಅಣಪ್ಪಾ ಟೆಂಗಳಿ ಬೇಲೂರ ಗ್ರಾಮ ತಾ||ಜಿ|| ಗುಲಬರ್ಗಾ ರವರು ನಾನು ದಿನಾಂಕ:30-03-13 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಗುಲಬರ್ಗಾ-ಹುಮನಾಬಾದ ರೋಡಿಗೆ ಇರುವ ತಾವರಗೇರಾ ಕ್ರಾಸಿನ ಸಮೀಪ ಇರುವ ಬಸವಣ್ಣ ದೇವರ  ಕಮಾನದ ಹತ್ತಿರ ಗುಲಬರ್ಗಾ  ರೋಡ ಕಡೆಯಿಂದ ಲಾರಿ ನಂಬರ ಕೆಎ 32 ಎ 0596 ಚಾಲಕನು ತನ್ನ ಲಾರಿಯನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು  ರೋಡಿನ ಮಧ್ಯದಲ್ಲಿ  ನಡೆಸುತ್ತಾ ಹೊರಟಾಗ ಜೀಪ ನಂಬರ ಕೆಎ 28 ಎಂ 5005 ಚಾಲಕ ವಿಠಲ ತಂದೆ ಶರಣಪ್ಪ ಗೊಲ್ಲರ ಇತನು ತನ್ನ ಜೀಪ ಅತಿವೇಗದಿಂದ  ರೋಡಿನ ಮಧ್ಯದಲ್ಲಿ ನಡೆಯಿಸಿದ್ದರಿಂದ ಲಾರಿ  ಮತ್ತು ಜೀಪಿನ  ಚಾಲಕರು ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದರಿಂದ ಜೀಪ ಚಾಲಕ ಜೀಪಿನಲ್ಲಿ ಸಿಕ್ಕಿ ಬಿದ್ದು ಭಾರಿ ಗಾಯಹೊಂದಿರುತ್ತಾನೆ. ಇದನ್ನು ನೋಡಿ  ಲಾರಿ ಚಾಲಕನು ತನ್ನ  ಲಾರಿ ಬಿಟ್ಟು  ಓಡಿ ಹೋಗಿರುತ್ತಾನೆ. ಹಿಂದೆ ಬರುತ್ತಿರುವ ಕಾರಿನವರು ತಮ್ಮ ಕಾರಿನಲ್ಲಿ ನನಗೆ ಮತ್ತು ರವಿಕುಮಾರ ಇವರಿಬ್ಬರು ನೋಡಿ ಜೀಪಿನಲ್ಲಿದ್ದ ಸಿಕ್ಕಿ ಬಿದ್ದ ವಿಠಲನಿಗೆ ಹೊರೆಗೆ ತೆಗೆದು ಅವನಿಗೆ ಉಪಚಾರ ಕುರಿತು  108 ಅಂಬುಲೈನ್ಸದಲ್ಲಿ  ಹಾಕಿಕೊಂಡು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತರುವ ಕಾಲಕ್ಕೆ ಹುಮನಾಬಾದ ರಿಂಗ ರೋಡಿನ ಹತ್ತಿರ ರಾತ್ರಿ 9-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಇಬ್ಬರು ವಾಹನ ಚಾಲಕರು ತಮ್ಮ ವಾಹನಗಳನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿದ್ದರಿಂದ ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿಕೊಂಡಿದ್ದರಿಂದ ಈ ಘಟನೆ ಜರೂಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ: 164/2013 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.