POLICE BHAVAN KALABURAGI

POLICE BHAVAN KALABURAGI

22 September 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ: ಶ್ರೀ ಜಗದೀಶ ತಂದೆ ಶಂಕ್ರಪ್ಪ ಜಲದೇ ಸಾ:ಮಳ್ಳಿ ರವರು ನಾನು ದಿನಾಂಕ:31-05-2012 ರಂದು  ನ್ನ ಬಜಾಜ ಡಿಸ್ಕವರ ಮೋಟಾರ ಸೈಕಲ್ ನಂ ಕೆಎ-32 ವಾಯ್-1332 ಕಪ್ಪು ಮತ್ತು ಕೆಂಪು ಬಣ್ಣದ್ದು,  .ಕಿ.45,000/- ನೇದ್ದನ್ನು ಮನೆಯ ಮುಂದುಗಡೆ ನಿಲ್ಲಿಸಿ ಮಲಗಿಕೊಂಡಿದ್ದಾಗ ರಾತ್ರಿ ವೇಳೆಯಲ್ಲಿ ಯಾರೂ ಕಳ್ಳರು ನನ್ನ ಮೋಟಾರ ಸೈಕಲ್ ಅನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 101/2012 ಕಲಂ 379 ಐಪಿಸಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ:ಶ್ರೀ ಮೊಗಲಪ್ಪ ತಂದೆ ಗುಂಡಪ್ಪ ಹೊಸಮನಿ ಸಾ|| ದಸ್ತಾಪೂರ ರವರು ನನ್ನ ಮಗನಾದ ಮಲ್ಲಿಕಾರ್ಜುನ ಹೊಸಮನಿ ಇತನು ದಿನಾಂಕ||21-09-2012 ರಂದು ರಾತ್ರಿ 10-00 ಗಂಟೆ ಸುಮಾರಿಗೆ ಭೂತಪೂರ ಗ್ರಾಮಕ್ಕೆ ತೋಟ್ಟಿಲ ಕಾರ್ಯಾಕ್ರಮಕ್ಕೆ ಹೋಗುತ್ತಿದ್ದಾಗ ಹೊಡೆ ಬೀರನಳ್ಳಿ ಕ್ರಾಸ್ ದಿಂದ ಸುಮಾರು ಅರ್ಧ ಕಿ. ಮೀ. ಅಂತರದಲ್ಲಿ ಗಡಿಕೇಶ್ವರ ಕಡೆಗೆ ಹೋಗುವ ರೋಡಿನ ಮೇಲೆ ಮೋಟಾರ್ ಸೈಕಲ್ ನಂ. ಕೆಎ-32 ಕ್ಯೂ-2872 ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ತಾನೆ ಸ್ಕೀಡಾಗಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:76/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷೀಣೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಶ್ರೀ ಸಿದ್ದಲಿಂಗ ತಂದೆ ಸಿದ್ರಾಮಪ್ಪ ಬಡಿಗೇರ ಸಾ|| ಬಗಲೂರ ಗ್ರಾಮ  ತಾ|| ಸಿಂದಗಿ ಜಿ|| ಬಿಜಾಪೂರ ರವರು  ನನ್ನ ಅಕ್ಕಳಾದ ಸಾವಿತ್ರಿ ಇವಳಿಗೆ 9 ವರ್ಷಗಳ ಹಿಂದೆ ಅಫಜಲಫೂರದ ಈರಣ್ಣ ಬಡಿಗೇರ ಈತನಿಗೆ ಮದುವೆ ಮಾಡಿ ಕೊಟ್ಟಿದ್ದು, ಮದುವೆ ಸಮಯದಲ್ಲಿ 11,000/- ರೂ ಮತ್ತು ಬಂಗಾರ ವರದಕ್ಷೀಣೆ ರೂಪದಲ್ಲಿ ನೀಡಿರುತ್ತೆವೆ. ನನ್ನ ಅಕ್ಕ ಸಾವಿತ್ರಿ ಇವಳಿಗೆ ಆಕೆಯ ಗಂಡ, ಮಾವ, ಅತ್ತೆ, ಹಾಗೂ ಮೈದುನರು ಸೇರಿಕೊಂಡು ವರದಕ್ಷೀಣೆ ತರಲು ಮಾನಸಿಕ ಮತ್ತು ದೈಹಿಕವಾಗಿ  ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದು ಇರುತ್ತದೆ. ದಿನಾಂಕ:22-09-2012 ರಂದು ಮಧ್ಯರಾತ್ರಿ 3-00 3 ಗಂಟೆಗೆ  ಹಾವು ಕಚ್ಚಿ ಮೃತ್ತಪಟ್ಟಿರುತ್ತಾಳೆ ಅಂತಾ ಪೋನ ಮುಖಾಂತರ ತಿಳಿಸಿದ್ದು, ನಾವು ಬಂದು ನೋಡಿದಾಗ ಸಾವಿತ್ರಿ ಇವಳು ಕೊಲೆಯಾಗಿ ಬಿದ್ದಿದ್ದು ಕಂಡು ಬಂದಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:161/2012 ಕಲಂ, 498 (ಎ) 304 (ಬಿ) ಸಂಗಡ 34 ಐಪಿಸಿ ಮತ್ತು 3,4 ಡಿಪಿ ಆಕ್ಟ ಪ್ರಕಾರ ಪ್ರಕರಣ  ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಯುಧ ಜಪ್ತಿ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಠಾಣಾ ವ್ಯಾಪ್ತಿಯ  ಜವಳಗಾ [ಜೆ ] ಗ್ರಾಮದಲ್ಲಿ ಪ್ರದೀಪ ಗುತ್ತೆದಾರ ಇವರ ಹೋಟಲ ಹತ್ತಿರ ಸಾರ್ವಜನಿಕ ರೋಡಿನಲ್ಲಿ ಒಬ್ಬ ಮನುಷ್ಯನು ತನ್ನ ಹತ್ತಿರ ಯಾವದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಪಿಸ್ತೂಲ ಇಟ್ಟುಕೊಂಡು ತಿರುಗುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಬಂದಿದೆ ಪಿ.ಎಸ.ಐ ಹಾಲೇಶ ರವರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಜವಳಗಾ [ಜೆ] ಗ್ರಾಮಕ್ಕೆ ಹೋಗಿ ಅವನನ್ನು  ವಶಕ್ಕೆ ತೆಗೆದುಕೊಂಡು ಅನಧಿಕೃತವಾಗಿ ಪಿಸ್ತೂಲ ಹೊಂದ್ದಿದ್ದು,  ಆತನ ಅಂಗ ಶೋದನೆ  ಮಾಡಲಾಗಿ ಅವನ ಟೊಂಕದಲ್ಲಿ ಒಂದು ಕಂಟ್ರಿ ಪಿಸ್ತೂಲ ಹಾಗೂ ಪ್ಯಾಂಟಿನ ಜೇಬಿನಲ್ಲಿ 7500/- ರೂಪಾಯಿ ಹಾಗೂ 2 ಗುಂಡುಗಳು ದೊರತ್ತಿದ್ದು ಅವುಗಳಲ್ಲಿ ಒಂದು ಗುಂಡು ಜೀವಂತ ಇದ್ದು ಇನ್ನೊಂದು ಖಾಲಿ ಗುಂಡು ಇದ್ದು ಅವನ ಹೆಸರು ವಿಚಾರಿಸಲಾಗಿ ರಾಮಣ್ಣ ತಂದೆ ಗುಂಡಪ್ಪ ಕಾಳಮಂದರ್ಗಿ ವ:38 ವರ್ಷ ಸಾ; ಕೋಹಿನೂರವಾಡಿ  ತಾ: ಬಸವ ಕಲ್ಯಾಣ ಹಾ||ವ||ಜವಳಗಾ [ಜೆ] ಕಂಟ್ರಿ ಪಿಸ್ತೂಲ ಗುಂಡಗಳ ವಿಚಾರಿಸಲಾಗಿ ತಾನು ಧಾಬಾದಲ್ಲಿ ಕೆಲಸ ಮಾಡುತ್ತಿದ್ದು ಯಾರಾದರೂ ನನಗೆ ಹೊಡೆಯುವ ಅಂಜಿಕೆ ಇರುವದರಿಂದ ಇಟ್ಟಿಕೊಂಡಿರುತ್ತೆನೆ ಎಂದು ಹೇಳಿದನು. ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದರಿಂದ  ಠಾಣೆ ಗುನ್ನೆ ನಂ: 192/2012 ಕಲಂ 25(1) 25 (1ಎ) ಆರ್ಮ್ಸ ಆಕ್ಟ್ ¥ÀæPÁgÀ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ: 20/09/2012 ರಂದು  ಸಾಯಂಕಾಲ 6-00 ಗಂಟೆಯಿಂದ ದಿನಾಂಕ 21/09/2012 ರ ಬೆಳಿಗ್ಗೆ 9-15 ಗಂಟೆಯ ಅವದಿಯಲ್ಲಿ ಶ್ರೀ ಷಣ್ಮುಖ ಶಿವಯೋಗಿ ರೂರಲ್ ಪಾಲಿಟೇಕ್ನಿಕ ಕಾಲೇಜಿನ ಪ್ರಾಂಶುಪಾಲರ ಕೊಣೆಯ ಕಿಡಕಿ ಮುರಿದು ಕೊಣೆಯಲ್ಲಿದ್ದ ಎರಡು ಕಂಪ್ಯೂಟರಗಳು ಅಂದಾಜು ಕಿಮ್ಮತ್ತು 40,000-00 ರೂಪಾಯಿಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಬಾಬುರಾವ ತಂದೆ ಸಿದ್ದರಾಮಪ್ಪ ಮೋರೆ ಸಾ:ಸಿದ್ದಗಂಗಾ ನಿಲಯ ಹಳೆ ಜೇವರ್ಗಿ ರಸ್ತೆ ರೋಡ ಗುಲಬರ್ಗಾರವರು  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ  ಗುನ್ನೆ ನಂಬರ 143/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.