POLICE BHAVAN KALABURAGI

POLICE BHAVAN KALABURAGI

08 November 2015

Kalaburagi District Reported Crimes

ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ: 07.11.2015 ರಂದು ರಾತ್ರಿ ನನ್ನ ಗಂಡನು ಜೇವರಗಿ ಪಟ್ಟಣದ ಹೊರವಲಯದ ರಿಲಾಯನ್ಸ್ ಪೆಟ್ರೋಲ ಪಂಪ ದಾಟಿ ರೋಡಿನಲ್ಲಿ ಜೇವರಗಿ ಕಡೆಗೆ ರೋಡಿನ ಸೈಡಿನಿಂದ ಕುಂಡಿ ಎಳೆಯುತ್ತಾ ಬರುತ್ತಿದ್ದಾಗ ಅದೆ ಸಮಯಕ್ಕೆ ಮೊಟಾರ ಸೈಕಲ ನಂ ಎಮ್.ಹೆಚ್12ಇಕೆ4970 ನೇದ್ದರ ಸವಾರನಾದ ಅಶೋಕ ತಂದೆ ಮಲ್ಲಪ್ಪ ನಾಟಿಕರ್ ಸಾ: ಫಿರೋಜಬಾದ ಇತನು ತನ್ನ ಮೊಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಗಂಡನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಗಂಡನಿಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಮೊಟಾರ ಸೈಕಲ ಸವಾರನು ಕೂಡಾ ನನ್ನ ಗಂಡನಿಗೆ ಗುದ್ದಿದ ನಂತರ ತನ್ನ ಮೊಟಾರ ಸೈಕಲ್‌ದೊಂದಿಗೆ ಬಿದ್ದಿದ್ದರಿಂದ ಅವನಿಗೂ ಕೂಡಾ ಗಾಯಗಳಾಗಿರುವೆ ಅಂತಾ ಶ್ರೀಮತಿ ಶಕುಂತಲಾ ಗಂಡ ಸುಬಾಷ ಹಡಪದ ಸಾ|| ಬಸವಣ್ಣಕಟ್ಟಿ ಜೇವರ್ಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಚೌಕ ಠಾಣೆ : ಶ್ರೀ  ಹರಿ ತಂದೆ ರವಿ ಧುರವೇ ಸಾ: ವಿಐಟಿ ಮೂರ್ತಿ ಕೆತ್ತನೆ ಮಾಡುವವರ ಮನೆಯ ಹತ್ತಿರ ಲಕ್ಷ್ಮಿ ನಗರ ಕಲಬುರಗಿ ರವರು ಈಗ ಸುಮಾರು 7-8 ದಿವಸದ ಹಿಂದೆ ಜ್ಯೋಷಿಗಲ್ಲಿಯಲ್ಲಿ ಒಬ್ಬ ಅಂದಾಜು 55-60 ವಯಸ್ಸಿನ ದೊಡ್ಡ ಮನುಷ್ಯ ಸರಿಯಾಗಿ ಮಾತನಾಡದೇ ಅಲ್ಲಿ ಇಲ್ಲಿ ಜ್ಯೋಷಿಗಲ್ಲಿ, ಮತ್ತು ಭೋವಿಗಲ್ಲಿ ಭಿಕ್ಷೆ ಬೇಡಿ ಊಟ ಮಾಡಿ ನರಳುತ್ತಾ ರೋಡಿನ ಬದಿಯಲ್ಲಿರುವ ಗಿಡದ ಕೆಳಗೆ ಹಳೆಯ ಮನೆಯ ಮುಂದೆ ಮಲಗುತ್ತಾ ತಿರುಗಾಡುತ್ತಿದ್ದು ದಿನಾಂಕ 04.11.2015  ರಂದು ಬೆಳ್ಳಿಗ್ಗೆ 10 ಎ.ಎಂ.ಕ್ಕೆ ಲಕ್ಷ್ಮಿ ನಗರದ ನನ್ನ ಮನೆಯಿಂದ ಮರಗಮ್ಮ ಗುಡಿಯ ಹತ್ತಿರ ಹೊಟೇಲಕ್ಕೆ ಚಹಾ ಕುಡಿಯುವ ಕುರಿತು ಜ್ಯೋಷಿಗಲ್ಲಿಯೆ ರಸ್ತೆಯಿಂದ ಬರುತ್ತಿದ್ದಾಗ ಒಬ್ಬ ವಯಸ್ಸಾದ ಅಪರಿಚಿತ ಗಂಡು ಮನುಷ್ಯ ಅಂದಾಜು 55-60 ವಯಸ್ಸಿನವನು ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಭಿಕ್ಷೆ ಬೇಡಿ ಉಟ ಮಾಡುವುದು ಅಲ್ಲದೆ   ಭಿಕ್ಷೆ ಬೇಡುತ್ತಾ ಇದ್ದವನು ಬಿಸಿಲಿನ ತಾಪಕ್ಕೆ ತಾಳಲಾರದೇ ಮತ್ತು ಯಾವುದೂ ರೋಗದಿಂದ ನರಳುತ್ತಾ ಜ್ಯೋಷಿಗಲ್ಲಿ ಭೋವಿಯವರ ಹಳೆಯ ಮನೆಯ ಮುಂದೆ ನಿತ್ರಾಣನಾಗಿ ಯಾವುದೇ ರೀತಿಯ ಮಾತನಾಡದೇ ಬಿದ್ದಿದ್ದು ಅವನ ಹತ್ತಿರ ಹೋಗಿ ನೋಡಲಾಗಿ ಅವನ ಮುಖದ ಮೇಲೆ ದೇಹದ ಮೇಲೆ ನೋಣಗಳು, ಹುಳುಗಳು ಮೆತ್ತಿಕೊಂಡಿದ್ದವು. ಅಂದಾಜು 55-60 ವಯಸ್ಸಿನ ವ್ಯಕ್ತಿಯನ್ನು ನೋಡಿ ಅವನ ಕಾಲುಗಳಿಗೆ ಯಾವುದೂ ರೋಗ ತಗುಲಿ ಹುಳಗಳು ಹತ್ತಿದ್ದು ಇದರಿಂದಲೇ ನಿತ್ರಾಣನಾಗಿ ಬಿದ್ದಿದ್ದನ್ನು ನೋಡಿ ನಾನು 108 ಅಂಬುಲೇನ್ಸ ರವರಿಗೆ ಒಬ್ಬ ವ್ಯಕ್ತಿ ಬಿದ್ದಿರುತ್ತಾನೆ. ಅಂತಾ ತಿಳಿಸಿದ್ದು ಅಂದಾಜು 11 ಗಂಟೆಗೆ ಅಂಬುಲೇನ್ಸದಲ್ಲಿ ಆ ಅಪರಿಚಿತ ಗಂಡು ಮನುಷ್ಯನಿಗೆ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆಗೆ ಹೋಗಿ ತೆಗೆದುಕೊಂಡು ಉಪಚಾರಕ್ಕಾಗಿ ದಾಖಲಾಖ ಮಾಡಿದ್ದು ದಿನಾಂಕ 07/11/2015 ರಂದು ಸಾಯಂಕಾಲ ಉಪಚಾರ ಕುರಿತು ದಾಖಲ ಮಾಡಿದ ಅಪರಿಚಿತ ಗಂಡು ಮನುಷ್ಯ ಸರಕಾರಿ ಆಸ್ಪತ್ರೆಯಲ್ಲಿ ತನಗೆ ಇದ್ದ ಕಾಯಿಲೆಯಿಂದ ಗುಣಮುಖನಾಗದೇ ದಿನಾಂಕ 05/11/2015 ರಂದು ಬೆಳಿಗ್ಗೆ 10 ಎ.ಎಂ.ಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವ ಬಗ್ಗೆ ಗೊತ್ತಾಗಿದ್ದು ಮತ್ತು ಇವನ ಬಗ್ಗೆ ಅವನ ವಾರಸುದಾರರಾಗಲಿ ಹೆಸರು ವಿಳಾಸ ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 06.11.2015 ರ 23.30 ಗಂಟೆಯಿಂದ 07.11.2015 ರ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಗಂವ್ಹಾರ್ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಬ್ಯಾಂಕಿನ ಶೇಟರ್ ಕೀಲಿಯನ್ನು ಮುರಿತು ಒಳಗೆ ಪ್ರವೇಶ ಮಾಡಿ ಅಲಮಾರಿಯಲ್ಲಿಟಟಿದ್ದ 12.000/- ರೂ ನಗದು ಹಣ ಹಾಗು ಕೆಲ ಬ್ಯಾಂಕನ ದಾಖಲಾತಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಾರಣ ಕಳುವು ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ನಿಂಗಣ್ಣ ತಂದೆ ಮಾಳಪ್ಪ ದೊಡ್ಡಮನಿ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಬ್ಯಾಂಕ್‌ ಗಂವ್ಹಾರ್ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ