POLICE BHAVAN KALABURAGI

POLICE BHAVAN KALABURAGI

20 August 2017

Kalaburagi District Reported Crimes

ಹಲ್ಲೆ  ಮಾಡಿ ಸಾಯುವಂತೆ  ಪ್ರಚೋದನೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಯಾನಂದ ತಂದೆ ಮಹಾದೇವಪ್ಪ ಬಾಲ್ದಿ ಸಾ|| ನಂದರ್ಗಾ ಇವರು ತಂದೆಯ ಅಣ್ಣ ತಮ್ಮರ ಮದ್ಯ ಸರ್ವೆ ನಂ 31 ರಲ್ಲಿ ಒಟ್ಟು 8 ಎಕರೆ 27 ಗುಂಟೆ ಜಮೀನು ಇದ್ದು, ಎಲ್ಲರೂ ಹೊಲವನ್ನು ಹಂಚಿಕೆ ಮಾಡಿಕೊಂಡಿದ್ದು, ನಮ್ಮ ಪಾಲಿಗೆ 2 ಎಕರೆ 13 ಗುಂಟೆ ಜಮೀನು ಬಂದಿರುತ್ತದೆ. ನಮ್ಮೆಲ್ಲರ ಹೊಲಗಳು ಒಂದೆ ಕಡೆ ಇದ್ದು ಊರಿಗೆ ಹೊಂದಿಕೊಂಡಿರುತ್ತವೆ. ನಾವು ನಮ್ಮ ಪಾಲಿಗೆ ಬಂದ ಹೊಲಕ್ಕೆ ಹೋಗಲು ನಮ್ಮ ದೊಡ್ಡಪ್ಪಂದಿರಾದ ಯಲ್ಲಪ್ಪ ಬಾಲ್ದಿ ಹಾಗೂ ವಿಠ್ಠಲ ಬಾಲ್ದಿ ಇವರ ಹೊಲದಲ್ಲಿ ದಾರಿ ಇರುತ್ತದೆ. ಈಗ ನಮ್ಮ ದೊಡ್ಡಪ್ಪನಾದ ಯಲ್ಲಪ್ಪ ಇವನು ತನ್ನ ಹೊಲದಲ್ಲಿ ಪ್ಲಾಟಗಳನ್ನು ಹಾಕಿ, ಕೆಲವೊಂದು ಪ್ಲಾಟಗಳನ್ನು ಮಾರಾಟ ಮಾಡಿ, ನಾವು ನಮ್ಮ ಹೊಲಕ್ಕೆ ಹೋಗುವ ಹಾದಿಯಲ್ಲಿಯೂ ಸಹ ಪ್ಲಾಟಗಳನ್ನು ಹಾಕಿರುತ್ತಾನೆ. ಅದಕ್ಕೆ ನಮ್ಮ ತಂದೆ ನಮ್ಮ ದೊಡ್ಡಪ್ಪನಾದ ಯಲ್ಲಪ್ಪನಿಗೆ ನೂನು ಹೊಲಕ್ಕೆ ಹೊಗುವ ಹಾದಿಯಲ್ಲಿ  ಪ್ಲಾಟಗಳನ್ನು ಹಾಕಿದರೆ ನಾವು ನಮ್ಮ ಹೊಲಕ್ಕೆ ಹೇಗೆ ಹೋಗಬೇಕು, ಹೊಲಕ್ಕೆ ಹೋಗುವ ದಾರಿಯನ್ನು ಬಿಟ್ಟು ಪ್ಲಾಟ ಹಾಕು ಅಂತಾ ಹೇಳಿದಕ್ಕೆ, ನಮ್ಮ ದೊಡ್ಡಪ್ಪಂದಿರಾದ ಯಲ್ಲಪ್ಪ ಹಾಗೂ ವಿಠ್ಠಲ ಹಾಗೂ ಅವನ ಕಡೆಯವರು ನಮ್ಮ ಮೇಲೆ ದ್ವೇಷ ಮಾಡಿಕೊಂಡು ನಮ್ಮ ಜೋತೆಗೆ ಆಗಾಗ ಜಗಳ ತಗೆಯುವುದು ಮಾಡುತ್ತಿದ್ದರು. ದಿನಾಂಕ 30-07-2017 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಹಾಗೂ ನಮ್ಮ ಅಣ್ಣನಾದ ಬಸವರಾಜ ಮೂರು ಜನರು ಕೂಡಿ ನಮ್ಮ ಹೊಲದಲ್ಲಿದ್ದಾಗ 1) ಯಲ್ಲಪ್ಪ ತಂದೆ ಬಾಳಪ್ಪ ಬಾಲ್ದಿ 2) ಕಲ್ಲಪ್ಪ ತಂದೆ ಯಲ್ಲಪ್ಪ ಬಾಲ್ದಿ 3) ಶಿವಾನಂದ ತಂದೆ ಯಲ್ಲಪ್ಪ ಬಾಲ್ದಿ 4) ಶರಣಪ್ಪ ತಂದೆ ಹಣಮಂತ ಬಾಲ್ದಿ 5) ನಾಗೇಶ ತಂದೆ ಶರಣಪ್ಪ ಬಾಲ್ದಿ 6) ವಿಠ್ಠಲ ತಂದೆ ಬಾಳಪ್ಪ ಬಾಲ್ದಿ 7) ಸಿದ್ದಪ್ಪ ತಂದೆ ಹಣಮಂತ ಬಾಲ್ದಿ 8) ಅಮೃತ ತಂದೆ ಸಂಗಪ್ಪ ರೇವೂರ ಸಾ|| ಎಲ್ಲರೂ ನಂದರ್ಗಾ 9) ಕಾಂತಪ್ಪ ತಂದೆ ಹಣಮಂತ ಸಂಗೋಳಗಿ ಸಾ|| ಜೇವರ್ಗಿ (ಬಿ) ಇವರೆಲ್ಲರೂ ತಮ್ಮ ಕೈಯಲ್ಲಿ ಬಡಿಗೆ ಕೊಡಲಿಯನ್ನು ಹಿಡಿದುಕೊಂಡು ನಮ್ಮ ಹೊಲದಲ್ಲಿ ಬಂದು, ಅವರಲ್ಲಿ ನಮ್ಮ ದೊಡ್ಡಪ್ಪನಾದ ಯಲ್ಲಪ್ಪ ಇವನು ಏನೋ ಸೂಳೆ ಮಗನೆ ನನ್ನ ಹೊಲದಲ್ಲೆ ದಾರಿ ಕೇಳುತ್ತಿ ಅಂತಾ ಅಂದವರೆ ಎಲ್ಲರೂ ಕೂಡಿ ನಮ್ಮ ತಂದೆಗೆ ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಿದ್ದರು, ಆಗ ನಮ್ಮ ತಂದೆ ನಿಮ್ಮ ಕೀರಿ ಕೀರಿ ಸಾಕಾಗಿ ಹೋಗಿದೆ ನಿಮ್ಮಿಂದ ನಾನು ಜೀವನ ಮಾಡುವುದು ಹೇಗೆ ನಾನೆ ಸಾಯುತ್ತೇನೆ ಅಂತಾ ಹೇಳಿದನು. ಅದಕ್ಕೆ ಎಲ್ಲರೂ ಕೂಡಿ ನಮ್ಮ ತಂದೆಗೆ ಸುತ್ತು ಹಾಕಿ ಮಗನೆ ಸಾಯುತ್ತೇನೆ ಅಂತಾ ಹೇಳ್ತಿ ಸಾಯಿ ಅಂತಾ ಹೇಳುತ್ತಾ ಎಲ್ಲರೂ ಪದೆ ಪದೆ ಸಾಯಿ ಸಾಯಿ ಅಂತಾ ಹೇಳಿದರು. ಅದಕ್ಕೆ ನಮ್ಮ ತಂದೆ ಸದರಿಯವರ ಕೀರಿ ಕೀರಿಯಿಂದ ಹಾಗೂ ಪ್ರಚೋದನೆಯಿಂದ ನಮ್ಮ ಹೊಲದಲ್ಲಿ ಇಟ್ಟಿದ್ದ ದ್ರಾಕ್ಷೀಗೆ ಹೊಡೆಯುವ ಕ್ರೀಮಿನಾಶಕ ಔಷದ ಬಾಟಲಿಯನ್ನು ತಗೆದುಕೊಂಡು ಬಂದು ಕುಡಿಯಲು ಹೋದಾಗ, ನಾನು ಮತ್ತು ನನ್ನ ಅಣ್ಣ ಬಸವರಾಜ ಇಬ್ಬರು ನನ್ನ ತಂದೆ ಕ್ರೀಮಿನಾಶಕ ಕುಡಿಯದಂತೆ ಬಿಡಿಸಲು ಹೋಗುತ್ತಿದ್ದಾಗ, ನಮ್ಮನ್ನು ಎಲ್ಲರೂ ಕೂಡಿ ಬಿಡಿಸದಂತೆ ಹಿಡಿದುಕೊಂಡು ನಮ್ಮ ತಂದೆಗೆ ಕುಡಿ ಮಗನೆ ಕುಡಿದು ಸಾಯಿ ಅಂತಾ ಹೇಳೀದರೂ. ಆಗ ನಮ್ಮ ತಂದೆ ಎಲ್ಲರೆದುರೆ ಅವರ ಕಿರುಕುಳವನ್ನು ತಾಳದೆ ಪ್ರಚೋದನೆಯಿಂದ ಕ್ರೀಮಿನಾಶಕ ಔಷದಿಯನ್ನು ಕುಡಿದನು. ನಮ್ಮ ತಂಧೆ ಕ್ರೀಮಿನಾಶಕ ಕುಡಿದ ಮೇಲೆ ಸದರಿ ಮೇಲೆ ತಿಳಿಸಿದವರೆಲ್ಲರೂ ಅಲ್ಲಿಂದ ಹೊಗಿರುತ್ತಾರೆ. ಅಷ್ಟೊತ್ತಿಗೆ ನಮ್ಮ ತಾಯಿಯಾದ ಚನ್ನಮ್ಮ ಇವರು ಬಂದಿದ್ದು, ನಾನು ಮತ್ತು ನನ್ನ ತಾಯಿ ಹಾಗೂ ನನ್ನ ಅಣ್ಣ ಬಸವರಾಜ ಮೂರು ಜನರು ಕೂಡಿ ನಮ್ಮ ತಂದೆಯನ್ನು ಅಲ್ಲಿಂದ ರೋಡಿಗೆ ಬರುತ್ತಿದ್ದ ಯಾವುದೋ ಒಂದು ಅಪರಿಚಿತ ಜೀಪಿನಲ್ಲಿ ಸೋಲ್ಲಾಪೂರದ ರುಗ್ಣಾಲಯ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿ ಸುಮಾರು 4-5 ದಿನಗಳ ಒರೆಗೆ ಚಿಕಿತ್ಸೆ ಕೊಡಿಸಿ ಅಲ್ಲಿಂದ ಸೋಲ್ಲಾಪೂರದ ಸೀವಿಲ್  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಮ್ಮ ತಂದೆ ಚಿಕತ್ಸೆ ಪಲಕಾರಿ ಆಗದೆ ಇಂದು ದಿನಾಂಕ 19-08-2017 ರಂದು ಬೆಳಿಗ್ಗೆ 06:00 ಗಂಟೆಗೆ ಸೋಲ್ಲಾಪೂರದ ಸಿವಿಲ್ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾನೆ. ನಮ್ಮ ತಂದೆ ಮೃತ ಪಟ್ಟ ಬಗ್ಗೆ ಸೋಲ್ಲಾಪೂರದ ಪೊಲೀಸರು ಬಂದು ಹೇಳಿಕೆ ಪಡೆದುಕೊಂಡು ಕಾನೂನು ಕ್ರಮ ಕೈಕೊಂಡಿರುತ್ತಾರೆ. ಮೇಲೆ ತಿಳಿಸಿದವರು ನಮ್ಮ ತಂದೆಗೆ ಕಿರುಕುಳ ನೀಡಿ ವಿಷ ಕುಡಿಯಲು ಪ್ರಚೋದನೆ ನೀಡಿದ್ದರಿಂದ ನಮ್ಮ ತಂದೆ ಕ್ರೀಮಿನಾಶಕ ಔಷದಿ ಕುಡಿದು ಮೃತ ಪಟ್ಟಿರುತ್ತಾನೆ.                                                                    
ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶರಣಪ್ಪ ತಂದೆ ಶಿವರಾಯ ಹವಾಣಿ ಸಾ:ಮನೆ.ನಂ.10-20/1 ದತ್ತ ಮಂದಿರ ಹತ್ತಿರ ಸಂಗಮೇಶ್ವರ ಕಾಲೋನಿ ಬ್ರಹ್ಮಪೂರ ಕಲಬುರಗಿ ಇವರು ಎರಡು ಆಕಳು ಸಾಕಿದ್ದು ಒಂದು ಕಪ್ಪು ಬಣ್ಣದ್ದು ಅಂದಾಜು ನಾಲ್ಕು ವರ್ಷ ಇನ್ನೊಂದು ಕೆಂಪು ಬಣ್ಣದ್ದು ಅಂದಾಜು ನಾಲ್ಕು ವರ್ಷಗಳಾಗಿದ್ದು ಎರಡು ಆಕಳು ಕರುಗಳು ಹಾಕಿರುವದಿಲ್ಲಾ ಎರಡು ಆಕಳ ಬೆಲೆ ಸುಮಾರು 40000 ರೂ ಆಗಿದ್ದು ದಿನಾಂಕ:16/08/2017 ರಂದು ರಾತ್ರಿ ಸಮಯದಲ್ಲಿ ಅಂದರೆ 12.00 ಗಂಟೆಯಿಂದ ಬೆಳಗಿನ 6.00 ಗಂಟೆ ಅವದಿಯಲ್ಲಿ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎರಡು ಆಕಳ ಕರುಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಬೆಳಗಿನ ವೇಳೆಯಲ್ಲಿ ಎದ್ದು ನೋಡಲು ಆಕಳು ಕರುಗಳು ಕೊಟ್ಟಿಗೆಯಲ್ಲಿ ಇರುವದಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಆಕಳ ಕರು ಪತ್ತೆಯಾಗಿರುವದಿಲ್ಲಾ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ನೀಲಕಂಠ ತಂದೆ ಶಿವರಾಯ ಪಿಲ್ಲಿ, , ಸಾ: ಹೂಡಾ(ಕೆ), ತಾ: ಸೇಡಂ, ಇವರು ಒಂದು ವರೆ ವರ್ಷಗಳಿಂದ ಮಳಖೇಡ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ (ಸೊಸೈಟಿ) ಕಾರ್ಯದರ್ಶಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೆನೆ. ನಮ್ಮ ಸಹಕಾರ ಸಂಘದಲ್ಲಿ ರೈತರು ಸದಸ್ಯರಿರುತ್ತಾರೆ. ಹೀಗಿದ್ದು ನಮ್ಮ (ಸೊಸೈಟಿ) ಸಂಘದಲ್ಲಿ ಚೌಡಯ್ಯ ತಂದೆ ತಿಪ್ಪಣ್ಣ ಹೊಕ್ಕಳ, ಸಾ: ಮಳಖೇಡ ಗ್ರಾಮ ಇತನು ಸಿಪಾಯಿ ಅಂತಾ ಕೆಲಸ ಮಾಡುತ್ತಿರುತ್ತಾನೆ, ಮತ್ತು ಮಳಖೇಡ ಗ್ರಾಮದ ಹಾಗು ಇತರೆ ಸುತ್ತಮುತ್ತಲಿನ ಗ್ರಾಮಗಳ ಸುಮಾರು 36 ಮಹಿಳಾ ಸ್ವ –ಸಹಾಯ ಸಂಘಗಳು ನೊಂದಣಿ ಆಗಿದ್ದು, ಅವರ ತಮ್ಮ ಸಂಘದ ಹಣಕಾಸಿನ ವ್ಯವಹಾರವನ್ನು ನಮ್ಮ (ಸೊಸೈಟಿ) ಸಂಘದೊಂದಿಗೆ  ಮಾಡುತ್ತಿರುತ್ತಾರೆ, ಅಲ್ಲದೆ ಯಶಸ್ವಿನಿ ಆರೋಗ್ಯ ವಿಮೆಯ ಹಣ ಕೂಡ ನಮ್ಮ ಹತ್ತಿರ ಜಮಾ ಇದ್ದು, ಎಲ್ಲಾ ಸಂಘಗಳ ಹಣಕಾಸಿನ ವ್ಯವಹಾರ ನಾನೇ ನಿರ್ವಹಿಸುತ್ತಿರುತ್ತೆನೆ. ಹೀಗಿದ್ದು ಸ್ವ-ಸಹಾಯ ಸಂಘಗಳು ನಮ್ಮ ಸಂಘದಲ್ಲಿ ಹಣ ತುಂಬಿ ಜಮಾ ಮಾಡಿದ ನಗದು ಹಣ 70,000=00 ರೂಪಾಯಿ ಇದ್ದವು, ಮತ್ತು ನಾನು ಯಾವುದಾದರೂ ಸಂಘಗಳು ಸಾಲ ಪಡೆಯಲು ಬರಬಹುದು ಅಂತಾ ಭಾವಿಸಿ ನಾನು ದಿ: 26-07-2017 ರಂದು ಸೇಡಂ ಡಿಸಿಸಿ ಬ್ಯಾಂಕ ಶಾಖೆಯಿಂದ 90,000=00 ರೂಪಾಯಿ ಹಣ ಡ್ರಾ ಮಾಡಿಕೊಂಡು ಬಂದಿದ್ದು  ಇತ್ತು, ಹೀಗೆ ಒಟ್ಟು ನಮ್ಮ ಸಂಘದಲ್ಲಿ 1,60,000=00 ರೂಪಾಯಿಗಳು ನಗದು ಹಣ ನಮ್ಮ ಸಂಘದಲ್ಲಿ ಇದ್ದವು. ಆದರೆ, ಯಾವುದೇ ಸಂಘಗಳು ಸಾಲ ಪಡೆಯಲು ಬಂದಿರುವುದಿಲ್ಲ, ಹೀಗಿದ್ದು ಪ್ರತಿನಿತ್ಯದಂತೆ ನಿನ್ನೆ ದಿನಾಂಕ 16-08-2017 ರಂದು ನಾನು ನಮ್ಮ ಸಹಕಾರ ಸಂಘದಲ್ಲಿ ಬೆಳಿಗ್ಗೆ ಯಿಂದ ಸಾಯಂಕಾಲ 03-00 ಗಂಟೆಯ ವರೆಗೆ ಕೆಲಸ ನಿರ್ವಹಿಸಿ ಒಟ್ಟು 1,60,000=00 ರೂಪಾಯಿ ನಗದು ಹಣ ನಾನು ಕೂಡುವ ಟೇಬಲ್ ಡ್ರಾದಲ್ಲಿ ಇಟ್ಟು ಚಾವಿ ಹಾಕಿ ನಾನು ಮತ್ತು ನಮ್ಮ ಸಿಪಾಯಿ ಚೌಡಯ್ಯ ಇಬ್ಬರು ಕೂಡಿ ನಮ್ಮ ಸಂಘದ ಶೆಟರ್ ಮುಚ್ಚಿ ಕೀಲಿ ಹಾಕಿ ಮನೆಗೆ ಹೋಗಿದ್ದು ದಿನಾಂಕ 17-08-2017 ರಂದು ಬೆಳಿಗ್ಗೆ ನಮ್ಮ ತಮ್ಮ ಮಂಜುನಾಥ ಈತನಿಗೆ ನಮ್ಮ ಸಿಪಾಯಿ ಆದ ಚೌಡಯ್ಯ ಈತನ ಹತ್ತಿರ ಹೋಗಿ ನಮ್ಮ ಸಹಕಾರ ಸಂಘದಲ್ಲಿ ಇದ್ದ ತಾಡಪತ್ರಿ ತೆಗೆದುಕೊಂಡು ಬಾ ಅಂತಾ ಹೇಳಿ ಕಳಿಸಿದ್ದೆನು, ನಮ್ಮ ತಮ್ಮ ಮಂಜುನಾಥ ಈತನು ಚೌಡಯ್ಯ ಈತನ ಮನೆಗೆ ಹೋಗಿ ಆತನಿಗೆ ಕರೆದುಕೊಂಡು ನಮ್ಮ ಸಹಕಾರ ಸಂಘಕ್ಕೆ ಹೋಗಿ ಇಂದು ಬೆಳಿಗ್ಗೆ 09-05 ಗಂಟೆಯ ಸುಮಾರಿಗೆ ಚೌಡಯ್ಯ ಈತನು ನನಗೆ  ಫೋನ ಮಾಡಿ ತಿಳಿಸಿದ್ದೆನಂದದರೆ, ನಾನು ಮತ್ತು ನಿಮ್ಮ ತಮ್ಮ ಮಂಜುನಾಥ ಇಬ್ಬರು ಕೂಡಿ  ಇಂದು ಬೆಳಿಗ್ಗೆ 09-00 ಗಂಟೆಯ ಸುಮಾರಿಗೆ ನನ್ನ  ಹತ್ತಿರ ಇದ್ದ ಕೀಲಿಕೈ ಇಂದ ನಮ್ಮ ಪ್ರಾಥಮಿಕ ಸಹಕಾರ ಸಂಘ ಕಾರ್ಯಾಲಯದ ಶೆಟರ್ ತರೆದು ನೋಡಲಾಗಿ ನೀವು ಕುಳಿತು ಕೆಲಸ ಮಾಡುವ ಟೇಬಲ್ ಹಿಂದೆ ಇರುವ ಸಂಘದ ಕಿಟಕಿಯ ರಾಡುಗಳು ಕಿತ್ತಿ ಹಾಕಿರುತ್ತಾರೆ, ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುತ್ತವೆ ನೀವು ಬೇಗ ಬರ್ರಿ ಅಂತಾ ತಿಳಿಸಿದಾಗ ನಾನು ಗಾಬರಿಗೊಂಡು ನಮ್ಮೂರಿಂದ ಮಳಖೇಡ ಗ್ರಾಮದ ಪತ್ತಿನ ಸಹಕಾರ ಸಂಘಕ್ಕೆ ಇಂದು ಬೆಳಿಗ್ಗೆ 09-50 ಕ್ಕೆ ಬಂದು ನೋಡಲಾಗಿ ನಾನು ಕುಳಿತು ಕೆಲಸ ಮಾಡುವ ಟೇಬಲನ ಡ್ರಾ ಮುರಿದಿದ್ದು ಅದರಲ್ಲಿ ನೋಡಲಾಗಿ ನಿನ್ನೆ ನಾನು ಇಟ್ಟಿದ್ದ 1,60,000=00 ರೂಪಾಯಿ ಕಾಣಲಿಲ್ಲ, ಮತ್ತು ತಿಜೋರಿಯ ಬಾಗಿಲು ತೆರೆದಿರುತ್ತಾರೆ, ಹಾಗು ಇಟ್ಟಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿರುತ್ತವೆ, ಕಾರಣ ದಿನಾಂಕ: 16-08-2017 ರಂದು ರಾತ್ರಿ 10-00 ಗಂಟೆಯಿಂದ ಇಂದು ದಿನಾಂಕ 17-08-2017 ರಂದು ಬೆಳಿಗ್ಗೆ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಸಹಕಾರ ಸಂಘದ ಕಿಟಕಿಯ ರಾಡುಗಳನ್ನು ಕಿತ್ತು ಹಾಕಿ, ಮುರಿದು ಒಳಗೆ ಪ್ರವೇಶ ಮಾಡಿ ನಾನು ಕೂಡುವ ಟೇಬಲನ ಡ್ರಾ ದಲ್ಲಿ ಇಟ್ಟಿದ್ದ 1,60,000=00 ರೂಪಾಯಿ ನಗದು ಹಣ ನೆದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಕ್ರಿಮಿನಾಶಕ ಔಷಧಿ ಕುಡಿಸಿದ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ರೇಖಾ ಗಂಡ ಆನಂದ ಹರಳಯ್ಯ ಸಾ:ಕೆರಿಭೋಸಗಾ ಗ್ರಾಮ ತಾ:ಜಿ:ಕಲಬುರಗಿ ರವರ ತಂದೆ ಸಿದ್ಧಪ್ಪ ತಂದೆ ಚನ್ನಪ್ಪಾ ಜವಳಿ ಮತ್ತು ತಾಯಿ ಸುಶೀಲಾಬಾಯಿ ಗಂಡ ಸಿದ್ಧಪ್ಪ ಜವಳಿ ಇವರು ಈಗ 09 ವರ್ಷದ ಹಿಂದೆ ಕೆರಿಭೋಸಗಾ ಗ್ರಾಮದ ಆನಂದ ತಂದೆ ಮೈಲಾರಿ ಹರಳಯ್ಯ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದುಸಧ್ಯ ರಾಜಶ್ರೀ 7 ವರ್ಷದ ಹೆಣ್ಣುಮಗಳು, ಅಕ್ಷರಾ ವ:4 ವರ್ಷದ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ನನ್ನ ಗಂಡ ಆನಂದ ಮತ್ತು ಮಾವ ಮೈಲಾರಿ ತಂದೆ ನಾಗಪ್ಪ ಹರಳಯ್ಯ, ಅತ್ತೆ ಶರಣಮ್ಮಾ ಗಂಡ ಮೈಲಾರಿ ಹರಳಯ್ಯ, ನಾದಿನಿ ಶ್ರೀದೇವಿ ಗಂಡ ಚಂದ್ರಕಾಂತ ಇವರೆಲ್ಲರೂ ಈಗ 06 ತಿಂಗಳಿಂದ ನಾನು ಹೊಲಕ್ಕೆ ಹೋದಾಗ ದಾರಿಗೆ ಹೋಗು-ಬರುವ ಗಂಡು ಮಕ್ಕಳೊಂದಿಗೆ ಮಾತಾಡಿದ್ದಕ್ಕೆ ಅವರಿಗೆ ಜೊತೆ ಯಾಕೇ ಮಾತಾಡುತ್ತೀ ಅವರ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುವಿ ಅಂತಾ ನನ್ನ ಶೀಲದ ಸಂಶಯ ಪಟ್ಟು ಹೊಡೆ ಬಡಿ ಮಾಡುತ್ತಾ ಬಂದಿದ್ದರು ಅದನ್ನು ಸಹಿಸಿಕೊಂಡು ಗಂಡನೊಂದಿಗೆ ಸಂಸಾರ ಮಾಡಿಕೊಂಡು ಬಂದಿದ್ದು ಈಗ ಒಂದು ತಿಂಗಳ ಹಿಂದೆ ನಾನು ಹೊಲಕ್ಕೆ ಹೋದಾಗ ನಮ್ಮ ಪಕ್ಕದ ಹೊಲದವನ ಜೊತೆ ಮಾತಾಡುತ್ತಿದ್ದಾಗ, ನನ್ನ ಗಂಡ ಆನಂದ ಇತನು ಅಲ್ಲಿಗೆ ಬಂದು ಅವನೊಂದಿಗೆ ಯಾಕೇ ಮಾತಾಡುತ್ತೀದ್ದಿ ಅವನ ಜೊತೆ ನಿನಗೆ ಎನು ಸಂಬಂಧವಿದೆ ಎಂದು ಜಗಳಾ ತೆಗೆದು ಮನೆಗೆ ಕರೆದುಕೊಂಡು ಹೋಗಿ ನನಗೆ ನನ್ನ ಗಂಡ, ಅತ್ತೆ, ಮಾವ, ನಾದಿನಿ ಎಲ್ಲರೂ ರಂಡಿ, ಭೋಸಡಿ ನಮ್ಮ ಮನೆಯ ಮಾನ ಮಾರ್ಯಾದೆ ಕಳಿಯುತ್ತೀದ್ದೀ ರಂಡಿ ಅಂತಾ ಬೈಯ್ಯುತ್ತಾ ಎಲ್ಲರೂ ಕೈಯಿಂದ ಬೆನ್ನ ಮೇಲೆ ಮತ್ತು ಮೈ ಮೇಲೆ ಹೊಡೆ ಬಡಿ ಮಾಡಿದರು. ಮರುದಿನ ನಮ್ಮ ತಂದೆ ಸಿದ್ಧಪ್ಪ ಮತ್ತು ಅಣ್ಣ ಶರಣಪ್ಪ ಇವರಿಗೆ ಕೆರಿಭೋಸಗಾ ಗ್ರಾಮಕ್ಕೆ ಕರೆಯಿಸಿ ನಿಮ್ಮ ಮಗಳು ಬೇರೆಯವರ ಜೊತೆ ಮಾತಾಡುತ್ತಾಳೆ ಅಂತಾ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ನನಗೆ ತವರು ಮನೆಗೆ ಕಳುಹಿಸಿಕೊಟ್ಟರು. ನನ್ನ ತಂದೆ, ತಾಯಿಯವರು ನನಗೆ ಒಂದು ತಿಂಗಳ ಕಾಲ ತವರು ಮನೆಯಲ್ಲಿ ಇಟ್ಟುಕೊಂಡರು. ನನ್ನ ಗಂಡನ ಮನೆಯವರು ಒಂದು ತಿಂಗಳಾದರೂ ಕರೆಯಲಿಕ್ಕೆ ಬರಲಿಲ್ಲಾ. ದಿನಾಂಕ 11/08/17 ರಂದು ಬೆಳಿಗ್ಗೆ ನಮ್ಮೂರಿನಿಂದ ನಮ್ಮ ತಂದೆ ಸಿದ್ಧಪ್ಪ, ಮತ್ತು ಅಣ್ಣ ಶರಣಪ್ಪ, ನಮ್ಮೂರಿನ ಪ್ರಮುಖರಾದ ಶ್ರೀ ಮಲ್ಲಿನಾಥ ತಂದೆ ಶ್ರೀಮಂತರಾವ ಪಾಟೀಲ್, ಶ್ರೀ ದೇವಿಂದ್ರಪ್ಪ ತಂದೆ ಪೀರಪ್ಪ ಬೋಲ್ಡೆ, ಶ್ರೀ ಚಂದ್ರಕಾಂತ ತಂದೆ ಶಿವಪ್ಪ ಧನ್ನಿ ಎಲ್ಲರೂ ಕೂಡಿಕೊಂಡು ನನಗೆ ಕೆರಿಭೋಸಗಾ ಸೀಮಾಂತರದಲ್ಲಿ ಇರುವ ನನ್ನ ಗಂಡನಿಗೆ ಸಂಬಂಧಿಸಿದ ಸಮಗಾರ ನಾಲಾದ ಹೊಲದಲ್ಲಿ ಗಂಡ ಆನಂದ ಮತ್ತು ಮಾವ ಮೈಲಾರಿ ತಂದೆ ನಾಗಪ್ಪ ಹರಳಯ್ಯ, ಅತ್ತೆ ಶರಣಮ್ಮಾ ಗಂಡ ಮೈಲಾರಿ ಹರಳಯ್ಯ, ನಾದಿನಿ ಶ್ರೀದೇವಿ ಗಂಡ ಚಂದ್ರಕಾಂತ ಇವರಿಗೆ ಬರಮಾಡಿಕೊಂಡು ಪಂಚಾಯಿತಿ ಮಾಡಲು ನಾನು ಯಾರೊಂದಿಗೆ ಅನೈತಿಕ ಸಂಬಂಧವಿಲ್ಲಾ ಎಂದು ಹೇಳಿದರೂ ನನ್ನ ಮಾತಿಗೆ ಒಪ್ಪದೇ ನನ್ನ ಗಂಡ, ಅತ್ತೆ, ಮಾವ, ನಾದಿನಿ ಇವರೆಲ್ಲರೂ ನನಗೆ ನೀನು ಬೇರೆಯವರ ಜೊತೆಯಲ್ಲಿ ಅನೈತಿಕ ಸಂಬಂಧ ಇಲ್ಲಾ ಎಂದು ನೀರು ಮೈಮೇಲೆ ಸುರಿದುಕೊಂಡು ಅಲ್ಲೇ ಹತ್ತಿರದಲ್ಲಿ ಇರುವ ಬೆಳ್ಳೆಯಪ್ಪ ಹೊಲದಲ್ಲಿ ಇರುವ ಲಕ್ಷ್ಮೀ ದೇವರಿಗೆ ಮುಟ್ಟಿ ಆಣೆ ಮಾಡಿದರೆ ಮಾತ್ರ ತಮ್ಮ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರಿಂದ ಅವರು ಹೇಳಿದ ಪ್ರಕಾರ ಮೈಮೇಲೆ ಸುರಿದುಕೊಂಡು ನಾನು ಯಾರೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಿಲ್ಲಾವೆಂದು  ಹಸಿ ಮೈಯಿಂದ ಬೆಳ್ಳೆಯಪ್ಪ ಹೊಲದಲ್ಲಿ ಇರುವ ಲಕ್ಷ್ಮೀ ದೇವರಿಗೆ ಮುಟ್ಟಿ ಆಣೆ ಮಾಡಿದಾಗ ನನ್ನ ಗಂಡ ಮತ್ತು ಅವನ ಮನೆಯವರು ನನಗೆ ಕೆರಿಭೋಸಗಾದ ಮನೆಗೆ ಕರೆದುಕೊಂಡು ಹೋದರು. ದಿನಾಂಕ 12/08/2017 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದರು. ನಾನು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಹೊಲದಲ್ಲಿ ಇರುವ ಗುಡಿಸಲಿನಲ್ಲಿ ಇದ್ದಾಗ ಅಲ್ಲಿಗೆ ನನ್ನ ಗಂಡ ಆನಂದ ಮತ್ತು ಮಾವ ಮೈಲಾರಿ ತಂದೆ ನಾಗಪ್ಪ ಹರಳಯ್ಯ, ಅತ್ತೆ ಶರಣಮ್ಮಾ ಗಂಡ ಮೈಲಾರಿ ಹರಳಯ್ಯ, ನಾದಿನಿ ಶ್ರೀದೇವಿ ಗಂಡ ಚಂದ್ರಕಾಂತ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ರಂಡಿ ಹಾದರತನ ಮಾಡಿ ನಮ್ಮ ಮನೆಯ ಮಾನ ಮಾರ್ಯಾದೆ ಕಳಿದು ಮತ್ತೆ ನಮ್ಮ ಮನೆಗೆ ಪಂಚಾಯತಿ ಮಾಡಿ ವಾಪಸ್ಸು ಬಂದಿದ್ದೀ ರಂಡಿ ಇವತ್ತು ನಿನಗೆ ಎಣ್ಣೆ ಕುಡಿಸಿ ಖಲಾಷ ಮಾಡುತ್ತೇವೆ ಅಂತಾ ಅನ್ನುತ್ತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ಅತ್ತೆ, ಗಂಡ, ಮಾವ, ನಾದಿನಿ ಎಲ್ಲರೂ ಗುಡಿಸಲಿನಲ್ಲಿದ್ದ ತೊಗರಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಪ್ರೋಕ್ಲೋನ ಎಣ್ಣೆ ಮತ್ತು ಹುಲ್ಲಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಎರಡು ಕಲಿಸಿ ನನಗೆ ಅತ್ತೆ, ನಾದಿನಿ, ಮಾವ ಮೂವರು ಒತ್ತಿಯಾಗಿ ಹಿಡಿದಾಗ ನನ್ನ ಗಂಡ ಆನಂದ ಇತನು ಜಬರದಸ್ತಿಯಿಂದ ಪ್ರೋಕ್ಲೋನ ಎಣ್ಣೆ ಮತ್ತು ಹುಲ್ಲಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಕುಡಿಸಿದನು. ಸ್ವಲ್ಪ ಸಮಯದ ನಂತರ ಚಕ್ರ ಬಂದಂತಾಗಿ ನೆಲಕ್ಕೆ ಬೀಳಲು ನನ್ನ ಗಂಡ ನಮ್ಮ ಅಣ್ಣನಿಗೆ ಪೋನ ಮಾಡಿ ನಿಮ್ಮ ತಂಗಿ ಕ್ರೀಮಿನಾಷಕ ಔಷಧಿ ಪ್ರೋಕ್ಲೋನ ಎಣ್ಣೆ ಮತ್ತು ಹುಲ್ಲಿಗೆ ಹೊಡೆಯುವ ಕ್ರೀಮಿನಾಷಕ ಔಷಧಿ ಎರಡು ಕಲಿಸಿ ಹೊಲದಲ್ಲಿ ಕುಡಿದ್ದಾಳೆ ಅವಳಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತಾ ತಿಳಿಸಿದರು. ನಮ್ಮ ತಂದೆ, ಅಣ್ಣ ಮತ್ತು ತಾಯಿ ಸುಶೀಲಾಬಾಯಿ ಎಲ್ಲರೂ ಸರಕಾರಿ ಆಸ್ಪತ್ರೆ ಕಲಬುರಗಿಗೆ ಬಂದಿದ್ದು, ಆಗ ಬೇಹುಷ ಸ್ಥಿತಿಯಲ್ಲಿ ಇರುವುದರಿಂದ ನನ್ನ ತವರು ಮನೆಯವರು ನನಗೆ ಹೆಚ್ಚಿನ ಉಪಚಾರ ಕುರಿತು ಗಂಗಾ ಆಸ್ಪತ್ರೆ ಕಲಬುರಗಿಗೆ ಒಯ್ದು ಸೇರಿಕೆ ಮಾಡಿದರು. ನನಗೆ ದಿನಾಂಕ 14/08/17 ರಂದು ಪ್ರಜ್ಞೆ ಬಂದಾಗ ಈ ಮೇಲಿನ ಕ್ರೀಮಿನಾಷಕ ಔಷಧಿ  ಕುಡಿಸಿದ ವಿಷಯ ನಮ್ಮ ತಂದೆ, ತಾಯಿ, ಅಣ್ಣ ಇವರಿಗೆ ತಿಳಿಸಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಸಂಗೀತ ಗಂಡ ರವಿ ರಾಠೋಡ ಸಾ: ದಿನಸಿ (ಕೆ) ತಾಂಡಾ ತಾ:ಜಿ:ಕಲಬುರಗಿ ಇವರು ಗಂಡನಾದ ರವಿ ರಾಠೋಡ ಇವರು ಆರ.ಸಿ.ಸಿ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದು. ಅವರು ಪ್ರತಿ ದಿನ ಬೆಳಗ್ಗೆ ಕಮಲಾಪೂರಕ್ಕೆ ಹೋಗಿ ಕೂಲಿಗಾಗಿ ಜನರನ್ನು ಜಮಾ ಮಾಡಿ ಕೆಲಸಕ್ಕೆ ಕಳುಹಿಸುತ್ತಿದ್ದರು. ದಿನಾಂಕ 18-08-2017 ರಂದು ಮುಂಜಾನೆ 08.00 ಗಂಟೆಯ ಸುಮಾರಿಗೆ ನನ್ನ ಗಂಡನಾದ ರವಿ ರಾಠೋಡ ಇವರು ಕಮಲಾಪೂರಕ್ಕೆ ಲೆಬರಗಳಿಗೆ ಜಮಾ ಮಾಡಿ ಕೆಲಸಕ್ಕೆ ಕಳಿಸುವುದಕ್ಕಾಗಿ ನನಗೆ ಹೇಳಿ ಮನೆಯಿಂದ ಹಿರೊಹೊಂಡಾ ಸ್ಪ್ಲೆಂಡರ ಪ್ಲಸ್ ಮೋ.ಸೈಕಲ ನಂ.ಕೆಎ.32 ಎಕ್ಷ.5560 ನೇದ್ದನ್ನು ಚಲಾಯಿಸಿಕೊಂಡು ಕಮಲಾಪೂರಕ್ಕೆ ಹೋಗಿದ್ದು ಇರುತ್ತದೆ. ಇಂದು ಮದ್ಯಾಹ್ನ 12.15 ಗಂಟೆಯ ಸೂಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಾಂಡಾದ ದೇವಿದಾಸ ಚಿನ್ನಿ ರಾಠೋಡ ಇವರು ನನಗೆ ಪೋನ ಮಾಡಿ ತಿಳಿಸಿದೆನೆಂದರೆ ಕಮಲಾಪೂರ ಗ್ರಾಮ ದಾಟಿ ದಿನಸಿ ರೋಡಿನ ಬಾಬು ಟಪ್ಪಾ ಇವರ ಹೋಲದ ಹತ್ತೀರ ರೋಡಿನ ಮೇಲೆ ನಿನ್ನ ಗಂಡ ರವಿ ರಾಠೋಡ ಇವರಿಗೆ ರಸ್ತೆ ಅಪಘಾತವಾಗಿ ಭಾರಿ ರಕ್ತ ಗಾಯಹೊಂದಿ ನನ್ನ ಗಂಡ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ನನ್ನ ಗಂಡ ಸತ್ತ ಸುದ್ದಿ ನನ್ನ ಮಾವ ಲಕ್ಷ್ಮಣ ರಾಠೋಡ ಅತ್ತೆ ನಾಜಾಬಾಯಿ ರಾಠೋಡ ಹಾಗೂ ಭಾವನಾದ ರಾಜು ರಾಠೋಡ ಇವರಿಗೆ ವಿಷಯ ತಿಳಿಸಿ ನಾವೇಲ್ಲರೂ ಘಟನಾ ಸ್ಥಳಕ್ಕೆ ಬಂದು ನೋಡಲು ದೇವಿದಾಸ ಇವರು ಹೇಳಿದಂತೆ ನನ್ನ ಗಂಡ ರವಿ ರಾಠೋಡ ಈತನು ಸ್ಥಳದಲ್ಲೆ ಸತ್ತು ಬಿದ್ದಿದ್ದು. ನನ್ನ ಗಂಡ ಹತ್ತೀರ ಹೋಗಿ ನೋಡಲಾಗಿ ಅವರ ಹಣೆಯ ಮಧ್ಯ ತಲೆ ಒಡೆದು ಭಾರಿ ರಕ್ತಗಾಯ ಬಲ ಮತ್ತು ಎಡ ಹುಬ್ಬುಗಳ ಮೇಲೆ ರಕ್ತಗಾಯವಾಗಿದ್ದು. ಬಲಗಡೆ ಹುಬ್ಬಿನ ಕೆಳಭಾಗದಲ್ಲಿ ಭಾರಿ ರಕ್ತಗಾಯ ಬಲಗಡೆ ಗದ್ದದ ಕೆಳಗೆ ರಕ್ತಗಾಯ ಎಡಕಣ್ಣಿನ ರೆಪ್ಪೆ ಕಟ್ಟಾಗಿ ರಕ್ತಗಾಯವಾಗಿ ಮುಗಿನಿಂದ ರಕ್ತ ಸೋರುತ್ತಿದ್ದು. ಅಲ್ಲದೆ ಎಡಕೈ ಮುಂಗೈ ಹತ್ತೀರ ಸ್ವಲ್ಪ ಕಟ್ಟಾಗಿ ಕೈ ಚಪ್ಪಟೆ ಆಗಿದ್ದು. ಎರಡು ಮೋಣಕಾಲುಗಳಿಗೆ ಅಲ್ಲಲ್ಲಿ ತರಚಿದ ಗಾಯಗಳಾಗಿ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ನಂತರ ದೇವಿದಾಸ ಇವರಿಗೆ ವಿಚಾರ ಮಾಡಲಾಗಿ ಅವರು ತಿಳಿಸಿದ್ದೆನಂದರೆ. ಇಂದು ನಾನು ಹಾಗೂ ಇತರರು ಕೂಡಿ ಕ್ರೂಜರ ಜೀಪ ನಂ.ಎಪಿ.21 ಟಿಟಿ.2262 ನೇದ್ದರಲ್ಲಿ ಕುಳಿತು ದಿನಸಿ ಕೆ ತಾಂಡಾದಿಂದ ಕಮಲಾಪೂರಕ್ಕೆ ಹೋಗುತ್ತಿದೆವು ಸದರಿ ಕ್ರೋಜರ  ಜೀಪನ್ನು ದಿನೇಶ ತಂದೆ ಖುಬಾ ರಾಠೋಡ ಸಾ: ದಿನಸಿ(ಕೆ) ತಾಂಡಾ ಈತನು ಚಲಾಯಿಸುತ್ತಿದ್ದು ಕಮಲಾಪೂರ ಸಮೀಪ ಬರುತ್ತಿರುವಾಗ ಸದರಿ ಜೀಪ ಚಾಲಕನು ತನ್ನ ಅಧೀನದಲ್ಲಿದ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದು ಆತನಿಗೆ ನಾವು ಜೀಪನ್ನು ನಿಧಾನವಾಗಿ ನಡೆಸಲು ಹೇಳಿದರು ಕೂಡ ಹಾಗೆ ತನ್ನ ಜೀಪನ್ನು ಅತಿವೇಗದಿಂದ ನಡೆಸುತ್ತಾ ಹೊರಟ್ಟಿದ್ದು  ಕ್ರೋಜರ ಜೀಪ ಚಾಲಕನು ತನ್ನ ಜೀಪನ್ನು ಬಾಬು ಟಪ್ಪಾ ಇವರ ಹೋಲದ ಹತ್ತೀರ ತಿರುವಿನಲ್ಲಿ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಅಲ್ಲೆ ಬದಿಯಲ್ಲಿ  ಮೋಟರ ಸೈಕಲ ನಿಲ್ಲಿಸಿ ಮಾತನಾಡುತ್ತಿದ್ದ ರವಿ ರಾಠೋಡ ಇತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದನು ನಂತರ ನಾವು ಜೀಪನಿಂದ ಕೆಳಗೆ ಇಳಿದು ನೋಡಲು ನಿನ್ನ ಗಂಡ ರವಿ ರಾಠೋಡ ಈತನು ಸ್ಥಳದಲ್ಲೆ ಮೃತಪಟ್ಟಿದ್ದನು ಅಪಘಾತ ಪಡಿಸಿದ ಕ್ರೋಜರ ಜೀಪ್ ಚಾಲಕ ಜೀಪ ಬಿಟ್ಟು ಓಡಿ ಹೋಗಿರುತ್ತಾನೆ  ಮತ್ತು ಜೀಪಿನಲ್ಲಿ ಕುಳಿತ ಇತರರಿಗೂ ಅಲಲ್ಲಿ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ