POLICE BHAVAN KALABURAGI

POLICE BHAVAN KALABURAGI

03 January 2013

GULBARGA DISTRICT REPORTED CRIME


ಕಳ್ಳತನ ಪ್ರಕರಣ:

ಚೌಕ ಪೊಲೀಸ್ ಠಾಣೆ:ಶ್ರೀ ಶಶಿಕಾಂತ ತಂದೆ ಚಂದ್ರಕಾಂತ ಶೆಟ್ಟಿ ಮಹಾಜನ ಉ|| ವ್ಯಾಪಾರ ಸಾ|| ಬ್ಯಾಂಕ್ ಕಾಲೋನಿ ಗುಲಬರ್ಗಾರವರು ನಾನು ಟ್ರೇಡಿಂಗ್ ಕಂಪನಿಯ ಪಾರ್ಟಿಗಳಿಗೆ ಹಣ ಕೊಡುವ ಸಲುವಾಗಿ ಅಡಿತಿಯ ಲಾಕರದಲ್ಲಿ ನಗದು ಹಣ 95,000/- ರೂಪಾಯಿಗಳು ಇಟ್ಟು ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು, ದಿನಾಂಕ: 03-01-2013 ರಂದು ಬೆಳಿಗ್ಗೆ 10-00 ಗಂಟೆಗೆ ಅಡತಿಗೆ ಬಂದು ನೋಡಲು ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲ್ಲದೇ ಅಂಗಡಿಯ ಮೇಲಿನ ಪತ್ರಾ ಕತ್ತರಿಸಿ ಆಲಮಾರಿ ಒಡೆದು ಅದರಲ್ಲಿರುವ 95,000/- ರೂಪಾಯಿಗಳು ಕಳ್ಳತನವಾಗಿದ್ದು, ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಮಾನ್ಯ ಎಸ್‌.ಪಿ ಸಾಹೇಬ ಗುಲಬರ್ಗಾರವರ ಆದೇಶ ಮೇರೆಗೆ ನಾನು ಪಿಎಸ್‌ಐ ಫರತಾಬಾದ ಮತ್ತು ನನ್ನ ಜೊತೆ ಹೇಮಂತಕುಮಾರ ಪಿಎಸ್‌ಐ ಹಾಗೂ ಸಿಬ್ಬಂದಿಯೊಂದಿಗೆ ಶಹಾಬಾದಲ್ಲಿ ಜೂಜಾಟ ನಡೆದಿದೆ ಎಂದು ಬಾತ್ಮಿ ಬಂದ ಮೇರೆಗೆ ಮಾನ್ಯ ಡಿವೈಎಸ್‌ಪಿ ಸಾಹೇಬ ಶಹಾಬಾದರವರ ನೇತೃತ್ವದಲ್ಲಿ ಶಹಾಬಾದದ ಭೀಮಾಶಂಕರ ವಡ್ಡರರವರ ಮನೆಯ  ಮೇಲೆ ದಾಳಿ ಮಾಡಿ 6 ಜನ ಆರೋಪಿತರು ಮತ್ತು ನಗದು ಹಣ 50,170/- ರೂ ಹಾಗೂ ದ್ವಿ-ಚಕ್ರ ವಾಹನಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇರೆಗೆ ಠಾಣೆ ಗುನ್ನೆ ನಂ:01/2013 ಕಲಂ:79,80 ಕೆಪಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಧನು ತಂದೆ ಡೊಂಗ್ರು ಪವಾರ ವ:23 ಸಾ:ಬಾಲುನಾಯಕ ತಾಂಡಾ  ಮುಗಳನಾಗಾಂ ರವರು ನಾನು ದಿನಾಂಕ:02/01/2013 ರಂದು ರಾತ್ರಿ 8.00 ಗಂಟೆ ಸುಮಾರಿಗೆ ಶಹಾಬಾದ ಬಸ ನಿಲ್ದಾಣದಿಂದ ಟಂಟಂ ನಂ:ಕೆಎ-32/ಬಿ-7160 ನೇದ್ದರಲ್ಲಿ ಕುಳಿತುಕೊಂಡು ಹೋಗುತ್ತಿರುವಾಗ ಶಾಂತನಗರ ಮಜೀದ ಹತ್ತಿರವಿರುವ ಸಣ್ಣ ಬ್ರೀಡ್ಜ ಹತ್ತಿರ ಎದರುಗಡೆಯಿಂದ ಒಂದು ಟಂ ಟಂ ಅಫೇ ಮೀನಿಗೂಡ್ಸ್‌ ನಂ.ಕೆಎ-32 ಬಿ-1650 ನೇದ್ದರ ಚಾಲಕ ರಮೇಶ ತಂದೆ ಸಿದ್ರಾಮಪ್ಪ ಇತನು ತನ್ನ ಟಂಟಂ ನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದ್ದರಿಂದ ನನಗೆ ತಲೆಗೆಟೊಂಕಕ್ಕೆಬಲಗಾಲ ಮೋಳಕಾಲಿಗೆ ತರಚಿದ ರಕ್ತಗಾಯ ಮತ್ತು ಬೆನ್ನಿಗೆ ಒಳಪೆಟ್ಟು ಆಗಿರುತ್ತದೆ. ಮತ್ತು ನಮಗೆ ಡಿಕ್ಕಿ ಪಡಿಸಿದ ಟಂಟಂದಲ್ಲಿ ಕುಳಿತಿದ್ದ ಶರಣ ತಂದೆ ಲಕ್ಷ್ಮಣ ಇತನಿಗೆ ಗಾಯಗಳಾಗಿರುತ್ತವೆ. ಚಾಲಕರಿಗೆ ಯಾವುದೆ ಗಾಯಗಳಾಗಿರುವದಿಲ್ಲ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 02/2013 ಕಲಂ:279,337  ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.