POLICE BHAVAN KALABURAGI

POLICE BHAVAN KALABURAGI

19 January 2012

GULBARGA DIST REPORTED CRIME

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:
ಶ್ರೀ ರಾಜಶೇಖರ ತಂದೆ ಧೂಳಪ್ಪ ಗುಡ್ಡಾ ಸಾಬಿದನೂರ ಹಾವಪ್ಲಾಟ ನಂ:75 ಕರುಣೇಶ್ವರ ನಗರ ಗುಲಬರ್ಗಾ ರವರು ನನ್ನ ಮನೆಯ ಹತ್ತಿರದಲ್ಲಿರುವ ನಾಗಪ್ಪ ತಂದೆ ಶಿವಶರಣಪ್ಪ ಹಯ್ಯಾಳ ಇವರ ಕಾಂಪ್ಲೇಕ್ಸದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೆನೆ. ಮುಂಜಾನೆ 11 ಗಂಟೆಗೆ ಮನೆಗೆ ಕೀಲಿ ಹಾಕಿಕೊಂಡು ರಾಮ ಮಂದಿರ ಕಡೆಗೆ ಕಿರಾಣಿ ಸಾಮಾನು ತರಲು ಹೋಗಿ ಮರಳಿ ನನ್ನ ಕಿರಾಣಿ ದುಕಾನಕ್ಕೆ ಬಂದು ನನ್ನ ಹೆಂಡತಿಯಿಂದ ಮನೆಯ ಕೀಲಿ ಕೈ ತೆಗೆದುಕೊಂಡು ಮನೆಗೆ ಬಂದಾಗ ಮನೆಯ ಬಾಗಿಲಿಗೆ ಹಾಕಿದ ಕೀಲಿ ಕೊಂಡಿ ಮುರಿದು ಬಾಗಿಲು ಖುಲ್ಲಾ ಇದ್ದು ಗಾಬರಿಗೊಂಡು ನೋಡಲಾಗಿ ಬೆಡ್ ರೂಮನಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿರುತ್ತವೆ. ಲಾಕರದಲ್ಲಿಟ್ಟ ಬಂಗಾರದ ಆಭರಣಗಳು ಇರಲಿಲ್ಲಾ. ನನ್ನ ಹೆಂಡತಿಗೆ ತಿಳಿಸಿದ್ದರಿಂದ ಅವಳು ಸಹ ಅಂಗಡಿಯಿಂದ ಬಂದು ಇಬ್ಬರು ನೋಡಲಾಗಿ ಯಾರೋ ಕಳ್ಳರು ಬಂಗಾರದ ಆಭರಣಗಳು 14 ತೊಲೆ, ಬೆಳ್ಳಿಯ ಆಭರಣಗಳು 6 ತೊಲೆ, ಮತ್ತು ನಗದು ಹಣ 5000/- ರೂ ಹೀಗೆ ಒಟ್ಟು 3,19,700/- ರೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ. 454, 380 ಐಪಿಸಿ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಮಹಿಳೆಯ ಮೇಲೆ ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಪಾರ್ವತಿ ಗಂಡ ಮಾರ್ತಂಡ ಆಲೂರ ಸಾ:ಮಾಲಗತ್ತಿ ಗ್ರಾಮ ರವರು ನಾನು ದಿ:18/01/2012 ರಂದು ಸಂಜೆ 7.30 ಗಂಟೆ ಸುಮಾರಿಗೆ ಆರಾಮ ವಿಲ್ಲದ ಕಾರಣ ಕಿರಣಾ ಅಂಗಡಿಯಲ್ಲಿ ಔಷದ ತೆಗೆದುಕೊಳ್ಳಲು ಹೋಗುತ್ತಿದ್ದಾಗ ರಾಜಪ್ಪಾ ಇತನು ಭೂಮಿಯ ಸಂಬಂಧ ಅವಾಚ್ಯವಾಗಿ ಬೈಯುತಿದ್ದು ಯಾಕೆ ಬೈಯುತ್ತಿ ಅಂತಾ ಅಂದಿದ್ದಕ್ಕೆ ಕುತ್ತಿಗೆ, ಹೆಣಲು ಹಿಡಿದು ಜಗ್ಗಾಡಿ ಕೆಳಗೆ ಕೆಡವಿ ಕೈಯಿಂದ ಮತ್ತು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದನು. ಜಗಳ ಸಪ್ಪಳ ಕೇಳೆ ನನ್ನ ಸವತಿ ನಾಗಮ್ಮ ಜಗಳ ಬಿಡಿಸಲು ಬಂದಾಗ ಅವಳಿಗೂ ಕೂಡಾ ಕೈಯಿಂದ ಮತ್ತು ಕಾಲಿನಿಂದ ಹೊಟ್ಟೆಗೆ ಒದ್ದನು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ 323, 354, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗ್ರಾಮೀಣ ಠಾಣೆ:
ಶ್ರೀ ಮಹಮ್ಮದ ಮೈನೊದ್ದಿನ ತಂದೆ ಅನಸರ ಪಟೇಲ್ ಮತ್ತು ಗೋವಿಂದ ತಂದೆ ಗಂಗಣ್ಣಾ ಜಮದಾರ ಸಾ;ತಾವರಗೇರಾ ತಾ;ಜಿ ಗುಲಬರ್ಗಾರವರು ದಿನಾಂಕ. 18-1-2012 ರಂದು ಮುಂಜಾನೆ ತಾವರಗೇರಾ ಗ್ರಾಮದ ಮಲ್ಲಿಕಾರ್ಜುನ ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ರಸ್ತೆಗೆ ಹೋಗಿ ಬರುವ ಜನರಿಗೆ ಹೆದರಿಸುತ್ತಾ ಮತ್ತು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು ಸಾರ್ವಜನಿಕ ಶಾಂತತೆಯನ್ನು ಭಂಗವನ್ನುಂಟು ಮಾಡುತ್ತಿದ್ದಾಗ ಸದರಿಯವರನ್ನು ಅಧಿಕಾರಿ ಮತ್ತು ಸಿಬ್ಬಂದಿಯವರು ಹಿಡಿದು ವಿಚಾರಿಸಲು ಪೊಲೀಸ್ ರೊಂದಿಗೆ ತಕರಾರು ಮಾಡುತ್ತಿದ್ದಾಗ ಸದರಿಯವರು ಮುಂಜಾಗೃತ ಕ್ರಮ ಕುರಿತು ಠಾಣೆ ಗುನ್ನೆ ನಂ. 12/2012 ಕಲಂ. 110 (ಇ.&ಜಿ) ಸಿ.ಆರ್.ಪಿ.ಸಿ.ನೆದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡಿರುತ್ತಾರೆ.