POLICE BHAVAN KALABURAGI

POLICE BHAVAN KALABURAGI

09 May 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 08-05-2014 ರಂದು ದುತ್ತರಗಾಂವ ಗ್ರಾಮದ ಶ್ರೀ ವೀರೇಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನಿಂಬರ್ಗಾ, ಸಿಬ್ಬಂದಿ ಮತ್ತು ಪಂಚರೊಂದಿಗೆ ಧುತ್ತರಗಂವ ಗ್ರಾಮಕ್ಕೆ ಹೋಗಿ ಶ್ರೀ ವೀರೇಶ್ವರ ಗುಡಿಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿ  07 ಜನ ವ್ಯಕ್ತಿಗಳು ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ 07 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 1. ಶ್ರೀಶೈಲ ತಂದೆ ನಾಗಣ್ಣ ದೂದನಾಳ 2. ಶಾಂತಮಲ್ಲಪ್ಪ ತಂದೆ ಅಣ್ಣಪ್ಪ ದಿಡ್ಡಿಮನಿ 3. ವೀರಣ್ಣ ತಂದೆ ಭೀಮರಾವ ಖಜೂರಿ 4. ಹಣಮಂತ ತಂದೆ ಸಂಗಣ್ಣ ಬೆಳ್ಳಿ 5. ಸುಬಾಷ ತಂದೆ ತುಕಾರಾಮ ಗೌಡೆ 6. ಶ್ರೀಮಂತ ತಂದೆ ಭೀಮಶಾ ಹುಚ್ಚಗೊಟಿ 7. ಈರಣ್ಣ ತಂದೆ ವಸಂತರಾವ ಅಲ್ಲಾಫೂರ ಸಾ: ಎಲ್ಲರು ಧುತ್ತರಗಾಂವ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  ಒಟ್ಟು 7630/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಕೊಲೆ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀಮತಿ ಸುವರ್ಣಾ ಗಂಡ ಬಾಬು@ಮಾದೋಜಿ ಮರಾಠಾ  ಸಾ : ಹಿರೇ ಅಗಸಿ ಹನುಮಾನ ಗಲ್ಲಿ ಚಿಂಚೋಳಿ ತಾ:  ಚಿಂಚೋಳಿ ರವರ ಗಂಡನಾದ ಬಾಬು@ಮಾದೋಜಿ ಇವರು ಮಧ್ಯ ಸೇವನೆ ಮಾಡುವ ಚಟವುಳ್ಳವನಾಗಿದ್ದು  ಯಾವಾಗಲೂ ಕುಡಿದ  ನಶೆಯಲ್ಲಿರುತ್ತಿದ್ದನು. ಹಿಗಿದ್ದು ನಿನ್ನೆ  ದಿನಾಂಕ 06.05.2014 ರ ಸಾಯಾಂಕಾಲ 04.00 ಗಂಟೆ ಸುಮಾರಿಗೆ ನನ್ನ  ಗಂಡನಾದ ಬಾಬು@ಮಾದೋಜಿ ಎಂಬುವವನು ಮಧ್ಯ ಸೇವನೇಮಾಡಿ  ಎಸ್.ಬಿ.ಹೆಚ್ ಬ್ಯಾಂಕ ಎದರುಗಡೆ ಮಲಗಿಕೊಂಡಿರುತ್ತಾನೆ ಎಂಬ ಸುದ್ದಿ ಕೇಳಿ ಕರೆದುಕೊಂಡು ಬರಲು ಹೋಗುತ್ತಿದ್ದಾಗ ನನ್ನ ಗಂಡನು ನನಗೆ ಎದರು ಬಂದಿದ್ದು ನಂತರ ಇಬ್ಬರೂ ಕೂಡಿಕೋಂಡು ನಮ್ಮ ಮನೆಗೆ ಹೊದೇವು. ಮನೆಗೆ ಹೋದ ನಂತರ ನನ್ನ ಗಂಡನಿಗೆ ನಾನು ಊಟಕೊಟ್ಟಿದ್ದು ಊಟಮಾಡಿ ಮಲಗಿಕೊಂಡನು. ನಿನ್ನೆ ದಿನಾಂಕ 06.05.2014 ರಂದು ರಾತ್ರಿ 09.00 ಗಂಟೆ ಸುಮಾರಿಗೆ ಮಲಗಿಕೊಂಡ ನನ್ನ ಗಂಡನು ಎದ್ದು ಊರೋಳಗೆ ಹೋಗಿ ಬರುತ್ತೇನೆ ಅಂತಾ ಅಂದನು ಅದಕ್ಕೆ ನಾನು ಅವರಿಗೆ ಎಲ್ಲಿಗೆ ಹೋಗುತ್ತಿರಿ?  ಅಂತಾ ಕೇಳಿದ್ದಕ್ಕೆ ತಾನು ಎಲ್ಲಿಗೆ ಹೋಗುವುದಾಗಿ ಹೇಳಲಿಲ್ಲ. ಊರೋಳಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋದನು. ಮನೆಯಿಂದ ಹೋದವನು ರಾತ್ರಿ 10.00 ಗಂಟೆಯಾದರೂ ಮರಳಿ ಮನೆಗೆ ಬಾರದರಿಂದ ದಾರಿ ನೋಡಿ- ನೋಡಿ ಮಾವ ಮಕ್ಕಳೋಂದಿಗೆ ಮನೆಯಲ್ಲಿ ಮಲಗಿಕೊಂಡೆನು. ದಿನಾಂಕ 07.05.2014 ರಂದು ಬೆಳೆಗ್ಗೆ 06.30 ಗಂಟೆ ಸುಮಾರಿಗೆ ಎದ್ದು  ನಮ್ಮ ಮನೆಯಲ್ಲಿ  ಕಸಗೂಡಿಸುತ್ತಿದ್ದಾಗ ನನ್ನ ಗಂಡನಾದ ಬಾಬು@ಮದೋಜಿ ಮರಾಠಾ ನಮ್ಮೂರ ಚಂರಂಡಿ ನಾಲೆಯ  ಹತ್ತೀರವಿರುವ  ನಮ್ಮೂರಿನ  ಕಿಶೋರ  ತಂದೆ ಗುಂಡಪ್ಪ ನಾಯನೋರ ಎಂಬುವವರ ಹೊಲದಲ್ಲಿ ಬಿದ್ದಿರುತ್ತಾನೆ ಅಂತಾ ಸುದ್ದಿ ಬಂದಿದ್ದರಿಂದ . ನಾನು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಗಂಡನು ಸತ್ತು ಬಿದ್ದಿದ್ದನು. ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಮುಖ ಮತ್ತು ತಲೆಯ ಮೇಲೆ ಕಲ್ಲನ್ನು ಎತ್ತಿ ಬಿಸಾಕಿ. ಜಜ್ಜಿ ಕೊಲೆ ಮಾಡಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಸುರೇಶ ತಂದೆ ಪುರು ರಾಠೋಡ ಸಾ: ಪಾಣೆಗಾಂವ ತಾಂಡಾ ತಾ: ಜಿ: ಗುಲಬರ್ಗಾ ದಿನಾಂಕ: 07-05-2014 ರಂದು ರಾತ್ರಿವೇಳೆಯಲ್ಲಿ ನಮ್ಮ ತಾಂಡಾದ ಧರ್ಮು ರಾಠೋಡ ಇವರ ಮಕ್ಕಳ ಮದುವೆ ಕಾರ್ಯಕ್ರಮ ಇದ್ದುದರಿಂದ ನಾನು ಮತ್ತು ನಮ್ಮ ತಾಂಡಾದ ಕಾಶಿನಾಥ ರಾಠೋಡ, ಶೇಖರ ರಾಠೋಡಕುಮಾರ ರಾಠೋಡ ಎಲ್ಲರೂ ಹೋಗಿದ್ದು ಇರುತ್ತದೆ. ಕಾರ್ಯಕ್ರಮ ನಡೆಯುವಾಗ ಕಾಶಿನಾಥ ರಾಠೋಡ ಮತ್ತು ಶೇಖರ ರಾಠೋಡಕುಮಾರ ರಾಠೋಡ ಇವರ ನಡುವೆ ಯಾವುದೊ ಒಂದು ವಿಷಯಕ್ಕಾಗಿ ಬಾಯಿ ತಕರಾರು ಮಾಡಿಕೊಂಡಿದ್ದು ದಿನಾಂಕ: 08-05-2014 ರಂದು ರಾತ್ರಿ 12:30 ಗಂಟೆಯ ಸುಮಾರಿಗೆ ನಾನು ಮತ್ತು ಕಾಶಿನಾಥ ರಾಠೋಡ ಇಬ್ಬರೂ ಕೂಡಿಕೊಂಡು ರಮಣಾದೇವಿಯ ಗುಡಿಯ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ಕುಮಾರ ರಾಠೋಡ ಇತನು ಬಂದು ನನಗೆ ನಿವು ಇಬ್ಬರು ಕೂಡಿಕೊಂಡು ನಮ್ಮ ವಿಷಯ ಮಾತನಾಡುತ್ತಿದ್ದಿರಿ ಅಂತಾ ವಿನಾಕಾರಣ ಜಗಳ ತಗೆಯಬೇಡ ಅಂತಾ ಹೇಳಿದಾಗ ಸೂಳೆ ಮಗನೆ ನನಗೆ ಎದುರು ಮಾತಾಡತಿಯಾ ಅಂತಾ ಬೈಯುತ್ತಿದ್ದಾಗ ಹಿಂದಿನಿಂದ ಶೇಖರ ಇತನು ಅಡಿಗೆಯ ಮಾಡುವ ಕಡಚಿಯಿಂದ ನನ್ನ ತೆಲೆಯ ಮೇಲೆ ಹೋಡೆದು ರಕ್ತಗಾಯ ಮಾಡಿರುತ್ತಾನೆ. ಕಾಲಿನಿಂದ ಒದಿಯುತ್ತಿದ್ದಾಗ ನನ್ನ ಪಕ್ಕದಲ್ಲಿದ ಕಾಶಿನಾಥ ಮತ್ತು ನೇಮು ರಾಠೋಡ, ಧರ್ಮು  ರಾಠೋಡ, ಬಾಬು ಚವ್ಹಾಣ ಇವರು ಹೋಡೆಯುವದನ್ನು ನೋಡಿ ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಲ್ಲಿನಾಥ ತಂದೆ ಅಣ್ಣಾರಾವ್ ಮುಚ್ಚಟ್ಟೆ ಸಾಃ ಗುಬ್ಬಿ ಕಾಲೋನಿ ಗುಲಬರ್ಗಾ ರವರು ಜೇವರ್ಗಿ ತಾಲ್ಲೂಕಿನ ಗುತ್ತಿಗೆ ಕಾಮಗಾರಿ ಮಾಡಿದ್ದು, ಸದರಿ ಕಾಮಾಗಾರಿಯ ಸೆಕ್ಷೆನ್ ಆಫೀಸರ್ ಶ್ರೀ ಶಿವಪ್ರಸಾದ ಅಣ್ಣಾರಾವ್ ಬಿರಾದಾರ ಇವರು ಕರ್ತವ್ಯ ನಿರ್ವಹಿಸತ್ತಿದ್ದರು. ಈ ಕುರಿತು ಶಿವಪ್ರಸಾದ ಬಿರಾದಾರ ಇವರು ನಾನು ನಿನಗೆ ಟೆಂಡರನಲ್ಲಿ ಹಾಗು ತುಂಡು ಗುತ್ತಿಗೆಯಲ್ಲಿ ಸಾಕಷ್ಟು ಸಹಾಯ ಮಾಡಿದ್ದೇನೆ. ಇದಕ್ಕಾಗಿ ನೀನು ನನಗೆ 50 ಲಕ್ಷ ರೂಪಾಯಿ ಕೊಡುವಂತೆ ಸುಮಾರು ಒಂದು ತಿಂಗಳಿಂದ ಫೂನ್ ಮೂಲಕ ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ಹಾಗು ದಿನಾಂಕಃ 05-05-2014 ರಂದು 9448354378 ಮೋಬೈಲ್ ದಿಂದ ಅಶೋಕ ಚೆಂಗಟೆ, ಶಿವಪ್ರಭು ಪಾಟಿಲ ಇವರೆ ಕರೆ ಮಾಡಿ 50 ಲಕ್ಷ ರೂಪಾಯಿ ಕೊಡದಿದ್ದರೆ ನಿನನ್ನು ಜೀವ ಸಹಿತ ಹೂಳಿ ಹಾಕುವುದಾಗಿ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ. ಹಾಗು ದಿನಾಂಕಃ 06-05-2014 ರಂದು ಮುಂಜಾನೆ 06:00 ಗಂಟೆಗೆ ಶಿವಪ್ರಸಾದ ಅಣ್ಣಾರಾವ್ ಬಿರಾದಾರ, ಮತ್ತು ಶಿವಪ್ರಭು ತಂದೆ ಲಿಂಗರಾಜ ಪಾಟೀಲ್, ಅಶೋಕ ಚೆಂಗಟಾ ಹಾಗು ಸಂಗಡಿಗರು ಸೇರಿ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ಮಗನೆ ಬಾರೋ ಹೊರಗೆ 50 ಲಕ್ಷ ಕೊಡುತ್ತಿಯೋ ಇಲ್ಲಾ, ನಿನ್ನ ಜೀವ ಬಿಡತಿಯೋ ಎಂದು ಅವಾಚ್ಯ ಶಬ್ದಗಳಿಂದ ಬೈಯಿದು, ನನ್ನ ಮನೆ ಬಾಗಿ ತೆಗೆಯುವಂತೆ ದಬಾಯಿಸಿದ್ದು, ನಾನು ಮನೆಯೊಳಗಿಂದಲೇ ನೋಡಲಾಗಿ ಶಿವಪ್ರಸಾದ ಬಿರಾದಾರ ಇತನು ಕಬ್ಬಿಣದ ರಾಡಿನಿಂದ ಮನೆ ಬಾಗಿಲಿಗೆ ಹೊಡೆಯುತ್ತಿದ್ದ, ಶಿವಪ್ರಭು ಪಾಟೀಲ ಇತನು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಹೊರಗಡೆ ಬಾರಲೇ ಮಗನೆ ಇವತ್ತು ನಿನಗೆ ಜೀವ ಸಹಿತ ಉಳಿಸುವುದಿಲ್ಲ ಅಂತಾ ಕೊಲೆ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀ ಬಾಳಪ್ಪ ತಂದೆ ನಾಗಪ್ಪ ಚಿಂಚೂರ ಸಾ: ಜವಳಗಾ [ಬಿ] ರವರು ಸುಮಾರು 8-9 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಅಳಿಯನಾದ ಶರಣಬಸಪ್ಪ ಈತನು ಈಗ ಸುಮಾರು 3 ತಿಂಗಳಿಂದಾ ಮಹಾಗಾಂವ ಗ್ರಾಮದ ಯಾವಳೋ ಒಬ್ಬಳು ಹೆಣ್ಣು ಮಗಳೊಂದಿಗೆ ಅನೈತಿಕ ಸಂಬಂದ ಇಟ್ಟುಕೊಂಡಿರುವ ಬಗ್ಗೆ ನನಗೆ ಮತ್ತು ನನ್ನ ಮಗನಾದ ಲವಕುಮಾಋನಿಗೆ ಗೊತ್ತಾದ ಮೇರೆಗೆ ನನ್ನಮಗ ಲವಕುಮಾರನು ನನ್ನ ಅಳಿಯನಾದ ಶರಣಬಸಪ್ಪಾ ಕೇಳಲು ಅವರ ಮನೆಗೆ ಮೊನ್ನೆ ದಿನಾಂಕ 06-05-2014 ರಂದು ಸಂಜೆ 7 ಗಂಟೆಯ ಸುಮಾರಿಗೆ ಹೋಗಿ ನನ್ನ ಅಳಿಯನಿಗೆ ಕೇಳಿದ್ದು ಅದಕ್ಕೆ ನನ್ನ ಅಳಿಯ ಹಾಗೂ ಮಗಳಾದ ಅನೀತಾ ಕೂಡಿ ಅವಳೊಂದಿಗೆ ತಕರಾರು ಮಾಡಿರುವ ಬಗ್ಗೆ ನನಗೆ ನನ್ನ ಮಗ ಮನೆಗೆ ಬಂದು ತಿಳಿಸಿದ ಮೇರೆಗೆ ನಾನು ನನ್ನ ಮಗ ಲವಕುಮಾರ ಹಾಗೂ ನನ್ನ ತಮ್ಮನ ಮಕ್ಕಳಾದ  ಅನೀಲಕುಮಾರ ಹಾಗೂ ಅಂಬರೀಶ ರವರುಗಳು ಮತ್ತು ನನ್ನ ಹೆಂಡತಿಯಾದ ಮಹಾದೇವಿ ಹಾಗೂ ಸೊಸೆಯಾದ ಗೀತಾ ರವರುಗಳು ಕೂಡಿ ನಮ್ಮ ಅಳಿಯನಿಗೆ ವಿಚಾರಿಸಬೇಕೆಂದು  ಅವರ ಮನೆಯ ಕಡೆಗೆ ಬಾಲೆಸಾಬ ದರ್ಗಾದ ಮುಂದಿನಿಂದಾ ಹೋಗುತ್ತಿರುವಾಗ ರಾತ್ರಿ 8ಗಂಟೆಗೆ ಸುಮಾರಿಗೆ 1. ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಬಸಗೊಂಡಿ 2. ರೇವಣಸಿದ್ದಪ್ಪ ತಂದೆ ನಿಂಗಪ್ಪ ಬಸಗೊಂಡಿ 3. ಭೀಮಶ್ಯಾ ತಂದೆ  ರೇವಣಸಿದ್ದಪ್ಪ ಬಸಗೊಂಡಿ 4.ಅಂಬಾರಾಯ ತಂದೆ ರೇವಣಸಿದ್ದಪ್ಪ  ಬಸಗೊಂಡಿ 5. ಅನೀಲ ತಂದೆ ಶಿವರಾಯ ಬಸಗೊಂಡಿ  6. ಸುನೀಲ ತಂದೆ ಶೀವರಾಯ ಬಸಗೊಂಡಿ 7. ಸುಗಲಬಾಯಿ ಗಂಡ ರೇವಣಸಿದ್ದಪ್ಪಾ ಬಸಗೊಂಡಿ 8. ಹೇಮಾವತಿ ಗಂಡ ಶಿವರಾಯ ಬಸಗೊಂಡಿ 9] ನಿಂಗಮ್ಮ ಗಂಡ ಸೋಮಣ್ಣ ಚಿಂಚೂರ ಮತ್ತು 10] ಗೀತಾ ಗಂಡ ಅಂಬಾರಾಯ ಬಸಗೊಂಡಿ ರವರುಗಳು ಕೂಡಿಕೊಂಡು ನಮಗೆ ಕೊಲೆ ಮಾಡುವ ಉದ್ದೇಶದಿಂದ ಅಕ್ರಮಕೊಟ ಕಟ್ಟಿಕೊಂಡು ಬಂದು ಬಾಲೆ ಸಾಭ ದರ್ಗಾದ ಮುಂದೆ ನಮ್ಮನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದಾ ಬೈಯುತ್ತಾ ನಮ್ಮೊಂದಿಗೆ ಜಗಳಾ ತೆಗೆದು ಶರಣಬಸಪ್ಪ ಈತನು ನನಗೆ ಏ ಮಗನೆ ನನ್ನ ವೈಯಕ್ತಿಕ ಜೀವನದ ಬಗ್ಗೆ ನಿನೇಕೆ ತಲೆ ಹಾಕುತ್ತಿದ್ದಿಯಾ ಅಂತಾ ಅನ್ನುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದಾ  ನನ್ನ ತಲೆಯ ಮೇಲೆ ಹೊಡೆಯುತ್ತಿರುವಾಗ ನಾನು ನನ್ನ ಎಡಗೈ ಅಡ್ಡ ತಂದಿದ್ದರಿಂದಾ ಎಟು ನನ್ನ ಎಡಗೈ ಮುಂಗೈಗೆ ಬಿದ್ದಿದ್ದರಿಂದಾ ರಕ್ತಗಾಯವಾಗಿರುತ್ತದೆ. ಆಗ ನನ್ನ ತಮ್ಮನ ಮಗನಾದ ಅನೀಲಕುಮಾರನು ಬಿಡಿಸಲು ಬಂದಾಗ ಶರಣಬಸಪ್ಪನು ಅದೆ. ಕಬ್ಬಿಣದ ರಾಡಿನಿಂದಾ ಅನೀಲನ ತಲೆಯ ಮೇಲೆ ಹೊಡೆದು ಗಾಐಪಡಿಸಿರುತ್ತಾನೆ. ಅಂಬರಾಯ ಈತನು ಹಲ್ಲಿನಿಂದಾ ಅಂಬರೀಶನ ಬಲಗೈ ಬೆರಳುಗಳಿಗೆ ಕಚ್ಚಿರುತ್ತಾನೆ. ರೇವಣಸಿದ್ದಪ್ಪಾ ಮತ್ತು ಭೀಮಶ್ಯಾ ಇವರುಗಳು ಲವಕುಮಾರನಿಗೆ  ನೆಲಕ್ಕೆ ಹಾಕಿ ಕಾಲಿನಿಂದಾ  ಅವನ ಬೆನ್ನ ಮೇಲೆ ಹೊಟ್ಟೆ ಮೇಲೆ ಒದ್ದಿರುತ್ತಾರೆ. ಅನೀಲ & ಸುನೀಲ ಇವರುಗಳು ನನಗೆ ನೆಲಕ್ಕೆ ಕೆಡವಿ  ಕಾಲಿನಿಂದ  ನನ್ನ ಎಡಗಾಲ ಮೊಳಕಾಲ ಮೇಲೆ ತೊಡೆಯ ಮೇಲೆ ಒದ್ದಿರುತ್ತಾರೆ. ಸುಗಲಾಬಾಯಿ ಮತ್ತು ಹೇಮವತಿ ಇವರುಗಳು ಕೈಯಿಂದಾ ನನ್ನ ಹೆಂಡತಿಗೆ ಹೊಡೆದು ಒಳ ಪಟ್ಟಮಾಡಿರುತ್ತಾರೆ. ಅಮಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಆನಂದ ತಂದೆ ಅಪ್ಪರಾವ ಇವರು ದಿನಾಂಕ: 08-05-2014 ರಂದು ರಾತ್ರಿ 8 ಗಂಟೆಯ ಸುಮಾರಿಗೆ ತನ್ನ ಮೋ/ಸೈಕಲ್ ನಂಕೆಎ 32 ಯು 1014 ನೆದ್ದರ ಮೇಲೆ ಹಿಂದೆ ಶರಣು ಈತನಿಗೆ ಕೂಡಿಸಿಕೊಂಡು ಎಸ್.ವಿ.ಪಿ.ಸರ್ಕಲ್ ದಿಂದ ಜಗತ ಸರ್ಕಲ್ ಕಡೆಗೆ ಹೋಗುವಾಗ ಎನ್.ಸಿ.ಸಿ. ಆಫೀಸ್ ಎದುರಿನ ರೋಡ ಮೇಲೆ ಎದುರಿನಿಂದ ಮೋ/ಸೈಕಲ್ ನಂಕೆಎ 32 ಕ್ಯೂ 6563 ಸಿ.ಟಿ. 100 ರ ಸವಾರ ಅರುಣಕುಮಾರ ಈತನು ತನ್ನ ಮೋ/ಸೈಕಲ್ ನ್ನು ರಾಂಗ ಸೈಡಿನಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಮತ್ತು ಶರಣು ಈತನಿಗೆ ಸಾದಾಗಾಯಗೊಳಿಸಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ದಪ್ಪ ತಂದೆ ಶರಣಪ್ಪಾ ಹೂಗಾರ ದಿನಾಂಕ 07-05-2014 ರಂದು ರಾತ್ರಿ 8 ಗಂಟೆ ಸುಮಾರಿಗೆ ರಾಷ್ಟ್ರಪತಿ ಸರ್ಕಲ ಹತ್ತಿರವಿರುವ ಟೀ ಪಾಯಿಂಟಗೆ  ಫಿರ್ಯಾದಿಯು ನಡೆದುಕೊಂಡು ಹೋಗಿ ಚಹಾ ಕುಡಿದು ವಾಪಸ್ಸ ಪನಿರ್ಚರ ಅಂಗಡಿಗೆ ನಡೆದುಕೊಂಡು ಹೋಗುವಾಗ ಆರ್.ಪಿ ಸರ್ಕಲ ಕಡೆಯಿಂದ  ಕಾರ ನಂಬರ ಕೆಎ-32 ಎಮ್-9936 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ವಿಜಯ ಮೋಹನ ಆಸ್ಪತ್ರೆಯ ಎದುರಿನ ರೋಡ ಮೇಲೆ ಫಿರ್ಯಾದಿಯ ಬಲಗಾಲಿನ ಮೇಲೆ ಕಾರ ಚಲಾಯಿಸಿಕೊಂಡು ಹೋಗಿದ್ದರಿಂದ ಬಲಗಾಲಿನ ಹಿಮ್ಮಡಿಯ ರಿಸ್ಟ ಹತ್ತಿರ ಭಾರಿಪೆಟ್ಟು ಮತ್ತು ತರಚಿದ ರಕ್ತಗಾಯ ಪಡಿಸಿ  ಕಾರ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                                                                                                         
ಮಾಹಾಗಾಂವ ಠಾಣೆ : ಶ್ರೀ ರಾಜಕುಮಾರ ತಂದೆ ಭೀಮರಾವ ಸಾ : ಕುರಿಕೋಟ ಇವರು ದಿನಾಂಕ 08-05-2014 ರಂದು ರಾತ್ರಿ 12 ಗಂಟೆ ಸುಮಾರಿಗೆ ಬಸ್ಸು ಕಾಯುತ್ತಾ ನಿಂತಾಗ ಆಳಂದ ಹೈದ್ರಾಬಾದ ಬಸ್ಸು  ಕೆಎ 32 ಎಫ 1921  ಬರಲು ಅದರಲ್ಲಿ ಏರಿ ಕುಳಿತೆನು. ನನ್ನಂತೆ ಬಸ್ಸಿನಲ್ಲಿ ಕೆಲವು ಜನ ಗಂಡು ಹೆಣ್ಣು ಪ್ರಯಾಣಿಕರು ಕುಳಿತಿದಿದ್ದರು. ನಾವು ಕುಳಿತ ಹೊರಟ ಬಸ್ಸು ಚಾಲಕ ಹೆಸರು ಕೇಳಿ ಗೊತ್ತಾದ  ಮಂಜುನಾಥ ತಂದೆ ಮಾರುತಿ ನಾಟೀಕರ ಆಳಂದ ಡಿಪೋ ಸಾ: ಸರಸಂಬಾ ಇತನು ಬಸ್ಸು ನಡೆಸುತ್ತಾ ರಾತ್ರಿ 12-45 ಗಂಟೆ ಸುಮಾರಿಗೆ ನಾವದಗಿ (ಬಿ) ಗ್ರಾಮದ ಹತ್ತಿರ ಇರುವ  ಸಣ್ಣ ಬ್ರೀಡ್ಜ ಹತ್ತಿರ ಹೊರಟಾಗ, ಆಗ ಗುಲಬರ್ಗಾ ಕಡೆಯಿಂದ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಅತಿವೇಗದಿಂದ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದವನೇ  ನಮ್ಮ ಬಸ್ಸಿನ  ಬಲಭಾಗಕ್ಕೆ ಡಿಕ್ಕಿ ಹೊಡೆದು ಬರಚುತ್ತಾ ಹೋಗಿ  ಸ್ವಲ್ಪ ಮುಂದೆ ಹೋಗಿ ಟಿಪ್ಪರ ನಿಲ್ಲಿಸಿದೆನು.  ಇದರಿಂದ ನನ್ನ ಕಾಲಿಗೆ ಒಳಪೆಟ್ಟಾಗಿರುತ್ತವೆ  ಬಸ್ಸು ಚಾಲಕನು ಸ್ಥಳದಲ್ಲಿ ಬಸ್ಸು ನಿಲ್ಲಿಸಿದೆನು. ಮತ್ತು ಆಗ ಬಸ್ಸಿನಿಂದ ಬಸ್ಸು ಚಾಲಕ ಮಂಜುನಾಥ ಮತ್ತು ಒಳಗಿದ್ದ ನಾನು ಮತ್ತು  ಪ್ಯಾಂಸೀಜರ ಎಲ್ಲಾ ಜನರು ಕೆಳೆಗೆ ಇಳಿದೇವು.  ಅಪಘಾತ ಪಡಿಸಿದ ಟಿಪ್ಪರ ನಂಬರ ನೋಡಲಾಗಿ ಎಂಹೆಚ 10 ಝಡ 277 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರಥಾಬಾದ ಠಾಣೆ : ಶ್ರೀ ಶಂಕರ  ತಂದೆ ಗುಂಡಪ್ಪಾ ಗಣಜಖೇಢ ಸಾಃ ಗುಂಜ ಬಬಲಾದ ತಾಃ ಆಳಂದ ಜಿಃ ಗುಲಬರ್ಗಾ  ರವರು  ಗುಲಬರ್ಗಾ ತಲೂಕಿನ ಕಲ್ಲಹಂಗರಗ  ಗ್ರಮದಲ್ಲಿ ನಮ್ಮ ತಾಯಿಯ ತಂಗಿ ಮಲ್ಲಮ್ಮ ಅಂತಾ ನಮ್ಮ ಚಿಕ್ಕಮ್ಮ ಇರುತ್ತಾಳೆ. ಅವರ ಮಗನಾದ ಮಲ್ಲಿಕಾರ್ಜುನ ಇವನು ಗುಲಬರ್ಗಾದ ಅಕ್ವಾಗಾರ್ಡ ಮತ್ತು ಅಕ್ಚಾಪ್ರೇಸ ನೀರಿನ ಫಿಲ್ಟರ ಕಂಪನಿಯಲ್ಲಿ ಸರ್ವಿಸ ಗಾರ್ಡ ಅಂತಾ ಕೆಲಸ ಮಾಡುತ್ತಾನೆ ಅವನು ದಿನಾಲೂ ಕಲ್ಲಹಂಗರಗಾ ಗ್ರಾಮದಿಂದ ಗುಲಬರ್ಗಾಕ್ಕೆ ತನ್ನ ಮೋಟಾರ ಸೈಕಲ ನಂ ಕೆಎ-32 ಇಸಿ-8049 ನೇದ್ದರ ಮೇಲೆ ಹೋಗಿ ಬಂದು ಮಾಡುತ್ತಿರುತ್ತಾನೆ. ಅವರ ಕಂಪನಿಯವರು ಆತನಿಗೆ ಎಲ್ಲಿಗೆ ಹೋಗಿ ವಟರ್ ಫಿಲ್ಟಟ ರಿಪೇರಿ ಮಾಡಿ ಬರಲು ತಿಳಿಸುತ್ತಾರೋ ಅದರಂತೆ ಆತನು ತನ್ನ ಮೋಟಾರ ಸೈಕಲ ಮೇಲೆ ಹೋಗಿ ಕೆಲಸ ಮಾಡಿಬರುತ್ತಿದ್ದನು. ದಿನಾಂಕ  06-05-2014 ರಂದು  ಮುಂಜಾನೆ ನನ್ನ ಕಾಸಗಿ ಕೆಲಸ ನಿಮಿತ್ಯ ಶಹಾಪೂರಕ್ಕೆ ಹೋಗಿ ತನ್ನ ಕೆಲಸ ಮುಗಿಸಿಕೊಂಡು ತನ್ನ  ಮೋಟಾರ ಸೈಕಲ ಮೇಲೆ ಮರಳಿ ಗುಲಬರ್ಗಾಕ್ಕೆ ಬರುತ್ತಿರುವಾಗಜೇವರ್ಗಿಯಲ್ಲಿ ನನ್ನ ಚಿಕ್ಕಮ್ಮನ ಮಗನದ ಮಲ್ಲಿಕಾರ್ಜುನ ಹೀರಾಪೂರಸಿ ಈತನು ಜೇವರ್ಗಿ ಯಲ್ಲಿ ಬೇಟ್ಟಿ ಆಗಿ ತನ್ನ ಕೆಲಸ ನಿಮಿತ್ಯ ಬಂದಿದ್ದಾಗ ನನಗೆ ತಿಳಿಸಿದನು. ನಂತರ  ನಾವಿಬ್ಬರೂ ನಮ್ಮ ನಮ್ಮ ಮೋಟಾರ ಸೈಕಲಗಳ  ಮೇಲೆ ಗುಲಬರ್ಗಾಕ್ಕೆ ಬರುತ್ತಿರುವಾಗ  ನನ್ನ ಮುಂದೆ ಸ್ವಲ್ಪ ದೂರದಲ್ಲಿ ಸದರಿ ಮಲ್ಲಿಕಾರ್ಜುನ ಮೋಟಾರ ಸೈಕಲ ಮೇಲೆ  ಹೋಗುತ್ತಿದ್ದನು ನಾನು ಅವನ ಹಿಂದೆ ಬರುತ್ತಿದ್ದೆ, ಹಸನಾಪೂರ ಕ್ರಾಸ ಹತ್ತಿರ ರಾತ್ರಿ 11.00 ಗಂಟೆಯ  ಸುಮರಿಗೆ ಬರುತ್ತಿರುವಾಗ ಹಸನಾಪೂರ ಕ್ರಾಸ ಹತ್ತಿರ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು  ರೋಡಿನ ಮೇಲೆ ಯಾವುದೇ ಮುನ್ಸೂಚನೆ ಇಲ್ಲದೇ ಇಂಡಿಕೇಟರ್ ಸಿಂಗ್ನಲ್ ಇಲ್ಲದೇ ಕತ್ತಲಲ್ಲಿ ನಿಲ್ಲಿಸಿದ್ದರಿಂದ ಮಲ್ಲಿಕಾರ್ಜನ ಇತನು ಸದರಿ ಲಾರಿಗೆ ಡಿಕ್ಕಿ ಪಡಿಸಿದ್ದರಿಂದ ನಾನು ಹೋಗಿ ನೋಡಲಾಗಿ ಸದರಿ ಮಲ್ಲಿಕಾರ್ಜುನ ಇತನಿಗೆ ಎಡಗಾಲಿನ ಹತ್ತಿರ ಭಾರಿ ರಕ್ತಗಾಯತಲೆಗೆ ಎಡಕಿವಿಯ ಹಿಂದೆ ಭಾರಿ ರಕ್ತಗಾಯವಾಗಿ ರಕ್ತ ಬರುತ್ತಿತ್ತು. ಆಗ ನಾನು ಸದರಿ ನಿಂತ ಲಾರಿಯ ನಂಬರ ನೋಡಲಾಗಿ ಲಾರಿ ನಂ. ಎಂ.ಹೆಚ್. 04 ಇ.ಎಲ್ 557 ನೇದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪರಿಚಿ ವ್ಯಕ್ತಿಯ ಶವ ದೊರೆತ ಪ್ರಕರಣ :
ರಟಕಲ ಠಾಣೆ : ಶ್ರೀ ಸೈದಪ್ಪ ತಂದೆ ಸಾಯಬಣ್ಣ ಯಾದವ ಸಾ||ಹುಲಸಗೂಡ ಇವರು ದಿನಾಂಕ 08-05-2014 ರಂದು ಬೆಳಗ್ಗೆ 06.00 ಗಂಟೆ ಸುಮಾರಿಗೆ ಮನೆಯಿಂದ ಖಾಸಗಿ ಕೆಲಸದ ನಿಮಿತ್ಯ ಗ್ರಾಮದಲ್ಲಿ ಹೋದಾಗ ನಮ್ಮ ಗ್ರಾಮದ ಸಿಮಾಂತರ ಗುಲಬರ್ಗಾ ಚಿಂಚೋಳಿ ರಸ್ತೆಯ ಪಕ್ಕದಲ್ಲಿರುವ ಜಾಹಿದಾ ಜಿವಣಗಿ ಇವರ ಹೊಲದ ಹಳ್ಳದ ದಂಡೆಗೆ ಯಾವುದೊ ಒಂದು ಶವ ಬಿದ್ದಿರುತ್ತದೆ ಅಂತ ಜನರು ಅಂದಾಡುವುದರಿಂದ ನನಗೆ ಗೊತ್ತಾಗಿ ನಾನು ಮತ್ತು ನಮ್ಮೂರ ಸಂತೋಷಕುಮಾರ ತಂದೆ ಅರ್ಜುನ ನಾಯಕೋಡಿ ಕೂಡಿ ಸದರಿ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಅಲ್ಲಿ ನಮ್ಮಂತೆ ಇತರೆ ಕೆಲ ಜನರು ದೂರದಿಂದಲೆ ಶವವನ್ನು ನೋಡುತ್ತಿದ್ದರು. ನಾವಿಬ್ಬರು ಸಹ ಸ್ವಲ್ಪ ಮುಂದೆ ಹೋಗಿ ನೋಡಲಾಗಿ ಸದರಿ ಶವ ಅಂದಾಜು  35 ರಿಂದ 40 ವರ್ಷದ ಗಂಡಸಿನ ಶವವಾಗಿದ್ದು ಬೊರಲಾಗಿ ಬಿದ್ದಿದ್ದು ಚರ್ಮ ಕೊಳೆತಿದ್ದು ಮೈಮೇಲೆ ಒಂದು ತಿಳಿ ನೀಲಿ ಬಣ್ಣದ ಪ್ಯಾಂಟು ಒಂದು ಬಿಳಿ ಬಣ್ಣದ ಚಕ್ಸ್ ಶರ್ಟಗಳಿದ್ದು ತಲೆಯ ಮೇಲಿನ ಕೂದಲುಗಳೆಲ್ಲ ಉದರಿ ತಲೆ ಬೋಳಾಗಿದ್ದು ಸದರಿ ಶವ ಸ್ಥಳದಲ್ಲಿ ಬಿದ್ದು ಸುಮಾರು ಒಂದು ವಾರ ಗತಿಸಿರಬಹುದು ಆದ್ದರಿಂದ ಶವ ಪೂರ್ತಿ ಕೊಳೆತು ಗುರುತು ಸಿಗದಂತಾಗಿರುತ್ತದೆ. ಸದರಿಯವನ ಸಾವಿನ ಬಗ್ಗೆ ಬಲವಾದ ಸಂಶಯವಿರುತ್ತದೆ.ಅಲ್ಲಿ ನೆರೆದಿದ್ದ ಜನರನ್ನು ವಿಚಾರಿಸಲಾಗಿ ಮೃತನಿಗೆ ಯಾರೊಬ್ಬರು ಗುರುತಿಸಿರುವುದಿಲ್ಲ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.