POLICE BHAVAN KALABURAGI

POLICE BHAVAN KALABURAGI

02 December 2014

Kalaburagi District Reported Crimes

ದ್ವೀಚಕ್ರ ವಾಹನ ಕಳವು ಮಾಡಿದ ಆರೋಪಿತರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 02-12-2014 ರಂದು ಬೆಳಗಿನ ಜಾವ 05:30 ಗಂಟೆ ಸುಮಾರಿಗೆ ಸ್ವತ್ತಿನ ಪ್ರಕರಣಗಳಲ್ಲಿ ಕಳ್ಳತನವಾದ ಮಾಲು ಆರೋಪಿತರ ಪತ್ತೆ ಕುರಿತು ಪಿ.ಎಸ್.ಐ. ಮತ್ತು ಸಿಬ್ಬಂದಿಯೊಂದಿಗೆ ಬೆಳಿಗ್ಗೆ 06:00 ಗಂಟೆ ಸುಮಾರಿಗೆ ಅಫಜಲಪೂರ-ಗುಲಬರ್ಗಾ ರೋಡಿಗೆ ಇರುವ ಮಾತೋಳಿ ಕ್ರಾಸ್ ಹತ್ತಿರ ಹೊದಾಗ ಅಲ್ಲಿ ಇಬ್ಬರು ವ್ಯಕ್ತಿಗಳು ಮೋಟರ ಸೈಕಲ ಸಮೇತ ರೊಡಿನ ಪಕ್ಕದಲ್ಲಿ ಸಂಶಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದರು. ಆಗ ನಾವು ಸದರಿಯವರ ಹತ್ತಿರ ಹೋಗುತ್ತಿದ್ದಾಗ, ಸದರಿ ವ್ಯಕ್ತಿಗಳು ನಮ್ಮ ಇಲಾಖಾ ವಾಹನವನ್ನು ನೋಡಿ ಮೋಟಾರ ಸೈಕಲ ಸ್ಥಳದಲ್ಲೆ ಬಿಟ್ಟು ಓಡಿ ಹೊಗುತ್ತಿದ್ದರು. ಆಗ ನಾನು ಮತ್ತು ಸಿಬ್ಬಂದಿಯವರು ಸದರಿಯವರನ್ನು ಬೆನ್ನಟ್ಟಿ ಹಿಡಿದು ಹೆಸರು ವಿಳಾಸ ವಿಚಾರಿಸಿ ಸದರಿಯವರ ವಶದಲ್ಲಿದ್ದ ಮೋಟಾರ ಸೈಕಲ ಬಗ್ಗೆ ಮತ್ತು ಅದರ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವರು ತಡವರಿಸುತ್ತಾ ಮೋ/ಸೈ ಗೆ ಯಾವುದೆ ದಾಖಲಾತಿ ಇರುವುದಿಲ್ಲ ಅಂತಾ ಅದಲು ಬದಲು ಹೇಳುತ್ತಿದ್ದರು, ಸದರಿ ಮೋಟಾರ ಸೈಕಲ ಪರಿಶೀಲಿಸಿ ನೋಡಲಾಗಿ ಹಿರೋ ಹೊಂಡಾ ಸ್ಪೆಂಡರ ಪ್ಲಸ್ ಕಂಪನಿಯದ ಇದ್ದು ಅದರ ನಂ ಕೆಎ-32 ಇಬಿ-2835 ಚೆಸ್ಸಿನಂMBLHA10EYCHA55534 ಇಂಜೆನ್ ನಂ :- HA10EFCHA49108 ಅಂತಾ ಇದ್ದು ಕಪ್ಪು ಮತ್ತು ನೀಲಿ ಬಣ್ಣದ್ದು ಇದ್ದು ಅಂದಾಜು 35,000/- ರೂ ಕಿಮ್ಮತ್ತಿನದು ಇರುತ್ತದೆ. ನಂತರ ಸದರಿಯವರನ್ನು ಮೋ/ಸೈ ಬಗ್ಗೆ ಕುಲಂಕುಶವಾಗಿ ವಿಚಾರಿಸಲಾಗಿ ಸದರಿ ಮೋ/ಸೈನ್ನು ಕಲಬುರಗಿ ನಗರದ ಸೂಪರ ಮಾರ್ಕೇಟದಲ್ಲಿ ಕಳ್ಳತನ ಮಾಡಿಕೊಂಡು ತಂದಿದ್ದು ಇರುತ್ತದೆ ಅಂತಾ ತಿಳಿಸಿದ್ದರ ಮೇರೆಗೆ ಸದರಿ ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಅಮರೇಶ ತಂದೆ ಶರಣಬಸಪ್ಪ ಶೀಲವಂತ ಸಾ|| ದುತ್ತರಗಾಂವ ಇವರು ದಿನಾಂಕ 02/12/2014 ರಂದು ಬೆಳಿಗ್ಗೆ 0600 ಗಂಟೆಗೆ ಶ್ರೀ ವೀರೆಶ್ವರ ದೇವರ ಪೂಜೆ ಮಾಡುವ ಸಲುವಾಗಿ ದೇವಸ್ಥಾನಕ್ಕೆ ಹೋದಾಗ ದೇವಸ್ಥಾನದ ಗರ್ಭ ಗುಡಿಯ ಬಾಗಿಲು ಕೀಲಿ ಮುರಿದು ಬಿದ್ದಿದ್ದು ಗುಡಿಯ ಒಳಗಡೆ ಹೋಗಿ ನೊಡಲಾಗಿ 01] ಈರಮ್ಮ ದೇವಿಯ ಎರಡು ಬೆಳ್ಳಿ ಮೂರ್ತಿ ಅಂದಾಜ 10 ತೊಲೆ ಅ.ಕಿ 2500/-, 02] ಅಮರೇಶ್ವರ ಮೂರ್ತಿ ಬೆಳ್ಳಿಯದ್ದು ದುಂಡು ಮುಖ 1 ಕೆ.ಜಿ ಅ.ಕಿ 25,000/-, 03] ಅಮರೇಶ್ವರ ಮೂರ್ತಿ ಬೆಳ್ಳಿಯ ಕಿರಿಟ 1/2 ಕೆ.ಜಿ ಅ.ಕಿ 12500/-, 04] ಎರಡು ಬೆಳ್ಳೀ ಪಾದರಕ್ಷೆಗಳು 1/2 ಕೆ.ಜಿ ಅ.ಕಿ 12500/-, 05] ನಂದಿ ಬಸವಣ್ಣನ ಬೆಳ್ಳಿ ಮೂರ್ತಿ 1 ಕೆ.ಜಿ ಅ.ಕಿ 25000/-, 06] ಅರ್ಧ ಕೆ.ಜಿಯ ಎರಡು ಬೆಳ್ಳಿ ಕಿರಿಟ ಹೀಗೆ ಒಟ್ಟು 01 ಕೆ.ಜಿ ಅ.ಕಿ 25000/-, 07] ಬೆಳ್ಳಿಯ ನಾಗರ ಮೂರ್ತಿ 5 ಕೆ.ಜಿ ಅ.ಕಿ 118575/-, 08] ಮಾವಿನಕಾಯಿ (ಲಿಂಗದಕಾಯಿ ) ಬೆಳ್ಳೀಯದ್ದು 40 ಗ್ರಾಂ ಅ.ಕಿ 2000/-, 09] ದೇವರ ಮೂರ್ತಿಯ ಕಿವಿಯ ಸಟ್ಟು ಬೆಳ್ಳಿಯದ್ದು 4 ಸಟ್ಟು ಒಟ್ಟು 16 ಗ್ರಾಂ ಅ.ಕಿ 800/-, 10] ಬೆಳ್ಳಿಯ ದೇವರ ಮೀಸೆ ಒಂದು 05 ಗ್ರಾಂ ಅ.ಕಿ 125/-, 11] ದೇವರ ಮೂರ್ತಿಯ ಹಣಿ ಪಟ್ಟಿ ಬೆಳ್ಳಿಯದ್ದು 4+4 = 8 ತೋಲೆ ಬೆಳ್ಳಿ ಅ.ಕಿ 4000/-, 12] ಬೆಳ್ಳಿಯ ಘತ್ರಿ 4 ತೊಲೆ ಅ.ಕಿ 2000/- ಹೀಗೆ ಒಟ್ಟು 9 ಕೆ.ಜಿ 281 ಗ್ರಾಂ ಬೆಳ್ಳಿಯ ಸಾಮಾನುಗಳು ಅದರ ಒಟ್ಟು ಕಿಮ್ಮತ್ತು 2,30,000/- ರೂಪಾಯಿಯ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ 01/12/2014 ರಂದು ರಾತ್ರಿ 1130 ಗಂಟೆಯಿಂದ ದಿನಾಂಕ 02/12/2014 ರಂದು ಬೆಳಿಗ್ಗೆ 0600 ಗಂಟೆಯ ಮಧ್ಯದ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಂವ ಠಾಣೆ : ಶ್ರೀ ಅನೀಲಕುಮಾರ ತಂದೆ ಮುರಗಯ್ಯಾ ಕೊಟ್ಟರಗಿ ಸಾ: ಕೊಟ್ಟರಗಿ ತಾ: ಆಳಂದ ಜಿ: ಗುಲಬರ್ಗಾ ಹಾ:ವ: ಪ್ಲಾಟ ನಂ.18 ಶಾಂತ ನಿಲಯ ಜಿ.ಆರ್ ನಗರ ಕಲಬುರಗಿ ಇವರು ದಿನಾಂಕ:26/11/2014 ರಂದು ಬಬಲಾದ (ಐಕೆ) ಗ್ರಾಮದಲ್ಲಿ ಬಬಲಾದ ಮುತ್ಯಾ ಇವರ ಪುಣ್ಯತಿಥಿ ದರ್ಶನ ಮಾಡಿಕೊಂಡು ಬರಲು ನಮ್ಮ ಹೊಂಡಾ ಆಕ್ಟಿವ್ ನಂ. ಕೆಎ:32/9109 ನೇದ್ದರ ಮೇಲೆ ಸಾಯಂಕಾಲ 6-15 ಗಂಟೆಗೆ, ನಾನು ಮತ್ತು ನನ್ನ ತಂದೆಯವರು ಕೂಡಿ ಮನೆಯಿಂದ ಹೊರಟು ಕಲಬುರಗಿ-ಹುಮನಾಬಾದ ರೋಡಿನ ಸಿರಗಾರಪುರ ಕ್ರಾಸಿನ ಹತ್ತಿರ ಸಾಯಂಕಾಲ 7-00 ಗಂಟೆಗೆ ನಮ್ಮ ಹೊಂಡಾ ಆಕ್ಟಿವ್ ವಾಹನ ನಿಲ್ಲಿಸಿ, ಅಂಬಾಭವಾನಿ ದೇವಿ ದರ್ಶನ ಮಾಡಿ ಮರಳಿ ನಮ್ಮ ಗಾಡಿಯ ಹತ್ತಿರ ಬಂದು ನಮ್ಮ ತಂದೆಗೆ ಗಾಡಿ ಹತ್ತಿರ ನಿಲ್ಲಿಸಿ, ನಾನು, ಸ್ವಲ್ಪ ದೂರ ಹೋಗಿ ಮೂತ್ರ ವಿರ್ಸಜನೆ ಮಾಡಿ, ಬರುತ್ತಿದ್ದಾಗ ಅಂದಾಜು 7-15 ಪಿಎಂಕ್ಕೆ ಗುಲಬರ್ಗಾ ಕಡೆಯಿಂದ ಮೋ.ಸೈಕಲ ನಂ. ಕೆಎ:32/ಈಜಿ;3576 ನೇದ್ದರ ಸವಾರನು ತನ್ನ ಮೋ.ಸೈಕಲನ್ನು ಅತೀವೇಗದಿಂದ ನಡೆಯಿಸಿಕೊಂಡು ಬಂದವನೇ ಜೋರಾಗಿ, ನಮ್ಮ ತಂದೆಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ, ನಮ್ಮ ತಂದೆಯವರು ಚಿರುತ್ತಾ ಕೆಳಗೆ ಬಿದ್ದು ಬೇಹುಷ ಆದರು. ನಾನು ಓಡುತ್ತಾ ಬಂದು ನೋಡಲಾಗಿ, ನಮ್ಮ ತಂದೆಯ ತಲೆಯ ಎಡಬದಿಗೆ ರಕ್ತಗಾಯ ಮತ್ತು ಭಾರಿ ಒಳಪೆಟ್ಟಾಗಿ ಬಿದ್ದಿದ್ದರು. ಅಪಘಾತ ಪಡಿಸಿದ ಮೋ.ಸೈಕಲ ಸವಾರನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ತಂದೆಯವರನ್ನು  ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ವಾಹನ ಅಪಘಾತದಿಂದ ದುಖಾಃಪತ ಹೊಂದಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾದ ತನ್ನ ತಂದೆ ಮುರಗಪ್ಪಾ @ ಮುರಗಯ್ಯಾ ಇವರು ಉಪಚಾರದಲ್ಲಿ ಗುಣಮುಖ ಹೊಂದದೆ ಅದೇ ಬಾದೆಯಿಂದ ಇಂದು ದಿನಾಂಕ: 30/11/2014 ರಂದು 2-15 ಎಎಂಕ್ಕೆ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಮಳಖೇಡ ಠಾಣೆ : ಶ್ರೀ ಲಕ್ಷ್ಮಣ ತಂದೆ ಭೀಮಣ್ಣಾ ಜಮಾದಾರ ಸಾ: ಹಂಗನಳ್ಳಿ ಇವರು ದಿನಾಂಕ  30-11-2014 ರಂದು ಶಿವು ಗುಂಡಳ್ಳಿ ಇವರ ಮನೆಯಲ್ಲಿ ಲಗ್ನದ ಕಾರ್ಯಕ್ರಮದಲ್ಲಿ ಡಿ.ಜೆ ಹಚ್ಚಿ ಮೇರವಣಿಗೆ ಮಾಡುತ್ತಿದ್ದರು ಎಲ್ಲರೂ ಅಲ್ಲಿ ಡ್ಯಾನ್ಸ ಮಡುತ್ತಿರುವಾಗ ನಾನು ಮತ್ತು ನಮ್ಮ ಜಾತಿಯ ಕಾಶಪ್ಪ ತಂದೆ ಭೀಮಣ್ಣ ನಾಯಿಕೊಡಿ, ಲಕ್ಷ್ಮಣ ತಂದೆ ಮೀನಪ್ಪ ಬೇನೂರ ಎಲ್ಲರೂ ಕೂಡಿ ರಾತ್ರಿ 09:00 ಗಮಟೆಗೆ ನಮ್ಮೂರ ದೇವಮ್ಮ ಗುಡಿಯ ಹತ್ತಿರ ರೋಡಿನ ಮೇಲೆ ಡ್ಯಾನ್ಸ ನೊಡಲು ಹೋದಾಗ ಅಲ್ಲಿದ್ದವರು ಅಂದರೆ ಮದುವೆ ಕಾರ್ಯಕ್ರಮದಲ್ಲಿ ಇದ್ದವರು ನನಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಎಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದವರೇ ಈ ಬೇಡರ ಸುಳೆ ಮಕ್ಕಳಿಗೆ ಬಹಳ ಸೋಕ್ಕು ಬಂದಿದೆ. ಈ ರಂಡಿ ಮಕ್ಕಳಿಗೆ ಬಿಡಬ್ಯಾಡರಿ ಅಂತಾ ಜಾತಿ ಏತ್ತಿ ಬೈದು ನನಗೆ ಸಿದ್ದಯ್ಯಾ ಸ್ವಾಮಿ ಸಂಜು ಮರಗೋಳ ಈಶಪ್ಪ ಮರಗೋಳ ಇವರು ನನಗೆ ತೆಕ್ಕೆಯಲ್ಲಿ ಹಿಡಿದುಕೊಂಡರು, ಬಸ್ಸುಗೌಡ ಶರಣಪ್ಪ ಇವರುಗಳು ಬಡಿಗೆಯಿಂದ ನನ್ನ ಬಲ ಮೊಳಕೈಗೆ ಟೊಂಕಕ್ಕೆ ಹೊಡೆದು ಗುಪ್ತ ಪೆಟ್ಟು ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.