POLICE BHAVAN KALABURAGI

POLICE BHAVAN KALABURAGI

29 October 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ
: ಶ್ರೀಮತಿ ಮರೆಮ್ಮ ಗಂಡ ಸಣ್ಣಮರೆಪ್ಪ ಪೋತರಾಜ ಸಾ: 8 ನೇ ಕ್ರಾಸ ತಾರಫೈಲ್ ಗುಲಬರ್ಗಾರವರು ನಾನು ನಮ್ಮ ಮನೆಯ ಮುಂದಿನ ಮರಗಮ್ಮ ದೇವಸ್ಥಾನದ ಹತ್ತಿರದಿಂದ ನಡೆದುಕೊಂಡು ಹೋಗುತ್ತಿದ್ದಾಗ ಪೋಚಪ್ಪ ತಂದೆ ಮರೆಯಪ್ಪ, ಮರೆಪ್ಪ ತಂದೆ ಪೋಷಪ್ಪ, ಮುತ್ತಮ್ಮ ಗಂಡ ಪೋಚಪ್ಪ, ನಾಗಮ್ಮ ಗಂಡ ಸಾಮಿ ಅಮಲಪ್ಪ ತಂದೆ ಮರೆಯಪ್ಪ ಯಲ್ಲಮ್ಮ ತಂದೆ ಅಮಲಪ್ಪ, ದೊಡ್ಡ ನಾಗಮ್ಮ ಗಂಡ ಅಮಲಪ್ಪ, ಹಾಗೂ ಸೌರಮ್ಮ ಗಂಡ ಬಿಚ್ಚಪ್ಪ ಇವರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನನ್ನ ಗಂಡ ಮತ್ತು ನನ್ನ ಮಗ ಯಾಕೇ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಪೋಚಪ್ಪ ತಂದೆ ಮರೆಪ್ಪ ಹಾಗೂ ಮತ್ತಮ್ಮ ಇವರು ನನಗೆ ತಲೆಗೆ ಬೆನ್ನಿಗೆ, ಬಡಿಗೆಯಿಂದ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿದರು. ಬಿಡಿಸಲು ಬಂದ ನನ್ನ ಗಂಡನಿಗೆ ಮತ್ತು ಮಗನಿಗೂ ಸಹ ಬೆನ್ನಿನ ಮೇಲೆ, ತಲೆಯ ಮೇಲೆ ಬಡಿಗೆಯಿಂದ ಹೊಡೆದು ಅಲ್ಲದೇ ಕೈಯಿಂದ ಕಲ್ಲಿನಿಂದ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 191/2011 ಕಲಂ :143, 147, 354, 323, 324, 506, ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ
: ಶ್ರೀಮತಿ ನಾಗಮ್ಮ ಗಂಡ ಸಾಮಿ ಪೋತರಾಜ ಸಾ: 8 ನೇ ಕ್ರಾಸ ತಾರಫೈಲ ಗುಲಬರ್ಗಾ ರವರು ನಾನು ನಮ್ಮ ಮನೆಯ ಮುಂದಿನ ಮರಗಮ್ಮನ ಗುಡಿ ಮುಂದಿನ ಜಾಗೆಯಲ್ಲಿ ನಿಂತಾಗ ದುರ್ಗಪ್ಪ ತಂದೆ ಯರ್ರಪ್ಪ ಪೊತರಾಜ ಸಂಗಡ ಇನ್ನೂ 4 ಜನರು ಕೂಡಿ ಬಂದವರೇ ಅವಾಚ್ಯವಾಗಿ ಬೈದು ಕೂದಲು ಹಿಡಿದು ಜಗ್ಗಾಡಿದ್ದು ಆಗ ಅಮಲಪ್ಪ ತಂದೆ ಮರೆಪ್ಪ ನನಗೆ ಮತ್ತು ನನ್ನ ಗಂಡನಿಗೆ ಮತ್ತು ಪೋಚಪ್ಪ ತಂದೆ ಮರೆಪ್ಪ ಇವರು ಬಿಡಿಸಲು ಬಂದಾಗ ಇವರಿಗೂ ಸಹ ಕೈಯಿಂದ, ಬಡಿಗೆಯಿಂದ, ಮತ್ತು ಕಲ್ಲಿನಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 192/2011 ಕಲಂ :143, 147, 504, 354, 323, 506, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮನುಷ್ಯ ಕಾಣೆಯಾದ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ದಿನಾಂಕ 22/10/11 ರಂದು ಮದ್ಯಾನ್ನ ಸುಮಾರಿಗೆ ಶ್ರೀ ಭೀಮರಾವ ತಂದೆ ಸಿದ್ರಾಮ ಹಿಟಕರ್ ವ:40 ಜಾ: ವಡ್ಡರ ಉ:ಖಣಿ ಕೆಲಸ ಸಾ: ಮದಕಲ್ ತಾ:ಸೇಡಂ ಮನೆಯಿಂದ ಮದಗಲ್ ಗ್ರಾಮಕ್ಕೆ ಹೊಗುತ್ತೇನೆ ಅಂತಾ ಶಹಾಬಾದದ ಮನೆಯಿಂದ ಹೊದವನು ಮದಗಲ್ ಗ್ರಾಮಕ್ಕೆ ಹೋಗದೇ ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿರುತ್ತಾನೆ ಅಂತಾ ಶ್ರೀ ಬಾಬು ತಂದೆ ಸಿದ್ರಾಮ ಹಿಟಕರ್ ಸಾ:ಶಿಬರಕಟ್ಟಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 160/11 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಸಾರ್ವಜನಿಕ ಶಾಂತತೆ ಭಂಗ ಉಂಟು ಮಾಡಿದ ಬಗ್ಗೆ :

ಚೌಕ ಪೊಲೀಸ್ ಠಾಣೆ : ಪಾಪುಲರ ಪ್ರಂಟ ಆಫ ಇಂಡಿಯಾ ಸಂಘಟನೆಯ ಗುಲಬರ್ಗಾ ಜಿಲ್ಲಾ ಅಧ್ಯಕ್ಷರಾದ ನಾಸೀರ ಹುಸೇನ ರವರ ನೇತೃತ್ವದಲ್ಲಿ 100-150 ಜನರು ಕೂಡಿಕೊಂಡು ಇಲಾಖೆಯ ಯಾವುದೇ ಪೂರ್ವಾನುಮತಿ ಇಲ್ಲದೆ ಬಸ್ ಮತ್ತು ಕ್ರೂಷರ ಜೀಪ ತೆಗೆದುಕೊಂಡು ಬಹುಮನಿ ಕೋಟೆಯ ಮುಖ್ಯ ಆವರಣದಲ್ಲಿ ಅಕ್ರಮ ಕೂಟ ರಚಿಸಿಕೊಂಡು ಅತಿಕ್ರಮಣ ಪ್ರವೇಶ ಮಾಡಿ ಜಮಾಯಿಸಿ, ರಸ್ತೆಯಿಂದ ಹೋಗಿ ಬರುವ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತಡೆದು ಅಡ್ಡಿ ಪಡಿಸಿರುತ್ತಾರೆ ಅಂತಾ ಶ್ರೀ ಸಂಗಣ್ಣ ತಂದೆ ಭಿಮಾಶಂಕರ ಕಣ್ಣಿ ಸಾಃ ಭಾರತ ಪುರಾತತ್ವ ಇಲಾಖೆ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 224/2011 ಕಲಂ 143,147,447,283,341,149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: