ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಮಹ್ಮದ  ನಿಜಾಮೋದ್ದಿನ  ತಂದೆ ಮಹ್ಮದ ಕರಿಮೋದ್ದಿನ   ಸಾ: ಮುಸ್ಲೀಂ ಚೌಕ
ಗುಲಬರ್ಗಾರವರು ನನ್ನ ಸಂಬಂಧಿಯಾದ ಮಹಮದ ರಯಾನ ತಂದೆ ಸಲೀಮ ರವರು ಮತ್ತು ರಿಜ್ವಾನ ಖಾನ ರವರು ದಿನಾಂಕ:23-04-2012
ರಂದು  ರಾತ್ರಿ  10=30 ಗಂಟೆಗೆ ಇಬ್ಬರು ಕೂಡಿಕೊಂಡು ಕಣ್ಣಿ ಮಾರ್ಕೇಟ
ಹತ್ತಿರ ವಾಕಿಂಗ ಮಾಡುತ್ತಾ  ಎಡಗಡೆಯಿಂದ ಬರುತ್ತಿದ್ದಾಗ  ಮೋಟಾರ ಸೈಕಲ್
ನಂ:ಕೆಎ 33 ಇ 5544 ನೇದ್ದರ ಸವಾರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ರಯಾನ ಈತನಿಗೆ ಡಿಕ್ಕಿ ಪಡಿಸಿ  ಭಾರಿಗಾಯ ಮತ್ತು ಗುಪ್ತಗೊಳಿಸಿ ತನ್ನ  ಮೋಟಾರ ಸೈಕಲ ಸಮೇತ
ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ 
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:50/2012  ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ. 
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಅನ್ನಪೂರ್ಣ ಗಂಡ ಪ್ರಮೋದಕುಮಾರ ರಾಠೋಡ ಸಾ||
ವಿಶಾಲ ನಗರ ತಾರಪೈಲ್ ಗುಲಬರ್ಗಾ ರವರು ನನ್ನ ಮಗನಾದ ಸಾಗರ  ತಂದೆ  ಪ್ರಮೋದಕುಮಾರ ರಾಠೋಡ   ವ:16  ವರ್ಷ ಉ: ವಿಧ್ಯಾರ್ಥಿ ಇತನು ದಿನಾಂಕ:
21-04-2012 ರಂದು ಸಾಯಂಕಾಲ 5 ಪಿ.ಎಮ್.ಕ್ಕೆ ಮನೆಗೆ ಬರುವ ಕುರಿತು ಡಿಪೋ ನಂ: 01 ನೇದ್ದರ
ಎದುರಿನ ಬಸ್ ನಿಲ್ದಾಣ ಹತ್ತಿರ ಅಟೋರಿಕ್ಷಾ ಕ್ಕೆ ಹೋಗಲು ಕಾಯುತ್ತಾ ನಿಂತಿರುವಾಗ  ಅಟೋರೀಕ್ಷಾ ನಂ:ಕೆಎ
32- 7119 ರ ಚಾಲಕನು  ಎಸ್.ವಿ.ಪಿ.ಸರ್ಕಲ್ ಕಡೆಯಿಂದ  ಅತಿವೇಗವಾಗಿ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಂತ ನನ್ನ ಮಗನಿಗೆ ಡಿಕ್ಕಿ ಪಡಿಸಿ  ಭಾರಿಗಾಯ ಅಟೋರಿಕ್ಷಾ  ಸಮೇತ ಚಾಲಕ ಓಡಿ
ಹೋಗಿರುತ್ತಾನೆ ಅಂತಾ  ದೂರು ಸಲ್ಲಿಸಿದ ಸಾರಾಂಶ
ಮೇಲಿಂದ ಠಾಣೆ ಗುನ್ನೆ ನಂ:51/2012  ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ. 
ಕೊಲೆ
ಪ್ರಕರಣ:
ಗ್ರಾಮೀಣ
ಪೊಲೀಸ ಠಾಣೆ :ಶ್ರೀಮತಿ  ಅನ್ನಪೂರ್ಣ @ ಅರುಣಾ  ಗಂಡ ಅಡವಯ್ಯಾ ಮಠಪತಿ ಸಾ||ತಾವರಗೇರಾ ತಾ|| ಜಿ||ಗುಲಬರ್ಗಾರವರು
ನಾನು ಮತ್ತು ನನ್ನ ಮಗಳು ನಮ್ಮ ಗ್ರಾಮದ ಲಿಂಬಾಜಿ ದಾದಾ ಇವರು  ಮಾಹಾಂತಯ್ಯಾ
ಸ್ವಾಮಿ ಹೊಲದಲ್ಲಿ ಬಂದಾರಿ ಸಮೀಪ  ಹೋಗಿ ನೋಡಲು  ಆತನು ನನ್ನ ಗಂಡನಾಗಿದ್ದು, ನನ್ನ ಗಂಡನನ್ನು ಯಾರೋ 3-4
ಜನರು ಸೇರಿಕೊಂಡು ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿ ಮುಖದ ತುಂಬೆಲ್ಲಾ  ಮಣ್ಣು ಹಾಕಿರುತ್ತಾರೆ. ಈ ಕೊಲೆಯು ದಿನಾಂಕ.
23-4-2012 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ. 24-4-2012 ರಂದು 6-00 ಎ.ಎಂ. ಮದ್ಯದ ಅವಧಿಯಲ್ಲಿ
ಜರುಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ  ಗುನ್ನೆ ನಂ: 127/2012 ಕಲಂ  302 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
ಹಲ್ಲೆ
ಪ್ರಕರಣ:
ಗ್ರಾಮೀಣ
ಪೊಲೀಸ ಠಾಣೆ:ಶ್ರೀ ಮೌಲಪಟೇಲ ತಂದೆ ಬಾವಾಪಟೇಲ ಸಾ||ಹೀರಾಪೂರ ತಾ: ಗುಲಬರ್ಗಾರವರು ನಮ್ಮ ಮನೆಗೆ ದಿನಾಂಕ:
24/4/2012 ರಂದು ಮುಂಜಾನೆ ನಮ್ಮ ಮನೆಗೆ ಮಹೇಬೂಬಪಟೇಲ ತಂದೆ ಸೈಯ್ಯದ ಪಟೇಲ ಇನ್ನೂ 5 ಜನರು ಸಾ: ಹೀರಾಪೂರ
ರವರು  ಬಂದು ನಮ್ಮ ಜಾಗೆಯಲ್ಲಿ ಗೇಟ ಕಟ್ಟುವದಕ್ಕೆ
ತಕರಾರು ಮಾಡುತ್ತೀರಿ ಅಂತಾ ಅವ್ಯಾಚ್ಚವಾಗಿ ಬೈದು ಬಡಿಗೆಯಿಂದ ಹೊಡೆ ಮಾಡಿ ಗುಪ್ತಗಾಯ ಮಾಡಿರುತ್ತಾರೆ
ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 128/2012 ಕಲಂ 143, 147 148 504 323 324 341 506 ಸಂ/ 149 ಐಪಿಸಿ
ಪ್ರಕಾರ  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
ಹಲ್ಲೆ
ಪ್ರಕರಣ:
ಗ್ರಾಮೀಣ
ಪೊಲೀಸ ಠಾಣೆ:ಶ್ರೀಮತಿ ಆರೀಪ ಬೇಗಂ  ಗಂಡ ಸೈಯದ ಅಮ್ಜದ
ಪಟೇಲ ಬಿದ್ದಾಪೂರ ಪಟೇಲ  ಸಾ: ಹೀರಾಪೂರ ತಾ:
ಗುಲಬರ್ಗಾರವರು ನಮ್ಮ ಮನೆಯ ಗೋಡೆ ಕಟ್ಟುತ್ತಿದ್ದಾಗ ಮೌಲಾಲಿ ತಂದೆ  ಬಾವಪಟೇಲ ಇನ್ನೂ 6 ಜನರು ಸಾ: ಹೀರಾಪೂರ ರವರು ಗೇಟ
ಕೂಡಿಸಬೇಡಿರಿ ಅಂತಾ  ತಕರಾರು ಮಾಡಿ
ಅವ್ಯಾಚ್ಚವಾಗಿ ಬೈದು ನಮ್ಮ ಅತ್ತೆಗೆ ಹೊಡೆಯುತ್ತಿದ್ದಾಗ ಬಿಡಿಸಲು ಹೋದ ಕುತ್ತಿಗೆ ಹಿಡಿದು ಹೊಡೆ
ಬಡೆ ಮಾಡಿ ಗುಪ್ತಗಾಯ ಮಾಡಿರುತ್ತಾರೆ ಮತ್ತು ತಕರಾರು ಮಾಡುತ್ತಿದ್ದಾಗ 13 ಗ್ರಾಂ  ಬಂಗಾರದ ಮಂಗಳ ಸೂತ್ರ ಕಳೆದು ಹೋಗಿರುತ್ತದೆ ಅಂತಾ  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 129/2012 ಕಲಂ 143, 147 323 
504 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.  
 
 
 
 
No comments:
Post a Comment