POLICE BHAVAN KALABURAGI

POLICE BHAVAN KALABURAGI

19 May 2014

Gulbarga Dist Reported Crimes

ಪತ್ರಿಕಾ ಪ್ರಕಟಣೆ
ಕುಖ್ಯಾತ ೫ ಜನ ರೌಡಿಗಳ ಮೇಲೆ ಗುಲಬರ್ಗಾ ಪೊಲೀಸರ ಕಾರ್ಯಾಚರಣೆ
ಗುಲಬರ್ಗಾ ಜಿಲ್ಲೆಯ ೫ ಜನ ಕುಖ್ಯಾತ ರೌಡಿಗಳ ಮೇಲೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಮಾನ್ಯ ಜಿಲ್ಲಾಧಿಕಾರಿಗಳು ಗುಲಬರ್ಗಾ ರವರು ಆದೇಶಿಸಿರುತ್ತಾರೆ.
ಗುಲಬರ್ಗಾ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಗುಲಬರ್ಗಾ ಜಿಲ್ಲೆಯಲ್ಲಿ ಅಶಾಂತಿ, ಭಯದ ವಾತಾವರಣವುಂಟು ಮಾಡುತ್ತಿದ್ದು, ಹಾಗು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಂತಹ ಕೃತ್ಯದಲ್ಲಿ ಭಾಗಿಯಾಗಿರುವ ಐವರು ಕುಖ್ಯಾತ ರೌಡಿ ಶೀಟದಾರರ ಮೇಲೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಮಾನ್ಯ ಜಿಲ್ಲಾಧಿಕಾರಿಗಳು ಗುಲಬರ್ಗಾ ರವರು ಆದೇಶಿಸಿರುತ್ತಾರೆ.

1) ವಿಶಾಲ ತಂದೆ ಸುಭಾಷ @ ಸುಭಾಶ್ಚಂದ್ರ ನವರಂಗ್ ವ|| ೩೧, ಸಾ|| ಮನೆ ನಂ ೨-೬೦೪ ಎಸ.ಟಿ/ಬಿ.ಟಿ ಕ್ರಾಸ್ ಸೇಡಂ ರೋಡ ಗುಲಬರ್ಗಾ,
2) ಪ್ರಸಾದ @ ಲಾಲ್ಯಾ @ ಕೆಂಪ್ಯಾ ತಂದೆ  ಮಲ್ಲಿಕಾರ್ಜುನ ಅಳಂದಕರ್ ವ|| ೨೧, ಸಾ|| ಡೊಹರ ಗಲ್ಲಿ ಸುಂದರ ನಗರ ಗುಲಬರ್ಗಾ,
3) ಸಂಜೀವ @ ಬಾಂಬೆ ಸಂಜ್ಯಾ ತಂದೆ ಪರಶುರಾಮ ಹೋಳಕರ್ ವ|| ೩೨, ಸಾ|| ವಿಜಯ ನಗರ ಬ್ರಹ್ಮಪೂರ ಗುಲಬರ್ಗಾ,
4)  ಸತೀಶ @ ಸಂಗಮ್ ಸತೀಶ @ ಸಂಗಮ್ ಸತ್ಯಾ ತಂದೆ ವೆಂಕಟಸ್ವಾಮಿ ವ|| ೩೦,|| ಬಟ್ಟೆ ವ್ಯಾಪಾರ, ಸಾ|| ಯಾಕೂಬ ಮನಿಯಾರ ಚಾಳ, ಎಲ್.ಐ.ಸಿ ಆಫೀಸ್ ಎದುರುಗಡೆ ಗುಲಬರ್ಗಾ
5) ಮಲ್ಲಿಕಾರ್ಜುನ ತಂದೆ ಈಶ್ವರಪ್ಪ ನಾಟಿಕಾರ್ ವ|| ೪೫, ಸಾ|| ಹೊರಟೂರು ತಾ|| ಶಹಾಪೂರ ಜಿಲ್ಲಾ ಯಾದಗಿರಿ ಹಾ|||| ಅಂಬೇಡ್ಕರ್ ಕಾಲೋನಿ ವಾಡಿ, ತಾ|| ಚಿತ್ತಾಪೂರ, ಜಿ|| ಗುಲಬರ್ಗಾ ಈ ೫ ಜನ ಆರೋಪಿತರನ್ನು ೩ ತಿಂಗಳುಗಳ ಕಾಲಾವಧಿವರೆಗೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಗುಲಬರ್ಗಾರವರು ಆದೇಶಿಸಿದ್ದು, ಗುಲಬರ್ಗಾಜಿಲ್ಲೆ ಪೊಲೀಸ್ ನವರು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ೫ ಜನರ ಆರೋಪಿತರಿಗೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ  ಬೆಳಗಾಂವ, ಗುಲಬರ್ಗಾ, ಬಿಜಾಪೂರ, ಬಳ್ಳಾರಿ ಕೇಂದ್ರ ಕಾರಾಗೃಹಗಳಿಗೆ ರವಾನಿಸಲಾಗಿರುತ್ತದೆ.

No comments: