POLICE BHAVAN KALABURAGI

POLICE BHAVAN KALABURAGI

04 July 2014

Gulbarga District Reported Crimes

ಕೊಲೆ ಪ್ರಕರಣ :
ವಾಡಿ ಠಾಣೆ : ದಿನಾಂಕ 04-07-2014 ರಂದು ರಾತ್ರಿ ಮೃತ ಶಾರುಬಾಯಿ ಗಂಡ ಮಹಾದೇವಸಿಂಗ ರಾಠೋಡ ಸಾ|| ಬಿಯಾಬಾನಿ ಏರಿಯಾ ವಾಡಿ ಇವಳು ತನ್ನ ಮಕ್ಕಳಾದ ಪ್ರೀತಮಸಿಂಗ್ ವ|| 11 ವರ್ಷ, ಸೂರಜ ವ|| 9 ವರ್ಷ ಮತ್ತು ಪೂಜಾ ವ|| 7 ವರ್ಷ ಇವರೆಲ್ಲರೂ ಕೂಡಿಕೊಂಡು ಊಟಮಾಡಿ ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ 12 ಗಂಟೆ ಸುಮಾರು ಮಹಾದೇವಸಿಂಗ ಈತನು ಹೊರಗಡೆಯಿಂದ ಮದ್ಯಪಾನ ಮಾಡಿ ಮನೆಗೆ ಬಂದು ಮನೆಯ ಬಾಗಿಲು ಕೊಂಡಿ ಬಡೆದಾಗ ಆತನ ಹೆಂಡತಿ ಬಾಗಿಲು ತೆರೆದಳು ಒಳಗಡೆ ಬಂದಾಗ ಆತನಿಗೆ ಊಟ ಮಾಡಲು ಹೇಳಿದರೆ ಊಟ ಮಾಡುವುದಿಲ್ಲಾ ನಾನು ಮತ್ತೆ ಬರುತ್ತೇನೆ ಅಂತಾ ಹೇಳಿ ಮನೆಯ ಹೊರಗೆ ಹೋದನು ಮೃತಳು ಮನೆಯ ಬಾಗಿಲು ಸ್ವಲ್ಪ ಮುಂದಕ್ಕೆ ಮಾಡಿ ತನ್ನ ಮಕ್ಕಳೊಂದಿಗೆ ಮಲಗಿಕೊಂಡಳು ರಾತ್ರಿ 1 ಗಂಟೆಯ ಸುಮಾರು ಮಹಾದೇವಸಿಂಗ ಈತನು ಮನೆಗೆ ಬಂದು ಮನೆಯ ಒಳಗಡೆ ಇಟ್ಟ ಕೊಡಲಿಯನ್ನು ತೆಗೆದುಕೊಂಡು ಮನೆಯಲ್ಲಿ ಮಲಗಿಕೊಂಡ ಶಾರೂಬಾಯಿ ಇವಳ ಬಲ ಕಿವಿ ಹಾಗೂ ಕುತ್ತಿಗೆಗೆ ಹೊಡೆದು ಬಾರಿ ರಕ್ತಗಾಯ ಪಡಿಸಿದ್ದು ನಂತರ ಆತನ ಮಗ ಎದ್ದು ನೋಡಿದಾಗ ಆತನಿಗೆ ಬೆದರಿಕೆ ಹಾಕಿ ಕೊಡಲಿಯನ್ನು ಮತ್ತೆ ಮನೆಯ ಒಳಗೆ ಇಟ್ಟು ವೈದ್ಯರಿಗೆ ಕರೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೊರಗಡೆ ಹೊರಟು ಹೋಗಿದ್ದು ಶಾರೂಬಾಯಿ ಇವಳು ಸ್ಥಳದಲ್ಲೇ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ; 04/07/2014 ರಂದು 2-30 ,ಎಮ ಗಂಟೆ ಸುಮಾರಿಗೆ  ಲಾರಿ ನಂಬರ್ ಕೆಎ-32--5361 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಆಳಂದ ಚೆಕಪೋಸ್ಟದಿಂದ ಹುಮ್ನಾಬಾದ ರಿಂಗ ರೋಡಿನ ತಾಜಸುಲ್ತಾನಪುರ ಕ್ರಾಸ ದಾಟಿ ಹುಮ್ನಾಬಾದ ರಿಂಗ ರೋಡಿಗೆ ಬರುವ ಬಾಂಬೇ ಗ್ಯಾರೇಜ್ ಹತ್ತೀರ ರೋಡಿನ ಮಧ್ಯದ ಡಿವೈಡರ್ಕ್ಕೆ ಜೋರಾಗಿ ಅಪಘಾತ ಪಡಿಸಿದ್ದ ರಿಂದ ಕಟ್ಟಿಗೆ ತುಂಬಿದ ಲಾರಿಯು ಎಡಗಡೆ ಪಲ್ಟೀಯಾಗಿದ್ದರಿಂದ ಕ್ಲೀನರ್ ಕೆಲಸ ಮಾಡುತ್ತಿದ್ದ ಮುನೀರಷಾ ಈತನು ಲಾರಿ ಕೆಳಗ್ಗೆ ಸಿಕ್ಕಿಬಿದ್ದು ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಅಪಘಾತವಾದ ನಂತರ ಲಾರಿ ಚಾಲಕನು ಓಡಿ ಹೋಗಿರುತ್ತಾನೆ ಅಂತಾ ಶ್ರೀ ಹುಸೇನಷಾ ತಂದೆ ಮಸ್ತಾನಷಾ ದರವೇಶ ಸಾ : ಪಸಪೂರ ತಾ: ಚಿಂಚೋಳಿ ಜಿ: ಗುಲ್ಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಿವಪುತ್ರಪ್ಪಾ ತಂದೆ ಶಿವರಾಯ ರಾಮನಗೌಡರ ಸಾ|| ಮೇಳಕುಂದಾ (ಬಿ) ಇವರ ತಂದೆ ತಾಯಿಗೆ ನಾವು 3 ಜನ ಮಕ್ಕಳಿದ್ದು ನಾವೆಲ್ಲರೂ ಬೇರೆ ಬೇರೆಯಾಗಿ ಉಪಜೀವಿಸುತ್ತಿದ್ದೆವೆ.ನಮ್ಮೆಲ್ಲರ ನಡುವೆ ಒಂದು ಸಾಮೂಹಿಕ ಭಾವಿ ಇದ್ದು ಅದು ನಮ್ಮ ತಮ್ಮನಾದ  ಗುರುಭೀಮರಾಯ ಇವರ ಪಾಲಿಗೆ ಬಂದ ಹೊಲದಲ್ಲಿ ಇದ್ದಿರುತ್ತದೆ. ನಾವು 3 ಜನರು ಪಾಳಿ ಪ್ರಕಾರ ಬೆಳೆಗಳಿಗೆ ನೀರು ಬಿಡುತ್ತಿದ್ದೆವೆ. ದಿನಾಂಕ 01/03/2014 ರಂದು ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ನಮ್ಮ ಹೊಲದಲ್ಲಿನ ರೆಷ್ಮೆ ಬೆಳೆಗೆ ನಾನು ನನ್ನ ಪಾಳಿಯಂತೆ ನೀರು ಬಿಟ್ಟು ಮನೆಗೆ ಬಂದಿರುತ್ತೆನೆ. ನಾನು ದಿನಾಂಕ 01/07/2014 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಬೀಡಿ ಸೇದಲು ನಮ್ಮೂರಿನ ಮಲ್ಲು ಮಾಲಿ ಪಾಟೀಲ ಇವರ ಕಿರಾಣಿ ಅಂಗಡಿಗೆ ಹೋಗಿದ್ದು ಅಲ್ಲಿ ಬೀಡಿ ತೆಗೆದುಕೊಂಡು ಬೀಡಿ ಸೇದುತ್ತಾ ನಿಂತಿದ್ದಾಗ ನಮ್ಮ ತಮ್ಮನಾದ ಗುರುಭೀಮರಾಯ ,ಅವನ ಮಕ್ಕಳಾದ ಸಿದ್ದು, ಹಾಗೂ ಸಂತೋಷ ಹಾಗೂ ಅವನ ಹೆಂಡತಿ ಬಸಮ್ಮಾ ಇವರೆಲ್ಲರೂ  ಬಂದು ನನಗೆ ಸಂತೋಷ ಈತನು ಏ ಬೋಸ್ಡಿ ಮಗನೇ ಇವತ್ತು ನಮ್ಮ ಪಾಳಿ ಇದೇ ನೀನು ನೀರು ಬಿಟ್ಟಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಇವತ್ತು ನಮ್ಮ ಪಾಳಿ ಇದೇ ನಾನು ನೀರು ಬಿಟ್ಟಿದ್ದಿನಿ ನಾಳೆ ನಿಮ್ಮ ಪಾಳಿ ಇದೆ ನೀವು ಬಿಟ್ಟು ಕೊಳ್ಳಿರಿ ಅಂತಾ ಅನ್ನುತ್ತಿದ್ದಾಗ ನಮ್ಮ ತಮ್ಮನಾದ ಗುರುಬೀಮರಾಯ ಈತನು ಮಗನೇ ನೀನು ದಿವಸ ಹೀಗೆ ಹೇಳಿತ್ತಿ ನೀರು ಬಿಟ್ಟಕೊತ್ತಿ ಅಂತಾ ಅವಾಚ್ಯವಾಗಿ ಬೈದು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: