POLICE BHAVAN KALABURAGI

POLICE BHAVAN KALABURAGI

24 July 2014

Gulbarga District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಗುರುನಾಥ ತಂದೆ ಶ್ರೀಮಂತ ಸಾ: ಕೆ.ಹೆಚ್.ಬಿ.ಕಾಲೋನಿ  ಹಳೆ ಜೇವರ್ಗಿ ರೋಡ ಗುಲಬರ್ಗಾ ರವರು ದಿನಾಂಕ: 23-07-2014  ರಂದು ರಾತ್ರಿ 09-30 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಇಇ 1324 ನೆದ್ದರ ಮೇಲೆ ಹಳೆ ಜೇವರ್ಗಿ ರೋಡ ,ಆನಂದ ಆಸ್ಪತ್ರೆ ದಾಟಿ ,ಹೌಸಿಂಗ ಬೋರ್ಡ ಕಾಲೋನಿ ಕ್ರಾಸ್ ಸಮೀಪ ರೋಡ ಮೇಲೆ ಹೋಗುತ್ತಿದ್ದಾಗ ಯಾವುದೊ ಲಾರಿ ಅಥವಾ ಟಿಪ್ಪರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲ್ ಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿ ಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತ ಮರಣ ಹೊಂದಿದ ಹೆಣ್ಣು ಶಿಶುವನ್ನು ಒಗೆದು ಹೋದ ಪ್ರಕರಣ :
ಮಹಿಳಾ ಠಾಣೆ : ಶ್ರೀ ಚೇತನ ತಂದೆ ಗುರುನಾಥ ಮರತೂರಕರ ವಿರೇಶ ನಗರ ಗುಲಬರ್ಗಾ ಇವರು  ದಿನಾಂಕ: 23.07.2014 ರಂದು 10.00 ಎ.ಎಮ್ ಕ್ಕೆ  ನಾನು ವಿರೇಶ ನಗರದ ಬಯಲು ಜಾಗೆಯ ಕಡೆಗೆ ಹೋದಾಗ  ನಾಲಿಯ ಹತ್ತಿರ  ಬಹಳ ಜನ ನೆರೆದಿದ್ದು ನಾನು ಕೂಡ ಅಲ್ಲಿಗೆ  ಹೋಗಿ ನೋಡಲಾಗಿ  ಯಾವುದೇ ನವಜಾತ  ಹೆಣ್ಣು ಮಗು (ಮೃತ) ಬಿದ್ದಿದ್ದು ಯಾರೋ ಹೆಣ್ಣು ಮಗಳು ಆ ಮಗುವಿನ ಜನನವನ್ನು ಮರೆ ಮಾಚುವ ಸಲುವಾಗಿ ಮಗುವನ್ನು ನಾಲಿಯಲ್ಲಿ ಬಿಸಾಕಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಮಗುವಿನ ಜನನವನ್ನು ಮರೆಮಾಚುವ ಗೋಸ್ಕರ ಬಿಸಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: