POLICE BHAVAN KALABURAGI

POLICE BHAVAN KALABURAGI

23 August 2011

GULBARGA DIST REPORTED CRIMES

ಕಳ್ಳತನ ಪ್ರಕರಣ :

ವಿಶ್ವವಿದ್ಯಾಲಯ ಪೊಲೀಸ ಠಾಣೆ: ಶ್ರೀ ಕಲ್ಯಾಣಪ್ಪಾ ತಂದೆ ವೀರಬದ್ರಪ್ಪ ಗೋದಿ ಸಾ|| ಭೊಪಾಲ ತೆಗನೂರ ಗ್ರಾಮ ರವರು ನಾನು ನಮ್ಮ ತೋಟಕ್ಕೆ ಬೆಳಿಗ್ಗೆ ಹೋಗಿ ನೋಡಲಾಗಿ ಬೋರವೆಲ್ ದಿಂದ ಬೋರ್ಡಿಗೆ ಹಾಕಿದ 30 ಫೀಟ ಕೇಬಲ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಮೇಲೆ ಹಲ್ಲೆ ಪ್ರಕರಣ :

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಬಸಮ್ಮಾ ಗಂಡ ನಾಗಣ್ಣಾ ಹೊರಗಿನಮನಿ ರವರು ನನ್ನ ಮಗನಾದ ಅನೀಲ ಇತನೊಂದಿಗೆ ಸಲೀಮ ತಂದೆ ಮೊದಿನಸಾಬ ಇತನ ಮಗನಾಧ ಅಕ್ಬರನ ಜೋತೆಗೆ ಶಾಲೆಯಲ್ಲಿ ಜಗಳ ತೆಗೆದು ಬಾಯಿ ತಕರಾಗಿದ್ದು, ಸಲೀಮ ಇತನು ನಮ್ಮ ಮನಗೆ ಬಂದು ನಿನ್ನ ಮಗನು ನನ್ನ ಮಗನಿಗೆ ಹೊಡೆದಿದ್ದಾನೆ ಯಾಕೆ ಅಂತಾ ಕೇಳಿ ಕೈಯಿಂದ ಕಪಾಳಕ್ಕೆ ಹೊಡೆದು ಸೀರೆ ಹಿಡಿದು ಏಳೆದಾಡಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕ್ರಮ ಸೀಮೆ ಎಣ್ಣೆ ಮಾರಾಟ :

ರಾಘವೇಂದ್ರ ನಗರ ಪೊಲೀಸ್ ಠಾಣೆ:
ಶ್ರೀ ಲಿಂಬಾಜಿ ಅಹಾರ ನಿರೀಕ್ಷಕರು ವಾರ್ಡ ನಂ 9-11 (ಪಡಿತರ ಪ್ರದೇಶ) ಗುಲಬರ್ಗಾ ರವರು ನಾನು ದಿನಾಂಕ 23-08-2011 ರಂದು ಸಾಯಂಕಾಲ ಪರೀಶಿಲನೆ ಮಾಡಲು ಹೋದಾಗ ಮಲ್ಲಿಕಾರ್ಜುನ ರಂಗಂಪೇಠ ಲೈಸನ್ಸ್ ನಂ 149/87 ಸಾ|| ಚನ್ನವೀರ ನಗರ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ ಇವರು ಚಿಲ್ಲರೆ ಸೀಮೆ ಎಣ್ಣೆ ವರ್ತಕರು ಇದ್ದು, ಬೋರಾಬಾಯಿ ನಗರ ಬಡಾವಣೆಯ ನ್ಯಾಯಬೆಲೆ ಅಂಗಡಿ ಸಂಖ್ಯೆ 233 ನೇದ್ದರ ಅನಿಲ ರಹಿತ ಪಡಿತರ ಚೀಟಿಗಳಿಗೆ ಸರಬರಾಜು ಮಾಡಬೇಕಾದ 2726 ಲಿಟರ ಸೀಮೆ ಎಣ್ಣೆ ಅಂದಾಜು ಕಿಮ್ಮತ್ತು 56,263-00 ರೂಪಾಯಿಗಳದ್ದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾ ದುರುಪಯೋಗ ಪಡಿಸಿಕೊಂಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: