POLICE BHAVAN KALABURAGI

POLICE BHAVAN KALABURAGI

22 May 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ, ದೌವಲಸಾಬ ತಂದೆ ವೆಂಕಟಪ್ಪಾ ಗುರಗಂಟಿ ಸಾ:ಗೊಲ್ಲರ ಕಾಲೊನಿ ಸುಂದರ ನಗರ ಗುಲಬರ್ಗಾ ರವರು ನಮ್ಮ ಸಂಬಂಧಿಕರಾದ ಗೊವಿಂದ ಶಿವರಾಲ ಯಾದವ ಇವರ ಮಗನ ಜವಳ ಕಾರ್ಯಕ್ರಮವು ಹೊನ್ನಕಿರಣಗಿಯಲ್ಲಿರುವದರಿಂದ ನಾನು ಮತ್ತು ಕಾಂತಮ್ಮ ಯಾದವ, ಗೊವಿಂದ ವರಗಂಟಿ, ಸ್ವಾಮಿ ಕರಂಟಿ, ಪಾರ್ವತಿ ಕರಂಟಿ, ಅಲಿಸಾಬ ವರಗಂಟಿ, ಇಸ್ಮಾಯಿಲ್ ವರಗಂಟಿ ಹಾಗೂ ಸಂಬಂಧಿಕರು ಮಕ್ಕಳು ಹೀಗೆ 30-35 ಜನರು ಹೊನ್ನಕಿರಣಗಿ ಗ್ರಾಮಕ್ಕೆ ಲಾರಿ ನಂ ಕೆಎ 32 ಎ 5269 ನೇದ್ದರಲ್ಲಿ ಹೋಗಿರುತ್ತೆವೆ. ಜವಳ ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ ಮರಳಿ ಗುಲಬರ್ಗಾಕ್ಕೆ ಬರುವಾಗ ಲಾರಿ ಕ್ಯಾಬಿನಿನಲ್ಲಿ ನಾನು ಮತ್ತು ಯಲ್ಲಪ್ಪಾ. ಗೋವಿಂದ. ಸ್ವಾಮಿ ಮತ್ತು  ಅಲೀಸಾಬ. ಕುಳಿತಿದ್ದೆವು. ಕೇಂದ್ರ ಕಾರಾಗೃಹದ ನಂತರ ಗುಲಬರ್ಗಾ ಕಡೆಯಿಂದ ಕೆಎ-32 ಬಿ-9384 ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ಎದುರಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಒಮ್ಮಲೇ ನಿರ್ಲಕ್ಷತನದಿಂದ ಯಾವುದೇ ಇಂಡಿಕೇಟರ ಹಾಕದೇ ಬಲಗಡೆಗೆ ತಿರುಗಿಸಿದ್ದರಿಂದ ನಾವು ಕುಳಿತ ಲಾರಿಗೆ ಟಿಪ್ಪರದ ಹಿಂದಿನ ಭಾಗಕ್ಕೆ ಬಡೆದು ಅಪಘಾತವಾಯಿತು. ನನಗೆ ಮತ್ತು ಯಲ್ಲಪ್ಪ ಹಾಗೂ ಗೊವಿಂದ ನಮ್ಮೆಲ್ಲರಿಗೆ ಕಾಲುಗಳ ಹತ್ತಿರ  ಭಾರಿ ರಕ್ತಗಾಯ ಮತ್ತು  ಗುಪ್ತಗಾಯ ಆಗಿರುತ್ತವೆ. ಸ್ವಾಮಿ ಕರಂಟಿ ಇತನಿಗೆ ಎರಡು ಕಾಲುಗಳ ಕಪಗಂಡ ಹತ್ತಿರ ಮುರಿದು ಭಾರಿ,ಬಲಗೈಗೆ ಮುಂಗೈ ಹತ್ತಿರ ರಕ್ತಗಾಯವಾಗಿ ಹೊಟ್ಟೆಯ ಭಾಗಕ್ಕೆ  ಭಾರಿ ಗುಪ್ತಗಾಯವಾಗಿರುತ್ತದೆ. ಆಲೀಸಾಬ ಇತನಿಗೆ ಮೂಗಿಗೆ  ರಕ್ತಗಾಯ ಆಗಿರುತ್ತದೆ. ಲಾರಿಯಲ್ಲಿ ಹಿಂದೆ ಕುಳಿತ ಕೆಲವರಿಗೆ ಸಣ್ಣಪುಟ್ಟ ಸಾದಾ ಗಾಯಗಳಾಗಿರುತ್ತವೆ. ಟಿಪ್ಟರ ಚಾಲಕ ಅಪಘಾತವಾದ ನಂತರ ಟಿಪ್ಪರ ಬಿಟ್ಟು ಓಡಿ ಹೋದನು. ನಾವೆಲ್ಲರೂ 108 ವಾಹನ ಮತ್ತು ಖಾಸಗಿ ವಾಹನದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಬಂದು ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದೇವೆ. ಭಾರಿಗಾಯ ಹೊಂದಿದ್ದ ಸ್ವಾಮಿ ಇತನು ಉಪಚಾರ ಹೊಂದುತ್ತಾ ಸಾಯಂಕಾಲ 7-30 ಗಂಟೆಗೆ ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಗಾಯಾಳು ದೌವಲಸಾಬ ಇತನ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 73/2013 ಕಲಂ, 279,337,338 304(ಎ) ಐಪಿಸಿ ಮತ್ತು 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ಥಾರೆ. 

No comments: