POLICE BHAVAN KALABURAGI

POLICE BHAVAN KALABURAGI

22 May 2013

GULBARGA DISTRICT REPORTED CRIMES


ಅನಧಿಕೃತವಾಗಿ ಸುಣ್ಣದ ಕಲ್ಲಿನ ಗಣಿಗಾರಿಕೆ ಮಾಡಿದ ಬಗ್ಗೆ:
ಮಳಖೇಡ ಪೊಲೀಸ್ ಠಾಣೆ:ಸೌತ್ ಇಂಡಿಯಾ ಸಿಮೆಂಟ್ ಕಂಪನಿ ಮಳಖೇಡ ಇವರು ಮಳಖೇಡ ಗ್ರಾಮದ ಸರ್ವೆ ನಂಬರ 370 ರಲ್ಲಿ ದಿನಾಂಕ:04/05/2013 ರಿಂದ ಇಲ್ಲಿಯವರೆಗೆ 1) ಬಿ.ಸಿತಾರಾಮಯ್ಯ ತಂದೆ ಕೋಟೆಶ್ವ್ರ ರಾವ್ ಡಿ.ಇ.ಎಂ, 2) ಬಿ. ಧನಿಮರೆಡ್ಡಿ ತಂದೆ ತಿಮ್ಮಾ ರೆಡ್ಡಿ ಮೈನ್ಸ ಮ್ಯಾನೇಜರ್ ಸಾ|| ಇಬ್ಬರು ಸೌತ್ ಇಂಡಿಯಾ ಮಳಖೇಡ ತಾ|| ಮಳಖೇಡ ರವರು ಸರ್ಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸುಣ್ಣದ ಕಲ್ಲಿನ ಗಣಿಗಾರಿಕೆ ಮಾಡಿ ಸುಮಾರು 11,360 ಮೆಗಾ ಟನ್ ಸುಣ್ಣದ ಕಲ್ಲು ಸಿಮೆಂಟ್ ತಯ್ಯಾರಿಕೆ ಮಾಡುವ ಉದ್ದೇಶದಿಂದ ತೆಗೆದು ಅಂದಾಜು ಕಿಮ್ಮತ್ತು 41,23,680/- ರೂಪಾಯಿಗಳ ಮೌಲ್ಯಗಳಷ್ಟು ಕಳ್ಳತನ ಮಾಡಿರುತ್ತಾರೆ ಅಂತಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರಾದ ಶ್ರೀ.ಈ.ಶೇಖರಪ್ಪ ರವರು ದೂರು ಸಲ್ಲಿಸಿದ ಮೇರೆಗೆ ಮಳಖೆಡ ಠಾಣೆ ಗುನ್ನೆ ನಂ:54/2013 4(1-ಎ) ಗಣಿ ಮತ್ತು ಭೂ ವಿಜ್ಞಾನ (M.M (D&R) Act) ಕಾಯಿದೆ 1957 ಸಂಗಡ 379  ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದೆ. 
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ದಿನಾಂಕ:19.07.2009 ರಂದು ಸಂಪ್ರದಾಯದಂತೆ ಅಬ್ದುಲ ಸಾಜೀದ ತಂದೆ ಅಬ್ದುಲ ಹಮೀದ ಇತನೊಂದಿಗೆ ನನಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಲ್ಲಿ 1.51.000 ವರದಕ್ಷಿಣೆ, ಹೀರೊಹೊಂಡಾ ಮೋಟಾರ ಸೈಕಲ್ 6.5 ತೊಲೆ ಬಂಗಾರ ಹಾಗೂ ಇನ್ನಿತರ ಸಾಮಾನುಗಳು ನೀಡಿರುತ್ತಾರೆ. ಮದುವೆಯಾದ 2 ವರ್ಷಗಳ ನಂತರ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಹೊಡೆ ಬಡೆ ಮಾಡಲು ಪ್ರಾರಂಬಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ ಬಂದಿರುತ್ತಾರೆ. 2011 ನೇ ಸಾಲಿನಲ್ಲಿ ನಮಗೆ ಹೆಣ್ಣು ಮಗು ಜನಿಸಿದ್ದು ಮಗುವಿಗು  ನೋಡಲು ಅಥವಾ ತೊಟ್ಟಿಲು ಕಾರ್ಯಕ್ರಮಕ್ಕೂ ಸಹ ನನ್ನ ಗಂಡ ಅಥವಾ ಗಂಡನ ಮನೆಯವರು ಬಂದಿರುವುದಿಲ್ಲಾ. 2 ತಿಂಗಳು ನಂತರ ನನ್ನ  ತಂದೆ ನನಗೆ ಹಾಗೂ ನನ್ನ ಮಗುವಿಗೆ ಕರೆದುಕೊಂಡು ಹೋಗಿ ಗಂಡನ ಮನೆಯಲ್ಲಿ ಬಿಟ್ಟು ಬಂದರು. ಈಗ ಸುಮಾರು 8 ದಿವಸಗಳ ಹಿಂದೆ ನನ್ನ ಗಂಡ ಅಬ್ದುಲ್ ಸಾಜೀದ ಅತ್ತೆ ಖುರಷೀದ ಬೇಗಂ ,ಮೈದುನ ಸೈಯದ ಅಬ್ದುಲ್ ಹಮೀದ, ಗೌಸ ಶಫೀ, ಸಾಬೀರ ಮತ್ತು ನಾದಿನಿಯರಾದ ಆಷ್ರಾ, ಅಸ್ಮಾ ಇವರೆಲ್ಲರೂ ಕೂಡಿ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲಾವಾದರೆ ಬೇರೆ ಮದುವೆ ಮಾಡುತ್ತೇವೆ ಅಂತಾ ಮನೆಯಿಂದ ಹೊರಗೆ ಹಾಕಿರುತ್ತಾರೆ ಅಂತಾ ಶ್ರೀಮತಿ  ಆಯಿಷಾ ಸಿದ್ದಿಕಿ ಗಂಡ ಅಬ್ದುಲ ಸಾಜೀದ ಲಂಬು ವಯಾ||22 ವರ್ಷ ಸಾ;ರಂಗೀನ ಮಜೀದ ಪುಟಾಣಿ ಗಲ್ಲಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ನಮ್ಮ ಠಾಣೆ ಗುನ್ನೆ ನಂ:30/2013 ಕಲಂ 498(ಎ),323.504.506 ಸಂಗಡ 34 ಐ.ಪಿ.ಸಿ ಮತ್ತು 3&4 ಡಿ.ಪಿ.ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: