POLICE BHAVAN KALABURAGI

POLICE BHAVAN KALABURAGI

23 May 2013

GULBARGA DISTRICT REPORTED CRIME


ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ಭೀಮಾಶಂಕರ ಪಂಡರಿ ವಯಾ:26 ವರ್ಷ ಉ: ಡ್ರೈವರ್   ಸಾ:ಚಲಗೇರಾ  ರವರು ನಾನು ದಿನಾಂಕ:22/05/2013 ರಂದು  ಸಾಯಂಕಾಲ 5 ಗಂಟೆಯ ಸುಮಾರಿಗೆ ನಮ್ಮೂರ ಶಾಲೆಯ ಹತ್ತಿರ ಸೋಮಣ್ಣಾ ತಂದೆ ಬಸವಂತ ಸಕ್ಕರಗಿ ಇತನು ಶಾಲೆಯ ಹತ್ತಿರ ಸಾರಾಯಿ ಮಾರಟ ಮಾಡುತ್ತಿದ್ದಾಗ. ಶಾಲೆಯ  ಹತ್ತಿರ ಸಾರಾಯಿ ಮಾರಟ ಮಾಡಬೇಡ ಎಲ್ಲರೂ ಇಲ್ಲಿಯೆ ಕುಳಿತು ಕುಡಿಯುತ್ತಾರೆ ಅಂತಾ ಅಂದಿದಕ್ಕೆ ಸೋಮಣ್ಣಾ ಸಕ್ಕರಗಿ,ಲಕ್ಷ್ಮೀಬಾಯಿ ಗಂಡ ಸೋಮಣ್ಣಾ ಸಕ್ಕರಗಿ,ಶಿವಲಿಂಗಪ್ಪ ತಂದೆ ಸೊಮಣ್ಣಾ ಸಕ್ಕರಗಿ, ಶ್ರೀಕಾಂತ ತಂದೆ ಮಾರುತಿ ಸಕ್ಕರಗಿ, ಶ್ರೀಶೈಲ ತಂದೆ ಸೋಮಣ್ಣಾ ಸಕ್ಕರಗಿ, ಸಿದ್ದರಾಮ ತಂದೆ ಸೊಮಣ್ಣಾ ಸಕ್ಕರಗಿ ರವರೆಲ್ಲರೂ ನನಗೆ ಅವಾಚ್ಯ ಶಬ್ಬಗಳಿಂದ ಬೈದು ಬಡಿಗೆಯಿಂದ ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ.ನಂ:45/2013 ಕಲಂ:143.147.148.323.324.504.506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: