POLICE BHAVAN KALABURAGI

POLICE BHAVAN KALABURAGI

24 May 2013

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ಶ್ರೀಮತಿ ಸುನೀತಾ ಗಂಡ ರವಿ ಗುಂಜಿ ಸಾ: ಧುತ್ತರಗಾಂವ ಗ್ರಾಮ ತಾ: ಆಳಂದ ರವರುದಿನಾಂಕ:22-05-2013 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನೀರಿನ ಟ್ಯಾಂಕರದಿಂದ ನೀರು ಸಪ್ಲಾಯ ಮಾಡುತ್ತಿದ್ದಾಗ ನಾನು ನೀರಿನ ಕೊಡದೊಂದಿಗೆ ಪಾಳಿಯಲ್ಲಿ ನಿಂತಿರುವಾಗ ಗಣಪತಿ ಮರಗು ವಡ್ಡರ ಇತನು ಅವಾಚ್ಯವಾಗಿ ಬೈದು ನಿನ್ಯಾಕೇ ನೀರು ತುಂಬುತ್ತಿ ಅಂತಾ ಕೈಯಿಂದ ಬೆನ್ನ ಮೇಲೆ ಹೊಡೆದು ಕೈ ಮುಷ್ಠಿ ಮಾಡಿ ಹೊಟ್ಟೆಗೆ ಗುದ್ದಿದನು. ಆತನ ತಮ್ಮ ರವಿ ಇತನು ಬಂದು ನನ್ನ ಕೆಳ ಹೊಟ್ಟೆಗೆ ಒದ್ದನು ಅವನ ತಂದೆ ಮರಗು ಇತನು ಸಹ ನೀನು ಊರು ಬಿಟ್ಟು ಹೋಗು ಅಂತಾ ಬಡಿಗೆಯಿಂದ ಹೊಟ್ಟೆಯ ಮೇಲೆ ಹೊಡೆದಿದ್ದರಿಂದ ಒಳ ಪೆಟ್ಟಾಗಿರುತ್ತದೆ.ಈರಮ್ಮ ಗಂಡ ಮರಗು ಇವಳು  ಸಹ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ 57/2013 ಕಲಂ, 323, 324, 354, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ ಠಾಣೆ: ಶ್ರೀಮತಿ. ಮಲ್ಲಮ್ಮಾ ಗಂಡ ಕ್ರೀಷ್ಣಾ ಸಕ್ಕರಗಿ ಸಾ:ಚಲಗೇರಾ  ತಾ:ಆಳಂದ ರವರು ನಾನು ದಿನಾಂಕ:22/05/2013 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನನ್ನ ತಮ್ಮನಾದ ಶಿವಲಿಂಗಪ್ಪ ಸಕ್ಕರಗಿ ಇತನು ಶಾಲೆಯ ಹತ್ತಿರ ನಿಂತಾಗ ಭೀಮಾಶಂಕರ ಪಂಡರಿ,ಚಂದ್ರಕಾಂತ ತಂದೆ ಭೀಮಶ್ಯಾ ಪಂಡರಿ,ಯಲ್ಲಪ್ಪಾ ತಂದೆ ಚಂದ್ರಕಾಂತ ಪಂಡರಿ,ಶಿವಕುಮಾರ ತಂದೆ ಚಂದ್ರಕಾಂತ ಪಂಡರಿ,ದಯ್ಯವ್ವಾ ಗಂಡ ಚಂದ್ರಕಾಂತ ಪಂಡರಿ,ಕಾವೇರಿ ತಂದೆ ಚಂದ್ರಕಾಂತ ಪಂಡರಿ,ಕಮಲಾಬಾಯಿ ತಂದೆ ಭೀಮಶ್ಯಾ ಪಂಡರಿ,ಮಹಾಪುರವ್ವಾ ತಾಯಿ ಕಮಲಾಬಾಯಿ ಪಂಡರಿ  ಸಾ:ಚಲಗೇರಾ  ರವರೆಲ್ಲರೂ ಕಾರಣವಿಲ್ಲದೇ ನನ್ನ ತಮ್ಮನಿಗೆ ಅವಾಚ್ಯ ಶಬ್ಬಗಳಿಂದ ಶಬ್ಬಗಳಿಂದ ಬೈದು ಕೈಯಿಂದ ಮತ್ತು ಕಾಲಿನಿಂದ ಹೊಡೆ-ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ.ನಂ:46/2013 ಕಲಂ:143.147.323.504.506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ರಟಕಲ್ ಪೊಲೀಸ್ ಠಾಣೆ:ದಿನಾಂಕ:23-05-2013 ರಂದು ರಾತ್ರಿ  9-30 ಗಂಟೆ ಸುಮಾರಿಗೆ ಟ್ರಾಕ್ಟರ ನಂಬರ ಕೆಎ-38 ಟಿ-1588 ನೇದ್ದರ ಚಾಲಕನು ತನ್ನ ಟ್ರಾಕ್ಟರನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಮೊಘಾ ಗ್ರಾಮದ ಹತ್ತಿರ ಟ್ರಾಕ್ಟರ ಪಲ್ಟಿ ಮಾಡಿಸಿದ್ದರಿಂದ ಟ್ರಾಕ್ಟರನಲ್ಲಿ ಕುಳಿತ ಬಸವರಾಜ ತಂದೆ ಗುಂಡಪ್ಪ ಹಣಮಗುಂಡ ಸಾ:ಚಂದನಕೇರಾ ಇತನ ಮೈಮೇಲೆ ಟ್ರಾಕ್ಟರನಲ್ಲಿದ್ದ ಪರ್ಸಿಗಳು ಬಿದ್ದಿರುವದರಿಂದ ಬಸವರಾಜ ಇತನು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ತಿಪ್ಪಣ್ಣ ತಂದೆ ಸಾಯಿಬಣ್ಣ ಜಿಡಗಿ ಸಾ|| ಮೋಘಾ ತಾ|| ಚಿಂಚೋಳಿ  ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಇಂದು ದಿನಾಂಕ 24-05-2013 ರಂದು 12-30 ಎ.ಎಮಕ್ಕೆ ಠಾಣಾ ಗುನ್ನೆ ನಂ 54/2013 ಕಲಂ 279, 304 (ಎ) ಐಪಿಸಿ ಹಾಗೂ 187 ಐ.ಎಂ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: