POLICE BHAVAN KALABURAGI

POLICE BHAVAN KALABURAGI

24 January 2013

GULBARGA DISTRICT REPORTED CRIMES


ಗರ್ಭಪಾತದಿಂದ ಮಹಿಳೆ ಸಾವು:
ವಾಡಿ ಪೊಲೀಸ್ ಠಾಣೆ:ಶ್ರೀ ಶೇಕ್ ವಾಹಿದ ತಂದೆ ಶೇಖ ಮಹೆಬೂಬ ಶೇಖ ಸಾ||ಜಾಮಿಯಾ ಮಜೀದ ರೋಡ ಮರಾಠಾ ಗಲ್ಲಿ ವಾಡಿ ರವರು ನನಗೆ ಮೂರು ಜನ ಹೆಣ್ಣು ಮಕ್ಕಳು ಮೂರು ಜನ ಗಂಡು ಮಕ್ಕಳಿರುತ್ತಾರೆ. ನನ್ನ ಹೆಂಡತಿ ಪರ್ವಿನ ಇವಳು ಸಧ್ಯ 4 ತಿಂಗಳ ಗರ್ಭಾವತಿಯಾಗಿದ್ದಳು, ಒಂದು ವಾರದಿಂದ ನನ್ನ ಹೆಂಡತಿ ಪರ್ವಿನ ಬೇಗಂ ಇವಳಿಗೆ ಆರಾಮ ಇಲ್ಲದ ಕಾರಣ ವಾಡಿಯಲ್ಲಿಯೇ ಇರುವ ಅರ್.ಎಮ್.ಪಿ ಡಾಕ್ಟರ ಯಾಸ್ಮಿನ ಬತೂಲ ಇವರ ಹತ್ತಿರ ಉಪಚರಿಸುತ್ತಿದ್ದವು, ದಿನಾಂಕ: 20-01-2013 ರಂದು ರವಿವಾರ ಮುಂಜಾನೆ  10-30 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಹೆಚ್ಚಿಗೆ ವಾಂತಿ ಆಗುತಿದ್ದರಿಂದ ಹಾಗೂ ಆರಾಮ ಇಲ್ಲದ ಕಾರಣ ಉಪಚಾರ ಕುರಿತು ಡಾ||ಆಸ್ಮಿನ ಬತೂಲ ಇವರ ಹತ್ತಿರ ಕರೆದುಕೊಂಡು ಹೋಗಿದ್ದೆನು.   ಡಾ||ಯಾಸ್ಮೀನ ಬತೂಲ ಇವರು ನನ್ನ ಹೆಂಡತಿಗೆ ಉಪಚರಿಸಿ ನಿನ್ನ ಹೆಂಡತಿಗೆ ಗರ್ಭಪಾತ (ಅಬಾರ್ಷನ) ಮಾಡಿಸಬೇಕು ಇಲ್ಲದಿದ್ದರೆ ನಿನ್ನ ಹೆಂಡತಿ ಜೀವಕ್ಕೆ ಅಪಾಯ ಇದೆ ಅಂತಾ ಹೇಳಿದರು. ನನಗೆ ಕಾನೂನಿನ ಅರಿವು ಇಲ್ಲದ ಕಾರಣ ನನಗೆ ಮಕ್ಕಳಿದ್ದಾರೆ ನನಗೆ ನನ್ನ ಹೆಂಡತಿ ಮುಖ್ಯ ಅಂತಾ ಗರ್ಭಪಾತ ಮಾಡು ಅಂತಾ ಹೇಳಿದೆ. ನನ್ನ ಹೆಂಡತಿಯ ಗರ್ಭಪಾತ ಮಾಡಿದಳು ನನ್ನ ಹೆಂಡತಿ ಗರ್ಭ ಪಾತ ಮಾಡಿದ ಜಗೆ ಬಹಳ ನೋವು ಆಗುತ್ತಿದೆ ಅಂತಾ ಹೇಳಿದಳು ಮಂಗಳವಾರ ದಿವಸ ಮತ್ತೆ ನಾನು ನನ್ನ ಹೆಂಡತಿಗೆ ಕರೆದುಕೊಂಡು ಆಸ್ಪತ್ರೆಗೆ ಹೋದೆನು ಇಂಜಕ್ಷನ ಗುಳಿಗಿ ಕೊಟ್ಟು  ಗರ್ಭಪಾತ ಮಾಡಿದ್ದೇನೆ ಗುಲಬರ್ಗಾಕ್ಕೆ ಕರೆದುಕೊಂಡು ಹೋಗಿ ಸ್ಕಾನಿಂಗ ಮಾಡಿಕೊಂಡು ಬಾ ಅಂತಾ ಡಾಕ್ಟರ ಹೇಳಿದರು. ದಿನಾಂಕ:23-01-2013 ರಂದು ನನ್ನ ಹೆಂಡತಿಗೆ ಕೆ.ಬಿ.ಎನ್. ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದೆನು ಅವರು ಉಪಚರಿಸಿ ಯಾರು ಉಪಚರಿಸಿದ್ದಾರೆ ಅಂತಾ ಕೇಳಿದರು ನಾನು ವಾಡಿಯಲ್ಲಿ ಆರ್.ಎಮ್.ಪಿ. ಡಾ||ಯಾಸ್ಮಿನ ಬತೂಲ ಇವರು ಉಪಚರಿಸಿದ್ದಾರೆ, ಅವರೆ ಅವರೆ ಅಬಾಶನ ಮಾಡಿದ್ದಾರೆ ಅಂತಾ ಹೇಳಿದೆ, ಸದರಿ  ವೈದ್ಯರು  ಹೆಚ್ಚಿನ ಉಪಚಾರ ಕುರಿತು ಬಸವೆಶ್ವರ ಆಸ್ಪತ್ರೆಗೆ ಸೇರಿಕೆ ಮಾಡಲು ತಿಳಿಸಿದ ಪ್ರಕಾರ ನಾನು ನನ್ನ ಹೆಂಡತಿಗೆ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದೆನು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:24-01-2013 ರಂದು ಮುಂಜಾನೆ 8-30 ಗಂಟೆಗೆ ನನ್ನ ಹೆಂಡತಿ ಮರಣ ಹೊಂದಿದ್ದಳು. ನನ್ನ ಹೆಂಡತಿ ಸಾವಿಗೆ ಕಾರಣಳಾದ ಡಾ||ಯಾಸ್ಮಿನ ಬತೂಲ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:11/2013 ಕಲಂ, 314, 304(ಎ) 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ: ಕುಮಾರಿ ತೋಟಮ್ಮ ತಂದೆ ಶರಣಪ್ಪ ಯಮನೂರ ವಯ:15 ವರ್ಷ ಜಾ:ಬೇಡರ ಉ: ಕೂಲಿ ಕೆಲಸ ಸಾ: ವಡಗೇರಾ ರವರು ನಾನು ಮತ್ತು ನನ್ನ ತಾಯಿಯಾದ ರೇಣುಕಾ ಗಂಡ ಶರಣಪ್ಪಾ ಯಮನೂರ ವಯಾ|| 40 ವರ್ಷ ಇಬ್ಬರೂ ದಿನಾಂಕ:23-01-2013 ರಂದು ರಾತ್ರಿ 8-00 ಗಂಟೆಗೆ ಊಟ ಮಾಡಿದೆವು. ನಾನು ರಾತ್ರಿ ತನ್ನ ಅಣ್ಣನ ಮನೆಗೆ ಮಲಗಿಕೊಳ್ಳಲು ಹೋಗಿದ್ದು ಮನೆಯಲ್ಲಿ ತನ್ನ ತಾಯಿ ಒಬ್ಬಳೆ ಮನೆ ಬಾಗಿಲು ಮುಂದೆ ಮಾಡಿಕೊಂಡು ಮಲಗಿರುತ್ತಾಳೆ. ದಿನಾಂಕ:23,24-01-2013 ರ ರಾತ್ರಿ ವೇಳೆಯಲ್ಲಿ ಯಾರೋ ದುಶ್ಕರ್ಮಿಗಳು ಮನೆಯ ಒಳೆಗೆ ಪ್ರವೇಶ ಮಾಡಿ ಯಾವುದೋ ಒಂದು ಬಲವಾದ ಕಾರಣದಿಂದ ತನ್ನ ತಾಯಿಗೆ ಕುತ್ತಿಗೆಗೆ ಹಗ್ಗದಿಂದ ಅಥವಾ ಇನ್ಯಾವದೋ ವಸ್ತುವಿನಿಂದ ಬಿಗಿದು ಕೊಲೆ ಮಾಡಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ:14/2013  ಕಲಂ, 448, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: