POLICE BHAVAN KALABURAGI

POLICE BHAVAN KALABURAGI

25 January 2013

GULBARGA DISTRICT REPORTED CRIME


ಮೋಟಾರ ಸೈಕಲ ಜಪ್ತಿ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ಮಾನ್ಯ ಡಿ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ಹಾಗು ಮಾನ್ಯ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾರವರ ಮಾರ್ಗದರ್ಶದಲ್ಲಿ ದಿನಾಂಕ:24/01/2013 ರಂದು ಮಧ್ಯಾಹ್ನ 3-30 ಗಂಟೆಗೆ ಪಿ.ಎಸ.ಐ ಮಹಾತ್ಮ ಬಸವೇಶ್ವರ ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ.ಐ (ಕಾ.ಸು) ಮತ್ತು ಸಿಬ್ಬಂದಿಯವರು ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಾ ಗಣೇಶ ನಗರ ಮಾರ್ಗವಾಗಿ ಜಿ.ಡಿ.ಎ ಹೌಸಿಂಗ ಬೋರ್ಡ ಕಾಲೋನಿಗೆ ಹೋಗುತ್ತಿರುವಾಗ ಎದುರುಗಡೆಯಿಂದ ಒಬ್ಗ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನನ್ನು ತೆಗೆದುಕೊಂಡು ಹೋಗುತ್ತಿರುವಾಗ ಸದರಿಯವನನ್ನು ವಿಚಾರಿಸಲು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ಶಿವಯ್ಯ ಗುತ್ತೆದಾರ ವಯಃ 28 ವರ್ಷ ಜಾತಿಃ ಈಳಿಗ ಉಃ ಡ್ರೈವಿಂಗ್ ಕೆಲಸ ಸಾಃ ಕಲ್ಲಬೆನ್ನೂರ ಗ್ರಾಮ ತಾಃಜಿಃ ಗುಲಬರ್ಗಾ ಅಂತಾ ತಿಳಿಸಿದನು. ಸದರಿಯವನ ಹತ್ತಿರವಿದ್ದ ಮೋಟಾರ ಸೈಕಲನ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಹೊಂದಿರುವದಿಲ್ಲ. ಮೋಟಾರ ಸೈಕಲ ಬಗ್ಗೆ ಸರಿಯಾದ ಉತ್ತರ ನೀಡದೇ ಇರುವದರಿಂದ, ಎಲ್ಲಿಂದಲೋ ಕಳ್ಳತನ ಮಾಡಿಕೊಂಡು ಬಂದಿರುಬಹುದು ಅಂತಾ ಬಲವಾದ ಸಂಶಯ ಮೇಲಿಂದ ಸದರಿ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು  ಆತನ ಹತ್ತಿರವಿದ್ದ Hero Honda Passion Pro Red Colour M/c No. KA 37 W 4296, Chassis No. 0202IC03239, Engine No. 02C21M03750 ಅಃಕಿಃ 25,000/- ರೂ. ನೇದ್ದು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 11/2013 ಕಲಂ. 41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.  

No comments: