POLICE BHAVAN KALABURAGI

POLICE BHAVAN KALABURAGI

29 January 2013

GULBARGA DISTRICT REPORTED CRIME


ಜಬರದಸ್ತಿಯಿಂದ ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡ ಬಗ್ಗೆ:
ಗ್ರಾಮೀಣ ಪೊಲೀಸ್ ಠಾಣೆ ಗುಲಬರ್ಗಾ: ಶ್ರೀ ಮಹಮ್ಮದ ಇಲಿಯಾಸ ತಂದೆ ತಂದೆ ಮಹಮ್ಮದ ಅಬ್ದುಲ ಕರೀಮ ಶೇಖ ವಯಾ:47 ವರ್ಷ ಉ:ಒಕ್ಕಲುತನ ಸಾ:ಖಾದ್ರಿ ಚೌಕ ಆಳಂದ ರೋಡ ಗುಲಬರ್ಗಾರವರು ನನ್ನದು ಸುಲ್ತಾನಪುರ ಗ್ರಾಮದ ಸೀಮಾಂತರದಲ್ಲಿ ಸರ್ವೆ ನಂ: 186/4 ನೇದ್ದರ ಹೋಲವಿದ್ದು, ಅದರಲ್ಲಿ 2 ಎಕರೆ ಜಮೀನು ನನ್ನ ಒಡತಕ್ಕೆ ಸೇರಿರುತ್ತದೆ. ದಿನಾಂಕ-01/09/2012 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ನಾನು ಹೋಲದಲ್ಲಿದ್ದಾಗ ಅಸ್ಲಾಂ ತಂದೆ ಮಹಮ್ಮದ ಬಾಸೀರ ಸಾಬ ಸಾ:ಮಿಜಗುರಿ ಮೋಮಿನಪುರ ಗುಲಬರ್ಗಾಶೇಖ ಜಾಫರ ಹುಸೇನ ತಂದೆ ಮಹಮ್ಮದ ಹುಸೇನ ಸಾ:ಬಿಲಾಲಾಬಾದ ಕಾಲೋನಿ ಗುಲಬರ್ಗಾಸೈಯ್ಯದ ಸರ್ವರ ಅಲಿ ತಂದೆ ಸೈಯ್ಯದ ಮೌಲಾ ಅಲಿ ಸಾ:ಬಸವೇಶ್ವರ ಕಾಲೋನಿ ಗುಲಬರ್ಗಾ ಇವರು ನಮ್ಮ ಹೋಲದಲ್ಲಿ ಬಂದು ಜಬರದಸ್ತಿಯಿಂದ ನನಗೆ ಟವೇರಾ ಕಾರ ನಂ ಕೆಎ-32/ಎಂ-7888 ನೇದ್ದರಲ್ಲಿ ಹಾಕಿಕೊಂಡು, ಗುಲಬರ್ಗಾ ಸಬ್ ರಿಜಿಸ್ಟರ ಆಫೀಸಗೆ ಸಾಯಾಂಕಾಲ 4:00 ಗಂಟೆ ಸುಮಾರಿಗೆ ಸ್ಟಾಂಪ ಪೇಪರ ಮೇಲೆ ಸಹಿ ಮತ್ತು ರುಜು ಮಾಡಿಸಿಕೊಂಡಿರುತ್ತಾರೆ. ಅಲ್ಲದೇ ಈ ವಿಷಯ ಯಾರಿಗಾದರು ಹೇಳಿದರೆ ಮತ್ತು ಕೇಸು ಮಾಡಿದರೇ ನಿನಗೇ ಮತ್ತು ನಿನ್ನ ಮಗ, ಮತ್ತು ಮಗಳಿಗೆ ಜೀವ ಸಹಿತ ಬೀಡುವುದಿಲ್ಲಾ ಅಂತಾ ಮಾರಕ ಅಸ್ತ್ರಗಳು ತೋರಿಸಿ ಹೇದರಿಸಿರುತ್ತಾರೆ. ಕಾರಣ 3 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಆಂತಾ ಮಹಮ್ಮದ ಇಲಿಯಾಸ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:60/2013 ಕಲಂ 447 364 (ಎ), 420, 504 506 (2) ಸಂಗಡ 34 ಐ.ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: