POLICE BHAVAN KALABURAGI

POLICE BHAVAN KALABURAGI

28 October 2011

GULBARGA DIST REPORTED CRIMES

ಅಫಘಾತ ಪ್ರಕರಣ:

ಕಮಲಾಫೂರ ಠಾಣೆ : ಶ್ರೀ ಪ್ರಶಾಂತ ತಂದೆ ಕುಮಾರ ಛಾತರ ಸಾ; ವೆಂಕಟೇಶ ನಗರ ಗುಲಬರ್ಗಾ ರವರು ನಾನು ನನ್ನ ಗೆಳೆಯರಾದ ಪ್ರವೀಣ ತಂದೆ ಕಲ್ಯಾಣರಾವ ಗಾವಡೆ ಸಾಃ ಕೊಠಾರಿ ಭವನ ಹಿಂದುಗಡ ಗುಲಬರ್ಗಾ ಅತುಲ ತಂದೆ ಭರತ ರತ್ನಾಕರ ಸಾಃ ಆರ್.ಟಿ.ಓ ಕ್ರಾಸ ಗುಲಬರ್ಗಾ ಎಲ್ಲರೂ ಕೂಡಿಕೊಂಡು ದಿನಾಂಕ: 27/10/2011 ರಂದು ಬೀದರದಲ್ಲಿ ನಮ್ಮ ಸಂಬಂಧಿಕರ ಅಂಗಡಿಯ ಪೂಜೆಯಿದ್ದ ಪ್ರಯುಕ್ತ ಪ್ರವೀಣ ಈತನ ಇಂಡಿಕಾ ಕಾರ ನಂ. ಕೆಎ:32, ಎಂ:8066 ನೇದ್ದರಲ್ಲಿ ಕುಳಿತುಕೊಂಡು ಬೀದರಕ್ಕೆ ಹೋರಟಿದ್ದು. ಈ ಕಾರನ್ನು ಪ್ರವೀಣ ಈತನೆ ಚಲಾಯಿಸುತ್ತಿದ್ದನು. ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಕಮಲಾಪೂರ ದಾಟಿ ಪ್ರವೀಣ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತ ಬೈಲದಾರ ಇವರ ಹೊಲದ ಹತ್ತಿರ ಬಂದಾರಿಯ ತಗ್ಗಿನಲ್ಲಿ ಪಲ್ಟಿ ಮಾಡಿ, ಅಪಘಾತ ಪಡಿಸಿದನು. ನಮಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ. ಕಾರಿನ ಹಿಂದಿನ ಸೈಲೆನ್ಸರ ಕಟ್ಟಾಗಿ ಅಲ್ಲಲ್ಲಿ ಹಾನಿಯಾಗಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 132/2011 ಕಲಂ 279 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಫಘಾತ ಪ್ರಕರಣ:

ಕಮಲಾಫೂರ ಠಾಣೆ : ಶ್ರೀ. ವಿನೋದಕುಮಾರ ತಂದೆ ಕೃಷ್ಣಾ ಉಡಬಾಳ ಸಾ: ಕಮಲಾಪೂರ ರವರು ನಮ್ಮ ಹೊಲ ಕಮಲಾಪೂರ ಸೀಮಾಂತರದಲ್ಲಿ ಸರ್ವೆ ನಂ:169 ನೇದ್ದು ಬರುತ್ತಿದ್ದು, ಒಕ್ಕಲುತನ ಕೆಲಸಕ್ಕಾಗಿ ನಮ್ಮ ಹೊಲದಲ್ಲಿ ರೇವಣಸಿದ್ದಪ್ಪ ತಂದೆ ಇಸ್ಮಾಯಿಲಪ್ಪ ಸಿಂಗೇನೋರ ವ: 45 ವರ್ಷ ಸಾ; ಕಮಲಾಪೂರ, ಪರಮೇಶ್ವರ ಸಾ: ಭೂಂಯ್ಯಾರ ಅಂತಾ ಇಬ್ಬರು ಆಳು ಮಕ್ಕಳನ್ನು ಇಟ್ಟುಕೊಂಡಿರುತ್ತೇವೆ. ದಿನಾಂಕ: 27/10/2011 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು, ರೇವಣಸಿದ್ದಪ್ಪ ಮತ್ತು ಪರಮೇಶ್ವರ ಕೂಡಿಕೊಂಡು ನಮ್ಮ ದನಗಳನ್ನು ಹೊಡೆದುಕೊಂಡು ಹುಮನಾಬಾದ-ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ 218 ನೇದ್ದರ ರಸ್ತೆಯ ರಾಜನಾಳ ಕ್ರಾಸ್ ಹತ್ತಿರ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಹುಮನಾಬಾದ ಕಡೆಯಿಂದ ಕಾರ ನಂ: ಎಪಿ-09-ಬಿ.ಝೇಡ್-2788 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ರೇವಣಸಿದ್ದಪ್ಪ ಸಿಂಗೆನೂರ ಈತನಿಗೆ ಹಿಂದಿನಿಂದ ಒಮ್ಮಿಲೇ ಡಿಕ್ಕಿ ಹೊಡೆದು ಅಪಘಾತ ಪಡಿಸಿ ರೋಡಿನ ಕೆಳಗೆ ತಗ್ಗಿನಲ್ಲಿ ಎಳೆದುಕೊಂಡು ಹೋದನು. ಆಗ ನಾನು ಮತ್ತು ಪರಮೇಶ್ವರ ಕೂಡಿಕೊಂಡು ಚಿರುತ್ತಾ ರೋಡಿನ ಕೆಳಗೆ ಬಿದ್ದಿದ್ದ ರೇವಣಸಿದ್ದಪ್ಪನಿಗೆ ಹೋಗಿ ನೋಡಲಾಗಿ ಆತನಿಗೆ ಎಡಗೈ ಮೊಳಕೈಗೆ, ಬಲಗಾಲ ತೊಡೆಗೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಬೆನ್ನಿಗೆ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಭಾರಿ ಗುಪ್ತಗಾಯವಾಗಿದ್ದು, ನೋಡಲಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ; 133/2011 ಕಲಂ 279.304[ಎ] ಐಪಿಸಿ ಸಂಗಡ 187 ಐಎಂವ್ಹಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ
: ಶ್ರೀಮತಿ.ಉಮಾದೇವಿ ಗಂಡ ರಾಜಸಿಂಗ ಟಾಕ, ಸಾ|| ಮೇತಾರಗಲ್ಲಿ ಗಾಜೀಪೂರ ಗುಲಬರ್ಗಾ ರವರು ನಾನು ಹಾಗೂ ನಮ್ಮ ಪಕ್ಕದ ಮನೆಯ ಸುನೀತಾ ಗಂಡ ರಾಜೇಶ ಟಾಕ ಇಬ್ಬರೂ ಕೂಡಿ ನಮ್ಮ ಮನೆಯ ಮುಂದೆ ಮಾತಾಡುತ್ತಾ ಕುಳಿತ್ತಿರುವಾಗ ನಮ್ಮ ಓಣಿಯವರಾದ ಅನೀತಾ ಗಂಡ ರಾಮಚಂಧ್ರ ಬಿರ್ಲಾ, ಮಧು ಗಂಡ ವಿನೋದ ಬಿರ್ಲಾ, ದೀಪಕ ತಂದೆ ಪ್ರಕಾಶ ಬಿರ್ಲಾ, ಟಾಪಲಿ ತಂದೆ ಪ್ರಕಾಶ ಬಿರ್ಲಾ ಎಲ್ಲರೂ ಸಾ|| ಮೇತಾರಗಲ್ಲಿ ಗಾಜೀಫೂರ ಗುಲಬರ್ಗಾ ಇವರೆಲ್ಲರೂ ಕೂಡಿಕೊಂಡು ಮನೆಯ ಹತ್ತಿರ ಬಂದು ಸುನೀತಾ ಇವಳು ನನ್ನೊಂದಿಗೆ ಜಗಳಕ್ಕೆ ಬಿದ್ದು, ಏ ರಂಡಿ ನಿನ್ನ ಮಗ ವಿಶಾಲ ಮತ್ತು ನಿನ್ನ ಸೊಸೆ ಮಮತಾ ಇಬ್ಬರೂ ಕೂಡಿ ನಿನ್ನೆ ರಾತ್ರಿ ನಮ್ಮೊಂದಿಗೆ ಜಗಳಕ್ಕೆ ಬಿದ್ದು, ನಮಗೆ ಹೊಡೆಬಡೆ ಮಾಡಿದ್ದು ಅಲ್ಲದೆ ಪುನಃ ನಮ್ಮ ಮೇಲೆ ಕೇಸು ಮಾಡಿಸಲು ಪೊಲೀಸ ಠಾಣೆಗೆ ಹೋಗಿದ್ದಾರೆ ಅವರಿಬ್ಬರು ಎಲ್ಲಿ ಇದ್ದಾರೆ ಅಂತಾ ಅನ್ನುತ್ತಾ ನನ್ನ ತಲೆಯ ಮೇಲಿನ ಕೂದಲು ಹಿಡಿದು ಜಗ್ಗಾಡಿದ್ದು ಅಲ್ಲದೆ ಕೈಯಿಂದ ಮುಖದ ಮೇಲೆ ಹೊಡೆದಿರುತ್ತಾಳೆ. ಮಧು ಬಿರ್ಲಾ ಇವಳು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಟೊಂಕಕ್ಕೆ ಹೊಡೆದಿದ್ದು, ದೀಪಕ ಮತ್ತು ಟಾಪಲಿ ಇವರು ಕೂಡ ಬಿಡಬೇಡಾ ಅವಳಿಗೆ ಹೊಡೆ ಅಂತಾ ಮಧು ಇವಳೀಗೆ ಪ್ರಚೋದನೆ ಮಾಡುತ್ತಿದ್ದರು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:203/2011 ಕಲಂ: 323, 324, 114, 504, 506, ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೊಲೆ ಪ್ರಯತ್ನ :

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ನರಸಿಂಗ ತಂದೆ ಬಾಬು ಭೋವಿ ಸಾ: ಕುನ್ನೂರ ತಾ: ಚಿತ್ತಾಪೂರ ಹಾ:ವ: ರಾಮ ನಗರ ಗುಲಬರ್ಗಾ ರವರು ನಾನು ನನ್ನ ಮಗ ಯಲ್ಲಪ್ಪ ವ:3 ವರ್ಷ ಇವನಿಗೆ ಜೊತೆಯಲ್ಲಿ ಕರೆದುಕೊಂಡು ಹುಮನಾಬಾದ ರಿಂಗ ರೋಡಿನ ಹತ್ತಿರ ಇರುವ ಭಾಲ್ಕೇಶ್ವರ ವೈನಶಾಪಗೆ ಹೋಗಿ ಸರಾಯಿ ಕುಡಿದು ವಾಪಸ್ಸು ಮನೆಯ ಕಡೆಗೆ ರಾಮನಗರದ ಬಾಂಬೆ ಗ್ಯಾರೇಜ ಹತ್ತಿರ ಖುಲ್ಲಾ ಜಾಗೆಯಲ್ಲಿ ನಡೆದುಕೊಂಡು ಹೊರಟಾಗ ಹಿಂದಿನಿಂದ ಯಾರೋ ಮೂರು ಜನರು ಬಂದವರೇ ಅವರಲ್ಲಿ ಒಬ್ಬನು ಚಾಕುವಿನಿಂದ ಎಡ & ಬಲಭಾಗ ಕುತ್ತಿಗೆ ಮತ್ತು ಕುತ್ತಿಗೆ ಹಿಂಭಾಗಕ್ಕೆ ಬಲಹಣೆಯ ಮೇಲೆ ಮತ್ತು ಬಲಗೈ ಮತ್ತು ಎಡಗೈ ಮುಂಗೈ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು ಇರುತ್ತದೆ. ಇನ್ನಿಬ್ಬರು ಕೈಯಿಂದ ಮೈಮೇಲೆ ಹೊಡೆದಿದ್ದು, ತನಗೆ ಹೊಡೆದ ಮೂರು ಜನರು 25 ರಿಂದ 30 ವಯಸ್ಸಿನವರಿದ್ದು ಅವರನ್ನು ನೋಡಿದರೆ ಗುರುತಿಸುತ್ತೇನೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 319/11 ಕಲಂ 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೆ.ಇ.ಬಿ ನೌಕರನ ಕರ್ತವ್ಯಕ್ಕೆ ಅಡೆ ತಡೆ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ದೇವಿಂದ್ರ ತಂದೆ ಅಂಬಣ್ಣ ಪೂಜಾರಿ ಸಾ: ತಾಜಸುಲ್ತಾನಪೂರ ರವರು ನಾನು ಬೇಲೂರ ಕ್ರಾಸ ಬಳಿ ವಿದ್ಯತ್ತ ಬಾಕಿ ಸಂದಾಯ ಮಾಡಲಾರದ ಗ್ರಾಹಕರ ಸ್ಧಾವರವನ್ನು ವಿದ್ಯುತ್ತ ಸಂಪರ್ಕ ಕಡಿತಗೊಳಿಸುವ ಸಮಯದಲ್ಲಿ ಬಸವರಾಜ ತಂದೆ ವಿಶ್ವನಾಥ ಮೂಲಗೆ ಸಾ:ಬೇಲೂರ (ಜೆ) ತಾ: ಗುಲ್ಬರ್ಗಾ ಇತನು ನನಗೆ ಅವಾಚ್ಚ ಶಬ್ದಗಳಿಂದ ಬೈದು ಚಪ್ಪಲಿಯಿಂದ ಹೊಡೆದು ಬಾಯಿಗೆ ಬಂದಂತೆ ಬೈಯಿದಿತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 317/2011 ಕಲಂ. 332, 355, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ಶ್ರೀದೇವಿ ಗಂಡ ಮಲ್ಲಯ್ಯ ಚಟ್ನಳ್ಳಿ ಸಾ: ಆಶ್ರಯ ಕಾಲನಿ ರಾಣೇಶ ಪೀರ ದರ್ಗಾ ಹತ್ತಿರ ಗುಲಬರ್ಗಾ ರವರು ನಾನು ದಿನಾಂಕ: 27/10/11 ರಂದು ಮದ್ಯಾಹ್ನ 12 ಸುಮಾರಿಗೆ ನನ್ನ ಮನೆಯ ಬಾಜು ಮಂಜುಳಾ ಸಾ: ಆಶ್ರಯ ಕಾಲನಿ ರಾಣೇಶ ಪೀರ ದರ್ಗಾ ಹತ್ತಿರ ಗುಲಬರ್ಗಾ ರವರು ಕಸವನ್ನು ಚೆಲ್ಲಿದ್ದು ಅದನ್ನು ಇಲ್ಲಿ ಏಕೆ ಚೆಲ್ಲುತ್ತಿ ಅಂತ ಕೇಳಿದ್ದಕ್ಕೆ ಮಂಜುಳಾ ಇವಳು ತಲೆ ಕೂದಲು ಹಿಡಿದು ಜಗ್ಗಾಡಿ ಅವ್ಯಾಚ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 318/2011 ಕಲಂ. 341 323 504

ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: